ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶ್ವಾನಗಳು ಇತ್ತೀಚೆಗೆ (Dog Ethnicwear) ಎಥ್ನಿಕ್‌ವೇರ್‌ಗಳಲ್ಲಿ ಮಿಂಚುತ್ತಿವೆ. ಅಂಬಾನಿ ಫ್ಯಾಮಿಲಿಯ (ambani family) ಮುದ್ದು ಶ್ವಾನಗಳಾದ (dog) ಹ್ಯಾಪಿ ಹಾಗೂ ಪಾಪ್‌ಕಾರ್ನ್ ವೆಡ್ಡಿಂಗ್ ಔಟ್‌ಫಿಟ್‌ನಲ್ಲಿ (Wedding outfit) ಕಾಣಿಸಿಕೊಂಡು ಸುದ್ದಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಮುದ್ದು ಶ್ವಾನಗಳು ಕೂಡ ಗ್ರ್ಯಾಂಡ್ ಸಮಾರಂಭಗಳಲ್ಲಿ ಸಿಂಗಾರಗೊಳ್ಳುತ್ತಿವೆ. ಮನುಷ್ಯರಂತೆ ಉಡುಪನ್ನು ಧರಿಸಿ ಮೆರೆಯುತ್ತಿವೆ.
ಪೆಟ್ ಶಾಪ್‌ಗಳಲ್ಲೂ ಲಭ್ಯ
ಪೆಟ್ ಶಾಪ್‌ಗಳು ಡಾಗ್ಗಿಗಳ ನಾನಾ ಬಗೆಯ ವೈವಿಧ್ಯಮಯ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಪುಟ್ಟ ನಾಯಿಮರಿಯಿಂಡಿದು ದೊಡ್ಡ ಗೋಲ್ಡನ್ ರಿಟ್ರಿವರ್‌ನಂತಹ ನಾಯಿ ಕೂಡ ಧರಿಸಬಹುದಾದ ಎಥ್ನಿಕ್‌ವೇರ್‌ಗಳನ್ನು ಲಾಂಚ್ ಮಾಡಿವೆ.
ಆಯಾ ಜಾತಿಯ ಶ್ವಾನಗಳಿಗೆ ಅನುಗುಣವಾಗಿ ಎಥ್ನಿಕ್‌ವೇರ್‌ಗಳ ಆಯ್ಕೆ ಮಾಡಬಹುದು ಎನ್ನುವ ಡಾಗ್ ಸ್ಟೈಲಿಸ್ಟ್ ರಾಕೇಶ್, ಈ ಕುರಿತಂತೆ ಒಂದಿಷ್ಟು ಮಾಹಿತಿ ನೀಡಿದ್ದಾರೆ.
ಟ್ರೆಂಡಿಯಾಗಿರುವ ಡಾಗ್ ಎಥ್ನಿಕ್‌ವೇರ್ಸ್
ಸ್ಯಾಟಿನ್, ವೆಲ್ವೆಟ್, ಕಾಟನ್, ಕಾಟನ್ ಸಿಲ್ಕ್ ಹೀಗೆ ನಾನಾ ಫ್ಯಾಬ್ರಿಕ್‌ನ ಫ್ರಾಕ್ ಶೈಲಿಯ ಡ್ರೆಸ್‌ಗಳು, ಹೆಣ್ಣು ನಾಯಿಮರಿಗಳಿಗೆ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದರೇ, ಗಂಡು ನಾಯಿಮರಿಗಳಿಗೆ ನೋಡಲು ಕೋಟ್ ಎಂದೆನಿಸುವ ವೇಸ್ಟ್ಕೋಟ್ ಶೈಲಿಯಂತವು ಬಂದಿವೆ ಎನ್ನುತ್ತಾರೆ ಪೆಟ್ ಶಾಪ್‌ವೊಂದರ ಮಾಲೀಕರು.
ಕಸ್ಟಮೈಸ್ಡ್ ಡಾಗ್ ಎಥ್ನಿಕ್‌ವೇರ್ಸ್
ಇನ್ನು ಸಾಕಷ್ಟು ಬೋಟಿಕ್‌ಗಳು ಮುದ್ದು ನಾಯಿಮರಿಗಳಿಗೂ ಎಥ್ನಿಕ್‌ವೇರ್‌ಗಳನ್ನು ಹೊಲಿದು ಡಿಸೈನ್ ಮಾಡಿಕೊಡುತ್ತಿವೆ. ಆಯಾ ಕುಟುಂಬದವರ ಸಮಾರಂಭಗಳಿಗೆ ಅನುಗುಣವಾಗಿ ಡಿಸೈನ್ ಮಾಡಿ, ರೆಡಿ ಮಾಡಿಕೊಡುತ್ತವೆ.
ಆನ್‌ಲೈನ್‌ನಲ್ಲಿ ಡಾಗ್ ಡಿಸೈನರ್‌ವೇರ್ಸ್
ಇನ್ನು, ಆನ್‌ಲೈನ್‌ಗಳಲ್ಲಂತೂ ಲೆಕ್ಕವಿಲ್ಲದಷ್ಟೂ ಬಗೆಯ ಡಾಗ್ ಎಥ್ನಿಕ್‌ವೇರ್‌ಗಳು ದೊರೆಯುತ್ತಿವೆ. ಅದರಲ್ಲೂ ವೆಡ್ಡಿಂಗ್, ಬರ್ತ್ ಡೇ ಸೆಲೆಬ್ರೇಷನ್ ಹೀಗೆ ನಾನಾ ಸಮಾರಂಭಗಳಿಗೆ ಮ್ಯಾಚ್ ಆಗುವಂತಹ ಕ್ಯೂಟ್ ಡಿಸೈನರ್‌ವೇರ್‌ಗಳು ಇಲ್ಲಿ ಲಭ್ಯ ಎನ್ನುತ್ತಾರೆ ಡಾಗ್ ಪ್ರೇಮಿ ಜೀವಿತಾ ಹಾಗೂ ದೀಕ್ಷಾ.
ಇದನ್ನೂ ಓದಿ: Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್ ಶೆಟ್ಟಿಯ ಕೂಲ್ ಸ್ಮೈಲ್ & ಸ್ಟೈಲ್!
· ಆನ್‌ಲೈನ್‌ನಲ್ಲಿ ಕೆಲವೊಮ್ಮೆ ಆಫರ್‌ಗಳಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.
· ನಿಮ್ಮ ಶ್ವಾನದ ಸೈಜ್‌ಗೆ ತಕ್ಕಂತೆ ಖರೀದಿಸಿ. ದೊಗಲೆಯಾದಲ್ಲಿ ಚೆನ್ನಾಗಿ ಕಾಣಿಸುವುದಿಲ್ಲ.
· ಗ್ರ್ಯಾಂಡ್ ಆಗಿರುವಂಥವು ಚೆನ್ನಾಗಿ ಕಾಣಿಸುತ್ತವೆ.