-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಕರ್ಷಕ ಟ್ರೆಡಿಷನಲ್‌ವೇರ್‌ಗಳಲ್ಲಿ (Festival Fashion) ಸುಂದರವಾಗಿ ಕಾಣಿಸಿಕೊಂಡ ಬೆಳ್ಳಿತೆರೆ ಹಾಗೂ ಕಿರುತೆರೆ ತಾರೆಯರು ಶ್ರಾವಣ ಮಾಸದ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ರೇಷ್ಮೆ ಸೀರೆಗಳಲ್ಲಿ ಮಾತ್ರವಲ್ಲ, ದಾವಣಿ-ಲಂಗ, ಸೌತ್ ಇಂಡಿಯನ್ ಲೆಹೆಂಗಾ ಸೇರಿದಂತೆ ನಾನಾ ಬಗೆಯ ಸಾಂಪ್ರಾದಾಯಿಕ ಉಡುಗೆಗಳಲ್ಲೂ ಮಿಂಚಿದರು. ಯಾರ್ಯಾರು ಯಾವ್ಯಾವ ಬಗೆಯ ಟ್ರೆಡಿಷನಲ್ ಉಡುಗೆಗಳಲ್ಲಿ ಕಾಣಿಸಿಕೊಂಡರು. ಅವರ ಔಟ್‌ಲುಕ್ ಹೇಗಿತ್ತು ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ರಿವ್ಯೂ ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ವರದಿ.
ರೇಷ್ಮೆ ಸೀರೆಯಲ್ಲಿ ತಾರೆಯರು
ಕೆಲವು ಸಿನಿಮಾ ಹಾಗೂ ಕಿರುತೆರೆ ತಾರೆಯರು ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರಲ್ಲಿ ಹಿರಿಯ ನಟಿ ತಾರಾ ಎಂದಿನಂತೆ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರೇ, ಶ್ವೇತಾ ಶ್ರೀವಾತ್ಸಾವ್ ಮಗಳೊಂದಿಗೆ ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಟ್ರೆಂಡಿ ಕ್ರೀಮ್ ಶೇಡ್‌ನ ಸೀರೆಯಲ್ಲಿ ನಟಿ ತೇಜಸ್ವಿನಿ ಶರ್ಮಾ, ಹಸಿರು ಸೀರೆಯಲ್ಲಿ ಸಂಜನಾ ಆನಂದ್, ಚೈತ್ರಾ ಹಳ್ಳಿಕೇರಿ, ಅನಿಕಾ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ತೀರಾ ಸಿಂಪಲ್ ಸೀರೆಯಲ್ಲಿರುವ ಫೋಟೊಗಳನ್ನು ಕಾವ್ಯಾ ಗೌಡ, ಹಳದಿ ಶೇಡ್‌ನಲ್ಲಿ ಮೋಕ್ಷಿತಾ, ಮೇಘಾ ಶೆಟ್ಟಿ, ಅಶಿಕಾ ರಂಗನಾಥ್ ಶೇರ್ ಮಾಡಿದ್ದಾರೆ. ಇದೇ ರೀತಿ ನಾನಾ ತಾರೆಯರು ತಂತಮ್ಮ ಸೀರೆ ಉಟ್ಟಿರುವ ಸೀರೆಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇವರೆಲ್ಲರೂ ಧರಿಸಿರುವ ಸೀರೆಗಳಿಗೆ ಸೀರೆ ಪ್ರೇಮಿಗಳು ಫಿದಾ ಆಗಿದ್ದಾರೆ.
ನಟಿಯರ ಎಥ್ನಿಕ್‌ವೇರ್ಸ್
ಇನ್ನು ಕಿರುತೆರೆ ನಟಿಯರಾದ ಶ್ರುತಿ ರಮೇಶ್, ದಿವ್ಯಾ ಉರುಡುಗಾ, ಶ್ವೇತಾ ಪ್ರಸಾದ್, ಸಾರಾ ಅಣ್ಣಯ್ಯ, ಭವ್ಯಾಗೌಡ ಸೇರಿದಂತೆ ಸಾಕಷ್ಟು ಕಿರುತೆರೆ ನಟಿಯರು ದಾವಣಿ-ಲಂಗ ಹಾಗೂ ಇನ್ನಿತರೇ ಎಥ್ನಿಕ್ ಔಟ್‌ಫಿಟ್‌ಗಳಲ್ಲಿ ಮನ ಸೆಳೆದಿದ್ದಾರೆ. ನಮ್ಮ ಸಂಸ್ಕೃತಿ ಬಿಂಬಿಸುವಲ್ಲಿ ತಾರೆಯರು ಇದೀಗ ಹಿಂದೆ ಬಿದ್ದಿಲ್ಲ! ಒಟ್ಟಾರೆ, ತಮಗಿಷ್ಟವಾದ ಎಥ್ನಿಕ್ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಇದೇ ರೀತಿ ಕಾಣಿಸಿಕೊಳ್ಳಲು ಪ್ರೇರೆಪಿಸುತ್ತಿದ್ದಾರೆ. ಇದು ಒಂದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಫ್ಯಾಷನಿಸ್ಟಾ ವಿದ್ಯಾ. ಅವರು ಹೇಳುವಂತೆ, ಇವೆರೆಲ್ಲರ ಟ್ರೆಡಿಷನಲ್ ಲುಕ್ ಮೆಚ್ಚುವಂತದ್ದು.
ಸೋಷಿಯಲ್ ಮೀಡಿಯಾ ಸ್ಟಾರ್ಸ್ ಲುಕ್
ಹಾಗೆಂದು ಸೋಷಿಯಲ್ ಮೀಡಿಯಾ ಸ್ಟಾರ್‌ಗಳೇನೂ ಹಿಂದೆ ಬಿಂದಿಲ್ಲ! ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಹೊಂದಿರುವ ಇವರು ಕೂಡ ಸಖತ್ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದರೊಂದಿಗೆ ರೀಲ್ಸ್ ಕೂಡ ಮಾಡಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅವರುಗಳಲ್ಲಿ ಸುಶ್ಮಿತಾ ಶೇಷಗಿರಿ, ದಿಶಾ, ರ‍್ಯಾಪಿಡ್ ರಶ್ಮಿ, ಬಿಂದುಗೌಡ, ಧನುಶ್ರೀಯವು ಅತಿ ಹೆಚ್ಚು ವ್ಯೂ ಪಡೆದುಕೊಂಡಿವೆ.
ಒಟ್ಟಾರೆ, ಹಬ್ಬದ ಹೆಸರಲ್ಲಿ, ಟ್ರೆಡಿಷನಲ್ ವೇರ್‌ಗಳಿಗೆ ಪ್ರಾಮುಖ್ಯತೆ ದೊರಕಿರುವುದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪಟ್ರ್ಸ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)