-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಓವರ್ ಸೈಜ್ ಕಿವಿಯೊಲೆಗಳು ಹಾಗೂ ಹ್ಯಾಂಗಿಂಗ್ಸ್ ಈ ಸೀಸನ್‌ನ ಜ್ಯುವೆಲರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಎದ್ದು ಕಾಣುವ ಡಿಸೈನ್ ಹೊಂದಿರುವಂತವು , ಮುಖದ ಅಂದಕ್ಕೆ ಮ್ಯಾಚ್ ಆಗುವಂಥವು, ತಿರುಗಿದರೇ ನೇತಾಡುವಂಥವು ಹಾಗೂ ಕಿವಿಯನ್ನೇ ಮುಚ್ಚುವಂತಹ ಸ್ಟಡ್ಸ್, ಜ್ಯುವೆಲರಿ ಫ್ಯಾಷನ್‌ನ ಟಾಪ್ ಲಿಸ್ಟ್‌ಗೆ ಸೇರಿದ್ದು, ಹುಡುಗಿಯರನ್ನು ಅಲಂಕರಿಸುತ್ತಿವೆ.
ಟ್ರೆಂಡಿಯಾಗಿರುವ ಡಿಸೈನ್ಸ್
ಫ್ಲೋರಲ್ ವಿನ್ಯಾಸ, ಎಲೆಯಾಕಾರ, ದೊಡ್ಡ ದೊಡ್ಡ ಹರಳುಗಳನ್ನು ಹೊಂದಿರುವ ಚಂದ್ರ, ಸೂರ್ಯ ಹಾಗೂ ನಕ್ಷತ್ರದ ಸ್ಟಡ್ಸ್, ಚಾಂದ್‌ಬಾಲಿಯನ್ನು ಹೋಲುವ ಮಲ್ಟಿಪಲ್ ಹ್ಯಾಂಗಿಂಗ್ಸ್, ಸ್ಟೆಪ್ ಬೈ ಸ್ಟೆಪ್ ಕೂರುವ ಕುಂದನ್ ಡಿಸೈನ್ಸ್, ಡೈಮಂಡ್‌ನಂತೆಯೇ ಕಾಣುವ ಬಿಗ್ ಕ್ರಿಸ್ಟಲ್‌ನ ಕಿವಿಯೊಲೆ, ಬಂಚ್ ಇರುವಂತಹ ಪರ್ಲ್ ಹ್ಯಾಂಗಿಂಗ್ಸ್, ಫ್ರಿಂಝ್ ವಿನ್ಯಾಸದ ಬೀಡ್ಸ್ ವಿನ್ಯಾಸ, ಚೈನ್ ಹಾಗೂ ಮಿಕ್ಸ್ ಮ್ಯಾಚ್ ಡಿಸೈನ್ ಇರುವಂತಹ ಫ್ಯಾಷನ್ ಹ್ಯಾಂಗಿಂಗ್ಸ್ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯವು ಈ ಸೀಸನ್‌ನ ಆರ್ಟಿಫಿಶಿಯಲ್ ಜ್ಯುವೆಲರಿ ಲೋಕದಲ್ಲಿ ಬಿಡುಗಡೆಗೊಂಡಿವೆ.
ಓವರ್ ಸೈಜ್ ಇಯರಿಂಗ್ಸ್‌ಗೆ ಸೀರಿಯಲ್‌ಗಳೇ ಪ್ರೇರಣೆ
ಓವರ್ ಸೈಜ್ ಇಯರಿಂಗ್ಸ್ ಟ್ರೆಂಡಿಯಾಗಲು ಟಿವಿಯಲ್ಲಿ ಪ್ರಸಾರವಾಗುವ ಸೀರಿಯಲ್‌ಗಳೇ ಪ್ರೇರಣೆಯಂತೆ. ಹಾಗೆನ್ನುತ್ತಾರೆ ಜ್ಯುವೆಲ್ ಡಿಸೈನರ್ ತಾರಾ. ಅವರ ಪ್ರಕಾರ, ಪ್ರತಿದಿನ ಪ್ರಸಾರವಾಗುವ ಮಹಿಳಾ ಪ್ರಧಾನ ಧಾರಾವಾಹಿಗಳಲ್ಲಿ ನಟಿಯರು ಧರಿಸುವ ಆಭರಣಗಳು ಅತಿ ಬೇಗ ಮಹಿಳೆಯರನ್ನು ಆಕರ್ಷಿಸುತ್ತವಂತೆ. ಇದೇ ರೀತಿ ಇಯರಿಂಗ್ಸ್ ಕೂಡ ಮಾನಿನಿಯರನ್ನು ಸೆಳೆಯುತ್ತವಂತೆ. ಅದೇ ರೀತಿ ಈ ಸೀಸನ್‌ನಲ್ಲಿ ಭಾರಿ ಅಗಲವಾದ ಹಾಗೂ ಉದ್ದವಿರುವ ಓವರ್‌ಸೈಜ್ ಇಯರಿಂಗ್ಸ್ ಸೀರಿಯಲ್‌ಗಳ ನಟಿಯರು ಧರಿಸುವ ಮೂಲಕ ಟ್ರೆಂಡಿಯಾಗಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಇದನ್ನೂ ಓದಿ: Tassels earrings Fashion: ಇಯರಿಂಗ್ಸ್ ರೂಪದಲ್ಲಿ ಬಂತು ಬಣ್ಣಬಣ್ಣದ ಟಾಸೆಲ್ಸ್
ಓವಸೈಜ್ ಇಯರಿಂಗ್ಸ್ ಆಯ್ಕೆ ಹೇಗೆ?
ಎಲ್ಲರಿಗೂ ಓವರ್ ಸೈಜ್ ಇಯರಿಂಗ್ಸ್ ಮ್ಯಾಚ್ ಆಗುವುದಿಲ್ಲ. ಹಾಗಾಗಿ ಮುಖದ ಆಕಾರಕ್ಕೆ ತಕ್ಕಂತೆ ಧರಿಸುವುದು ಉತ್ತಮ ಎಂದು ಸಲಹೆ ನೀಡುತ್ತಾರೆ ಜ್ಯುವೆಲರಿ ಸ್ಟೈಲಿಸ್ಟ್‌ಗಳು. ಚಿಕ್ಕ ಮುಖದವರು ಯಾವುದೇ ಕಾರಣಕ್ಕೂ ತೀರಾ ದೊಡ್ಡನಾದ ಇಯರಿಂಗ್ಸ್ ಆಯ್ಕೆ ಮಾಡುವುದು ಬೇಡ. ಇನ್ನು ಓವಲ್ ಶೇಪ್‌ನವರಿಗೆ ಎಲ್ಲಾ ಬಗೆಯವು ಸೂಟ್ ಆಗುತ್ತವೆ. ಅಗಲ ಮುಖದವರು ಉದ್ದನೆಯ ಓವರ್‌ಸೈಜ್ ಇಯರಿಂಗ್ಸ್ ಧರಿಸಬಹುದು. ಇನ್ನು ಪೆಂಟಾಗನಲ್ ಶೇಪ್ ಮುಖದವರು ಆದಷ್ಟೂ ಹ್ಯಾಂಗಿಂಗ್ಸ್ ಶೈಲಿಯವನ್ನು ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)