Site icon Vistara News

Beauty Parlour Stroke Syndrome | ಬ್ಯೂಟಿ ಪಾರ್ಲರ್‌ ಸ್ಟ್ರೋಕ್‌ ಸಿಂಡ್ರೋಮ್‌ ಬಗ್ಗೆ ಇರಲಿ ಅರಿವು

Beauty Parlour Stroke Syndrome Awareness

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಯೂಟಿ ಪಾರ್ಲರ್‌ ಸ್ಟ್ರೋಕ್‌ ಸಿಂಡ್ರೋಮ್‌ (Beauty Parlour Stroke Syndrome Awareness) ಕುರಿತ ಸುದ್ದಿ ಇತ್ತೀಚೆಗೆ ಎಲ್ಲೆಡೆ ವೈರಲ್‌ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸುದ್ದಿ ವೈರಲ್‌ ಆದ ನಂತರ ಹೇರ್‌ ಸ್ಪಾ ಅಥವಾ ಕೂದಲಿಗೆ ಸಂಬಂಧಿಸಿದ ಆರೈಕೆಗೆಂದು ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡುತ್ತಿದ್ದ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ಇದಕ್ಕೆ ಪರಿಹಾರವೇನು ಎಂದು ಕನ್‌ಫ್ಯೂಸ್‌ ಆಗಿದ್ದಾರೆ. ಕಾರಣ, ಈ ಬಗ್ಗೆ ಸಾಕಷ್ಟು ಮಂದಿಗೆ ಅರಿವು ಇಲ್ಲದಿರುವುದು. ಈ ಸಿಂಡ್ರೋಮ್‌ಗೆ ಕಾರಣವೇನು ಹಾಗೂ ಎಂತಹ ಸಮಯದಲ್ಲಿ ಇದಕ್ಕೆ ಒಳಗಾಗುವ ಸಾಧ್ಯತೆಗಳಿವೆ ಎಂಬುದನ್ನು ತಿಳಿದುಕೊಂಡಲ್ಲಿ ಭಯ ಮೂಡದು ಎನ್ನುತ್ತಾರೆ ಸೌಂದರ್ಯ ತಜ್ಞರು.

ಇದು ಅಪರೂಪದ ಘಟನೆ
ಅಂದಹಾಗೆ, ಮೊದಲಿಗೆ ಈ ಘಟನೆಯ ಸಂಕ್ಷಿಪ್ತ ವಿವರ ತಿಳಿಯೋಣ. ಹೈದರಾಬಾದ್‌ನ ಬ್ಯೂಟಿ ಪಾರ್ಲರ್‌ವೊಂದರಲ್ಲಿ ೫೦ ವರ್ಷದ ಮಹಿಳೆಯೊಬ್ಬರು ಹೇರ್‌ ಸ್ಪಾ ಮಾಡಿಸುತ್ತಿದ್ದರು. ಅವರಿಗೆ ಇದ್ದಕ್ಕಿದ್ದಂತೆ ತಲೆತಿರುಗಿದಂತಾಗಿದೆ, ಉಸಿರಾಟದ ತೊಂದರೆಯಾಗಿದೆ. ನಂತರ ಅವರು ನ್ಯೂರಾಲಜಿಸ್ಟ್‌ ಬಳಿ ಪರೀಕ್ಷೆ ನಡೆಸಿದ ಬಳಿಕ ಇದು ಬ್ಯೂಟಿ ಪಾರ್ಲರ್‌ ಸ್ಟ್ರೋಕ್‌ ಸಿಂಡ್ರೋಮ್‌ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ | Halloween dressing tips | ದೆವ್ವ, ಭೂತದ ಫ್ಯಾಷನ್‌ಗೆ ಮುನ್ನ 5 ವಿಷಯ ಗಮನದಲ್ಲಿರಲಿ

Beauty Parlour Stroke Syndrome Awareness

ಹೇರ್‌ ವಾಶ್‌ ಮಾಡುವಾಗ ತಲೆಯನ್ನು ತೀರಾ ಹಿಂದಕ್ಕೆ ಬಗ್ಗಿಸಿದಾಗ, ತಲೆಯ ಹಿಂಬದಿಯ ಭಾಗದಲ್ಲಿರುವ ಅತ್ಯಂತ ತೆಳು ನರಗಳ ರಕ್ತ ಸಂಚಲನೆಯಲ್ಲಿ ಅಡಚಣೆಯುಂಟಾದಾಗ ಇಲ್ಲವೇ ಒತ್ತಡ ಹೆಚ್ಚಾದಾಗ ಈ ರೀತಿ ಆಗಬಹುದು. ಇದು ಬಲು ಅಪರೂಪದ ಘಟನೆ ಎಂದಿದ್ದಾರೆ ವೈದ್ಯರು.

ಹಾಗೆಂದು ಇದು ಹೇರ್‌ಸ್ಪಾಗೆ ಒಳಗಾಗುವವರಿಗೆಲ್ಲರಿಗೂ ಆಗುವುದಿಲ್ಲ. ಆಯಾ ವ್ಯಕ್ತಿಗೆ ಅನುಗುಣವಾಗಿ ಪರಿಣಾಮ ಬೀರುತ್ತದೆ. ಇದಕ್ಕಾಗಿ ಹೆದರಬೇಕಾಗಿಯೂ ಇಲ್ಲ. ಹೇರ್‌ಸ್ಪಾದಂತಹ ಟ್ರೀಟ್‌ಮೆಂಟ್‌ಗೆ ಒಳಗಾಗುವಾಗ ಅಥವಾ ಹೆಡ್‌ ವಾಶ್‌ ಮಾಡಿಸುವಾಗ ಏನಾದರೂ ತಲೆ ತಿರುಗುವಿಕೆ, ಉಸಿರಾಟದ ತೊಂದರೆ ಎದುರಿಸಿದಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಇದರಿಂದ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು ಎನ್ನುತ್ತಾರೆ ವೈದ್ಯರು.

ತಲೆ ಹಿಂಭಾಗಕ್ಕೆ ಬಗ್ಗಿಸುವಾಗ ಜಾಗ್ರತೆ ಇರಲಿ
ಹೌದು. ಈ ಕಾಲದಲ್ಲಿ ಬ್ಯೂಟಿ ಪಾರ್ಲರ್‌ಗೆ ಹೋಗದಿರುವ ಮಹಿಳೆಯರೇ ಇಲ್ಲ ಎನ್ನಬಹುದು. ಯಾವುದೇ ಬ್ಯೂಟಿ ಪಾರ್ಲರ್‌ ಟ್ರೀಟ್‌ಮೆಂಟ್‌ ಪಡೆಯುವಾಗಲು ಆ ಚಿಕಿತ್ಸೆ ನಿಮಗೆ ಸೂಟ್‌ ಆಗುತ್ತದೆಯೇ ಇಲ್ಲವೇ? ಏನಾದರೂ ಸಮಸ್ಯೆ ಉಂಟಾಗುತ್ತಿದೆಯೇ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಮಸ್ಯೆಯಾದಲ್ಲಿ ತಕ್ಷಣಕ್ಕೆ ಅದನ್ನು ತ್ಯಜಿಸಬೇಕು. ಚಿಕಿತ್ಸೆಗೆ ಮುಂದಾಗಬೇಕು ಎಂದು ಸಲಹೆ ನೀಡುತ್ತಾರೆ ಸೌಂದರ್ಯ ತಜ್ಞೆ ಮಂಗಲಾ.

Beauty Parlour Stroke Syndrome Awareness

ಬ್ಯೂಟಿ ಪಾರ್ಲರ್‌ ಪ್ರಿಯರಿಗೆ ಸಲಹೆ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Shah Rukh Khan Fashion | ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ರೀಲ್‌ ಫ್ಯಾಷನ್‌ Vs ರಿಯಲ್‌ ಫ್ಯಾಷನ್‌!

Exit mobile version