Site icon Vistara News

ಇತಿ ಆಚಾರ್ಯ(Iti Acharya) ಕಂಡ ಕ್ಯಾನೆಸ್‌ ಫ್ಯಾಷನ್‌ ಲೋಕ

ಇತಿ ಆಚಾರ್ಯ,

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇತಿ ಆಚಾರ್ಯ, ಬಾಲಿವುಡ್‌ ಸಿನಿಮಾ ಸೇರಿದಂತೆ ಕನ್ನಡ ಸಿನಿಮಾದಲ್ಲೂ ನಟಿಸಿರುವ ಮಾಡೆಲ್‌ ಕಮ್‌ ನಟಿ. ಈ ಬಾರಿ ಪ್ಯಾರಿಸ್‌ನಲ್ಲಿ ನಡೆದ ಕ್ಯಾನೆಸ್‌ ಫೀಲ್ಮ್‌ ಫೆಸ್ಟಿವಲ್‌ನಲ್ಲಿ ಕನ್ನಡದ ನಟಿಯಾಗಿ ಪ್ರತಿನಿಧಿಸಿದ್ದರು. ಎರಡೆರಡು ಬಾರಿ ಆಕರ್ಷಕ ಡಿಸೈನರ್‌ವೇರ್‌ ಧರಿಸಿ ರೆಡ್‌ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಕನ್ನಡದ ಕಂಪನ್ನು ಬೀರಿದರು. ಸಮಾರಂಭ ಮುಗಿಸಿ ಬೆಂಗಳೂರಿಗೆ ಮರಳಿರುವ ಇತಿ, ಅವರು ಸೆಲೆಬ್ರಿಟಿ ಫ್ಯಾಷನ್‌ ಕಾರ್ನರ್ ಕಾಲಂನಲ್ಲಿ ಮಾತನಾಡಿದ್ದಾರೆ.

ಹಾಲಿವುಡ್‌-ಬಾಲಿವುಡ್‌ನವರೇ ಹೆಚ್ಚಾಗಿ ಪಾಲ್ಗೊಳ್ಳುವ ಕ್ಯಾನೆಸ್‌ ಚಿತ್ರೋತ್ಸವದಲ್ಲಿ ಕನ್ನಡಿಗಳಾಗಿ ರೆಡ್‌ ಕಾರ್ಪೆಟ್ ಮೇಲೆ ಹೆಜ್ಜೆ ಇಟ್ಟಾಗ ಅನಿಸಿದ್ದೇನು?

ಇತಿ ಆಚಾರ್ಯ: ಹೆಮ್ಮೆ ಎಂದನಿಸಿತು. ನಟಿಯಾಗಿ ಅದರಲ್ಲೂ ಮಾಡೆಲ್‌ ಆಗಿ ರೆಡ್‌ ಕಾರ್ಪೆಟ್‌ ತುಳಿಯುವುದು ಗೌರವದ ವಿಚಾರ ಅಲ್ಲವೇ! ಹಾಲಿವುಡ್‌ ಹಾಗೂ ಬಾಲಿವುಡ್‌ಗರಿಗೆ ಮಾತ್ರ ಸೀಮಿತವಾಗಿದ್ದ ಈ ಚಿತ್ರೋತ್ಸವದಲ್ಲಿ ಪಾಲ್ಗೊಂಡಾಗ ಸಾಕಷ್ಟು ಮಂದಿ ನಾನೂ ಕೂಡ ಬಾಲಿವುಡ್‌ನಿಂದ ಬಂದವಳು ಎಂದೇ ತಿಳಿದಿದ್ದರು. ಪರಿಚಯ ಮಾಡಿಕೊಂಡಾಗಷ್ಟೇ ಬೆಂಗಳೂರಿನವಳೆಂದು ಗೊತ್ತಾಗಿದ್ದು. ಇನ್ನು ಅಲ್ಲಿ ಕನ್ನಡ ಎಂದಾಕ್ಷಾಣ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹೆಸರು ಹೇಳುತ್ತಾರೆ. ಆ ಮಟ್ಟಿಗೆ ಕೆಜಿಎಫ್‌ ಹವಾ ಜಾಗತೀಕ ಮಟ್ಟದಲ್ಲಿ ಬೀಸಿದೆ.

ಇತಿ ಆಚಾರ್ಯ, ನಟಿ, ಮಾಡೆಲ್‌

ಎರಡೆರಡು ಬಾರಿ ನೀವು ರೆಡ್‌ಕಾರ್ಪೆಟ್‌ ಮೇಲೆ ಕಾಣಿಸಿಕೊಂಡಿರಿ? ಅಲ್ಲಿ ನೀವು ಪಾಲಿಸಿದ ಫ್ಯಾಷನ್‌ ಮಂತ್ರ ಯಾವುದು?

ಇತಿ ಆಚಾರ್ಯ: ಹೌದು. ಕೆಲವು ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಮಾತ್ರ ಟ್ರಡಿಷನಲ್‌ ವೇರ್ ಧರಿಸುವ ಆಪ್ಷನ್‌ ಇದೆ. ಎಲ್ಲರಿಗೂ ಇಲ್ಲ. ಅಲ್ಲಿ ಇಂಟರ್‌ನ್ಯಾಷನಲ್‌ ಬ್ರಾಂಡೆಡ್‌ ಡಿಸೈನರ್‌ವೇರ್‌ಗಳದ್ದೇ ಕಾರುಬಾರು. ಆ ಡಿಸೈನ್‌ಗಳಿಗೆ ನಾವು ಹೊಂದಿಕೊಳ್ಳಬೇಕು. ಮೇಕಪ್‌ ಅಪ್‌, ಹೇರ್‌ ಡಿಸೈನಿಂಗ್‌ನಿಂದಿಡಿದು ಎಲ್ಲವಕ್ಕೂ ಅಲ್ಲಿಯ ಬ್ರಾಂಡ್‌ಗಳಿಗೆ ಪ್ರಚಾರ ಸುಲಭವಾಗಿ ದೊರೆಯುತ್ತದೆ. ಮೊದಲ ದಿನ ದೀಪ್ತಿ ರೆಡ್ಡಿಯವರ ಅಸೆಮ್ಮಿಟ್ರಿಕಲ್‌ ಫ್ರಿಲ್‌-ಫ್ಲೇರ್‌ ಶೋಲ್ಡರ್‌ಲೆಸ್‌ ತಿಳಿ ಮೆಜಂತಾ ವರ್ಣದ ಡಿಸೈನರ್‌ ಗೌನ್‌ ಧರಿಸಿದ್ದೆ. ಇದಕ್ಕೆ ಸ್ಟೈಲಿಶ್‌ ಅಮಿತ್‌ ಪಾಂಡ್ಯಾ ಸೈಲಿಂಗ್‌ ಮಾಡಿದ್ದರು. ಎರಡನೇ ಬಾರಿ ಆರಿಫ್‌ ಮುಖೀಮ್‌ ಬ್ರಾಂಡ್‌ನ ಕ್ರೀಮಿಶ್‌ ಶೋಲ್ಡರ್‌ಲೆಸ್‌ ಸ್ಲಿಟ್‌ ಇರುವ ಫ್ಲೋರಲ್‌ ಹಾಗೂ ಟ್ರಾಪಿಕಲ್‌ ಪ್ರಿಂಟ್‌ನ ಡಿಸೈನರ್‌ವೇರ್‌ ಧರಿಸಿ ರೆಡ್‌ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದೆ. ಒಟ್ಟಿನಲ್ಲಿ, ನಾ ಕಂಡ ಕನಸೊಂದು ನನಸಾದಂತೆ ಅನುಭವವಾಯಿತು.

*ಕ್ಯಾನೆ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ನೀವೂ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದ್ದು ಹೇಗೆ?

ಇತಿ ಆಚಾರ್ಯ: ಇದು ನನ್ನ ಅದೃಷ್ಟ. ಅಮೆರಿಕಾ ಪ್ರೊಡಕ್ಷನ್‌ವೊಂದರ ಜತೆಗೆ ಜಾಯಿಂಟ್‌ ಅಸೋಸಿಯೇಷನ್‌ ಹೊಂದಿರುವುದರಿಂದ ಈ ಅವಕಾಶ ಒದಗಿ ಬಂತು. ಆ ತಂಡದೊಂದಿಗೆ ಕ್ಯಾನೆಸ್‌ಗೆ ತೆರಳುವ ಅವಕಾಶ ದೊರೆಯಿತು. ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುವುದರೊಂದಿಗೆ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ನಡೆಯುವ ನಾನಾ ಕಾರ್ಯಕ್ರಮಗಳಲ್ಲಿ ಜಾಗತೀಕ ಮಟ್ಟದಲ್ಲಿ ಸಿನಿಮಾಗಳ ಬಿಡುಗಡೆ, ಒಟಿಟಿ, ಸ್ಯಾಟಲೈಟ್‌ ರೈಟ್ಸ್‌, ಟೆಕ್ನಿಕಲ್‌ ಡೆವಲಪ್‌ಮೆಂಟ್‌ ಸೇರಿದಂತೆ ಚಿತ್ರೋದ್ಯಮದ ಕುರಿತಾಗಿ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಅವಕಾಶವೂ ದೊರೆಯಿತು.

*ಕ್ಯಾನೆ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ನೀವು ಕಂಡ ಫ್ಯಾಷನ್‌ ಲೋಕದ ಬಗ್ಗೆ ಹೇಳಿ?

*ಕ್ಯಾನೆ ಫೆಸ್ಟಿವಲ್‌ ಜಾಗತೀಕ ಮಟ್ಟದಲ್ಲಿ ಸಿನಿಮಾ ಹಾಗೂ ಫ್ಯಾಷನ್‌ ಅನ್ನು ಬೆಸೆದಿದೆ ಎಂಬುದನ್ನು ಒಪ್ಪುತ್ತೀರಾ?

ಇತಿ ಆಚಾರ್ಯ: ಗ್ಲಾಮರ್‌ ಲೋಕವೇ ಸೃಷ್ಟಿಯಾಗಿರುವ ಇಲ್ಲಿ ಏನಿದ್ದರೂ ಅಂತಾರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳಿಗೆ ಆದ್ಯತೆ. ಇನ್ನೂ ಟ್ರೆಂಡಿಯಾಗಿರದ, ಮುಂದೆ ಟ್ರೆಂಡ್‌ನಲ್ಲಿ ಬರಬಹುದಾದ ಫ್ಯಾಷನ್‌, ಆಕ್ಸೆಸರೀಸ್‌ಗಳ ಬ್ರಾಂಡ್‌ಗಳಿಗೆ ಹೆಚ್ಚು ಪ್ರಾಮುಖ್ಯತೆ. ಒಬ್ಬರಿಗಿಂತ ಮತ್ತೊಬ್ಬರು ಭಿನ್ನವಾಗಿ ಕಂಡರಷ್ಟೇ ಆದ್ಯತೆ. ಒಂದೊಂದು ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸಲು ಡಿಸೈನರ್‌ಗಳು ಮೂರ್ನಾಲ್ಕು ತಿಂಗಳ ಮುನ್ನವೇ ಕೆಲಸ ಆರಂಭಿಸಿರುತ್ತಾರೆ. ಇದಕ್ಕೆಂದೇ ತಾರೆಯರು ಮೊದಲೇ ಪ್ಲಾನ್‌ ಮಾಡಿ ವಿಭಿನ್ನವಾದ ಡಿಸೈನರ್‌ವೇರ್‌ ಧರಿಸುತ್ತಾರೆ. ಇಂತಹವಕ್ಕೆ ಹೆಚ್ಚಿನ ಪ್ರಚಾರ ಕೂಡ ದೊರೆಯುತ್ತದೆ.

ಇತಿ ಆಚಾರ್ಯ(Iti Acharya): ಖಂಡಿತಾ. ನಾನು ನಟಿಯಾಗಿದ್ದರೂ ಹೆಚ್ಚಾಗಿ ಗುರುತಿಸಿಕೊಂಡಿರುವುದು ಫ್ಯಾಷನ್‌ನಿಂದಾಗಿ, ಇದು ನನಗೆ ಸದಾ ಖುಷಿ ನೀಡುತ್ತದೆ. ಕ್ಯಾನೆಸ್ ಫೆಸ್ಟಿವಲ್‌ನಲ್ಲಿ ನಟಿಯರಾದ ಊರ್ವಶಿ ರೌತೇಲಾ, ತಮನ್ನಾ, ಪೂಜಾ ಹೆಗ್ಡೆ, ದೀಪಿಕಾ ಪಡುಕೋಣೆ ಸೇರಿದಂತೆ ಸಾಕಷ್ಟು ಮಂದಿಯನ್ನು ಭೇಟಿ ಮಾಡಿದೆ. ಒಬ್ಬೊಬ್ಬರದು ಒಂದೊಂದು ಫ್ಯಾಷನ್‌ ಸ್ಟೇಟ್‌ಮೆಂಟ್‌. ಇದನ್ನು ನೋಡಿಯೇ ಹೇಳಬಹುದು. ಸಿನಿಮಾ-ಫ್ಯಾಷನ್‌ ಕ್ಷೇತ್ರ ಒಂದಕ್ಕೊಂದು ಬೆಸೆದುಕೊಂಡಿದೆ ಎಂದು ಅಲ್ಲವೇ!


(ಸಂದರ್ಶಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: ಹೊಸ ಟ್ರೆಂಡ್‌ ಹುಟ್ಟುಹಾಕಿದ ಹೂಲಾ ಹೂಪ್‌ ರ್‍ಯಾಂಪ್‌ ವಾಕ್‌

Exit mobile version