Site icon Vistara News

Chocolate Face Mask: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಚಾಕೋಲೇಟ್‌ ಫೇಸ್‌ ಮಾಸ್ಕ್‌ ಹವಾ

Chocolate Face Mask

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಬ್ಯೂಟಿ ಲೋಕದಲ್ಲಿ ಚಾಕೋಲೇಟ್‌ ಫೇಸ್‌ ಮಾಸ್ಕ್‌ (Chocolate Face Mask) ಸೌಂದರ್ಯವರ್ಧಕದ ಹವಾ ಹೆಚ್ಚಾಗಿದೆ.

ಬ್ಯೂಟಿ ಪ್ರಿಯರ ಚಾಕೋಲೇಟ್‌ ಫೇಸ್‌ಮಾಸ್ಕ್‌

ಹೌದು, ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಚಾಕೋಲೇಟ್‌ ಡೇಯಂದು ಪ್ರೇಮಿಗಳಿಗೆ, ಸಂಗಾತಿಗಳಿಗೆ ಚಾಕೋಲೇಟ್‌ಗಳನ್ನು ಪ್ರೀತಿಯಿಂದ ಕೊಡುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಚಾಕೋಲೇಟ್‌ ಫೇಸ್‌ ಮಾಸ್ಕ್‌ ರೆಡಿ ಪ್ಯಾಕ್‌ಗಳನ್ನು ಕೊಡುವುದು ಗೊತ್ತೇ! ಅಷ್ಟು ಮಾತ್ರವಲ್ಲ, ಈ ಸೀಸನ್‌ನಲ್ಲಿ ಚಾಕೋಲೇಟ್‌ ಫೇಶಿಯಲ್‌ನಂತಹ ನಾನಾ ಫೇಸ್‌ಪ್ಯಾಕ್‌ಗಳು ಬ್ಯೂಟಿ ಸಲೂನ್‌ ಹಾಗೂ ಬ್ಯೂಟಿ ಪಾರ್ಲರ್‌ನಲ್ಲಿ ದೊರಕುತ್ತಿರುವುದು ತಿಳಿದಿದೆಯೇ! ಇದೀಗ ಈ ಕಾನ್ಸೆಪ್ಟ್ ನಿಧಾನಗತಿಯಲ್ಲಿ ಸಾಮಾನ್ಯ ಯುವತಿಯರನ್ನು ತಲುಪಿದೆ. ಇನ್ನು, ದಿನಕಳೆದಂತೆ ಬ್ಯೂಟಿ ಪ್ರಿಯರ ರುಟಿನ್‌ನಲ್ಲಿ ಸೇರುತ್ತಿದೆ ಎನ್ನುತ್ತಾರೆ ಸೌಂದರ್ಯ ವರ್ಧಕರು. ಇದರೊಂದಿಗೆ ಚಾಕೋಲೇಟ್‌ನಿಂದ ಸಿದ್ಧ ಪಡಿಸಿದ ಸೌಂದರ್ಯವರ್ಧಕಗಳಿಗೆ ಇದೀಗ ಮೊದಲಿಗಿಂತ ಬೇಡಿಕೆ ಜಾಸ್ತಿಯಾಗಿದೆ. ಇದಕ್ಕೆ ಪೂರಕ ಎಂಬಂತೆ, ಬ್ಯೂಟಿ ಲೋಕದಲ್ಲಿ ನಾನಾ ಬಗೆಯ ಚಾಕೋಲೇಟ್‌ ಫೇಸ್‌ ಪ್ಯಾಕ್‌, ಫೇಶಿಯಲ್‌, ಸ್ಕ್ರಬ್‌ನಂತಹ ಬ್ಯೂಟಿ ಟ್ರೀಟ್‌ಮೆಂಟ್‌ಗಳು ಯುವತಿಯರನ್ನು ಆಕರ್ಷಿಸುತ್ತಿವೆ.

ಚಾಕೋಲೇಟ್‌ ಫೇಸ್‌ ಮಾಸ್ಕ್‌

ಅತ್ಯಧಿಕ ಆಂಟಿ ಆಕ್ಸಿಡೆಂಟ್ಸ್ ಇರುವಂತಹ ಚಾಕೋಲೇಟ್‌ ಫೇಸ್‌ ಮಾಸ್ಕ್‌ ತ್ವಚೆಯ ಡ್ಯಾಮೆಜನ್ನು ತಡೆಯುತ್ತದೆ. ಮಾತ್ರವಲ್ಲ, ಡೆಡ್‌ ಸ್ಕಿನ್‌ ನಿವಾರಣೆ ಮಾಡುತ್ತದೆ. ಅಲ್ಲದೇ, ಚರ್ಮದ ಮಾಯಿಶ್ಚರೈಸರ್‌ ಅಂಶವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಸೌಂದರ್ಯ ತಜ್ಷೆ ಉಮಾ ಜಯಕುಮಾರ್‌. ಅವರ ಪ್ರಕಾರ, ಈ ಬಗೆಯ ಫೇಸ್‌ ಮಾಸ್ಕ್‌ ವಿದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು ಇದೀಗ ನಮ್ಮಲ್ಲೂ ಸಾಮಾನ್ಯವಾಗುತ್ತಿದೆ ಎನ್ನುತ್ತಾರೆ.

ರೆಡಿಮೇಡ್‌ ಪ್ಯಾಕ್‌

ರೆಡಿಮೇಡ್‌ ಪ್ಯಾಕ್‌ ಹಾಗೂ ಬಾಕ್ಸ್‌ನಲ್ಲೂ ನಾನಾ ಬ್ರಾಂಡ್‌ನಲ್ಲಿ ಇವು ಲಭ್ಯ. ಮೊದಲಿಗೆ ಪ್ಯಾಚ್‌ ಟೆಸ್ಟ್ ಮಾಡಿ, ತ್ವಚೆಗೆ ಅಲರ್ಜಿಯಾಗದಿದ್ದರೇ ಬಳಸಬಹುದು.

ಮನೆಯಲ್ಲೆ ಮಾಡಿ ನೋಡಿ ಚಾಕೋಲೇಟ್‌ ಫೇಸ್‌ ಮಾಸ್ಕ್‌

ಸಲೂನ್‌ಗೆ ಹೋಗಿ ಹೆಚ್ಚು ಹಣ ಸುರಿದು ಈ ಚಾಕೋಲೇಟ್‌ ಫೇಸ್‌ ಮಾಸ್ಕ್‌ ಮಾಡಿಸಿಕೊಳ್ಳಲಾಗದಿದ್ದವರು, ಮನೆಯಲ್ಲೆ ತಾವೇ ಇದನ್ನು ಸುಲಭವಾಗಿ ಸಿದ್ಧಪಡಿಸಿಕೊಂಡು ಹಚ್ಚಿಕೊಳ್ಳಬಹುದು. ಸಿಂಪಲ್ಲಾಗಿ ಹೇಳಬೇಕೆಂದೆರೇ, ಒಂದು ಬೌಲ್‌ನಲ್ಲಿ ಅಗತ್ಯವಿರುವಷ್ಟು ಚಾಕೋಲೇಟನ್ನು ಬಿಸಿ ಮಾಡಿ ಕರಗಿಸಿಕೊಂಡು, ಅದಕ್ಕೆ ಕೊಂಚ ಸಕ್ಕರೆ, ಉಪ್ಪು ಹಾಗೂ ಹಾಲನ್ನು ಮಿಶ್ರ ಮಾಡಿ. ಮುಖಕ್ಕೆಲೇಪಿಸಿ. ಒಣಗಿದ ನಂತರ ಮುಖವನ್ನು ವಾಶ್‌ ಮಾಡಿ ಎಂದು ಸಿಂಪಲ್‌ ಟಿಪ್ಸ್‌ ನೀಡುತ್ತಾರೆ ಬ್ಯೂಟಿ ಎಕ್ಸ್‌ಫಟ್ರ್ಸ್.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Love Proposal Day Look: ಲವ್‌ ಪ್ರಪೋಸ್‌ ಮಾಡುವ ಯುವಕರ ಸ್ಟೈಲಿಂಗ್‌ಗೆ 5 ಸಿಂಪಲ್‌ ಟಿಪ್ಸ್

Exit mobile version