Site icon Vistara News

Dasara Shopping Trend | ಮಾರುಕಟ್ಟೆಗೆ ಲಗ್ಗೆ ಇಟ್ಟ ಟ್ರೆಂಡಿ ದಸರಾ ಗೊಂಬೆಗಳು

Dasara Shopping Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಗೊಂಬೆ ಹಬ್ಬದ ಆಚರಣೆಯ (Dasara Shopping Trend) ಸಂಭ್ರಮ ಹೆಚ್ಚಿಸಲು, ಈ ಜನರೇಷನ್‌ ಮಕ್ಕಳಿಗೂ ಇಷ್ಟವಾಗುವಂತಹ ನಾನಾ ಬಗೆಯ ಬೊಂಬೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಟ್ರೆಡಿಷನಲ್‌ ಸ್ಟೋರಿ ಟೆಲ್ಲಿಂಗ್‌ ಸೆಟ್ ಗೊಂಬೆಗಳು ಮಾತ್ರವಲ್ಲ, ಸಿನಿಮಾ ಕ್ಯಾರೆಕ್ಟರ್‌ಗಳಾದ ಐರನ್‌ ಮ್ಯಾನ್‌, ಎಕ್ಸ್‌ಮನ್‌, ನರೋಟಾ, ಮ್ಯಾಟ್ರಿಕ್ಸ್‌, ಬ್ಯಾಟ್‌ಮನ್‌, ಮೊಗ್ಲಿ, ಟರ್ಮಿನೇಟರ್‌, ಪವರ್‌ ರೇಂಜರ್ಸ್‌, ಸ್ಪೈಡರ್‌ ಮ್ಯಾನ್‌, ಟ್ರಾನ್ಸ್‌ಫಾರ್ಮರ್ಸ್‌ ಹೀಗೆ ಲೆಕ್ಕವಿಲ್ಲದಷ್ಟು ಬಗೆಯ ಗೊಂಬೆಗಳು ದಸರಾ ಗೊಂಬೆಗಳೊಂದಿಗೆ ಎಂಟ್ರಿ ಪಡೆದಿವೆ.

ಅಭಿರುಚಿಗೆ ತಕ್ಕಂತೆ ಗೊಂಬೆಗಳು
ಮೊದಲೆಲ್ಲಾ ಟ್ರೆಡಿಷನಲ್‌ ಹಾಗೂ ಕೇವಲ ಮಣ್ಣಿನ ಗೊಂಬೆಗಳಿಗೆ ಮಾತ್ರ ಸೀಮಿತವಾಗಿದ್ದ ಗೊಂಬೆ ಹಬ್ಬದ ಆಚರಣೆ ಶೈಲಿ ಬದಲಾಗಿದೆ. ಪ್ರತಿವರ್ಷ ಹೊಸ ಶೈಲಿಯ ಗೊಂಬೆಗಳು ಒಂದರ ಹಿಂದೊಂದರಂತೆ ಎಂಟ್ರಿ ಪಡೆದಿವೆ. ಲೈಟ್‌ವೇಟ್‌ ಗೊಂಬೆಗಳು ಹಾಗೂ ಸಿನಿಮಾ ಕ್ಯಾರೆಕ್ಟರ್‌ ಗೊಂಬೆಗಳು ಹೆಚ್ಚು ಪ್ರಚಲಿತದಲ್ಲಿವೆ ಎನ್ನುತ್ತಾರೆ ದಸರಾ ಗೊಂಬೆಗಳ ಮಾರಾಟಗಾರರಾದ ರಾಜವರ್ಧನ್‌.ಅವರ ಪ್ರಕಾರ, ಇಂದಿನ ಜನರೇಷನ್‌ ಹೈಕಳ ಅಭಿರುಚಿಗೆ ತಕ್ಕಂತೆ ಬಿಡುಗಡೆಗೊಂಡಿವೆ ಎನ್ನುತ್ತಾರೆ.

ಇದನ್ನೂ ಓದಿ | Holiday Fashion | ಬಂತು ದಸರಾ ಹಾಲಿಡೇ ಫ್ಯಾಷನ್‌

Dasara Shopping Trend

ದಸರಾ ಬೊಂಬೆಗಳನ್ನು ನಾನಾ ಮೇಟಿರಿಯಲ್‌ನಲ್ಲಿತಯಾರಿಸಲಾಗುತ್ತದೆ. ಅವುಗಳಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌, ಪಾಲಿಸ್ಟೋನ್‌, ಮಾರ್ಬಲ್‌ ಡಸ್ಟ್‌ ಅತಿ ಮುಖ್ಯವಾದುವು. ವುಡ್‌, ಸೆರಾಮಿಕ್‌, ಗಾಜು, ಪ್ಲಾಸ್ಟಿಕ್‌ನ ಬೊಂಬೆಗಳಿಗೂ ಬೇಡಿಕೆ ಕಡಿಮೆಯಾಗಿಲ್ಲ ಎನ್ನುತ್ತಾರೆ ಮಾರಾಟಗಾರರಾದ ರಾಜು.

ಸ್ಟೋರಿ ಟೆಲ್ಲಿಂಗ್‌ ಗೊಂಬೆಗಳಿಗೆ ಡಿಮ್ಯಾಂಡ್‌
ಜನರೇಷನ್‌ ಎಷ್ಟೇ ಬದಲಾದರೂ ದಸರಾ ಟ್ರೆಡಿಷನಲ್‌ ಬೊಂಬೆಗಳಿಗೆ ಇದ್ದ ಬೇಡಿಕೆ ಇಂದಿಗೂ ಕುಂದಿಲ್ಲ. ದಸರಾ ಸೆಟ್‌, ಸಮುದ್ರ ಮಂಥನದ ಸೆಟ್‌, ರಾಮಾಯಣ, ಮಹಾಭಾರತ ಚಿತ್ರಣದ ಸೆಟ್‌ ಸೇರಿದಂತೆ ನಾನಾ ಟ್ರೆಡಿಷನಲ್‌ ಕಥಾ ರೂಪಕದ ಗೊಂಬೆಗಳಿಗೆ ಡಿಮ್ಯಾಂಡ್‌ ಇನ್ನೂ ಹಾಗೆಯೇ ಇದೆ ಎಂಬುದು ಬಹುತೇಕ ಮಾರಾಟಗಾರರ ಅಭಿಪ್ರಾಯ.

ಮಣ್ಣಿನ ಗೊಂಬೆಗಳು ನವರಾತ್ರಿ ಗೊಂಬೆ ಪ್ರದರ್ಶನಕ್ಕೆ ತುಂಬಾ ಶ್ರೇಷ್ಠ. ಆದರೆ ಇವುಗಳನ್ನು ಜೋಪಾನ ಮಾಡುವುದು ಕಷ್ಟವಾದ್ದರಿಂದ ಈಗ ಬಳಕೆ ಕಡಿಮೆಯಾಗುತ್ತಿದೆ ಎನ್ನುವ ಖರೀದಿದಾರರಾದ ಮಾಲತಿ, ವರ್ಷ ವರ್ಷ ಹೊಸ ಬಗೆಯ ಗೊಂಬೆಗಳನ್ನು ಖರೀದಿ ಮಾಡುತ್ತಾರಂತೆ.

Dasara Shopping Trend

ಆನ್‌ಲೈನ್‌ನಲ್ಲೂ ಗೊಂಬೆ ಶಾಪಿಂಗ್‌
ಆನ್‌ಲೈನ್‌ನಲ್ಲೂ ದಸರಾ ಗೊಂಬೆ ಶಾಪಿಂಗ್‌ ಮಾಡಬಹುದು. ವರ್ಷದಿಂದ ವರ್ಷಕ್ಕೆ ಇಲ್ಲಿಯೂ ಕೂಡ ಹೊಸ ಬಗೆಯ ವೆರೈಟಿ ಗೊಂಬೆಗಳಿಂದಿಡಿದು ಎಲ್ಲಾ ಬಗೆಯವು ದೊರೆಯುತ್ತವೆ ಎನ್ನುತ್ತಾರೆ ಆನ್‌ಲೈನ್‌ ಶಾಪಿಂಗ್‌ ಪ್ರೇಮಿ ರಾಗ ಹಾಗೂ ರಾಣಿ.

ದಸರಾ ಗೊಂಬೆ ಶಾಪಿಂಗ್‌ಗೂ ಮುನ್ನ

ಇದನ್ನೂ ಓದಿ | Festive Shopping: ನವರಾತ್ರಿಗೆ ಒಂದು ವಾರ ಮೊದಲೇ ರಂಗೇರಿತು ವೀಕೆಂಡ್‌ ಹಬ್ಬದ ಶಾಪಿಂಗ್‌

Exit mobile version