ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾಂಗಲ್ಯದ ಕರಿಮಣಿಗಳೀಗ ವಿವಾಹಿತ ಮಾಡರ್ನ್ ಮಹಿಳೆಯರ ಬ್ರೇಸ್‌ಲೆಟ್‌ಗಳಾಗಿ ರೂಪುಗೊಂಡಿವೆ. ಹೌದು. ಮದುವೆಯಾಗಿರುವ ಮಾನಿನಿಯರ ಸಂಪ್ರಾದಾಯದ ಧ್ಯೋತಕವಾಗಿದ್ದ ಇವು ಕೈಗಳ ಅಂದ ಹೆಚ್ಚಿಸುವ ಬ್ರೇಸ್‌ಲೆಟ್‌ಗಳಾಗಿವೆ. ಮಾಡರ್ನ್ ಸ್ತ್ರೀಯರ ಅಲಂಕಾರಿಕ ಜ್ಯುವೆಲರಿಗಳಾಗಿ ಪರಿವರ್ತನೆಗೊಂಡಿವೆ.
ಬಂತು ವೈವಿಧ್ಯಮಯ ಕರಿಮಣಿ ಬ್ರೇಸ್‌ಲೆಟ್
ಒಂದೆಳೆ, ಎರಡೆಳೆ ಅಷ್ಟೇಕೆ! ಗೊಂಚಲಿನಂತಹ ಕರಿಮಣಿ ಚೈನ್‌ಗಳು ಬ್ರೇಸ್‌ಲೆಟ್ ಡಿಸೈನ್‌ನಲ್ಲಿ ದೊರೆಯುತ್ತಿವೆ. ಇನ್ನುಕೆಲವು ಹವಳ, ಮತ್ತು ಹಾಗೂ ಬೀಡ್ಸ್‌ನೊಂದಿಗೆ ಒಂದಿಷ್ಟು ಮಿಕ್ಸ್ ಮ್ಯಾಚ್ ಡಿಸೈನ್‌ನಲ್ಲಿ ಸಿಗುತ್ತಿವೆ. ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂನವು ಉದ್ಯೋಗಸ್ಥ ಮಹಿಳೆಯರನ್ನು ಸೆಳೆದಿವೆ. ಇನ್ನು ಚಿನ್ನ ಕೊಳ್ಳಲಾಗಿದ್ದವರೂ ಧರಿಸಬಹುದಾದ ವನ್ ಗ್ರಾಮ್ ಗೋಲ್ಡ್ ಹಾಗೂ ಆರ್ಟಿಫಿಷಿಯಲ್ ಮೆಟಿರೀಯಲ್‌ನ ಕರಿಮಣಿ ಬ್ರೇಸ್‌ಲೆಟ್‌ಗಳು ಪ್ರಚಲಿತದಲ್ಲಿವೆ. ಸಿಂಪಲ್ ಡಿಸೈನ್‌ನಿಂದಿಡಿದು ನಾಲ್ಕೈದು ಎಳೆ ಹೊಂದಿರುವ ಹೊಸ ಡಿಸೈನ್‌ನವು ದೊರೆಯುತ್ತಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.
ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಹುಟ್ಟು ಹಾಕಿದ ಟ್ರೆಂಡ್
ಅಂದಹಾಗೆ, ಈ ಟ್ರೆಂಡನ್ನು ಮೊದಲು ಹುಟ್ಟು ಹಾಕಿದ್ದು, ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ. ಮಾಂಗಲ್ಯದ ಕರಿಮಣಿ ಡಿಸೈನ್‌ನ ಬ್ರೇಸ್‌ಲೆಟ್ ಧರಿಸಿ ಕಾಣಿಸಿಕೊಂಡ ಫೋಟೋಗಳಿಂದ ಸಾಕಷ್ಟು ಸುದ್ದಿಯಾಗಿದ್ದರು ಕೂಡ. ನಂತರ ಅದು ಕಾಂಟ್ರವರ್ಸಿಯಾಗಿತ್ತು. ಇದು ಹಳೆ ಕಥೆ. ನಂತರ ಈ ಟ್ರೆಂಡ್ ಮರೆಯಾದರೂ ಇದೀಗ ಈ ಜನರೇಷನ್‌ನ ಮದುವೆಯಾದ ಮಹಿಳೆಯರು ಮತ್ತೊಮ್ಮೆ ಧರಿಸಲಾರಂಭಿಸಿರುವುದು ಟ್ರೆಂಡ್ ಮರಳಲು ಕಾರಣವಾಗಿದೆ. ಧರಿಸುವುದು ಹೆಚ್ಚಾಗುತ್ತಿದೆ ಎನ್ನುತ್ತಾರೆ ಡಿಸೈನರ್ಸ್.
ಇದನ್ನೂ ಓದಿ: Menʼs Co-Ord Suit Fashion: ಯುವಕರ ಫ್ಯಾಷನ್‌ಗೂ ಸೇರಿದ ಕೋ-ಆರ್ಡ್ ಪ್ಯಾಂಟ್ ಸೂಟ್
ಕರಿಮಣಿ ಬ್ರೇಸ್‌ಲೆಟ್ ಪ್ರಿಯರಿಗಾಗಿ
- ಕರಿಮಣಿ ಜ್ಯುವೆಲರಿ ಸೆಟ್ಗೆ ಮ್ಯಾಚ್ ಮಾಡಲು ಧರಿಸಬಹುದು.
- ಚಿನ್ನದ್ದು ಕೊಳ್ಳಲಾಗದಿದ್ದಲ್ಲಿ ಆರ್ಟಿಫಿಷಿಯಲ್ನವು ದೊರೆಯುತ್ತದೆ.
- ಬ್ಲಾಕ್ ಔಟ್ಫಿಟ್ಗೆ ಆಕರ್ಷಕವಾಗಿ ಕಾಣುತ್ತದೆ.
- ಬಂಗಾರದಲ್ಲಿ ಲೈಟ್ವೈಟ್ನವು ಬಿಡುಗಡೆಗೊಂಡಿವೆ.
- ಡೆಲಿಕೇಟ್ ವಿನ್ಯಾಸದ್ದಾಗಿದ್ದಲ್ಲಿ ರಫ್ ಬಳಕೆ ಬೇಡ.
- ಹೆಚ್ಚು ಕೆಲಸ ಮಾಡುವ ಕೈಗಳಿಗೆ ಧರಿಸುವುದು ಬೇಡ.
- ಇಂಡೋ-ವೆಸ್ಟರ್ನ್ ಡಿಸೈನ್‌ನವು ಆಗಮಿಸಿವೆ.
- ವೈಟ್ ಮೆಟಲ್ನವು ಕೂಡ ಪ್ರಚಲಿತದಲ್ಲಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)