ವಿಶೇಷ ಸಂದರ್ಶನ : ಶೀಲಾ ಸಿ. ಶೆಟ್ಟಿ
ಬಾಲಿವುಡ್ ನಟಿ ಹಾಗೂ ಬಹುಭಾಷಾ ತಾರೆ ಮಧೂ ಶಾ ಉದ್ಯಾನನಗರಿಗೆ ಭೇಟಿ ನೀಡಿದ್ದರು. ಡಿಸೈನರ್ ಪಲ್ಲವಿ ಗೌಡ, ಚೈತ್ರಾ, ಪ್ರಿಯಾ, ಮನೋಜ್ ಹಾಗೂ ಆರ್ ಜೆ ರಾಜೇಶ್ ಸೇರಿ ಆಯೋಜಿಸಿದ್ದ ರಿಶಿಸ್ ಮಿಸೆಸ್ ಕರ್ನಾಟಕ ಬ್ಯೂಟಿ ಪೇಜೆಂಟ್‌ನಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದರು. ಈ ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ಗೆ ವಿಶೇಷ ಸಂದರ್ಶನ (Bollywood Actress Interview) ನೀಡಿದ ಅವರು ತಮ್ಮ ಫ್ಯಾಷನ್ ಲೈಫ್ ಬಗ್ಗೆ ಮಾತನಾಡಿದರು.
ವಿಸ್ತಾರ ನ್ಯೂಸ್
ಸದಾ ಟ್ರೆಡಿಷನಲ್ ಸೀರೆಯಲ್ಲಿ ಕಾಣಿಸಿಕೊಳ್ಳುವ ನಿಮ್ಮನ್ನು ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ನೋಡಿದಾಗ ಸಿಗುವ ಕಮೆಂಟ್‌ಏನು?
ಮಧೂ ಶಾ
ಅಭಿಮಾನಿಗಳಿಗೆ ನನ್ನನ್ನು ಟ್ರೆಡಿಷನಲ್ ಆಗಿ ನೋಡಿಯೇ ಅಭ್ಯಾಸವಾಗಿದೆ. ಆದರೆ, ನನ್ನ ಸ್ಕ್ರೀನ್ ಲೈಫ್, ಪರ್ಸನಲ್ ಲೈಫ್ ಬೇರೇ, ಬೇರೇ! ಎರಡೂ ಸ್ಟೈಲಿಂಗ್‌ನಲ್ಲೂ ಕಾಣಿಸಿಕೊಳ್ಳುತ್ತೇನೆ. ಅದಾಗಿಯೂ ಬ್ಯೂಟಿಫುಲ್ ಕಾಂಪ್ಲಿಮೆಂಟ್ ದೊರೆಯುತ್ತದೆ.
ವಿಸ್ತಾರ ನ್ಯೂಸ್
ನಿಮ್ಮ ಫ್ಯಾಷನ್ ಲೈಫ್‌ನಲ್ಲಿ ಯಾವುದಕ್ಕೆಲ್ಲಾ ಆದ್ಯತೆ ನೀಡುತ್ತೀರಾ?
ಮಧೂ ಶಾ
ಕಂಫರ್ಟಬಲ್ ಕ್ಲಾತಿಂಗ್‌ಗೆ ಮೊದಲ ಆದ್ಯತೆ. ಇನ್ನು ಸೀರೆಯಿಂದಿಡಿದು ವೆಸ್ಟೆರ್ನ್ ಔಟ್‌ಫಿಟ್‌ಗಳು ನನಗಿಷ್ಟ. ಸಿನಿಮಾ ಸಮಾರಂಭಗಳಿಗೆ ತಕ್ಕಂತೆ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುತ್ತೇನೆ. ಇನ್ನು ಪಾರ್ಟಿ, ಔಟಿಂಗ್‌ನಲ್ಲಿ ನನ್ನ ಮಕ್ಕಳೊಂದಿಗೆ ನಾನು ಕೂಡ ಕ್ಯಾಶುವಲ್‌ನಲ್ಲಿ ಸಿದ್ಧಳಾಗುತ್ತೇನೆ.
ವಿಸ್ತಾರ ನ್ಯೂಸ್
ನಿಮ್ಮ ಯೂನಿಕ್ ಸಿಗ್ನೆಚರ್ ಸ್ಟೈಲ್ ?
ಮಧೂ ಶಾ
ಮುಗುಳು ನಗೆ ನನ್ನ ಸಿಗ್ನೆಚರ್ ಸ್ಟೈಲ್ ಎಂದರೂ ಅತಿಶಯೋಕ್ತಿಯಾಗದು.
ವಿಸ್ತಾರ ನ್ಯೂಸ್
ಬೆಂಗಳೂರು ಫ್ಯಾಷನ್ ಪ್ರಪಂಚದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಮಧೂ ಶಾ
ಬೆಂಗಳೂರು ಇದೀಗ ಸಾಕಷ್ಟು ಫ್ಯಾಷೆನಬಲ್ ಆಗಿದೆ. ಮೊದಲಿಗಿಂತ ಜನರು ಹೆಚ್ಚು ಫ್ಯಾಷನೆಬಲ್ ಆಗಿದ್ದಾರೆ. ನಾನಾ ಪೇಜೆಂಟ್‌ಗಳು ನಡೆಯುತ್ತಿವೆ. ಮುಂಬಯಿ, ದಿಲ್ಲಿ ನಂತರ ಬೆಂಗಳೂರು ಅಗ್ರ ಸ್ಥಾನದಲ್ಲಿದೆ.
ವಿಸ್ತಾರ ನ್ಯೂಸ್
ರಿಶಿಸ್ ಮಿಸೆಸ್ ಕರ್ನಾಟಕ ಪೇಜೆಂಟ್‌ನಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದ ನಿಮಗೆ ಆದ ಅನುಭವವೇನು?
ಮಧೂ ಶಾ
ರ‍್ಯಾಂಪ್ ವಾಕ್ ಮಾಡುವಾಗ ಜನರಿಂದ ಸಿಕ್ಕ ಪ್ರತಿಕ್ರಿಯೆ ಅದ್ಭುತವಾಗಿತ್ತು. ಸಿನಿಮಾ ಮಾತ್ರವಲ್ಲ, ಜನರು ನನ್ನನ್ನು ರ‍್ಯಾಂಪ್‌ನಲ್ಲಿಯೂ ನೋಡಲು ಇಷ್ಟಪಡುತ್ತಾರೆ ಎಂಬುದು ತಿಳಿಯಿತು.
ವಿಸ್ತಾರ ನ್ಯೂಸ್
ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಿಮಗೆ ಸ್ಟೈಲಿಶ್ ನಟ ಎಂದೆನಿಸಿದ್ದು ಯಾರು ?
ಮಧೂ ಶಾ
ಅಣ್ಣಯ್ಯ ಸಿನಿಮಾದಲ್ಲಿ ಕ್ರೇಝಿ ಸ್ಟಾರ್ ರವಿಚಂದ್ರನ್ ಜೊತೆ ನಟಿಸಿದೆ. ಅವರು ಸ್ಟೈಲಿಶ್ ನಟ ಮಾತ್ರವಲ್ಲ, ಸ್ಟೈಲಿಶ್ ಸಿನಿಮಾ ಮೇಕರ್ ಎಂದೆನಿಸಿತು. ಈ ಚಿತ್ರದ ಸಿಕ್ವೆಲ್ ಮಾಡಿದಲ್ಲಿ, ಖಂಡಿತಾ ನಾನು ಅವರೊಂದಿಗೆ ಮತ್ತೊಮ್ಮೆ ನಟಿಸಲು ಸಿದ್ಧ!
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್ ಟ್ರೆಡಿಷನಲ್ ಜ್ಯುವೆಲ್ ಫ್ಯಾಷನ್‌ಗೆ ಮರಳಿದ ಕಾಸಿನಸರ