Site icon Vistara News

Ambani wedding Fashion: ಇಂದ್ರಲೋಕವನ್ನೇ ಧರೆಗಿಳಿಸಿದ ಅಂಬಾನಿ ಫ್ಯಾಮಿಲಿ!

Ambani wedding Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್‌ (Ambani wedding Fashion) ಸಂಭ್ರಮ ಮುಗಿಲು ಮುಟ್ಟಿದೆ. ಮದುಮಗ ಅನಂತ್‌ ಅಂಬಾನಿ – ರಾಧಿಕಾ ಮರ್ಚೆಂಟ್‌ ಮಾತ್ರವಲ್ಲ, ಕುಟುಂಬದವರೆಲ್ಲರೂ ಸೇರಿ ಕೆಲಕಾಲ ಇಡೀ ಇಂದ್ರ ಲೋಕವನ್ನೇ ಧರೆಗಿಳಿಸಿದ್ದಾರೆ. ಮದುವೆಯ ಹೆಸರಲ್ಲಿ ಟ್ರೆಡಿಷನಲ್‌ ಫ್ಯಾಷನ್‌ಗೆ ಪ್ರಾಮುಖ್ಯತೆ ನೀಡುವುದರೊಂದಿಗೆ ದೇಸಿ ಫ್ಯಾಷನ್‌ಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಕಪಲ್‌ ಗೋಲ್ಸ್

ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳ ಆರಂಭದಿಂದಲೂ ಅನಂತ್‌ ಅಂಬಾನಿ -ರಾಧಿಕಾ ಮರ್ಚೆಂಟ್‌ ಜೋಡಿಯ ಕಪಲ್‌ ಗೋಲ್ಸ್ ಫ್ಯಾಷನ್‌ವೇರ್‌ನಲ್ಲೂ ಕಂಡುಬಂದಿದೆ. ಅದರಲ್ಲೂ ಕುಟುಂಬದ ಅರಿಷಿಣ ಶಾಸ್ತ್ರ, ಸಂಗೀತ್‌, ಮೆಹೆಂದಿ, ಮಾತಾ ಕೀ ಚೌಕಿ, ಗೃಹ ಶಾಂತಿ ಪೂಜಾ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲೂ ಇವರಿಬ್ಬರ ಉಡುಗೆ ತೊಡುಗೆಗಳು ಒಂದಕ್ಕೊಂದು ಮ್ಯಾಚ್‌ ಆಗುವುದರೊಂದಿಗೆ ನೋಡುಗರ ಕಣ್ಮನ ಸೆಳೆದಿವೆ. ಸನ್‌ ಕಲರ್‌ನಿಂದಿಡಿದು, ಪಿಂಕ್‌ ಆರೆಂಜ್‌, ಬ್ಲ್ಯೂ ಪರ್ಪಲ್‌, ರೆಡ್‌ನಂತಹ ಶೇಡ್‌ಗಳ ಟ್ವಿನ್ನಿಂಗ್‌ ಹಾಗೂ ಕಾಂಟ್ರಸ್ಟ್ ಸ್ಟೈಲಿಂಗ್‌ ಜೊತೆಗೆ ಅವರ ಬಂಗಾರ ಮಿಶ್ರಿತ ಪ್ರತಿ ಎಥ್ನಿಕ್‌ ಫ್ಯಾಷನ್‌ವೇರ್‌ಗಳು ನೋಡುಗರ ಮನ ಮುಟ್ಟುತ್ತಿವೆ.

ನೀತಾ ಅಂಬಾನಿಯ ಹೆರಿಟೆಜ್‌ ಸೀರೆಗಳು

ಬನಾರಸಿ ರೇಷ್ಮೆ, ಕಾಂಚಿವರಂ ಸೇರಿದಂತೆ ದೇಸಿ ಹ್ಯಾಂಡ್‌ಲೂಮ್‌ನಿಂದ ಸಿದ್ಧಗೊಂಡ ಬಂಗಾರದ ದಾರದಿಂದಲೇ ನೇಯ್ದ ಸಿಲ್ಕ್‌ ಸೀರೆಗಳು ಸೀರೆಗಳು ನೀತಾ ಅಂಬಾನಿಯ ಸೌಂದರ್ಯವನ್ನು ಹೆಚ್ಚಿಸುತ್ತಿವೆ ಎಂದರೂ ಅತಿಶಯೋಕ್ತಿಯಾಗದು.

ಇಶಾ-ಶ್ಲೋಕ ಲೆಹೆಂಗಾ ಲವ್‌

ನೀತಾ ಅಂಬಾನಿಯ ಮಗಳು ಇಶಾ ಈ ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಧರಿಸಿದ್ದ ಒಂದೊಂದು ಲೆಹೆಂಗಾ ಕೂಡ ಒಂದೊಂದು ಕಥೆಯನ್ನೇ ಹೇಳಿವೆ. ಅಡಿಯಿಂದ ಮುಡಿಯವರೆಗೂ ಧರಿಸಿದ ವಜ್ರ-ವೈಢೂರ್ಯದ ಆಕ್ಸೆಸರೀಸ್‌ಗಳು ಫ್ಯಾಷನ್‌ ಲೋಕ ಮಾತ್ರವಲ್ಲ, ಜ್ಯುವೆಲರಿ ಲೋಕದಲ್ಲೂ ಸಂಚಲ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಇನ್ನು, ಶ್ಲೋಕ ಅಂಬಾನಿ ಕೂಡ ಇದರಿಂದ ಹೊರತಾಗಿಲ್ಲ! ಇಲ್ಲಿ ಗಮನಿಸಬೇಕಾದ್ದು ಒಂದೇ ಒಬ್ಬರಿಗಿಂತ ಒಬ್ಬರದು ವಿಭಿನ್ನ ವಿನ್ಯಾಸ ಒಳಗೊಂಡಿದ್ದವು.

ನಾಯಿಮರಿ ಪಾಪ್‌ಕಾರ್ನ್‌ಗೂ ವೆಡ್ಡಿಂಗ್‌ ಔಟ್‌ಫಿಟ್‌

ಕುಟುಂಬದವರೊಂದಿಗೆ ಮೆಹಂದಿ ನೈಟ್‌ ಕಾರ್ಯ್ರಕಮದಲ್ಲಿ ರಾಧಿಕಾರ ಮುದ್ದು ನಾಯಿ ಮರಿ ಕೂಡ ಪಾಲ್ಗೊಂಡಿತ್ತು. ಪಾಪ್ಕಾರ್ನ್‌ ಹೆಸರಿನ ಈ ಶ್ವಾನ ಕೂಡ ಪಂಕ್‌ ಪೆಟ್‌ನ ಮಲ್ಟಿ ಶೇಡ್‌ನ ಡಿಸೈನರ್‌ವೇರ್‌ ಧರಿಸಿತ್ತು ಎಂದರೇ ಆಶ್ಚರ್ಯವಾಗಬಹುದು.

ಅಂಬಾನಿ ಮೆನ್ಸ್ ಬಂದ್ಗಾಲ ಫ್ಯಾಷನ್‌

ಸದ್ಯ ಅಂಬಾನಿ ಫ್ಯಾಮಿಲಿಯ ಬಹುತೇಕ ಎಲ್ಲಾ ಪುರುಷರು ನಾನಾ ವೆರೈಟಿ ಬಂದ್ಗಾಲ ಇಲ್ಲವೇ ಗೋಲ್ಡನ್‌ ಶೇಡ್‌ ಮಿಕ್ಸ್ ಕುರ್ತಾ ಸ್ಟೈಲಿಂಗ್‌ಗೆ ಸೈ ಎಂದಿದ್ದು, ಪ್ರತಿ ಕಾರ್ಯಕ್ರಮಕ್ಕೆ ತಕ್ಕಂತೆ ಡಿಸೈನ್‌ ಬದಲಿಸುತ್ತಿದ್ದಾರೆ ಎನ್ನಲಾಗಿದೆ.
ಒಟ್ಟಾರೆ, ಅಂಬಾನಿ ಫ್ಯಾಮಿಲಿಯ ವೆಡ್ಡಿಂಗ್‌ ಔಟ್‌ಫಿಟ್‌ಗಳು ಎಲ್ಲರನ್ನು ಸಮ್ಮೋಹನಗೊಳಿಸುತ್ತಿವೆ ಎನ್ನುತ್ತಾರೆ ಪ್ಯಾಷನ್‌ ವಿಮಶರ್ಕರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ambani Wedding Fashion: ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದ ರಾಧಿಕಾ ಮರ್ಚೆಂಟ್‌ ದುಂಡು ಮಲ್ಲಿಗೆ ದುಪಟ್ಟಾ! ಏನಿದು ಫೂಲೋಂಕಾ ಚಾದರ್‌?

Exit mobile version