ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್‌ರ ಪ್ರಿ-ವೆಡ್ಡಿಂಗ್ ಕಾರ್ಯಕ್ರಮಗಳಲ್ಲಿ, ಕುಟುಂಬದವರು ಧರಿಸಿದ ಒಂದೊಂದು ಡಿಸೈನರ್‌ವೇರ್‌ಗಳಿಗೂ ಅಂಬಾನಿ ಫ್ಯಾಮಿಲಿ ಕೋಟಿಗಟ್ಟಲೇ ಹಣ ಸುರಿದಿದೆ. ಸರದಿಯಂತೆ 3 ದಿನಗಳ ಕಾಲ ಪ್ರತಿಯೊಬ್ಬರು ಧರಿಸಿದ ಒಂದೊಂದು ಡಿಸೈನರ್‌ವೇರ್‌ಗಳು ಫ್ಯಾಷನ್ ಪ್ರಿಯರ ಕಣ್ಣರಳಿಸಿರುವುದು ಮಾತ್ರವಲ್ಲ, ಸಾಮಾನ್ಯ ಜನರ ಹುಬ್ಬನ್ನೇರಿಸಿವೆ. ಅಬ್ಬಬ್ಬಾ., ಎನ್ನುವಷ್ಟರ ಮಟ್ಟಿಗೆ ಅಲ್ಟಿಮೆಟ್ ಹೈ ಫ್ಯಾಷನ್‌ಗೆ ನಾಂದಿ ಹಾಡಿದೆ. ಪರಿಣಾಮ, ಈಗಾಗಲೇ ಇವುಗಳ ರಿಪ್ಲಿಕಾ ಡಿಸೈನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಲು ಸಜ್ಜಾಗಿವೆ ಎಂದು ಮುಂಬರುವ ಫ್ಯಾಷನ್ ಬಗ್ಗೆ ಸುಳಿವು (Ambani Family Spends Crores On Designer Clothing) ನೀಡುತ್ತಾರೆ ಫ್ಯಾಷನಿಸ್ಟ್‌ಗಳು.
ರಾಯಲ್ ಫ್ಯಾಷನ್ ಕುರಿತಂತೆ ಫ್ಯಾಷನ್ ವಿಮರ್ಶಕರ ವಿಶ್ಲೇಷಣೆ
ಕಳೆದ ಮೂರ್ನಾಲ್ಕು ದಿನಗಳಿಂದ ಬಹುತೇಕ ಸೋಷಿಯಲ್ ಮೀಡಿಯಾದ ಫ್ಯಾಷನ್ ಪೇಜ್‌ಗಳಲ್ಲಿ, ಅಂಬಾನಿ ಫ್ಯಾಮಿಲಿ ಗ್ರ್ಯಾಂಡ್ ಡಿಸೈನರ್‌ವೇರ್‌ಗಳದ್ದೇ ವ್ಲಾಗ್‌ಗಳು! ಅವರೆಲ್ಲರೂ ಧರಿಸಿದ್ದ ಒಂದೊಂದು ಡಿಸೈನರ್‌ವೇರ್‌ಗಳಿಂದಿಡಿದು, ಬ್ರಾಂಡ್, ಲೆಬೆಲ್, ಆಕ್ಸೆಸರೀಸ್ ಹಾಗೂ ಮೇಕಪ್ ಕುರಿತಂತೆ ವಿಷಯಗಳೇ ಹರಿದಾಡುತ್ತಿದ್ದವು. ಆ ಮಟ್ಟಿಗೆ ಇದು ಸುದ್ದಿಯಾಗಿದೆ. ಇನ್ನು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸೆಲೆಬ್ರೆಟಿಗಳ ಬಗ್ಗೆ ಹೇಳುವುದೇ ಬೇಡ! ಅವರು ಧರಿಸಿದ ಔಟ್‌ಫಿಟ್‌ಗಳು, ಟ್ರೆಂಡ್ ಹುಟ್ಟು ಹಾಕುವಷ್ಟರ ಮಟ್ಟಿಗೆ ಪಬ್ಲಿಸಿಟಿ ಪಡೆದಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಜಿನತ್. ಇನ್ನು, ಪ್ರಯೋಗಾತ್ಮಕ ಗ್ರ್ಯಾಂಡ್ ದೇಸಿ ಡಿಸೈನರ್‌ವೇರ್‌ಗಳು ಮತ್ತು ಕಾಕ್‌ಟೈಲ್ ಔಟ್‌ಫಿಟ್‌ಗಳ ಒಂದೊಂದು ಡಿಸೈನ್‌ಗಳು ಕೂಡ ಮುಂಬರುವ ಸೀಸನ್‌ಗೆ ಕಾಣಿಸಿಕೊಳ್ಳುವುದು ಖಚಿತ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್. ಇದೊಂದು ಜಾಗತೀಕ ಮಟ್ಟದಲ್ಲಿ ಸದ್ದು ಮಾಡಿದ ರಾಯಲ್ ಫ್ಯಾಷನ್ ವೆಡ್ಡಿಂಗ್ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ನಿಶಾ ಶರ್ಮಾ. ಅವರ ಪ್ರಕಾರ, ಇದೊಂದು ಲೈವ್ ರಾಯಲ್ ಫ್ಯಾಷನ್ ವೆಡ್ಡಿಂಗ್ ರ‍್ಯಾಂಪ್‌ನಂತಿತ್ತು ಎನ್ನುತ್ತಾರೆ.
ದುಬಾರಿ ಬೆಲೆಯ ಡಿಸೈನರ್‌ವೇರ್‌ಗಳು
3 ದಿನಗಳ ಕಾಲ ಸರದಿಯಂತೆ ಧರಿಸಿದ ಗ್ರ್ಯಾಂಡ್ ಡಿಸೈನರ್‌ವೇರ್‌ಗಳಿಗೆ ಕೋಟಿಗಟ್ಟಲೇ ಹಣ ಸುರಿಯಲಾಗಿದೆ. ಅವರೆಲ್ಲರ ಒಂದೊಂದು ಉಡುಪು, ಶ್ರೀ ಸಾಮಾನ್ಯನ ಲೈಫ ಅನ್ನೇ ಸೆಟಲ್ ಮಾಡುವಷ್ಟರ ಮಟ್ಟಿಗೆ ದುಬಾರಿ ಬೆಲೆ ಹೊಂದಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ವಿದ್ಯಾ.
ಪ್ರತಿಯೊಬ್ಬರದು ಯೂನಿಕ್ ಡಿಸೈನರ್‌ವೇರ್ಸ್
ಅನಂತ್-ರಾಧಿಕಾ ಮರ್ಚೆಂಟ್ ಮಾತ್ರವಲ್ಲ, ಮುಖೇಶ್-ನೀತಾ ಅಂಬಾನಿ, ಆಕಾಶ್–ಶ್ಲೋಕಾ , ಇಶಾ ಅಂಬಾನಿ ಸೇರಿದಂತೆ ಅಂಬಾನಿ ಫ್ಯಾಮಿಲಿಯವರೆಲ್ಲರ ಡಿಸೈನರ್‌ವೇರ್‌ಗಳು ಸೆಲೆಬ್ರೆಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಸೇರಿದಂತೆ ಇಂಟರ್‌ನ್ಯಾಷನಲ್ ಡಿಸೈನರ್‌ಗಳ ಲೆಬೆಲ್‌ನದ್ದಾಗಿವೆ. ಕಾಕ್‌ಟೈಲ್ ಗೌನ್‌ನಿಂದಿಡಿದು, ದೇಸಿ ಲೆಹೆಂಗಾ, ಸೂಟ್, ಸೀರೆ ಎಲ್ಲವೂ ವಜ್ರ-ವೈಡೂರ್ಯ ಹೊಂದಿರುವ ಯೂನಿಕ್ ಡಿಸೈನ್‌ದ್ದಾಗಿವೆ. ಡಿಸೈನ್‌ಗಳಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ! ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಫರ್ಟ್ ರಾಬರ್ಟ್.
ನಿಮಗೆ ಗೊತ್ತೇ!
ಇಶಾ ಅಂಬಾನಿ, ತಮ್ಮ ಮದುವೆಯಲ್ಲಿ, 150 ಕ್ಯಾರೆಟ್ ವಜ್ರ ಹಾಗೂ ವೈಡೂರ್ಯಗಳನ್ನು ಹೊಂದಿದ ಡಿಸೈನರ್‌ವೇರ್‌ಗಳನ್ನು ಧರಿಸಿದ್ದರಂತೆ. ಇನ್ನು, ಇದರ ಬೆಲೆ ಅಂದಾಜು 90 ಕೋಟಿ ರೂ.ಗಳನ್ನು ಮೀರಿಸಿತ್ತಂತೆ. ಹಾಗಾದಲ್ಲಿ, ಮುಂಬರುವ ಅನಂತ್-ಅಂಬಾನಿ ಮದುವೆಯ ಡಿಸೈನರ್‌ವೇರ್‌ಗಳಿಗೆ ಅಂಬಾನಿ ಕುಟುಂಬ ಎಷ್ಟು ಹಣ ಚೆಲ್ಲಬಹುದೆಂದು ನೀವೇ ಊಹಿಸಿ ನೋಡಿ!
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wardrobe Malfunction 2024: ಪಾಪ್ ಐಕಾನ್ ರಿಹಾನಾ ಡ್ರೆಸ್ ಎಡವಟ್ಟು! ಹೀಗಾಗದಂತೆ ಎಚ್ಚರ ವಹಿಸುವುದು ಹೇಗೆ?