Site icon Vistara News

Festive Season Saree Shopping: ಫೆಸ್ಟಿವ್‌ ಸೀಸನ್‌ಗೂ ಮುನ್ನವೇ ಶುರುವಾಯ್ತು ಸೀರೆ ಶಾಪಿಂಗ್‌!

saree

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವರ ಮಹಾಲಕ್ಷ್ಮೀ ಹಬ್ಬಕ್ಕೆ ಇನ್ನೂ ಸಾಕಷ್ಟು (Festive Season Saree Shopping) ದಿನಗಳು ಬಾಕಿ ಇದೆ. ಅಧಿಕ ಶ್ರಾವಣ ನಡೆಯುತ್ತಿದೆ. ಇನ್ನೂ ಸಾಲು ಸಾಲು ಹಬ್ಬಗಳು ಆರಂಭವಾಗಿಲ್ಲ! ಆಗಲೇ ಎಲ್ಲೆಡೆ ಸೀರೆ ಶಾಪಿಂಗ್‌ ಮೇನಿಯಾ ಶುರುವಾಗಿದೆ. ಶಾಪಿಂಗ್‌ ಸೆಂಟರ್‌ಗಳಲ್ಲಿ ಎಲ್ಲಿ ನೋಡಿದರೂ ಹೆಂಗಸರ ಹಾಗೂ ಹೆಣ್ಣು ಮಕ್ಕಳ ಕಲರವ ಹೆಚ್ಚಾಗಿದೆ. ಒಟ್ಟಾರೆ, ವರ ಮಹಾಲಕ್ಷ್ಮೀ ಹಬ್ಬಕ್ಕೂ ಮುನ್ನವೇ ಸೀರೆ ಶಾಪಿಂಗ್‌ ಅಬ್ಬರ ಹೆಚ್ಚಾಗಿದೆ.

ಸೀರೆ ಶೋರೂಂಗಳು ಫುಲ್‌ ರಶ್

ಹಬ್ಬದ ಸೀಸನ್‌ ಆರಂಭವಾಗುವ ತಿಂಗಳಾನುಗಟ್ಟಲೇ ಮುನ್ನವೇ ಬಹುತೇಕ ಸೀರೆ ಶಾಪ್‌ಗಳು ತುಂಬಿ ತುಳುಕುತ್ತವೆ. ಅದರಲ್ಲೂ ಈ ಬಾರಿ ಅಧಿಕ ಶ್ರಾವಣ ಮಾಸ ಆರಂಭಗೊಂಡ ತಕ್ಷಣ ಇದಕ್ಕೆ ಚಾಲನೆ ದೊರೆತಿದೆ. ಇನ್ನು ಉದ್ಯಾನನಗರಿಯ ಚಿಕ್ಕ ಪುಟ್ಟ ಸೀರೆ ಶಾಪ್‌ಗಳು , ದೊಡ್ಡ ಸೀರೆ ಶಾಪ್‌ಗಳು ಕೂಡ ಸೀಸನ್‌ಗೆ ತಕ್ಕಂತೆ ಸೀರೆಗಳನ್ನು ಡಿಸ್‌ಪ್ಲೇ ಮಾಡುತ್ತಿವೆ. ಮಹಿಳಾ ಗ್ರಾಹಕರನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ ಸೀರೆ ಮಾರಾಟಗಾರರು.

ಉದ್ಯಾನನಗರಿಯ ಪಾಪ್ಯುಲರ್‌ ಸೀರೆ ಏರಿಯಾಗಳು

ಇನ್ನು ಉದ್ಯಾನನಗರಿಯಲ್ಲಿ ಸಾಕಷ್ಟು ಪಾಪ್ಯುಲರ್‌ ಸೀರೆ ಸೆಂಟರ್‌ಗಳಿವೆ. ಲಕ್ಷಗಟ್ಟಲೇ ಬೆಲೆ ಬಾಳುವ ಸೀರೆಗಳ ಶಾಪ್‌ಗಳಿಂದಿಡಿದು ಸಾವಿರದ ತನಕ ದೊರೆಯುವ ಸೀರೆಗಳ ಅಂಗಡಿಗಳಿವೆ. ಆಯಾ ವರ್ಗಕ್ಕೆ ಅನುಗುಣವಾಗಿ ಶಾಪಿಂಗ್‌ ಮಾಡುವ ಸೌಲಭ್ಯ ಕೂಡ ಇಲ್ಲಿದೆ. ಮಾಲ್‌ಗಳಲ್ಲಿನ ಸೀರೆ ಸೆಂಟರ್‌ಗಳನ್ನು ಹೊರತುಪಡಿಸಿದರೇ, ಎಲ್ಲವೂ ಗಿಜಿಗಿಜಿ ಎನ್ನುತ್ತಿವೆ. ಇನ್ನು, ಚಿಕ್ಕಪೇಟೆ, ಜಯನಗರ, ಮಲ್ಲೇಶ್ವರ, ರಾಜಾಜಿನಗರ, ಗಾಂಧಿಬಜಾರ್‌ ಸೇರಿದಂತೆ ನಾನಾ ಏರಿಯಾಗಳಲ್ಲಿರುವ ಬ್ರ್ಯಾಂಡೆಡ್‌ ಸೀರೆ ಅಂಗಡಿಗಳು, ಚಿಕ್ಕ ಪುಟ್ಟ ಸೀರೆ ಸೆಂಟರ್‌ಗಳು ಕೂಡ ಈಗಾಗಲೇ ಜಾಹೀರಾತು ಹಾಗೂ ಡಿಸ್ಕೌಂಟ್‌ಗಳನ್ನು ಪ್ರಕಟಿಸುವ ಮೂಲಕ ಮಹಿಳಾ ಗ್ರಾಹಕರನ್ನು ಸೆಳೆಯುತ್ತಿವೆ. ಇನ್ನುಮೊದಲಿನಿಂದಲೂ ತಮ್ಮ ಬ್ರಾಂಡ್‌ನಿಂದಲೇ ಹೆಸರು ಮಾಡಿರುವಂತ ಸುದರ್ಶನ್‌ ಸಿಲ್ಕ್ಸ್, ಮುಗ್ದಾ, ನೆಲ್ಲಿ ಸಿಲ್ಕ್‌, ವರ ಮಹಾಲಕ್ಷ್ಮೀ ಸೇರಿದಂತೆ ನಾನಾ ಬೃಹತ್‌ ಮಾಲ್‌ನಂತಿರುವ ಸೀರೆ ಶಾಪಿಂಗ್‌ ಸೆಂಟರ್‌ಗಳೂ ಎಂದಿನಂತೆ ತಮ್ಮ ರೆಗ್ಯುಲರ್‌ ಗ್ರಾಹಕರನ್ನು ಮೊಬೈಲ್‌ ಸಂದೇಶದ ಮೂಲಕವೇ ಆಹ್ವಾನಿಸುತ್ತಿವೆ. ಹಬ್ಬದ ಪ್ರಯುಕ್ತ ಆಫರ್‌ಗಳನ್ನು ನೀಡುತ್ತಿವೆ ಎನ್ನುತ್ತಾರೆ ಸೀರೆ ಶಾಪಿಂಗ್‌ ಎಕ್ಸ್‌ಪರ್ಟ್ಸ್.

ಇದನ್ನೂ ಓದಿ: Bangalore Fashion Week: ಆಗಸ್ಟ್‌ನಲ್ಲಿ ಆರಂಭವಾಗಲಿದೆ ಬೆಂಗಳೂರು ಫ್ಯಾಷನ್‌ ವೀಕ್‌

ಹಬ್ಬಕ್ಕೂ ಮುನ್ನವೇ ಸೀರೆ ಶಾಪಿಂಗ್‌ ಮಾಡುವ ಸದುಪಯೋಗಗಳು

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version