Site icon Vistara News

Beauty craze: ಸಾಮಾನ್ಯ ಪುರುಷರಲ್ಲೂ ಹೆಚ್ಚಾಯ್ತು ಐಬ್ರೋ ಶೇಪ್‌ ಕ್ರೇಜ್‌

Eyebrow shape craze has also increased in common men

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇದೀಗ ಪುರುಷರಲ್ಲಿ ಐಬ್ರೋ ಶೇಪ್‌ ಕ್ರೇಜ್ (Beauty craze) ಹೆಚ್ಚಾಗಿದೆ. ಹೌದು. ಹುಡುಗಿಯರಿಗೆ ಮಾತ್ರ ಐಬ್ರೋ ಶೇಪ್‌ ಎನ್ನುತ್ತಿದ್ದ ಕಾಲ ಬದಲಾಗಿದೆ. ಕೇವಲ ಮಾಡೆಲ್‌ಗಳು ಹಾಗೂ ಎಂಟರ್ಟೈನ್ಮೆಂಟ್ ಕ್ಷೇತ್ರಕ್ಕೆ ಸೀಮಿತವಾಗಿದ್ದ ಈ ಐಬ್ರೋ ಶೇಪ್‌ ಮಾಡುವ ಬ್ಯೂಟಿ ಕಾನ್ಸೆಪ್ಟ್‌ ಇದೀಗ ಹುಡುಗರ ಬ್ಯೂಟಿ ಲಿಸ್ಟ್‌ಗೆ ಸೇರಿದೆ. ಇದಕ್ಕೆ ಪೂರಕ ಎಂಬಂತೆ ಸಲೂನ್‌ಗಳು ಹಾಗೂ ಸ್ಪಾಗಳು ಪುರುಷರಿಗೆ ಕಸ್ಟಮೈಸ್ಡ್‌ ಐಬ್ರೋ ಶೇಪ್‌ ಲಿಸ್ಟ್‌ ಒದಗಿಸುತ್ತಿವೆ.

ಹುಡುಗರಿಗೂ ಉಂಟು ಡಿಫರೆಂಟ್‌ ಐಬ್ರೋ ಶೇಪ್‌

ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ನಾನಾ ಬಗೆಯ ಐಬ್ರೋ ಶೇಪ್‌ ಕಾನ್ಸೆಪ್ಟ್‌ಗಳು ಕಾಲಿಟ್ಟಿವೆ. ಒಬ್ಬೊಬ್ಬರ ಮುಖಕ್ಕೆ ಒಂದೊಂದು ಬಗೆಯ ಐಬ್ರೋ ಶೇಪ್‌ಗಳನ್ನು ಪರಿಚಯಿಸುವ ಸಲೂನ್‌ಗಳು ಇವೆ. ಇನ್ನು ಮಾಡೆಲಿಂಗ್‌ ಹಾಗೂ ಆ್ಯಕ್ಟಿಂಗ್‌ ಕ್ಷೇತ್ರದಲ್ಲಿರುವವರಿಗೆ ಇದು ಹೊಸತಲ್ಲ! ಐಬ್ರೋ ಸ್ಲಿಟ್‌ ಹೆಚ್ಚು ಟ್ರೆಂಡಿಯಾಗಿದೆ ಎನ್ನುತ್ತಾರೆ ಗ್ರೂಮಿಂಗ್‌ ಎಕ್ಸ್‌ಪರ್ಟ್‌ ಜಾನ್‌.

ಸಲೂನ್‌ಗಳಲ್ಲಿ ಸೌಲಭ್ಯ

ಮೊದಲೆಲ್ಲ ಐಬ್ರೋ ಶೇಪ್‌ ಮಾಡಿಸಲು ಹಿಂದೂಮುಂದೂ ನೋಡುತ್ತಿದ್ದ ಹುಡುಗರು ಈಗ ಬಿಂದಾಸ್‌ ಆಗಿ ಹೇರ್‌ಕಟ್‌ ಮಾಡಿಸುವ ಸಲೂನ್‌ಗಳಲ್ಲೆ ಐಬ್ರೋ ಶೇಪ್‌ ಮಾಡಿಸುತ್ತಿದ್ದಾರೆ. ಕೆಲವರು ಥ್ರೆಡ್ಡಿಂಗ್‌ಗೆ ಮೊರೆ ಹೋದರೆ, ಮತ್ತೆ ಕೆಲವರು ಪ್ಲಕ್‌ ಮಾಡಿಸುತ್ತಾರೆ ಎನ್ನುತ್ತಾರೆ ಸಲೂನ್‌ವೊಂದರ ಬ್ಯೂಟಿ ಎಕ್ಸ್‌ಪರ್ಟ್.

ಬಾಲಿವುಡ್‌ ನಟರ ಐಬ್ರೋ ಶೇಪ್‌ಗೆ ಡಿಮ್ಯಾಂಡ್‌

ಕೆಲವರು ಸಲೂನ್‌ಗಳಿಗೆ ಬಂದಾಗ ನಮಗೆ ಹುಡುಗಿಯರ ರೀತಿ ಐಬ್ರೋ ಶೇಪ್‌ ಬೇಡ, ನೋಡಲು ನ್ಯಾಚುರಲ್‌ ಆಗಿ ಕಾಣಬೇಕು. ಕೇವಲ ಎಕ್ಸ್‌ಟ್ರಾ ತೆಗೆದರೆ ಸಾಕು. ಇಲ್ಲವೇ ಬಾಲಿವುಡ್‌ ನಟರ ಫೋಟೋ ತೋರಿಸಿ ಈ ಶೇಪ್‌ ಬೇಕು ಎಂದು ಕೇಳುವವರು ಇದ್ದಾರೆ. ಅಷ್ಟೇಕೆ! ಹೇರ್‌ಸ್ಟೈಲ್‌ಗೆ ಮ್ಯಾಚ್‌ ಆಗುವಂತೆ ಶೇಪ್‌ ಮಾಡಿ. ನೋಡಿದಾಗ ಐಬ್ರೋ ಶೇಪ್‌ ಮಾಡಿಸಿದಂತೆ ಕಾಣಬಾರದು ಎಂದು ಕೇಳುವವರು ಇದ್ದಾರೆ. ಅವರ ಅಭಿಲಾಷೆಗೆ ಅನುಸಾರವಾಗಿ ಕಸ್ಟಮೈಸ್ಡ್‌ ಐಬ್ರೋ ಶೇಪ್‌ ಮಾಡುತ್ತೇವೆ ಎನ್ನುತ್ತಾರೆ ಸಲೂನ್‌ವೊಂದರ ಹೇರ್‌ ಸ್ಟೈಲಿಸ್ಟ್‌ ರಿಷರ್ಡ್.

ಮಾಡೆಲ್‌ಗಳು ಹಾಗೂ ಎಂಟರ್ಟೈನ್ಮೆಂಟ್ ಕ್ಷೇತ್ರದವರು ಅತಿ ಹೆಚ್ಚಾಗಿ ರೆಗ್ಯುಲರ್‌ ಆಗಿ ಐಬ್ರೋ ಶೇಪ್‌ಗೆ ಒಳಗಾಗುತ್ತಾರೆ. ಹೇರ್‌ಕಟ್‌ಗೆ ಬಂದಾಗ ಇದನ್ನು ಮಾಡಿಸುತ್ತಾರೆ. ಇದೀಗ ಇದು ತೀರಾ ಸಾಮಾನ್ಯವಾದ ವಿಚಾರ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್‌ ಹರಿ. ಅವರ ಪ್ರಕಾರ, ಕಾಸ್ಮೆಟಿಕ್‌ ಸಂಸ್ಥೆಯೊಂದರ ಪ್ರಕಾರ, ಇಂದು ಪುರುಷರಲ್ಲೂ ಐಬ್ರೋ ಶೇಪ್‌ ಕ್ರೇಝ್‌ ಹೆಚ್ಚಾಗಿದೆಯಂತೆ. ಅದರಲ್ಲೂ ಕಾರ್ಪೋರೇಟ್‌ ಕ್ಷೇತ್ರದವರು, ಮಾರ್ಕೆಟಿಂಗ್‌ ಕ್ಷೇತ್ರದವರು ಹೆಚ್ಚಾಗಿ ಇಂತಹ ಬ್ಯೂಟಿ ಕಾನ್ಸೆಪ್ಟ್‌ಗಳ ಮೊರೆ ಹೋಗುತ್ತಿದ್ದಾರಂತೆ.

ಐಬ್ರೋ ಶೇಪ್‌ ಪ್ರಿಯರಿಗೆ ಒಂದಿಷ್ಟು ಸಿಂಪಲ್‌ ಸಲಹೆ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version