Site icon Vistara News

Bollywood Winter Fashion | ವೈವಿಧ್ಯಮಯ ವಿಂಟರ್‌ ಫ್ಯಾಷನ್‌ಗೆ ಸೈ ಎಂದ ಬಾಲಿವುಡ್‌ ತಾರೆಯರು

Bollywood Winter Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸದಾ ಒಂದಲ್ಲ ಒಂದು ಗ್ಲಾಮರಸ್‌ ಉಡುಪಿನಲ್ಲಿ ಕಾಣಿಸಿಕೊಳ್ಳುವ ಬಾಲಿವುಡ್‌ ತಾರೆಯರು (Bollywood Winter Fashion) ಇದೀಗ ಚಳಿಗಾಲದ ಚುಮುಚುಮು ಚಳಿಗೆ ವಿಂಟರ್‌ ಫ್ಯಾಷನ್‌ಗೆ ಮೊರೆ ಹೋಗಿದ್ದಾರೆ. ಔಟಿಂಗ್‌ ಸಂದರ್ಭದಲ್ಲಿ ಲೇಯರ್‌ ಲುಕ್‌ ಜತೆಗೆ ಫ್ಯಾಷನಬಲ್‌ ವುಲ್ಲನ್‌ವೇರ್‌ಗಳನ್ನು ಧರಿಸತೊಡಗಿದ್ದಾರೆ.

ತಾರೆಯರ ಫೇವರಿಟ್‌ ವಿಂಟರ್‌ವೇರ್ಸ್‌
ರಶ್ಮಿಕಾ ಮಂದಣ್ಣ, ಪರಿಣಿತಿ ಚೋಪ್ರಾ, ಸಾರಾ, ಪೂಜಾ ಹೆಗ್ಡೆ, ಡೈಸಿ ಶಾ, ಸೋನಂ ಕಪೂರ್‌, ತಾರಾ ಸುತಾರಿಯಾ, ಮೌನಿ ರಾಯ್‌, ಶ್ರದ್ಧಾ, ಅನನ್ಯಾ ಪಾಂಡೆ ಸೇರಿದಂತೆ ಸಾಕಷ್ಟು ಬಾಲಿವುಡ್‌ ತಾರೆಯರು ಕಾರ್ಯಕ್ರಮಗಳನ್ನು ಹೊರತುಪಡಿಸಿ ಇನ್ನಿತರೇ ಔಟಿಂಗ್‌ಗಳಲ್ಲಿ ವಿಂಟರ್‌ ಲುಕ್‌ ಹಾಗೂ ಮಲ್ಟಿ ಲೇಯರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ವಿಂಟರ್‌ ಲುಕ್‌ನಲ್ಲೂ ತಮ್ಮದೇ ಆದ ಇಮೇಜ್‌ ಕ್ರಿಯೇಟ್‌ ಮಾಡಲಾರಂಭಿಸಿದ್ದಾರೆ.

ಇದನ್ನೂ ಓದಿ | Gown Fashion | ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಫ್ಯಾಷನ್‌ನಲ್ಲಿ ಕಲರ್‌ಫುಲ್‌ ಗೌನ್‌ಗಳದ್ದೇ ಹವಾ

ತಾರೆಯರ ವಿಂಟರ್‌ ಫ್ಯಾಷನ್‌ನಲ್ಲಿ ಏನೇನಿದೆ?
ಬಾಲಿವುಡ್‌ ತಾರೆಯರು ಪ್ರತಿ ಸೀಸನ್‌ವೇರ್‌ನಲ್ಲೂ ತಮ್ಮದೇ ಆದ ಟ್ರೆಂಡ್‌ ಸೆಟ್‌ ಮಾಡುವುದು ಸಾಮಾನ್ಯ ಸಂಗತಿ. ಇದಕ್ಕೆ ಪೂರಕ ಎಂಬಂತೆ, ಈ ವಿಂಟರ್‌ ಸೀಸನ್‌ನಲ್ಲಿ ತಾರೆಯರು ಸಾಮಾನ್ಯರು ಧರಿಸುವ ಶರ್ಟ್, ಟೀ ಶರ್ಟ್ ಹೂಡಿ, ಸ್ವೆಟರ್‌, ಪುಲ್‌ಓವರ್‌ಗಳನ್ನು ಧರಿಸಲಾರಂಭಿಸಿದ್ದಾರೆ. ಇದರೊಂದಿಗೆ ಹೊಸ ವಿನ್ಯಾಸಗಳಲ್ಲಿ ಬಿಡುಗಡೆಯಾಗಿರುವ ವೂಲ್‌ ಡ್ರೆಸ್‌, ಟ್ರೆಂಚ್‌ ಕೋಟ್‌, ರಿವರ್ಸಿಬಲ್‌ ಜಾಕೆಟ್‌, ಲಾಂಗ್‌ ಜಾಕೆಟ್‌, ಸ್ಟೋಲ್‌ ವಿತ್‌ ಕ್ಯಾಪ್‌, ಸ್ವೆಟರ್‌ ಡ್ರೆಸ್‌, ಫರ್‌ ಕೋಟ್‌, ಶಾಲು ಹಾಗೂ ಫುಲ್‌ ಲೆಂತ್‌ ಇರುವಂತಹ ಫ್ರಾಕ್‌ ಸ್ಟೈಲ್‌ ವುಲ್ಲನ್‌ ವೇರ್‌, ಟರ್ಟಲ್‌ನೆಕ್‌ ಡ್ರೆಸ್‌, ಕ್ರಾಪ್‌ ಜಾಕೆಟ್ಸ್‌ ಸೇರಿದಂತೆ ಸಾಕಷ್ಟು ವಿನ್ಯಾಸದ ಹೊಸ ರೂಪದಲ್ಲಿ ಬಿಡುಗಡೆಯಾದ ವಿಂಟರ್‌ವೇರ್‌ಗಳಲ್ಲೂ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಇನ್ನು ಏರ್‌ಪೋರ್ಟ್ ಲುಕ್‌ನಲ್ಲಿ ಬೆಚ್ಚಗಿಡುವ ಕಾರ್ಡಿಗಾನ್ಸ್‌, ಶ್ರಗ್‌, ಕೇಪ್‌ ಹಾಗೂ ಶಾಲನ್ನು ಕ್ಯಾರಿ ಮಾಡತೊಡಗಿದ್ದಾರೆ. ಹೊರಗಡೆ ಮೀಡಿಯಾಗಳ ಮುಂದೆ ಲೇಯರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳದಿದ್ದರೂ, ತಮ್ಮ ಔಟಿಂಗ್‌ ಸಮಯದಲ್ಲಿ ಮಾತ್ರ ಕಂಪ್ಲೀಟ್‌ ವಿಂಟರ್‌ ಸೀಸನಬಲ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ ಎನ್ನುತ್ತಾರೆ ಸ್ಟೈಲಿಸ್‌ ಡೀನಾ.

ತಾರೆಗಳ ಸೆಲೆಬ್ರಿಟಿ ಲುಕ್‌ ಪಡೆಯುವ ಬಗೆ
ನೀವೂ ಕೂಡ ಸೆಲೆಬ್ರಿಟಿಗಳ ವಿಂಟರ್‌ ಲುಕ್‌ ಪಡೆಯಬಹುದು. ನೋಡಲು ಆಕರ್ಷಕವಾಗಿ ಕಾಣಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್‌ ಜಾನ್‌. ಇದಕ್ಕಾಗಿ ಅವರು ಒಂದಿಷ್ಟು ಟಿಪ್ಸ್‌ ನೀಡಿದ್ದಾರೆ. ಮೊದಲಿಗೆ ತಾರೆಯರಂತೆ ಕಾಣಿಸಲು ಟರ್ಟಲ್‌ ನೆಕ್‌ ಅಥವಾ ಫುಲ್‌ ಸ್ಲೀವ್‌ ಟೀ ಶರ್ಟ್ ಧರಿಸಿ, ಆದಷ್ಟೂ ಟ್ರೆಂಚ್‌ ಕೋಟ್‌ ಇಲ್ಲವೇ ಲಾಂಗ್‌ಕಾರ್ಡಿಗಾನ್‌ಗಳನ್ನು ಧರಿಸಬೇಕು. ಪ್ಯಾಂಟ್‌ಗೆ ಮ್ಯಾಚ್‌ ಆಗುವಂತಹ ಶೂ ಇಲ್ಲವೇ ಬೂಟ್ಸ್‌ ಧರಿಸಬೇಕು. ಲೇಯರ್‌ ಲುಕ್‌ ಟ್ರೆಂಡಿಯಾಗಿರಬೇಕು. ಆಗ ತಂತಾನೆ ಸೆಲೆಬ್ರೆಟಿ ಲುಕ್‌ ನಿಮ್ಮದಾಗುವುದು ಎನ್ನುತ್ತಾರವರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Artificial Nail fashion | ಉಗುರಿನ ಅಂದಕ್ಕೂ ಬಂತು ಡಿಸೈನರ್ ಆರ್ಟಿಫಿಷಿಯಲ್‌ ನೇಲ್ಸ್‌

Exit mobile version