-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲಕ್ಷುರಿ ಕ್ರ್ಯೂಸ್ ಪ್ರಿ -ವೆಡ್ಡಿಂಗ್ ಸೆಲೆಬ್ರೇಷನ್‌ನ (Anant Ambani Radhika Merchant Pre Wedding) ಹಾಲಿ ಡೇ ಲುಕ್‌ನಲ್ಲಿ ಸ್ಟಾರ್ಸ್ ಮಕ್ಕಳು ಅತ್ಯಾಕಷರ್ಕವಾಗಿ ಕಾಣಿಸಿಕೊಂಡರಲ್ಲದೇ, ತಮ್ಮದೇ ಆದ ಟ್ರಾವೆಲ್ ಡ್ರೆಸ್‌ಕೋಡ್ ಥೀಮ್ ಪಾಲಿಸಿದರು. ಹೌದು, ಮೂರು ದಿನಗಳ ಕಾಲ ಇಟಲಿಯಿಂದ ದಕ್ಷಿಣ ಫ್ರಾನ್ಸ್ ತನಕ ನೀರಿನ ಮೇಲೆ ಲಕ್ಷುರಿ ಕ್ರ್ಯೂಸ್‌ನಲ್ಲಿ ನಡೆದ ಅಂಬಾನಿ ಫ್ಯಾಮಿಲಿಯ ರಾಧಿಕಾ ಮರ್ಚೆಂಟ್-ಆನಂತ್ ಅಂಬಾನಿಯ ಪ್ರಿ –ವೆಡ್ಡಿಂಗ್‌ನ ನಾನಾ ಕಾರ್ಯಕ್ರಮಗಳಲ್ಲಿ , ಹಾಲಿ ಡೇ ಎಂಜಾಯ್ ಮಾಡುವಂತಹ ಥೀಮ್‌ಗಳಿಗೆ ತಕ್ಕಂತೆ ಸೆಲೆಬ್ರೆಟಿಗಳೆಲ್ಲರೂ ಕಾಣಿಸಿಕೊಂಡರು. ಆದರೆ, ಅವರಲ್ಲಿ ಈ ಜನರೇಷನ್‌ನ ಸ್ಟಾರ್ ಮಕ್ಕಳು ಮಾತ್ರ, ಜೆನ್ ಜಿ ಟ್ರಾವೆಲ್ ಡ್ರೆಸ್‌ಕೋಡ್‌ನಲ್ಲಿ ಕಾಣಿಸಿಕೊಂಡು ಬಿಂದಾಸ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡಿದರು. ಪ್ರತಿಯೊಬ್ಬರ ಡ್ರೆಸ್‌ಕೋಡ್ ಕೂಡ ಟ್ರೆಂಡಿಯಾಗಿತ್ತಲ್ಲದೇ ಟೀನೇಜ್ ಹುಡುಗ-ಹುಡುಗಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಜಿನತ್.
ಏನಿದು ಜೆನ್ ಜಿ ಹಾಲಿ ಡೇ ಲುಕ್
ಜೆನ್ ಜಿ ಜನರೇಷನ್ ಹಾಲಿ ಡೇ ಲುಕ್ ಅವರವರ ಚಾಯ್ಸ್ಗೆ ಸಂಬಂಧಿಸಿದ್ದು, ಅದು ಫಂಕಿಯಾಗಿರಬಹುದು, ಅವುಗಳಲ್ಲಿ ಜಂಕ್ ಜ್ಯುವೆಲರಿ, ಆಕ್ಸೆಸರೀಸ್ ಸೇರಿರಬಹುದು ಇಲ್ಲವೇ ಮಾಡರ್ನ್ ಫ್ಯಾಷನ್ ಜೊತೆ ವಿಂಟೇಜ್ ಕೂಡ ಮಿಕ್ಸ್ ಆಗಿರಬಹುದು. ಈ ಫ್ಯಾಷನ್‌ನಲ್ಲಿ ಯಾವುದೇ ಸ್ಟೈಲ್ ಸ್ಟೇಟ್‌ಮೆಂಟ್‌ಗಳಿಗೆ ರೂಲ್ಸ್ ಇಲ್ಲ! ತಮಗೆ ಇಷ್ಟ ಬಂದಂತಹ ಕಲರ್ಸ್ ಹಾಗೂ ಸ್ಟೈಲ್ ಪಾಲಿಸುವುದೇ ಈ ಜೆನ್ ಜಿ ಹಾಲಿ ಡೇ ಲುಕ್‌ನ ವಿಶೇಷತೆ! ಇತ್ತ, ಥೀಮ್‌ಗೂ ಹೊಂದಬೇಕು, ತಮ್ಮಿಷ್ಟದಂತೆಯೂ ಕೂಡ ಧರಿಸಬೇಕು ಎನ್ನುವ ಎರಡು ಕಾನ್ಸೆಪ್ಟ್‌ಗಳನ್ನು ಮಿಕ್ಸ್ ಮ್ಯಾಚ್ ಮಾಡಿದ ಸ್ಟಾರ್ಸ್ ಮಕ್ಕಳು, ಹಾಲಿ ಡೇ ಲುಕ್‌ನಲ್ಲಿ ಅಂದವಾಗಿ ಕಾಣಿಸಿಕೊಳ್ಳುವುದರೊಂದಿಗೆ ತಮ್ಮಜನರೇಷನ್‌ನ ಫ್ಯಾಷನ್ ಸ್ಟೇಟ್‌ಮೆಂಟ್ ಇದೆ ಎಂದು ಬಿಂಬಿಸಿದರು. ಇದು ಇಂದಿನ ಜನರೇಷನ್ ಮಕ್ಕಳ ಸ್ಟೈಲ್ ಹಾಗೂ ಫ್ಯಾಷನ್ ಯಾವುದೇ ಡಿಸೈನರ್ ಹಾಗೂ ಸ್ಟೈಲಿಸ್ಟ್‌ಗಳ ಅಭಿಲಾಷೆಯಂತೆ ನಡೆಯುವುದಿಲ್ಲ ಎಂಬುದನ್ನು ತೋರಿಸಿತು. ಹಾಲಿ ಡೇಗೆ ಡಿಸೈನರ್‌ಗಳ ಅಗತ್ಯವಿಲ್ಲ ಎಂಬುದನ್ನು ಕೂಡ ಪ್ರೂವ್ ಮಾಡಿತು ಎಂದು ಹೇಳುವ ಫ್ಯಾಷನ್ ವಿಮರ್ಶಕರಾದ ಸನಾ ಜೈನ್ ಹೇಳುವಂತೆ, ಜೆನ್ ಜಿ ಜನರೇಷನ್ ಫ್ಯಾಷನ್ ಇದೀಗ ಹಿಂದಿನ ಜನರೇಷನ್‌ರವರನ್ನು ಸೆಳೆಯುತ್ತಿದೆ ಎನ್ನುತ್ತಾರೆ.
ಬಾಲಿವುಡ್ ತಾರೆಯರ ಮಕ್ಕಳ ಬಿಂದಾಸ್ ಹಾಲಿ ಡೇ ಲುಕ್
ನಟಿ ಸಾರಾ ಅಲಿ ಖಾನ್, ಇಬ್ರಾಹಿಂ ಖಾನ್, ಶಾರೂಖ್ ಮಗಳಾದ ಸುಹಾನಾ ಖಾನ್, ನಟಿ ಅನನ್ಯಾ ಪಾಂಡೇ, ನಟಿ ಶನಾಯಾ ಕಪೂರ್ ಸೇರಿದಂತೆ ಬಾಲಿವುಡ್ ತಾರೆಯರ ಮಕ್ಕಳು ಥೀಮ್ ಹೊರತುಪಡಿಸಿಯೂ ಹಾಲಿ ಡೇ ಫ್ಯಾಷನ್‌ನಲ್ಲಿ ಕಾಣಿಸಿಕೊಂಡದ್ದು ಕಂಡು ಬಂದಿತು. ಕ್ರ್ಯೂಸ್ ಲ್ಯಾಂಡಿಂಗ್ ನಂತರ ಪೋರ್ಟರ್ಸ್‌ಗಳಲ್ಲಿ, ರೋಮ್ ಹಾಗೂ ಫ್ರಾನ್ಸ್‌ನ ನಾನಾ ಸ್ಥಳಗಳಲ್ಲಿ ಟ್ರೆಂಡಿ ಹಾಲಿ ಡೇ ಲುಕ್‌ನಲ್ಲಿ ಕಾಣಿಸಿಕೊಂಡದ್ದು, ಅವರಲ್ಲಿನ ಟ್ರಾವೆಲ್ ಡ್ರೆಸ್‌ಕೋಡ್ ಪ್ರೇಮವನ್ನು ಪ್ರತಿಬಿಂಬಿಸಿತು. ಇದು ಬದಲಾದ ಜನರೇಷನ್‌ನ ಹಾಲಿ ಡೇ ಫ್ಯಾಷನ್ ಅನ್ನು ಹೈಲೈಟ್ ಮಾಡಿದೆ ಎಂದು ವಿಮರ್ಶಕರು ವಿಶ್ಲೇಷಿಸಿದ್ದಾರೆ.
( ಲೇಖಕಿ : ಫ್ಯಾಷನ್ ಲೇಖಕಿ )