Site icon Vistara News

Ananth Ambani Fashion: ಅನಂತ್‌ ಅಂಬಾನಿ ಬಳಿ ಇದೆ ಡೈಮಂಡ್‌ ಬ್ರೂಚ್‌ಗಳ ಕಲೆಕ್ಷನ್‌! ಇವುಗಳ ಮೌಲ್ಯ ಎಷ್ಟಿರಬಹುದು?

Ananth Ambani Fashion

ಚಿತ್ರಗಳು: ಅನಂತ್‌ ಅಂಬಾನಿಯ ಧರಿಸಿದ ಬ್ರೂಚ್‌ ಜ್ಯುವೆಲರಿಗಳು

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅನಂತ್‌ ಅಂಬಾನಿಯವರ (Ananth Ambani Fashion) ಬ್ರೂಚ್‌ (Brooch) ಜ್ಯುವೆಲರಿಗಳು ಇದೀಗ ಮೆನ್ಸ್ ವೆಡ್ಡಿಂಗ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ (Mens Wedding Jewelery Fashion) ಟಾಪ್‌ ಲಿಸ್ಟ್‌ಗೆ ಸೇರಿವೆ.

ಮೆನ್ಸ್ ಜ್ಯುವೆಲರಿ ಲಿಸ್ಟ್‌ಗೆ ಬ್ರೂಚ್‌

ಕೇವಲ ರಾಯಲ್‌ ವೆಡ್ಡಿಂಗ್‌ ಜ್ಯುವೆಲರಿ ಕಲೆಕ್ಷನ್‌ನಲ್ಲಿ ಮಾತ್ರವಲ್ಲ, ಸಾಮಾನ್ಯ ಮೆನ್ಸ್ ಆಭರಣಗಳ ಲಿಸ್ಟ್‌ಗೂ ಇವು ಸೇರಿಕೊಂಡಿವೆ.


ಹೌದು, ಅಂಬಾನಿ ಫ್ಯಾಮಿಲಿಯ ಮದುವೆಗಳಲ್ಲಿ ಜ್ಯುವೆಲರಿಗಳಲ್ಲಿ ಅತಿ ಹೆಚ್ಚು ಹೈಲೈಟಾಗಿದ್ದು, ಮಹಿಳೆಯರ ನೆಕ್ಲೇಸ್‌ ಹಾಗೂ ಆಭರಣದ ಸೆಟ್‌ಗಳು. ಆದನ್ನು ಹೊರತುಪಡಿಸಿದಲ್ಲಿ ಮೆನ್ಸ್ ಲುಕ್‌ಗೆ ಸಾಥ್‌ ನೀಡುವಂತಹ ಶೆರ್ವಾನಿ ಹಾಗೂ ಬಂದ್ಗಾಲ ಡಿಸೈನ್‌ಗಳು ಕೊಂಚ ಫ್ಯಾಷನ್‌ ಲೋಕದಲ್ಲಿ ಹೈಲೈಟ್‌ ಆಯಿತಾದರೂ, ಬಂಗಾರದ ಡಿಸೈನರ್‌ವೇರ್‌ಗಳನ್ನು ಯಾರೂ ವಿನ್ಯಾಸ ಮಾಡಿಸಲು ಸಾಧ್ಯವಿಲ್ಲದ್ದರಿಂದ ಇವುಗಳು ಕೇವಲ ಫ್ಯಾಷನ್‌ ಹಿಸ್ಟರಿ ಪುಸ್ತಕದಲ್ಲಿಯೇ ಉಳಿದವು.

ಇನ್ನು ಅಂಬಾನಿ ಮನೆಯ ಮೆನ್ಸ್ ಜ್ಯುವೆಲರಿ ಫ್ಯಾಷನ್‌ನಲ್ಲಿ ಅತಿ ಹೆಚ್ಚು ಹೈಲೈಟ್‌ ಆಗಿದ್ದು, ಅನಂತ್‌ ಧರಿಸಿದ್ದ ಬ್ರೂಚ್‌ಗಳು. ಅಂದಹಾಗೆ, ಯಾವ್ಯಾವ ಬಗೆಯ ಬ್ರೂಚ್‌ ಅತಿ ಹೆಚ್ಚು ಆಕರ್ಷಿಸಿದವು? ಅವುಗಳ ವಿಶೇಷತೆಯೇನು? ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.


14 ಕೋಟಿ ರೂ.ಗಳ ಗಣೇಶನ ಆಕೃತಿಯ ಬ್ರೂಚ್‌

ಮದುವೆಯ ಹಿಂದಿನ ದಿನ ಅನಂತ್‌ ಅಂಬಾನಿಯವರು 214 ಕೋಟಿಯ ಗೋಲ್ಡನ್‌ ಶೆರ್ವಾನಿಯೊಂದಿಗೆ 14 ಕೋಟಿ ರೂ. ಬೆಲೆ ಬಾಳುವ ವಂತರಾ ಡ್ರೀಮ್‌ ಪ್ರಾಜೆಕ್ಟ್ ಪ್ರತಿನಿಧಿಸುವ ಗಣೇಶನ ಮುಖ ಹೊಂದಿರುವ ಆನೆಯ ಆಕೃತಿಯ ಮುಖವನ್ನು ಹೋಲುವ ಅತ್ಯಾಕರ್ಷಕ ಬ್ರೂಚ್‌ ಮೆನ್ಸ್ ಜ್ಯುವೆಲರಿ ಫ್ಯಾಷನ್‌ನಲ್ಲಿ ಹಿಟ್‌ ಲಿಸ್ಟ್ ಸೇರಿತು.

ಎಮರಾಲ್ಡ್ ಚಿರತೆಯ ಬ್ರೂಚ್‌

ಎಮರಾಲ್ಡ್ ಸ್ಟೋನ್‌ ಮೇಲೆ ಚಿರತೆ ಕುಳಿತಿರುವಂತಹ ಅಪರೂಪದ ಬ್ರೂಚ್‌ ಅನಂತ್‌ ಮದುವೆಯ ಸಮಾರಂಭಗಳಲ್ಲಿ ಎಲ್ಲರನ್ನು ಸೆಳೆದಿತ್ತು. ಇನ್ನು, ಇದೇ ಸಂದರ್ಭದಲ್ಲಿ ಪೇಟಾಗೆ ಧರಿಸಿದ್ದ ಡೈಮಂಡ್‌ನ ಸರ್ಪೆಚ್‌ ಕೂಡ ರಾಜ-ಮಹಾರಾಜರ ಜ್ಯುವೆಲರಿ ಕಲೆಕ್ಷನನ್ನು ಪ್ರತಿನಿಧಿಸಿತ್ತು. ಇದಕ್ಕೂ ಬಹಳ ಹಿಂದೆ
ರೋಕಾ ಕಾರ್ಯಕ್ರಮದಲ್ಲೂ ಪ್ಲಾಟಿನಂ ಹಾಗೂ ಚಿನ್ನದಿಂದ ತಯಾರಾದ ಚಿರತೆಯ ಆಕೃತಿಯ ಡೈಮಂಡ್‌ ಬ್ರೂಚನ್ನು ಅನಂತ್‌ ಧರಿಸಿದ್ದರು.

ಶ್ರೀನಾಥ್‌ ದೇವರ ಬ್ರೂಚ್‌

ಶುಭ್‌ ಆಶಿರ್ವಾದ್‌ ಕಾರ್ಯಕ್ರಮದಲ್ಲಿ ಕುಟುಂಬದ ದೈವ ಶ್ರೀನಾಥ್‌ ಭಗವಾನ್‌ ಆಕೃತಿ ಬ್ರೂಚ್‌, ಅನಂತ್‌ರ ಮರೂನ್‌ ಶೆರ್ವಾನಿಯ ಸೌಂದರ್ಯ ಹೆಚ್ಚಿಸಿತ್ತು.

ಇದನ್ನೂ ಓದಿ: Model Fashion: ಸೀಸನ್‌ ಗೆ ತಕ್ಕಂತೆ ಫ್ಯಾಷನ್‌ ಬದಲಿಸುವ ಮಿಸೆಸ್‌ ಬೆಂಗಳೂರು ಟೈಟಲ್‌ ವಿಜೇತೆ ಪ್ರತಿಭಾ ನಟರಾಜ್‌

ಸಿಂಹದ ಬ್ರೂಚ್‌

ಈ ಮೇಲಿನವುಗಳಲ್ಲದೇ 50 ಕ್ಯಾರೆಟ್‌ ಡೈಮಂಡ್‌ನ ಲೊರೈನ್‌ ಸ್ಕಾವರ್ಟ್ಞ್ ಡಿಸೈನ್‌ ಮಾಡಿದ ಸಿಂಹದ ಆಕೃತಿಯ ಬ್ರೂಚ್‌ ಈ ಹಿಂದೆ ಜಾಮ್‌ನಗರದಲ್ಲಿ ನಡೆದ ಪ್ರಿ-ವೆಡ್ಡಿಂಗ್‌ನಲ್ಲಿ ಸಖತ್‌ ಹೈಲೈಟ್‌ ಆಗಿತ್ತು.
ಈ ಎಲ್ಲಾ ಮೇಲಿನ ಬ್ರೂಚ್‌ ವಿವರಣೆಗಳು ಕೇವಲ ಸ್ಯಾಂಪಲ್‌ ಅಷ್ಟೇ! ಇದೇ ರೀತಿ ಅನಂತ್‌ ಅವರ ಬಳಿ ನೂರಾರು ಡೈಮಂಡ್‌ ಹಾಗೂ ಎಮರಾಲ್ಡ್ನ ಬ್ರೂಚ್‌ಗಳಿವೆಯಂತೆ. ಕಡಿಮೆಯೆಂದರೂ ನೂರಾರು ಕೋಟಿ ರೂ.ಗಳು ಬೆಲೆಬಾಳುತ್ತವಂತೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )
Exit mobile version