Site icon Vistara News

Babies Frock Fashion: ಮಾನ್ಸೂನ್‌ ಸೀಸನ್‌ಗೆ ಕಾಲಿಟ್ಟ ಕ್ಯೂಟ್‌ ಬೇಬಿ ಪಾರ್ಟಿ ಫ್ರಾಕ್ಸ್

Babies Frock

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮುದ್ದು ಮುದ್ದಾಗಿ ಹೆಣ್ಣು ಮಕ್ಕಳನ್ನು ಬಿಂಬಿಸುವ ಕ್ಯೂಟ್‌ ಪಾರ್ಟಿ ಫ್ರಾಕ್‌ಗಳು ಈ ಸೀಸನ್‌ಗೆ ಲಗ್ಗೆ ಇಟ್ಟಿವೆ. ನೋಡಲು ಅತ್ಯಾಕರ್ಷಕವಾಗಿ ಕಾಣುವಂತಹ ಡಿಸೈನ್‌ಗಳಿಗೆ ಬಿಡುಗಡೆಗೊಂಡಿರುವ ಈ ಫ್ರಾಕ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸ ಹಾಗೂ ಶೇಡ್‌ಗಳಲ್ಲಿ ಎಂಟ್ರಿ ನೀಡಿವೆ.

ಟ್ರೆಂಡ್‌ನಲ್ಲಿರುವ ಮುದ್ದು ಕಣ್ಮಣಿಗಳ ಫ್ರಾಕ್ಸ್‌

ಅಂದಹಾಗೆ, ಮಾನ್ಸೂನ್‌ ಸೀಸನ್‌ನಲ್ಲಿ ಚಿಣ್ಣರನ್ನು ಅದರಲ್ಲೂ ಹೆಣ್ಣುಮಕ್ಕಳಿಗೆ ಬೆಚ್ಚಗಿಡುವುದರೊಂದಿಗೆ ಲೇಯರ್ಡ್‌ ಲುಕ್‌ ಇರುವಂತಹ ನಾನಾ ಬಗೆಯ ಫ್ರಾಕ್‌ಗಳು ಬಿಡುಗಡೆಗೊಳ್ಳುತ್ತವೆ. ಈ ಸಾಲಿನಲ್ಲಿ ಈ ಬಾರಿ, ಸಿಂಡ್ರೆಲಾ ಫ್ರಾಕ್‌, ಅಂಬ್ರೆಲಾ ಫ್ರಾಕ್‌, ತಿರುಗಿದರೇ ಟ್ವಿರ್ಲಿಂಗ್‌ ಆಗುವಂತಹ ಡಬ್ಬಲ್‌ ತ್ರಿಬಲ್‌ ನೆಟ್ಟೆಡ್‌ ಹಾಗೂ ಸ್ಪ್ರಿಂಗ್‌ನಂತಿರುವ ಫ್ರಾಕ್ಸ್, ಜಗಮಗಿಸಿದರೂ ಚುಚ್ಚದ ಪಾರ್ಟಿ ಫ್ರಾಕ್ಸ್, ಕಾರ್ಟೂನ್‌ ಚಿತ್ತಾರ, ಕ್ಯೂಟ್‌ ಆಕ್ಸೆಸರೀಸ್‌ಗಳನ್ನು ಹೊಂದಿರುವಂತಹ ಫ್ರಾಕ್‌ಗಳು ಈ ಸೀಸನ್‌ನ ಪಾರ್ಟಿ ಫ್ರಾಕ್‌ ಕೆಟಗರಿಯಲ್ಲಿ ಬಿಡುಗಡೆಗೊಂಡಿವೆ.

ಪಾರ್ಟಿ ಫ್ರಾಕ್‌ ಬಳಕೆ

ಸ್ಟೈಲಿಸ್ಟ್‌ಗಳ ಪ್ರಕಾರ, ಪಾರ್ಟಿ ಫ್ರಾಕ್‌ಗಳನ್ನು ಡೈಲಿ ಬಳಕೆ ಮಾಡಲು ಸಾಧ್ಯವಿಲ್ಲ ಹಾಗೂ ಚಿಣ್ಣರಿಗೆ ಲಾಂಗ್‌ ಟೈಮ್‌ ಹಾಕಬಾರದು. ಇದು ಮಗುವಿಗೆ ಆರಾಮ ಎನಿಸದು. ಹಾಗಾಗಿ ಪಾರ್ಟಿ ಫ್ರಾಕ್‌ಗಳನ್ನು ಆದಷ್ಟೂ ಸಮಾರಂಭಗಳಿಗೆ ಮಾತ್ರ ಬಳಕೆ ಮಾಡುವುದು ಉತ್ತಮ ಎನ್ನುತ್ತಾರೆ. ಇನ್ನು, ಪಾರ್ಟಿ ಫ್ರಾಕ್‌ಗಳ ಫ್ಯಾಷನ್‌ನಲ್ಲೂ ನಾನಾ ವೆರೈಟಿಗಳು ಲಭ್ಯ. ಅವುಗಳಲ್ಲಿ ಮಗುವಿಗೆ ಹೊಂದುವಂತಹ ವಿನ್ಯಾಸಗಳದ್ದನ್ನೇ ಖರೀದಿಸಬೇಕು. ಹೆಚ್ಚು ವಿನ್ಯಾಸದ್ದನ್ನು ಕೊಳ್ಳುವ ಮುನ್ನ ಮಗುವಿಗೆ ಅದು ಆರಾಮ ಎಂದೆನಿಸುತ್ತದೆಯೇ ಎಂಬುದನ್ನು ಗಮನಿಸಬೇಕು. ಲೈಟ್‌ವೈಟ್‌ ಫ್ರಾಕ್‌ಗಳಿಗೆ ಆದ್ಯತೆ ನೀಡಬೇಕು. ಇದಕ್ಕೆ ಪೂರಕ ಎಂಬಂತೆ ಇಕೋ ಫ್ರೆಂಡ್ಲಿ ಪಾರ್ಟಿ ಫ್ರಾಕ್‌ಗಳು ಬಂದಿವೆ. ಅವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನುತ್ತಾರೆ.

ಇದನ್ನೂ ಓದಿ: Denim Gown Fashion : ಡೆನಿಮ್‌ ಪ್ರೇಮಿಗಳ ಸ್ಟೈಲಿಂಗ್‌ಗೆ ಬಂತು ಟ್ರೆಂಡಿ ಗೌನ್ಸ್

ಸಾಫ್ಟ್ ಫ್ಯಾಬ್ರಿಕ್‌ನ ಪಾರ್ಟಿ ಫ್ರಾಕ್ಸ್‌

ಮಕ್ಕಳ ಅಭಿರುಚಿ ಮಾತ್ರವಲ್ಲ, ಮಕ್ಕಳ ದೇಹಕ್ಕೆ ಚುಚ್ಚದ ನಾನಾ ಬ್ರಾಂಡ್‌ಗಳ ಸಾಫ್ಟ್‌ ಫ್ಯಾಬ್ರಿಕ್‌ನ ಪಾರ್ಟಿ ಫ್ರಾಕ್‌ಗಳು ಇಂದು ಬೇಡಿಕೆ ಹೆಚ್ಚಿಸಿಕೊಂಡಿವೆ. ನೋಡಲು ಇವು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ಲೈಟ್‌ವೈಟ್‌ ಡಿಸೈನ್‌ನಲ್ಲೂ ಇವು ಲಭ್ಯ ಎನ್ನುತ್ತಾರೆ ಮಾರಾಟಗಾರರು.

ಪಾರ್ಟಿ ಫ್ರಾಕ್‌ ಆಯ್ಕೆಗೆ 5 ಟಿಪ್ಸ್‌

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version