-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಫ್ಯಾಷನ್‌ಗೆ ರಂಗೇರಿಸುವ ಫಂಕಿ ಜಾಕೆಟ್‌ಗಳು ಇದೀಗ ಕಾಲೇಜಿನ (College Fashion) ಯುವಕ-ಯುವತಿಯರನ್ನು ಸವಾರಿ ಮಾಡತೊಡಗಿವೆ. ಸದ್ಯ ಮಾನ್ಸೂನ್‌ನ ಟಾಪ್ ಟ್ರೆಂಡ್ ಲಿಸ್ಟ್‌ನಲ್ಲಿರುವ ಈ ಫಂಕಿ ಜಾಕೆಟ್‌ಗಳು, ಊಹೆಗೂ ಮೀರಿದ ಡಿಸೈನ್ಸ್‌ನಲ್ಲಿ ದೊರೆಯುತ್ತಿವೆ. ಅದರಲ್ಲೂ ಯೂನಿಸೆಕ್ಸ್ ಫಂಕಿ ಡಿಸೈನ್ಸ್‌ನ ಜಾಕೆಟ್‌ಗಳು ಮಾನ್ಸೂನ್‌ನ ಡಲ್ ವಾತಾವರಣವನ್ನೂ ಕೂಡ ಉಲ್ಲಾಸಮಯವಾಗಿಸುವಷ್ಟರ ಮಟ್ಟಿಗೆ ವೈಬ್ರೆಂಟ್ ಆಗಿವೆ.
ಯೂನಿಸೆಕ್ಸ್ ಫಂಕಿ ಜಾಕೆಟ್ಸ್
ಮಾನ್ಸೂನ್‌ನಲ್ಲಿ ಮಿಕ್ಸ್ ಮ್ಯಾಚ್ ಮಾಡುವ ಆಪ್ಷನ್ ಹೆಚ್ಚಾಗಿರುವುದರಿಂದ ಈ ಸೀಸನ್‌ನಲ್ಲಿ, ಯೂನಿಸೆಕ್ಸ್ ಡಿಸೈನ್ಸ್ ಜಾಕೆಟ್‌ಗಳು ಅತಿ ಹೆಚ್ಚಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಬ್ರದರ್-ಸಿಸ್ಟರ್, ಫ್ರೆಂಡ್ಸ್, ಕಪಲ್ಸ್ ಹೀಗೆ ಯಾರೂ ಬೇಕಾದರೂ ಈ ಜಾಕೆಟ್‌ಗಳನ್ನು ಎಕ್ಸ್‌ಚೇಂಜ್ ಮಾಡಿ ಧರಿಸಬಹುದು. ಆದರೆ, ಇಬ್ಬರ ಎತ್ತರ ಹಾಗೂ ಬಾಡಿ ಮಾಸ್ ಇಂಡೆಕ್ಸ್ ಕೊಂಚವಾದರೂ ಮ್ಯಾಚ್ ಆಗಬೇಕು. ಇಲ್ಲವಾದಲ್ಲಿ ತೀರಾ ದೊಗಲೆಯಾದಂತೆ ಅಥವಾ ತೀರಾ ಟೈಟಾದಂತೆ ಕಾಣಬಹುದು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ರಿಚಾ.
ಕಾಲೇಜು ಹುಡುಗ-ಹುಡುಗಿಯರಿಗೆ ಯಾವುದು ಬೆಸ್ಟ್ ?
ಕಾಲೇಜು ಹುಡುಗ-ಹುಡುಗಿಯರು ಇದೀಗ ಹೆಚ್ಚಾಗಿ ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್, ಜೆಮೆಟ್ರಿಕಲ್, ಇಲ್ಯೂಷನ್ ಕ್ರಿಯೇಟ್ ಮಾಡುವಂತಹ ಡಿಸೈನ್ಸ್, ಅಸ್ಸೆಮ್ಮಿಟ್ರಿಕಲ್, ಫನ್ನಿ ಕ್ಯಾರೆಕ್ಟರ್ ಚಿತ್ರಣ ಇರುವಂತವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಸಾದಾ ಹಾಗೂ ಅದೇ ಹಳೇ ವಿನ್ಯಾಸದ ಮಾನೋಕ್ರೋಮ್ ಜಾಕೆಟ್ಸ್ ಮಿಕ್ಸ್ ಮ್ಯಾಚ್ ಮಾಡಲು ಇಷ್ಟಪಡುವುದಿಲ್ಲ. ಇದಕ್ಕೆ ಪೂರಕ ಎಂಬಂತೆ, ಲೆಕ್ಕವಿಲ್ಲದಷ್ಟು ಬಗೆಯವು ಎಂಟ್ರಿ ನೀಡಿವೆ. ಹುಡುಗ-ಹುಡುಗಿಯರು ಎಂಬ ಭೇದ-ಭಾವವಿಲ್ಲದೇ ಡಿಸೈನ್ಸ್ಗಳು ಆಗಮಿಸಿವೆ. ಯಾವುದಾದರೂ ಸರಿಯೇ ಅವರವರ ಪರ್ಸನಾಲಿಟಿಗೆ ಹೊಂದುವಂತದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ತೀರಾ ಟ್ರೆಡಿಷನಲ್ ಔಟ್‌ಫಿಟ್‌ಗೆ ಬೇಡ. ಕ್ಯಾಶುವಲ್ ಸ್ಟೈಲಿಂಗ್‌ಗೆ ಮಾತ್ರ ಧರಿಸಬೇಕು ಎನ್ನುತ್ತಾರೆ ರಿಚಾ.
ಇದನ್ನೂ ಓದಿ: Jewel Trend: ಮರಳಿದ ವೈವಿಧ್ಯಮಯ ಫ್ರಿಂಜ್ ನೆಕ್ಲೇಸ್ ಫ್ಯಾಷನ್
ಆನ್‌ಲೈನ್‌ನಲ್ಲಿ ಫಂಕಿ ಜಾಕೆಟ್ಸ್ ಆಗರ
ಇನ್ನು, ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಲ್ಲಂತೂ ಮಾನ್ಸೂನ್‌ನಲ್ಲಿ ಈ ಜನರೇಷನ್ ಕಾಲೇಜ್ ಹುಡುಗಿಯರಿಗೆಂದೇ ಲೆಕ್ಕವಿಲ್ಲದಷ್ಟು ಬಗೆಯ ಫಂಕಿ ಜಾಕೆಟ್‌ಗಳು ಬಿಡುಗಡೆಗೊಂಡಿವೆ ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿಗಳಾದ ಜಯಂತ್, ಜಾನ್ ಹಾಗೂ ದೀಕ್ಷಾ.
ಹೇಗಿರಬೇಕು ಫಂಕಿ ಜಾಕೆಟ್ಸ್
- ಫನ್ನಿಯಾಗಿದ್ದರೂ ಅವಾಚ್ಯ ಪದಗಳ ಪ್ರಿಂಟ್ಸ್ ಹೊಂದಿರಬಾರದು.
- ಯೂನಿಸೆಕ್ಸ್ ಜಾಕೆಟ್ಸ್ ಓವರ್ಸೈಝ್ ಆದರೂ ಟ್ರೆಂಡಿ ಫ್ಯಾಷನ್ನಲ್ಲಿದೆ.
- ಫಂಕಿ ಹೆಸರಲ್ಲಿ ಹುಚ್ಚುಹುಚ್ಚಾಗಿ ಮಿಕ್ಸ್ ಮ್ಯಾಚ್ ಮಾಡಕೂಡದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)