-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಧಿಕಾ ಮರ್ಚೆಂಟ್-ಅನಂತ್ (Ambani family’s jewels) ಅಂಬಾನಿ ಪ್ರಿ-ವೆಡ್ಡಿಂಗ್ ಕಾರ್ಯಕ್ರಮಗಳಲ್ಲಿ, ಇತ್ತ ಅಂಬಾನಿ ಫ್ಯಾಮಿಲಿಯ ಲೇಡೀಸ್ ಧರಿಸಿದ ಡಿಸೈನರ್‌ವೇರ್‌ಗಳು ಕೆಲವರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾದರೇ, ಅತ್ತ ಅವರೆಲ್ಲರ ಜಗಮಗಿಸುವ ವಜ್ರ-ವೈಢೂರ್ಯ ಖಚಿತ ಎಮಾರಾಲ್ಡ್, ರೂಬಿ ಆಭರಣಗಳು ಜ್ಯುವೆಲ್ ಪ್ರೇಮಿಗಳ ಕಣ್ಣುಕುಕ್ಕಿದವು.
ನೀತಾ ಅಂಬಾನಿಯ ಎಮರಾಲ್ಡ್ ಆಭರಣ ಪ್ರೇಮ
ನೀತಾ ಅಂಬಾನಿಯವರಿಗೆ ಮೊದಲಿನಿಂದಲೂ ಎಮರಾಲ್ಡ್ ಆಭರಣಗಳೆಂದರೇ ಸಖತ್ ಇಷ್ಟವಂತೆ. ದೊಡ್ಡ ಎಮರಾಲ್ಡ್ ಪೆಂಡೆಂಟ್ ಹೊಂದಿದ ಜಿರ್ಕೋನ್ ಹಾರ, ಲೇಯರ್ ಎಮಾರಾಲ್ಡ್ ನೆಕ್ಲೇಸ್, ಫ್ಲೋರಲ್ ಎಮರಾಲ್ಡ್ ಇಯರಿಂಗ್, ಮಾಂಗ್‌ಟೀಕಾ, ಬಾಜುಬಂಧಿ, ಫಿಂಗರ್‌ರಿಂಗ್ಸ್, ಕಡ ಸೇರಿದಂತೆ ಲೆಕ್ಕವಿಲ್ಲದಷ್ಟು ಸೆಟ್‌ಗಳು ಅವರ ಬಳಿಯಿವೆಯೆನ್ನಲಾಗಿದೆ. ಅವುಗಳಲ್ಲಿ ಅತಿ ಹೆಚ್ಚು ಸುದ್ದಿಯಾಗಿದ್ದ, ಎಮರಾಲ್ಡ್ ಹಾರವೊಂದೇ ಸರಿ ಸುಮಾರು 500 ಕೋಟಿ. ರೂ. ಬೆಲೆ ಎಂದಾದಲ್ಲಿ, ಅವರ ಇನ್ನುಳಿದ ಆಭರಣಗಳ ಬೆಲೆ ಎಷ್ಟಿರಬೇಡ! ಎಂಬುದನ್ನು ನೀವೇ ಊಹಿಸಿಕೊಳ್ಳಿ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್. ಇವನ್ನು ಹೊರತುಪಡಿಸಿದಲ್ಲಿ ನೀತಾ ಅವರ ಬಳಿ ಮೀನಾಂಕಾರಿ ಕುಂದನ್, ಹಾಗೂ ಡೈಮಂಡ್ ಜ್ಯುವೆಲರಿಗಳ ಕಲೆಕ್ಷನ್ ಇವೆಯಂತೆ.
ರಾಧಿಕಾ ಡೈಮಂಡ್ ಫ್ಯಾಷನ್ ಜ್ಯುವೆಲರಿ ಪ್ರೇಮ
ಇನ್ನು, ಈ ಜನರೇಷನ್‌ಗೆ ಸೇರುವ ರಾಧಿಕಾ ಮರ್ಚೆಂಟ್ ಆಭರಣ ಪ್ರೇಮ ಇವರೆಲ್ಲರಿಗಿಂತ ಕೊಂಚ ಭಿನ್ನವಾಗಿದೆ. ಈ ಜನರೇಷನ್‌ನವರಿಗೆ ಪ್ರಿಯವಾಗುವಂತಹ ತೀರಾ ಹೆವ್ವಿಯಾಗಿರದ ಡೈಮಂಡ್ ಫ್ಯಾಷನ್ ಜ್ಯುವೆಲರಿ ಹಾಗೂ ಜಿರ್ಕೋನ್ ಆಭರಣಗಳು ಇವರ ಅಭಿರುಚಿಗೆ ಸೇರಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಟ್ರೆಡಿಷನಲ್ ಡಿಸೈನ್‌ಗಿಂತ ಕಂಟೆಂಪರರಿ ಡಿಸೈನ್ಸ್ ಹೊಂದಿರುವ ಫ್ಯಾಷನ್ ಆಭರಣಗಳು ಇವರ ಜ್ಯುವೆಲ್ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.
ಇಶಾ ಅಂಬಾನಿಯ ಡೈಮಂಡ್ ಲವ್
ಅಮ್ಮನಿಗಿಂತ ನಾನೇನು ಕಡಿಮೆಯೇನಿಲ್ಲ ಎನ್ನುವಂತೆ ಇಶಾ ಅಂಬಾನಿ ಕೂಡ ಆಫ್ಟರ್ ಪಾರ್ಟಿಗೆ ಕಂಪ್ಲೀಟ್ ಎಮರಾಲ್ಡ್ ಹಾಗೂ ಜಿರ್ಕೋನ್ ಸ್ಟೋನ್‌ಗಳಿಂದ ಸಿಂಗಾರಗೊಂಡ ಕಾಕ್‌ಟೈಲ್ ಲೆಹೆಂಗಾವನ್ನೇ ಧರಿಸಿದ್ದರು. ಅಷ್ಟೇಕೆ! ಶಾಪೆರಲಿ ಕೌಚರ್ ಡಿಸೈನರ್ ಸೀರೆಗೆ ಮಾಂಗ್ ಟೀಕಾ ಬದಲು ಡೈಮಂಡ್ ಬಿಂದಿ ಧರಿಸಿ, ಟ್ರೆಂಡ್ ಸೆಟ್ ಮಾಡಿದ್ದರು.
ಇದನ್ನೂ ಓದಿ: Pearl Fashion: ಮುತ್ತಿನ ಹಾರಕ್ಕೆ ಸಿಕ್ತು ನ್ಯೂ ಲುಕ್!
ಶ್ಲೋಕ ಸ್ಟೇಟ್‌ಮೆಂಟ್ ಜ್ಯುವೆಲ್ಸ್
ಶ್ಲೋಕ ಅಂಬಾನಿಯವರದ್ದು ಕೊಂಚ ವಿಭಿನ್ನ ಅಭಿರುಚಿ. ಟ್ರೆಡಿಷನಲ್ ಡಿಸೈನ್ಸ್ ಜೊತೆಗೆ ಕಂಟೆಂಪರರಿ ಡಿಸೈನ್‌ನವನ್ನು ಹೆಚ್ಚು ಮಿಕ್ಸ್ ಮಾಡುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಬಾರಿ ಡೈಮಂಡ್ ಜೊತೆ ರೂಬಿ ಆಭರಣಗಳನ್ನು ಧರಿಸಿದ್ದರು. ಇದರೊಂದಿಗೆ ಅನ್‌ಕಟ್ ಡೈಮಂಡ್ ನೆಕ್ಲೇಸ್ ಹಾಗೂ ಸ್ಟೇಟ್‌ಮೆಂಟ್ ಹಾರಗಳು ಇವರ ಕಲೆಕ್ಷನ್‌ನಲ್ಲಿವೆಯಂತೆ.
( ಲೇಖಕಿ ಫ್ಯಾಷನ್ ಪತ್ರಕರ್ತೆ )