Site icon Vistara News

Festive Jewel Trend | ಓಣಂ ಹಬ್ಬಕ್ಕೆ ಗೋಲ್ಡನ್‌ ಜ್ಯುವೆಲರಿ ಎಂಟ್ರಿ

Festive Jewel Trend

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಓಣಂ ಹಬ್ಬದ ಸಡಗರ-ಸಂಭ್ರಮವನ್ನು ಹೆಚ್ಚಿಸುವ ಕೇರಳ ಮೂಲದ ಟ್ರೆಡಿಷನಲ್‌ ಆಭರಣಗಳು ಈಗ ಹೊಸ ರೂಪದಲ್ಲಿ ಜ್ಯುವೆಲರಿ ಲೋಕಕ್ಕೆ (Festive Jewel Trend) ಕಾಲಿಟ್ಟಿವೆ.

ಗೋಲ್ಡನ್‌ ಲುಕ್‌ ನೀಡುವ ಆಭರಣಗಳು
ಓಣಂ ಹಬ್ಬಕ್ಕೆ ಧರಿಸುವ ಸೀರೆಯಿಂದಿಡಿದು ಜ್ಯುವೆಲರಿಗಳಿಗೂ ಒಂದೇ ಶೇಡ್‌. ಇದನ್ನು ಗೋಲ್ಡನ್‌ ಥೀಮ್‌ ಕೂಡ ಎನ್ನಬಹುದು. ಫಂಕಿ ಲುಕ್‌ಗೆ ಇಲ್ಲಿ ಪ್ರಾಮುಖ್ಯತೆ ಇಲ್ಲ. ಸಂಪೂರ್ಣ ಗೋಲ್ಡ್ ಜ್ಯುವೆಲರಿಗಳಿಗೆ ಹೆಚ್ಚು ಪ್ರಾಧಾನ್ಯತೆ. ಸೀರೆಯ ಮೇಲೆ ಧರಿಸಿದಾಗ ಇದು ಗೋಲ್ಡನ್ ಲುಕ್‌ ನೀಡುತ್ತದೆ. ಇದನ್ನು ಓಣಂ ಸಿಗ್ನೆಚರ್‌ ಸ್ಟೈಲ್‌ ಎಂದರೂ ಅತಿಶಯೋಕ್ತಿಯಾಗದು ಎನ್ನುತ್ತಾರೆ ಆಭರಣ ವಿನ್ಯಾಸಕಿ ಅರ್ಚನಾ. ಅವರ ಪ್ರಕಾರ, ಕೇರಳದಲ್ಲಿ ಅತಿ ಹೆಚ್ಚಾಗಿ ಬಳಸುವ ವಿನ್ಯಾಸಗಳೆಂದರೇ, ಕೊದಾ ಕುದುಕ್ಕನ್‌, ಎಲ್ಲರಿಗೂ ಪ್ರಿಯವಾದ ಕಾಸು ಮಾಲೆ, ಜಾಸ್ಮಿನ್‌ ಬಡ್‌ಗಳ ವಿನ್ಯಾಸದ ನೆಕ್ಲೇಸ್‌, ನೆಲ್ಲಿಕಾಯಿ ಮಾಲೆ, ಟ್ರೆಡಿಷನಲ್‌ ಟೆಂಪಲ್‌ ಆಭರಣಗಳು, ಜುಮಕಿಗಳನ್ನು ಓಣಂ ಸಮಯದಲ್ಲಿ ಅತಿ ಹೆಚ್ಚಾಗಿ ಧರಿಸುತ್ತಾರೆ. ಹಬ್ಬದ ಸಮಯದಲ್ಲಿ ಈ ಡಿಸೈನ್‌ನ ಬಂಗಾರದ ಆಭರಣಗಳನ್ನು ಕೊಳ್ಳುವವರ ಸಂಖ್ಯೆಯು ಹೆಚ್ಚು ಎನ್ನುತ್ತಾರೆ.

ಇದನ್ನೂ ಓದಿ | Fashion Show | ನಿಫ್ಟ್‌ ಹ್ಯಾಂಡ್‌ಲೂಮ್‌ ಫ್ಯಾಷನ್‌ ಶೋ

ಅಮಲಾ ಪೌಲ್‌, ನಟಿ

“ಕೇರಳದ ಆಭರಣಗಳಲ್ಲಿ ಹೆಚ್ಚಾಗಿ ಕಂಪ್ಲೀಟ್‌ ಗೋಲ್ಡ್‌ನಲ್ಲೆ ವಿನ್ಯಾಸಗೊಳಿಸಿರುವ ಡಿಸೈನ್‌ಗಳಿಗೆ ಹೆಚ್ಚು ಪ್ರಾಮುಖ್ಯತೆ. ಅದರಲ್ಲೂ ಅಲ್ಲಿಯ ಜನರ ಅಭಿರುಚಿಗೆ ಹೊಂದುವಂತಹ ಡಿಸೈನ್‌ಗಳು ಸಾಂಪ್ರದಾಯಿಕ ವಿನ್ಯಾಸವನ್ನು ಒಳಗೊಂಡಿರುತ್ತವಲ್ಲದೇ, ವಿಭಿನ್ನ ಲುಕ್‌ ಒಳಗೊಂಡಿರುತ್ತದೆ. ನೋಡಿದ ತಕ್ಷಣ ಇದು ಕೇರಳದ ಜ್ಯುವೆಲರಿ ಡಿಸೈನ್ ಎಂದು ಕಂಡು ಹಿಡಿಯಬಹುದು. ಆ ಮಟ್ಟಕ್ಕೆ ವಿನ್ಯಾಸಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಈ ಬಾರಿ ಇವುಗಳಲ್ಲೆ ಕೊಂಚ ಹೊಸ ರೂಪದ ಆಭರಣಗಳು ಆಗಮಿಸಿವೆ” ಎನ್ನುತ್ತಾರೆ ಆಭರಣ ಮಾರಾಟಗಾರರು.

ವಿಸ್ಮಯ, ಮಾಡೆಲ್‌

ಪರ್ಲ್ ಮ್ಯಾಚಿಂಗ್‌ ಆಭರಣಗಳು
ಇನ್ನು ಇಂದಿನ ಜನರೇಷನ್‌ ಹೆಣ್ಣುಮಕ್ಕಳು ಇಷ್ಟಪಡುವಂತೆ ಪರ್ಲ್ ವಿನ್ಯಾಸದ ಆಭರಣಗಳು ಟ್ರೆಂಡಿಯಾಗಿವೆ. ಗೋಲ್ಡನ್‌ ಬಾರ್ಡರ್‌ ಹೊಂದಿರುವ ಕಸವು ಸೀರೆಗೆ ಮ್ಯಾಚ್‌ ಆಗುವ ಈ ಪರ್ಲ್ ಆಭರಣಗಳನ್ನು ಇತರೇ ಸಮಯದಲ್ಲೂ ಧರಿಸಬಹುದಾಗಿದ್ದು, ಹಾಗಾಗಿ ಇವುಗಳಲ್ಲೆ ಫ್ಯಾಷನ್‌ ಜ್ಯುವೆಲೆರಿಗಳು ಲಭ್ಯವಿದೆ. ಕಂಪ್ಲೀಟ್‌ ಗೋಲ್ಡ್‌ ಆಭರಣ ಇಷ್ಟಪಡದವರನ್ನು ಇವು ಸೆಳೆಯುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ ದಿಯಾ.

ರಾಶಿ ಖನ್ನಾ, ನಟಿ

ಆಭರಣ ಕೊಳ್ಳುವವರಿಗೆ ಒಂದಿಷ್ಟು ಸಲಹೆ :

ಇದನ್ನೂ ಓದಿ | Business success |‌ 10,000 ರೂ.ನಿಂದ ಆರಂಭವಾದ ಶರ್ಟ್‌ ಮಾರಾಟ ಈಗ 400 ಕೋಟಿ ರೂ. ಫ್ಯಾಷನ್‌ ಬ್ರಾಂಡ್!

Exit mobile version