ಚಿತ್ರಗಳು : ಜನ್ನತ್ ಜುಬೈರ್, ನಟಿ
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಲರ್ ಟೊರ್ನ್ ಜೀನ್ಸ್ ಇದೀಗ ಕಾಲೇಜು ಹುಡುಗಿಯರ ಫೆವರೇಟ್ ಡ್ರೆಸ್‌ಕೋಡ್ ಲಿಸ್ಟ್‌ಗೆ ಸೇರಿದೆ. ಮಾನ್ಸೂನ್ ಸೀಸನ್ ಫ್ಯಾಷನ್‌ನ ರಂಗೇರಿಸಿದೆ. ನೋಡಲು ವೈಬ್ರೆಂಟ್ ಅಥವಾ ಫಂಕಿ ಲುಕ್ ನೀಡುವ ಇವು ವೈವಿಧ್ಯಮಯ ಮಾನೋಕ್ರೋಮ್ ಶೇಡ್‌ಗಳಲ್ಲಿ ಬಿಡುಗಡೆಗೊಂಡಿವೆ.
ಟ್ರೆಂಡಿಯಾಗಿರುವ ಕಲರ್ ಟೊರ್ನ್ ಜೀನ್ಸ್
ಲ್ಯಾವೆಂಡರ್, ಲೈಟ್ ಪಿಂಕ್, ಕೊಬಾಲ್ಟ್ ಬ್ಲ್ಯೂ, ಪಿಸ್ತಾ ಗ್ರೀನ್, ವೈನ್ ರೆಡ್, ಲೈಟ್ ರೆಡ್, ಆರೆಂಜ್ ಸೇರಿದಂತೆ ನಾನಾ ಮಾನೋಕ್ರೋಮ್ ಶೇಡ್‌ನ ಕಲರ್ ಟೊರ್ನ್ ಜೀನ್ಸ್ ಇದೀಗ ಮಾರುಕಟ್ಟೆಗೆ ಕಾಲಿಟ್ಟಿವೆ. ಹಾಗೆಂದು ಕಲರ್ ಟೊರ್ನ್ ಜೀನ್ಸ್ ಹೊಸದೇನಲ್ಲ! ನಮ್ಮ ರಾಷ್ಟ್ರಕ್ಕೂ ಮುಂಚೆಯೇ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಟ್ರೆಂಡಿಯಾಗಿರುವ ಪ್ಯಾಂಟ್‌ಗಳಿವು. ಆದರೆ, ಅಲ್ಲಿ ಅತಿ ಹೆಚ್ಚಾಗಿ ವೈಟ್ ಹಾಗೂ ಬ್ಲ್ಯೂ ಪ್ಯಾಂಟ್‌ಗಳಿಗೆ ಪ್ರಾಮುಖ್ಯತೆ ಹೆಚ್ಚಾಗಿ ನೀಡುವುದರಿಂದ ಇತ್ತೀಚೆಗೆ ಟ್ರೆಂಡ್‌ನಿಂದ ಆಚೆ ಸರಿದಿದೆ. ಆದರೆ, ನಮ್ಮಲ್ಲಿ ಟ್ರೆಂಡಿಯಾಗಿದೆ.
ಚಿಂದಿ ಕಲರ್ ಪ್ಯಾಂಟ್ ಎಂಬ ಟೀಕೆ
ಇನ್ನು ಪಡ್ಡೆ ಹುಡುಗರು ಹಾಗೂ ದೇಸಿ ಹುಡುಗರು ಇದನ್ನು ಚಿಂದಿ ಪ್ಯಾಂಟ್ ಎಂದೂ ಕರೆಯುತ್ತಾರೆ. ಚಿಂದಿ ಬಟ್ಟೆಯಂತೆ ಕಾಣುವ ಪ್ಯಾಂಟ್ ಇದು ಎಂಬುದು ಅವರೆಲ್ಲರ ಅಭಿಪ್ರಾಯ ಎಂದು ತಮ್ಮ ಅನಿಸಿಕೆ ತಿಳಿಸುತ್ತಾರೆ ಸ್ಟೈಲಿಸ್ಟ್ ರಾಘವ್. ಅವರ ಪ್ರಕಾರ, ಹೈ ಫ್ಯಾಷನ್ ಟಾಪ್ ಲಿಸ್ಟ್‌ನಲ್ಲಿರುವ ಈ ಧಿರಿಸು ಮಾಲ್ ಫ್ಯಾಷನ್ ಲಿಸ್ಟ್‌ಗೆ ಸೇರುತ್ತದಂತೆ. ಸ್ಟ್ರೀಟ್ ಸ್ಟೈಲ್‌ನಲ್ಲಿ ತೀರಾ ಕಡಿಮೆ ಎನ್ನುತ್ತಾರೆ.
ಇದನ್ನೂ ಓದಿ: Pearl Hoop Ring Fashion: ಹೀಗಿರಲಿ ಆಕರ್ಷಕ ಪರ್ಲ್ ಹೂಪ್ ಇಯರಿಂಗ್ಸ್ ಮ್ಯಾಚಿಂಗ್
ಕಲರ್ ಟೊರ್ನ್ ಪ್ಯಾಂಟ್‌ಗಳ ನಾನಾ ರೂಪ
ಅಂದಹಾಗೆ, ಟೊರ್ನ್ ಪ್ಯಾಂಟ್‌ಗಳಲ್ಲೂ ನಾನಾ ಬಗೆಯವು ಇವೆ ಎಂದರೇ ನಂಬುತ್ತೀರಾ! ನಂಬಲೇ ಬೇಕು. ಟೊರ್ನ್ ಹೆಚ್ಚಾಗಿದ್ದಷ್ಟು ಬೇಡಿಕೆ ಹೆಚ್ಚಂತೆ. ಒಂದಕ್ಕಿಂತ ಜಾಸ್ತಿ ಚಿಂದಿಯಂತಿರುವ ಬ್ರಾಂಡೆಡ್ ಟೊರ್ನ್ ಪ್ಯಾಂಟ್‌ಗಳಿಗೆ ಬೆಲೆ ಹೆಚ್ಚಂತೆ. ಇದೀಗ ಲೋಕಲ್ ಮಾರುಕಟ್ಟೆಯಲ್ಲೂ ಇವುಗಳ ಹಾವಳಿ ಹೆಚ್ಚಾಗಿದೆ. ಒಂದೆರೆಡು ಬಾರಿ ಧರಿಸಲು ಅಥವಾ ಫೋಟೋಶೂಟ್‌ಗೆ ಬಳಸುವಂತವರು ಇಂತಹವನ್ನು ಇಲ್ಲೆ ಕೊಳ್ಳುತ್ತಾರೆ ಎನ್ನುತ್ತಾರೆ ಮಾರಾಟಗಾರರು.
ಕಲರ್ ಟೊರ್ನ್ ಪ್ಯಾಂಟ್ ಪ್ರಿಯರು ಗಮನಿಸಬೇಕಾದ್ದು
- ಬ್ರ್ಯಾಂಡೆಡ್ನದ್ದಾದಲ್ಲಿ ಬಣ್ಣ ಬಿಡದು.
- ಕೊಳ್ಳುವ ಮುನ್ನ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಿ.
- ವಾಶಿಂಗ್ ಪ್ರತ್ಯೇಕವಾಗಿ ಮಾಡಿ, ಇಲ್ಲವಾದಲ್ಲಿ ಸಿಕ್ಕಿಹಾಕಿಕೊಂಡು ಕಿತ್ತು ಹೋಗಬಹುದು.
- ಸಂದರ್ಭಕ್ಕೆ ತಕ್ಕಂತೆ ಧರಿಸಿ.
- ದೇವಾಲಯಗಳಲ್ಲಿ ಇಂತಹ ಉಡುಪುಗಳಿಗೆ ನಿರ್ಬಂಧವಿದೆ ಎಂಬುದನ್ನು ಮರೆಯದಿರಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)