-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫೆಸ್ಟೀವ್ ಸೀಸನ್‌ನಲ್ಲಿ (Festive Season Nail Art) ಮಹಿಳೆಯರ ಕೈಗಳ ಅಲಂಕಾರಕ್ಕೆ ಸಾಥ್ ನೀಡುವ ಗ್ಲಿಟ್ಟರ್ ನೇಲ್ ಆರ್ಟ್ ಇದೀಗ ಟ್ರೆಂಡಿಯಾಗಿದೆ. ನೋಡಲು ಆಕರ್ಷಕವಾಗಿ ಕಾಣುವ ನಾನಾ ಶೇಡ್‌ನ ಗ್ಲಿಟ್ಟರ್ ನೇಲ್ ಆರ್ಟ್ ಇದೀಗ ಮಹಿಳೆಯರ ಕೈಗಳನ್ನು ಅಲಂಕರಿಸುತ್ತಿವೆ.
ಟ್ರೆಡಿಷನಲ್ ಕಲರ್‌ನಲ್ಲಿ ಲಭ್ಯ
ನೋಡಲು ಅತ್ಯಾಕರ್ಷಕವಾಗಿ ಕಾಣುವ ಗ್ಲಿಟ್ಟರ್ ನೇಲ್ ಕಲರ್‌ಗಳು ಈ ಸೀಸನ್‌ನಲ್ಲಿ ನಾನಾ ಬ್ರಾಂಡ್‌ಗಳಲ್ಲಿ ಬಿಡುಗಡೆಯಾಗಿವೆ. ಗೋಲ್ಡನ್, ಸಿಲ್ವರ್, ಆರೆಂಜ್, ಯೆಲ್ಲೋ, ರೆಡ್, ಗ್ರೀನ್ ಹೀಗೆ ಎಥ್ನಿಕ್ ಡಿಸೈನರ್‌ವೇರ್‌ಗಳಿಗೆ ಮ್ಯಾಚ್ ಅಗುವಂತಹ ಸಾಕಷ್ಟು ಶೇಡ್‌ಗಳಲ್ಲಿ ಆಗಮಿಸಿವೆ. ಶೈನಿಂಗ್ ಔಟ್‌ಲುಕ್ ನೀಡುವ ಇವು ಟ್ರೆಡಿಷನಲ್ ಔಟ್‌ಫಿಟ್‌ಗಳಿಗೆ ಮ್ಯಾಚ್ ಆಗುವಂತಹ ಶೇಡ್‌ಗಳಲ್ಲಿ ಬಂದಿವೆ.
ನೇಲ್‌ಗೆ ಗೋಲ್ಡನ್ ಲುಕ್
ಗ್ರ್ಯಾಂಡ್ ಡಿಸೈನರ್‌ವೇರ್ ಹಾಗೂ ಡಿಸೈನರ್ ಸೀರೆಗಳಿಗೆ ಸೂಟ್ ಆಗುವಂತಹ ಗ್ಲಿಟ್ಟರ್ ನೇಲ್‌ಪಾಲಿಶ್ ಕಲರ್‌ಗಳು ಇದೀಗ ನಾನಾ ಕಲರ್‌ಗಳಲ್ಲಿ ಮಾತ್ರವಲ್ಲ, ಮಿಕ್ಸ್ ಮ್ಯಾಚ್ ವರ್ಣದಲ್ಲೂ ದೊರೆಯುತ್ತಿವೆ. ಅದರಲ್ಲೂ ಗೋಲ್ಡನ್ ಲುಕ್ ನೀಡುವ ಬಂಗಾರ ವರ್ಣದ ಗ್ಲಿಟ್ಟರ್ ನೇಲ್ ಶೇಡ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಇನ್ನು ಮೈಕ್ರೊ ಸ್ಟಾರ್‌ಗಳಿರುವ ಗ್ಲಿಟ್ಟರ್ಸ್, ಮೈಕ್ರೋ ಮೂನ್ ಹೀಗೆ ನಾನಾ ಬಗೆಯ ಗ್ಲಿಟ್ಟರ್ಸ್ ನೇಲ್ ಶೇಡ್‌ಗಳು ಫೆಸ್ಟೀವ್ ಸೀಸನ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ನೇಲ್ ಆರ್ಟಿಸ್ಟ್ ಜಿಯಾ. ಅವರ ಪ್ರಕಾರ, ಈ ಸೀಸನ್‌ನಲ್ಲಿ ನೇಲ್ ಸಲೂನ್‌ಗೆ ಹೋಗಿ ಗಂಟೆಗಟ್ಟಲೆ ಕುಳಿತು ನೇಲ್ ಆರ್ಟ್ ಮಾಡಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಮನೆಯಲ್ಲೆ ಕುಳಿತು ಈ ನೇಲ್ ಶೇಡ್‌ಗಳಿಂದ ಗ್ಲಿಟ್ಟರ್ಸ್ ನೇಲ್ ಆರ್ಟ್ ಮಾಡಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ.
ಇದನ್ನೂ ಓದಿ | Nail Art Trend: ಉಗುರಿನ ಮೇಲೆ ಪೋಲ್ಕಾ ಡಾಟ್ ಚಿತ್ತಾರ
ಮನೆಯಲ್ಲೆ ನೇಲ್ ಆರ್ಟ್ ಮಾಡಿ
ಮೊದಲಿಗೆ ಸಿಂಪಲ್ ಆಗಿ ಮೆನಿಕ್ಯೂರ್ ಮಾಡಿಕೊಳ್ಳಿ. ನಂತರ ಉಗುರುಗಳನ್ನು ಶೇಪ್ ಮಾಡಿ. ಪಾರದರ್ಶಕವಾಗಿರುವ ಯಾವುದಾದರೂ ಒಂದು ಕೋಟ್ ನೇಲ್ ಪಾಲಿಶ್ ಹಾಕಿ. ನೀವು ಧರಿಸುವ ಉಡುಪುಗಳಿಗೆ ಸೂಟ್ ಆಗುವಂತಹ ಯಾವುದೇ ನೇಲ್ ಪಾಲೀಶ್ ಮೊದಲು ಕೋಟ್ ಹಚ್ಚಿ. ನಂತರ ನಿಮಗೆ ಅಗತ್ಯವಿರುವ ಅಥವಾ ಉಡುಪಿಗೆ ಮ್ಯಾಚ್ ಆಗುವಂತಹ ಗೋಲ್ಡ್, ಸಿಲ್ವರ್ ಹಾಗೂ ಯಾವುದೇ ಇತರೇ ಬಣ್ಣದ ಗ್ಲಿಟ್ಟರ್ ಶೇಡ್ ಹಚ್ಚಿ. ಬೇಕಾದಲ್ಲಿ ಹಾಫ್ ಅಂಡ್ ಹಾಫ್ ಹಚ್ಚಬಹುದು. ಅರ್ಧಕ್ಕೆ ಇತರೇ ಕಾಂಟ್ರಾಸ್ಟ್ ಬಣ್ಣವನ್ನು ಹಚ್ಚಬಹುದು. ಪೋಲ್ಕಾ ಡಾಟ್ ರೀತಿಯಲ್ಲಿ ಡಿಸೈನ್ ಮಾಡಬಹುದು. ನ್ಯೂಡ್ ನೇಲ್ ಪಾಲಿಶ್ ಮೇಲೂ ಹಚ್ಚಬಹುದು ಎಂದು ಟಿಪ್ಸ್ ನೀಡುತ್ತಾರೆ ಎಕ್ಸ್‌ಪಟ್ರ್ಸ್.
ಗೋಲ್ಡನ್ ಗ್ಲಿಟ್ಟರ್ಸ್ ನೇಲ್ ಆರ್ಟ್‌ಗೆ ಟಿಪ್ಸ್
- ಗೋಲ್ಡನ್ ಗ್ಲಿಟ್ಟರ್ಸ್ ಶೇಡ್ ಎಲ್ಲಾ ಡಿಸೈನರ್ವೇರ್ಗಳಿಗೂ ಮ್ಯಾಚ್ ಆಗುತ್ತದೆ.
- ಫೆಸ್ಟೀವ್ ಸೀಸನ್ಗೆ ಬೆಸ್ಟ್ ನೇಲ್ ಆರ್ಟ್.
- ಸಿಲ್ವರ್ ಗ್ಲಿಟ್ಟರ್ಸ್ ಇಂಡೋ-ವೆಸ್ಟರ್ನ್ ಲುಕ್ಗೆ ಮ್ಯಾಚ್ ಆಗುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Nail Art Craze | ಯುವತಿಯರಲ್ಲಿ ಹೆಚ್ಚುತ್ತಿದೆ ನೇಲ್ ಆರ್ಟ್ ಕ್ರೇಜ್