-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೈ ಫ್ಯಾಷನ್ ಮೆಟ್ ಗಾಲಾ ಫ್ಯಾಷನ್ ಶೋನಲ್ಲಿ ಊಹೆಗೂ ಮೀರಿದ ಭಿನ್ನ-ವಿಭಿನ್ನ ಡಿಸೈನರ್‌ವೇರ್ ಹಾಗೂ ಸಸ್ಟೈನಬಲ್ ಉಡುಪುಗಳನ್ನು (Bangalore Fashion News) ಧರಿಸಿದ ಮಾಡೆಲ್‌ಗಳು ತಂತಮ್ಮ ಡಿಸೈನರ್‌ಗಳೊಂದಿಗೆ ಹೆಜ್ಜೆ ಹಾಕಿ ನೋಡುಗರ ಗಮನ ಸೆಳೆದರು.
ಪೂಲ್‌ಸೈಡ್‌ನಲ್ಲಿ ನಡೆದ ಈ ಸೀಸನ್‌ನ ಹೈ ಫ್ಯಾಷನ್ ಮೆಟ್ ಗಾಲಾದ ನೇತೃತ್ವವನ್ನು ಬಿಯಾ ಸಂಧೂ ತನೇಜಾ ಹಾಗೂ ರಶೀದಾ ಪವ್ತಿವಾಲ ವಹಿಸಿದ್ದರು. ಸಸ್ಟೈನಬಲ್ ಫ್ಯಾಷನ್ ಜೊತೆಜೊತೆಗೆ ಭಿನ್ನ-ವಿಭಿನ್ನ ಮೆಟಿರಿಯಲ್‌ನಲ್ಲಿ ಸಿದ್ಧಪಡಿಸಿದ ಡಿಸೈನರ್‌ಗಳಿಗೆ ಇಲ್ಲಿ ಸದಾವಕಾಶ ನೀಡಲಾಗಿತ್ತು.
ಬಿಯಾ ಸಂಧು ಫ್ಯಾಷನ್ ಟಾಕ್
ಹೈ ಫ್ಯಾಷನ್ ಮೆಟ್ ಗಾಲಾದಲ್ಲಿ ಆದಷ್ಟೂ ವಿಭಿನ್ನ ಡಿಸೈನರ್‌ವೇರ್‌ಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಭಿನ್ನವಾದ ಡಿಸೈನರ್‌ವೇರ್ ಧರಿಸಿದ ಮಾಡೆಲ್‌ಗಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು ಎಂದು ಆಲ್ ಬೆಂಗಳೂರು ಚಾಪ್ಟರ್ ಫಾರ್ ಫ್ಯಾಷನ್‌ನ ಮುಖ್ಯಸ್ಥೆ ಹಾಗೂ ಶೋ ಆಯೋಜಕಿ ಬಿಯಾ ಸಂಧು ತನೇಜಾ ಹೇಳಿದರು.
ಸೆಲೆಬ್ರಿಟಿ ಶೋ ಸ್ಟಾಪರ್ ನಟಿ ಸಂಯುಕ್ತಾ ಹೆಗಡೆ
ಸ್ಯಾಂಡಲ್‌ವುಡ್ ನಟಿ ಸಂಯುಕ್ತ ಹೆಗಡೆ ಈ ಶೋನ ಸೆಲೆಬ್ರಿಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದರು. ಇವರ ಡಿಸೈನರ್‌ವೇರನ್ನು ಎಮಾರಾಲ್ಡ್ ಸ್ಟೋರ್ ಡಿಸೈನ್ ಮಾಡಿತ್ತು.
ಅಚ್ಚರಿ ಮೂಡಿಸಿದ ಡಿಸೈನರ್‌ವೇರ್ ಧರಿಸಿದ ಮಾಡೆಲ್‌ಗಳು
ಸೆಣಬಿನಿಂದ ಸಿದ್ಧಪಡಿಸಿದ ಫ್ಯಾಬ್ರಿಕ್, ಅಂದರೆ ಇನ್ನು ಸಿಂಪಲ್ ಆಗಿ ಹೇಳುವುದಾದಲ್ಲಿ ಗೋಣಿಚೀಲದ ಫ್ಯಾಬ್ರಿಕ್‌ನಲ್ಲಿ ಶೋಲ್ಡರ್‌ಲೆಸ್ ಅಸ್ಸೆಮ್ಮಿಟ್ರಿಕಲ್ ಮ್ಯಾಕ್ಸಿ ಗೌನ್, ಸ್ಕರ್ಟ್ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ಕಂಡು ಬಂದರು. ಡಸ್ಟ್‌ಬಿನ್ ಕವರ್ನಲ್ಲಿ ಸಿದ್ಧಪಡಿಸಿದ ಡಿಸೈನರ್‌ವೇರ್ ಧರಿಸಿದ ಮಾಡೆಲ್ ವಿಭಿನ್ನವಾಗಿ ಕಾಣಿಸಿಕೊಂಡರು.
ಇದನ್ನೂ ಓದಿ: Urfi Javed: ಉರ್ಫಿ ಹೊಸ ಮ್ಯಾಗಜಿನ್ ಫೋಟೊಶೂಟ್ ವೈರಲ್: ಖ್ಯಾತ ಫ್ಯಾಷನ್ ಡಿಸೈನರ್ ಅನಿತಾ ಶ್ರಾಫ್ ಹೇಳಿದ್ದೇನು?
ಉದ್ಯಾನನಗರಿಯ ಮಾಡೆಲ್ ನೀರಜಾ, ಗೋಣಿಚೀಲದ ಫ್ಯಾಬ್ರಿಕ್‌ನಲ್ಲಿ ತಯಾರಿಸಿದ ಶೋಲ್ಡರ್‌ಲೆಸ್ ಗೌನ್‌ನಲ್ಲಿ ಕಂಪ್ಲೀಟ್ ಗ್ಲಾಮರಸ್ ಆಗಿ ಮಿಂಚಿದರು. ಅವರು ಧರಿಸಿದ ಭಾರಿ ಹೆಡ್‌ಗೇರ್ ಆಕ್ಸೆಸರೀಸ್ ಗಮನಸೆಳೆಯಿತು. ಇನ್ನು ಮಾಡೆಲ್ ಗಾಯತ್ರಿ ಮೊಹಂತಿ, ಶೋಲ್ಡರ್‌ಲೆಸ್ ಫ್ಲೋರಲ್ ಬೊಕ್ಕೆ ಫ್ರಾಕ್‌ನಲ್ಲಿ ಹೆಜ್ಜೆ ಹಾಕಿದರು. ಮಾಡೆಲ್ ವಿದ್ಯಾ ಮಾತ್ರ ಹಳೆ ನ್ಯೂಸ್ ಪೇಪರ್ ಗೌನ್‌ನಲ್ಲಿ ವಿಭಿನ್ನವಾಗಿ ವಾಕ್ ಮಾಡಿದರು. ಮಧ್ಯ ವಯಸ್ಸಿನ ಪುರುಷ ಮಾಡೆಲ್‌ವೊಬ್ಬರು ಬ್ಲೇಝರ್ ಜೊತೆಗೆ ಬ್ಲಾಕ್ ಸ್ಕರ್ಟ್ ಸೇರಿದಂತೆ ೫ ಪೀಸ್ ಡಿಸೈನರ್‌ವೇರ್‌ನಲ್ಲಿ ಮೀಸೆ ತಿರುವುತ್ತಾ ಜಬರ್‌ದಸ್ತ್ ವಾಕ್ ಮಾಡಿದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)