ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ರಿಸ್ಮಸ್ ಸಮೀಪಿಸುತ್ತಿದ್ದಂತೆ ಫೆಸ್ಟೀವ್ ಸೀಸನ್‌ಗೆ ತಕ್ಕಂತೆ ವೆಸ್ಟರ್ನ್ ಔಟ್ ಫಿಟ್ಸ್, ಆಕ್ಸೆಸರೀಸ್ ಹಾಗೂ ಮ್ಯಾಚಿಂಗ್ ಫೂಟ್‌ವೇರ್‌ಗಳು (Christmas Fashion) ಫ್ಯಾಷನ್‌ಲೋಕಕ್ಕೆ ಲಗ್ಗೆ ಇಟ್ಟಿವೆ. ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಮಾತ್ರವಲ್ಲ, ನಗರದ ಬಹುತೇಕ ಶಾಪಿಂಗ್ ಸೆಂಟರ್‌ಗಳಲ್ಲಿ ಈಗಾಗಲೇ ಕ್ರಿಸ್ಮಸ್ ಸಡಗರ-ಸಂಭ್ರಮ ಹೆಚ್ಚಾಗಿದೆ.
ಕ್ರಿಸ್ಮಸ್ ಡಿಸೈನವೇರ್‌ಗಳಿಗೆ ಬೇಡಿಕೆ
ಎಂದಿನಂತೆ ಈ ಬಾರಿಯೂ ಈ ಸೀಸನ್‌ನಲ್ಲಿ ಪಾರ್ಟಿವೇರ್ ಹಾಗೂ ಕಂಪ್ಲೀಟ್ ವೆಸ್ಟರ್ನ್ ಟಚ್ ನೀಡುವ ಉಡುಪುಗಳ ದಾಸ್ತಾನು ಆಗಮಿಸಿವೆ. ರಾಶಿ ರಾಶಿ ಡಿಸೈನರ್ ಗೌನ್‌ಗಳು, ಫ್ರಾಕ್‌ಗಳು, ಮ್ಯಾಕ್ಸಿಗಳು ಹಬ್ಬದ ರಂಗು ಹೆಚ್ಚಿಸಲು ಬಂದಿವೆ. ಇನ್ನು ಕಳೆದ ಬಾರಿಗಿಂತ ಈ ಬಾರಿ ಕ್ರಿಸ್ಮಸ್ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಫೆಸ್ಟೀವ್ ಡಿಸೈನರ್‌ವೇರ್‌ಗಳನ್ನು ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಎಥ್ನಿಕ್ ಉಡುಪುಗಳು ಸದ್ಯಕ್ಕೆ ಸೈಡಿಗೆ ಸರಿದಿದ್ದು, ಕುರ್ತಾ, ಚೂಡಿದಾರ್, ಸಲ್ವಾರ್-ಕಮೀಝ್, ಶರಾರ ಇತ್ಯಾದಿಗಳಿಗೆ ಬೇಡಿಕೆ ಕುಂದಿದೆ. ಕ್ರಿಸ್ಮಸ್ ಪಾರ್ಟಿ, ಸೆಲೆಬ್ರೆಷನ್‌ಗೆ ಹೊಂದುವಂತಹ ಫ್ರಾಕ್ ಹಾಗೂ ಗೌನ್‌ಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ ಎನ್ನುತ್ತಾರೆ ಮಾಲ್‌ವೊಂದರ ಮ್ಯಾನೇಜರ್. ಅವರ ಪ್ರಕಾರ, ಈ ಸೀಸನ್‌ನಲ್ಲಿ ಅತಿ ಹೆಚ್ಚು ಪಾರ್ಟಿವೇರ್‌ಗಳು ಬಿಡುಗಡೆಗೊಳ್ಳುತ್ತವೆ. ಹೊಸ ಡಿಸೈನ್‌ಗಳು ಕಾಲಿಡುತ್ತವೆ. ಹಾಗಾಗಿ ಕ್ರಿಸ್ಮಸ್ ಆಚರಿಸದವರೂ ಕೂಡ ಶಾಪಿಂಗ್ ಮಾಡುವುದು ಕಾಮನ್ ಆಗಿದೆ ಎನ್ನುತ್ತಾರವರು.
ಇದನ್ನೂ ಓದಿ | Winter Fashion | ಚಳಿಗಾಲದ ಗ್ಲಾಮರಸ್ ಫ್ಯಾಷನ್ಗೆ ಎಂಟ್ರಿ ಕೊಟ್ಟ ಬೂಟ್ಸ್
ಫ್ಯಾಷನ್ ಜ್ಯುವೆಲರಿಗಳ ಲೋಕ
ಇನ್ನು ಆಯಾ ಡಿಸೈನರ್‌ವೇರ್ ಇಲ್ಲವೇ ಔಟ್‌ಫಿಟ್ ಮ್ಯಾಚ್ ಅಗುವಂತಹ ಫ್ಯಾಷನ್ ಜ್ಯುವೆಲರಿಗಳು ಈ ಬಾರಿಯ ಕ್ರಿಸ್ಮಸ್ ಆಕ್ಸೆಸರೀಸ್ ಲಿಸ್ಟ್‌ನಲ್ಲಿ ಸೇರಿವೆ. ಇವುಗಳಲ್ಲಿ ಬೆಳಕಿಗೆ ಮಿನುಗುವ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ನೆಕ್ಲೇಸ್, ಬ್ರೆಸ್ಲೇಟ್, ಇಯರಿಂಗ್ಸ್‌ನಿಂದ ಹಿಡಿದು ನಾನಾ ಬಗೆಯ ಫ್ಯಾಷನ್ ಜ್ಯುವೆಲರಿಗಳು ಎಂಟ್ರಿ ನೀಡಿವೆ. ಉಡುಪಿಗೆ ಮ್ಯಾಚ್ ಆಗುವಂತಹ ಸಿಂಪಲ್ ಜ್ಯುವೆಲರಿಗಳು, ಅದರಲ್ಲೂ ಕ್ರಿಸ್ಟಲ್‌ಗಳಿರುವಂತಹ ಹೆಚ್ಚು ವಿನ್ಯಾಸದಲ್ಲಿ ಬಂದಿವೆ ಎನ್ನುತ್ತಾರೆ ಜ್ಯುವೆಲರಿ ಡಿಸೈನರ್ ರೋಹಿಣಿ.
ಆಕರ್ಷಕ ಮ್ಯಾಚಿಂಗ್ ಫೂಟ್‌ವೇರ್ಸ್
ಇದರೊಂದಿಗೆ ಧರಿಸುವ ಔಟ್‌ಫಿಟ್ ಮ್ಯಾಚ್ ಆಗುವಂತಹ ಫೂಟ್‌ವೇರ್‌ಗಳು ಚಾಲ್ತಿಯಲ್ಲಿವೆ. ಲೈಟ್ ಶೇಡಿಂಗ್‌ನಿಂದ ಹಿಡಿದು ಡಾರ್ಕ್ ಶೇಡ್‌ವರೆಗಿನ ಫೂಟ್‌ವೇರ್ಸ್‌ಗಳು ದೊರೆಯುತ್ತಿವೆ. ಜ್ಯುವೆಲ್ ಡಿಸೈನರ್ ಫೂಟ್‌ವೇರ್ಸ್‌ಗಳು ಲಭ್ಯ. ಗೌನ್‌ನಂತಹ ಡಿಸೈನ್‌ವೇರ್‌ನಿಂದ ಹಿಡಿದು, ಫ್ರಾಕ್ ಹಾಗೂ ಪ್ಯಾಂಟ್‌ಸೂಟ್‌ನಂಥವಕ್ಕೂ ಮ್ಯಾಚಿಂಗ್ ಶೋ, ಸ್ಯಾಂಡಲ್‌ಗಳು ಆಗಮಿಸಿವೆ. ಫ್ಲಿಪ್ ಪ್ಲಾಪ್‌ನಲ್ಲೂ ವೆರೈಟಿ ಪ್ರಿಂಟೆಡ್ ಡಿಸೈನ್ ಬಂದಿವೆ ಎನ್ನುತ್ತಾರೆ ಮಾರಾಟಗಾರರು.
ಕ್ರಿಸ್ಮಸ್ ಡಿಸೈನ್‌ವೇರ್ಸ್ ಆಕ್ಸೆಸರೀಸ್ ಆಯ್ಕೆಗೆ ಮುನ್ನ
- ಹೊಸ ವಿನ್ಯಾಸವನ್ನು ಆಯ್ಕೆ ಮಾಡಿ.
- ಸೀಸನ್ ಕಲರ್ಸ್ ಹಾಗೂ ಟ್ರೆಂಡಿಯಾಗಿರುವುದನ್ನು ಕೊಳ್ಳಿ.
- ಆಕ್ಸೆಸರೀಸ್ ಹಾಗೂ ಫೂಟ್ವೇರ್ ಕಾಮನ್ ಕಲರ್ ಅನ್ನು ಖರೀದಿಸಿ. ಆಗ ಎಲ್ಲವಕ್ಕೂ ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Weekend style | ಸೆಲ್ಫ್ ಫ್ಯಾಷನ್ ಪ್ರೇಮ ಮುಖ್ಯ ಎನ್ನುವ ಫಿಲ್ಮ್ ಮೇಕರ್ ವಿಸ್ಮಯಾ ಗೌಡ