-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ರಾಪ್ ಟೀ ಶರ್ಟ್ಸ್ (Crop TShirt Fashion) ಇದೀಗ ಟೀನೇಜ್ ಹುಡುಗಿಯರ ಫ್ಯಾಷನ್‌ನಲ್ಲಿದ್ದು, ಟ್ರೆಂಡಿ ಲಿಸ್ಟ್‌ಗೆ ಸೇರಿದೆ. ಈ ಜನರೇಷನ್ ಹುಡುಗಿಯರ ವಾರ್ಡ್ ರೋಬ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಈ ಕ್ರಾಪ್ ಟೀ ಶರ್ಟ್ಗಳು ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್‌ನೊಂದಿಗೆ ಚಾಲ್ತಿಯಲ್ಲಿವೆ. ಇದೀಗ ಸೆಲೆಬ್ರೆಟಿಗಳ ಲಿಸ್ಟ್‌ನಲ್ಲಿರುವ ನ್ಯೂ ಫ್ಯಾಷನ್‌ವೇರ್. ಇದು ಟೀ ಶರ್ಟ್ ಆದರೂ ಉದ್ದವಾಗಿಲ್ಲ, ಸೊಂಟದ ಮೇಲೆ ಬರುವಂತೆ ಕಟ್ ಮಾಡಿದಂತೆ ಕಾಣುವ ಇವು ವೆಸ್ಟ್‌ಲೈನನ್ನು ಹೈಲೈಟ್ ಮಾಡುತ್ತವೆ. ಬಳುಕುವ ಸೊಂಟಕ್ಕೆ ಗ್ಲಾಮರಸ್ ಲುಕ್ ನೀಡುತ್ತವೆ. ಇದೀಗ ಇವು ಕಾಲೇಜು ಹುಡುಗಿಯರ ಬಿಂದಾಸ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸೇರಿವೆ.
ಮಿಕ್ಸ್ ಮ್ಯಾಚ್ ಅಪ್ಷನ್‌ಗೆ ಸೈ
ಕ್ರಾಪ್ ಟೀ ಶರ್ಟ್ಗಳನ್ನು ಜೀನ್ಸ್, ಸ್ಕರ್ಟ್, ಮಿಡಿ, ಮಿನಿ, ಸ್ಲಿಟ್ ಡ್ರೆಸ್, ಜೀನ್ಸ್ ಪ್ಯಾಂಟ್ ಹೀಗೆ ಯಾವುದಕ್ಕೆ ಬೇಕಾದರೂ ಮ್ಯಾಚ್ ಮಾಡಬಹುದು. ನೋಡಲು ಮ್ಯಾಚ್ ಆಗಬೇಕಷ್ಟೇ! ಇಂದಿನ ಜನರೇಷನ್ ಹುಡುಗಿಯರ ಆಯ್ಕೆ ಇದಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರತನ್. ಅವರ ಪ್ರಕಾರ, ಕ್ರಾಪ್ ಟೀಶರ್ಟ್ ಸದ್ಯಕ್ಕೆ ಕಾಲರ್ ಹಾಗೂ ಕಾಲರ್‌ಲೆಸ್ ಎರಡೂ ಬಗೆಯಲ್ಲೂ ಪ್ರಚಲಿತದಲ್ಲಿದೆ. ಕಾಲರ್ ಇರುವಂತದ್ದು ಕೊಂಚ ಸ್ಪೋರ್ಟ್ ಲುಕ್ ನೀಡುತ್ತದೆ. ಇನ್ನು ಕಾಲರ್ ಲೆಸ್ ಎಲ್ಲದಕ್ಕೂ ಓಕೆ ಎನ್ನುತ್ತಾರೆ.
ಕ್ಯಾಶುವಲ್‌ವೇರ್‌ಗಾದಲ್ಲಿ ಹೀಗೆ ಮ್ಯಾಚ್ ಮಾಡಿ
ನಾರ್ಮಲ್ ಪ್ಯಾಂಟ್, ಪಲಾಜ್ಹೂ, ಕೇಪ್ರಿಸ್‌ಗಳಿಗೂ ಕ್ರಾಪ್ ಟೀ ಶರ್ಟ್ಗಳು ಪರ್ಫೆಕ್ಟ್ ಸೂಟ್ ಆಗುತ್ತವೆ. ಆದರೆ, ಪ್ಯಾಂಟ್‌ಗಳ ಕಟ್ಸ್ ಹಾಗೂ ಸ್ಟಿಚ್ಚಿಂಗ್ ಕ್ರಾಪ್ ಶರ್ಟ್ ಗಳಿಗೆ ಮ್ಯಾಚ್ ಆಗಬೇಕು ಎನ್ನುತ್ತಾರೆ ಫ್ಯಾಷನಿಸ್ಟಾ ರೇಖಾ. ಅವರ ಪ್ರಕಾರ, ಕಾಲರ್ ಟೀ ಶರ್ಟ್ ಶೈಲಿಯ ಕ್ರಾಪ್ ಟಾಪ್ ಆದಲ್ಲಿ, ಪ್ಯಾಂಟ್ ಕೊಂಚ ಸಿಂಪಲ್ ಇದ್ದರೂ ನಡೆಯುತ್ತದೆ. ಕೆಲವೊಮ್ಮೆ ಸೆಮಿ ಫಾರ್ಮಲ್ ಉಡುಪುಗಳಿಗೂ ಕ್ರಾಪ್ ಟಾಪ್‌ಗಳನ್ನು ಧರಿಸಬಹುದು. ಕ್ರಾಪ್ ಟೀ ಶರ್ಟ್ ಇದೀಗ ಮೂಲ ರೂಪವನ್ನು ಕಳೆದುಕೊಂಡು ಎಥ್ನಿಕ್ ಸ್ಟೈಲ್‌ಗೂ ಸಾಥ್ ನೀಡತೊಡಗಿವೆ ಎನ್ನುತ್ತಾರೆ ಮಾಡೆಲ್ ದೀಕ್ಷಾ.
ಇದನ್ನೂ ಓದಿ : Viral Video: ಫ್ಯಾಶನ್ ಶೋದಲ್ಲಿ ಮಾಡೆಲ್ ಮೈಮೇಲಿದ್ದ ಜಾಕೆಟ್ ತೆಗೆದುಹಾಕಿದ ರೋಬೋಟ್; ಇಷ್ಟವಾಗಿಲ್ಲವೆಂದ ನೆಟ್ಟಿಗರು
ಫಂಕಿ ಲುಕ್‌ಗೆ ಕ್ರಾಪ್ ಟೀ ಶರ್ಟ್
ಕ್ರಾಪ್ ಟೀ ಶರ್ಟ್ ಯಾವುದೇ ಕಾರಣಕ್ಕೂ ಆಫೀಸ್‌ವೇರ್ ಆಗಕೂಡದು. ಇದು ಡಿಸಿಪ್ಲೀನ್ ಲುಕ್ ನೀಡುವುದಿಲ್ಲ ಎನ್ನುವ ಫ್ಯಾಷನಿಸ್ಟಾ ರಿಚಾ, ಕ್ರಾಪ್ ಟೀ ಶರ್ಟ್ ಜತೆಗೆ ಮ್ಯಾಚ್ ಆಗುವಂತಹ ಶೇಡ್ಸ್, ಇಲ್ಲವೇ ಪ್ರಿಂಟ್ಸ್ ಅಥವಾ ಚೆಕ್ಸ್‌ನ್ನೊಳಗೊಂಡ ಪ್ಯಾಂಟ್ ಸೂಟ್ ಆಗುತ್ತವೆ. ಜತೆಗೆ ಕಲರ್ ಫ್ರೇಮ್ ಇರುವ ಕೂಲ್ ಗ್ಲಾಸ್ ಇಲ್ಲವೇ ಸಾದಾ ಫ್ಯಾಷನಬಲ್ ಕನ್ನಡಕ ಧರಿಸಿದರೆ ಫಂಕಿ ಲುಕ್ ಗ್ಯಾರಂಟಿ. ಕ್ರಾಪ್ ಟೀ ಶರ್ಟ್ಗಳಿಗೆ ಆದಷ್ಟೂ ಫಂಕಿ ಆಕ್ಸೆಸರೀಸ್ ಧರಿಸುವುದು ಉತ್ತಮ ಎನ್ನುತ್ತಾರೆ ಅವರು.
ಕ್ರಾಪ್ ಟೀ ಶಟ್ರ್ಸ್ ಟಿಪ್ಸ್ :
- ತೀರಾ ತೆಳ್ಳಗಿದ್ದರೇ ಆದಷ್ಟೂ ಪ್ರಿಂಟ್ಸ್ನದ್ದು ಸೆಲೆಕ್ಟ್ ಮಾಡಿ.
- ಕುಳ್ಳಗಿರುವವರು ಕ್ರಾಪ್ ಟೀ ಶರ್ಟ್ ಜೊತೆ ಸ್ಕರ್ಟ್ ಮ್ಯಾಚ್ ಮಾಡಿ .
- ಆಕ್ಸೆಸರೀಸ್ಗಳು ಕಲರ್ಫುಲ್ ಆಗಿದ್ದರೂ ಪರವಾಗಿಲ್ಲ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಚಿತ್ರಗಳು : ಜಾರ್ಜಿಯಾ ಆಂದ್ರಿಯಾನಿ , ನಟಿ