Site icon Vistara News

Festive Fashion: ಈದ್‌ ಸಂಭ್ರಮಕ್ಕೆ ಜತೆಯಾದ 3 ಜಗಮಗಿಸುವ ಡಿಸೈನರ್‌ವೇರ್ಸ್

Festive Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈದ್‌ ಸಂಭ್ರಮಕ್ಕೆ ಸೆಲೆಬ್ರಿಟಿ ಲುಕ್‌ ನೀಡುವ ಗ್ರ್ಯಾಂಡ್‌ ಎಥ್ನಿಕ್‌ವೇರ್‌ಗಳು ಯುವತಿಯರ ಜತೆಯಾಗಿವೆ. ಫೆಸ್ಟೀವ್‌ ಸೀಸನ್‌ ನಂತರವೂ ಸಮಾರಂಭಗಳಿಗೂ ಧರಿಸಬಹುದಾದ ಎಥ್ನಿಕ್‌ ಲುಕ್‌ ನೀಡುವ ಈ ಗ್ರ್ಯಾಂಡ್‌ ಉಡುಪುಗಳು ತಾರೆಯರನ್ನು ಮಾತ್ರವಲ್ಲ, ಸಾಮಾನ್ಯ ಮಹಿಳೆಯರಿಗೂ ಪ್ರಿಯವಾಗಿವೆ.

ಈ ಡಿಸೈನರ್‌ವೇರ್‌ಗಳಲ್ಲಿ, ಮೂರು ಬಗೆಯ ಎಥ್ನಿಕ್‌ವೇರ್ಸ್ ಮಾತ್ರ ಸಖತ್‌ ಟ್ರೆಂಡಿಯಾಗಿರುವುದರೊಂದಿಗೆ ಎಲ್ಲಾ ಸಮುದಾಯದ ಯುವತಿಯರನ್ನು ಆಕರ್ಷಿಸಿವೆ. ಇದೀಗ ಸದ್ಯಕ್ಕೆ ಚಾಲ್ತಿಯಲ್ಲಿರುವ ಈ 3 ಟ್ರೆಡಿಷನಲ್‌ವೇರ್‌ಗಳ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ.

ಫುಲ್‌ ಸೆಟ್‌ ದೇಸಿ ಸಿಲ್ಕ್‌ ಕುರ್ತಾ ವಿತ್‌ ಪಲ್ಹಾಜೋ

ಸಿಲ್ಕ್‌ ಕುರ್ತಾದೊಂದಿಗೆ ಪಲ್ಹಾಜೋ ಪ್ಯಾಂಟ್‌ ಹಾಗೂ ದುಪಟ್ಟಾ ಹೊಂದಿರುವ ದೇಸಿ ಸಿಲ್ಕ್‌ನ ಗ್ರ್ಯಾಂಡ್‌ ಎಥ್ನಿಕ್‌ವೇರ್ಸ್, ಫೆಸ್ಟೀವ್‌ ಸೀಸನ್‌ನ ಸಂಭ್ರಮ ಇಮ್ಮಡಿಗೊಳಿಸಿವೆ. ನೋಡಲು ಮನಮೋಹಕವಾಗಿ ಕಾಣುವ ಈ ಶೈಲಿಯ ಉಡುಪುಗಳಲ್ಲಿ ಬಾರ್ಡರ್‌, ಬಾರ್ಡರ್‌ರಹಿತ, ಡಿಸೈನರ್‌ನೆಕ್‌, ಕೇಪ್‌ ಡಿಸೈನ್ಸ್‌ ದುಪಟ್ಟಾ ಸೇರಿದಂತೆ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ.

ಜಾರ್ಜೆಟ್‌ ಅನಾರ್ಕಲಿ ವಿತ್‌ ಪಲ್ಹಾಜೋ ಪ್ಯಾಂಟ್‌

ಇದೀಗ ಜಾರ್ಜೆಟ್‌ ಫ್ಯಾಬ್ರಿಕ್‌ನ ಮಾನೊಕ್ರೋಮ್‌ ಶೇಡ್‌ನ ಅನಾರ್ಕಲಿ ಸೂಟ್‌ಗಳು ಕೂಡ ಅತಿ ಹೆಚ್ಚು ಹುಡುಗಿಯರನ್ನು ಸೆಳೆದಿವೆ. ನೋಡಲು ಎಲಿಗೆಂಟ್‌ ಹಾಗೂ ಟ್ರೆಡಿಷನಲ್‌ ಲುಕ್‌ ನೀಡುವ ಇವುಗಳಲ್ಲಿ ಟ್ವಿರ್ಲಿಂಗ್‌ ಮಾಡಬಹುದಾಗಿದ್ದು, ಅದಕ್ಕೆಂದೇ ಸಾಕಷ್ಟು ಹುಡುಗಿಯರು ಧರಿಸುವುದು ಹೆಚ್ಚಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Festive Fashion: ರಂಜಾನ್‌ ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡಿಯಾದ 5 ಬಗೆಯ ಜಗಮಗಿಸುವ ಆಕ್ಸೆಸರೀಸ್‌

ಜಗಮಗಿಸುವ ಸೆಮಿ ಅನಾರ್ಕಲಿ ವಿತ್‌ ಪುಶ್‌ಬ್ಯಾಕ್‌ ಪ್ಯಾಂಟ್

ಕೊಂಚ ಸ್ಟ್ರೇಟ್‌ ಕಟ್‌ ಹೊಂದಿರುವಂತಹ ಸೆಮಿ ಅನಾರ್ಕಲಿ ಡಿಸೈನ್‌ನ ಸೂಟ್‌ಗಳು ಅರ್ಗಾನ್ಜಾ, ಚಂದೇರಿ ಹಾಗೂ ಸೆಮಿ ಸಿಲ್ಕ್‌ ಫ್ಯಾಬ್ರಿಕ್‌ನಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ಕಾಂಟ್ರಾಸ್ಟ್ ದುಪಟ್ಟಾಗಳು ಸಾಥ್‌ ನೀಡಿವೆ. ಗೋಲ್ಡನ್‌ ಹಾಗೂ ಸಿಲ್ವರ್‌ ಶೇಡ್‌ನ ಸೆಟ್‌ಗಳು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಒಟ್ಟಿನಲ್ಲಿ ಈ ಫೆಸ್ಟೀವ್‌ ಸೀಸನ್‌ನಲ್ಲಿ ಎಂದಿನಂತೆ ಶಿಮ್ಮರ್‌ ಹಾಗೂ ಶೈನಿಂಗ್‌ ಎಥ್ನಿಕ್‌ವೇರ್‌ಗಳು ಹೆಚ್ಚು ಪಾಪುಲರ್‌ ಆಗಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ ಮೀರಾ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version