-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ನಲ್ಲಿ ಫ್ರೆಂಡ್‌ಶಿಪ್ ಡೇ ಫ್ಯಾಷನ್ (Friendshipday Fashion) ಥೀಮ್ ಟ್ರೆಂಡಿಯಾಗಿದೆ. ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಅಗಸ್ಟ್ ನ ಮೊದಲ ಭಾನುವಾರ ಸೆಲೆಬ್ರೇಟ್ ಫ್ರೆಂಡ್ ಶಿಪ್ ಡೇ ಫ್ಯಾಷನ್‌ನ ಕಾನ್ಸೆಪ್ಟ್ ಒಂದೇ ಎಂದೆನಿಸಿದರೂ ಥೀಮ್ ಹಾಗೂ ಸ್ಟೈಲಿಂಗ್ ಪ್ರತಿ ವರ್ಷ ಬದಲಾಗುತ್ತದೆ. ಫ್ರೆಂಡ್ಸ್ ಗ್ರೂಪ್‌ನಲ್ಲಿ ಒಮ್ಮೆ ಕಾಣಿಸಿಕೊಂಡ ಫ್ಯಾಷನ್ ಮುಂಬರುವ ವರ್ಷ ಕಾಣಿಸುವುದಿಲ್ಲ! ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಹಾಗಾದಲ್ಲಿ ಈ ಬಾರಿಯ ಫ್ರೆಂಡ್‌ಶಿಪ್ ಡೇ ಫ್ಯಾಷನ್ ಏನು? ಹೇಗೆಲ್ಲಾ ಕಾಣಿಸಿಕೊಳ್ಳಬಹುದು? ಮಾನ್ಸೂನ್ ಫ್ರೆಂಡ್‌ಶಿಪ್ ಡೇ ಲುಕ್ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.
ಫ್ರೆಂಡ್‌ಶಿಪ್ ಡೇಗೂ ಬಂತು ಫ್ಯಾಷನ್ ಥೀಮ್
ಫ್ರೆಂಡ್‌ಶಿಪ್ ಡೇ ಆಚರಿಸುವ ಸ್ನೇಹಿತರು ಹಾಗೂ ಅವರ ಗ್ರೂಪ್‌ಗಳು, ತಮ್ಮದೇ ಆದ ಥೀಮ್ ಫ್ಯಾಷನ್ ಫಾಲೋ ಮಾಡಲಾರಂಭಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಮಾಲ್-ಶಾಪ್‌ಗಳಲ್ಲಿ ಬಲ್ಕ್ ಆರ್ಡರ್ನಲ್ಲಿ ಫ್ಯಾಷನ್‌ವೇರ್‌ಗಳೂ ದೊರೆಯುತ್ತಿವೆ. ಕಾರ್ಪೋರೇಟ್ ಕಚೇರಿಯ ಉದ್ಯೋಗಿಗಳಾಗಿರಬಹುದು ಅಥವಾ ಕಾಲೇಜು ಹುಡುಗ-ಹುಡುಗಿಯರಾಗಿರಬಹುದು. ಅವರವರ ಗ್ರೂಪ್‌ನ ಅಭಿರುಚಿಗೆ ತಕ್ಕಂತೆ ಫ್ಯಾಷನ್ ಥೀಮ್‌ಗಳನ್ನು ರೂಪಿಸಿಕೊಂಡು ಫ್ಯಾಷನ್‌ವೇರ್‌ಗಳನ್ನು ಧರಿಸುವುದು ಟ್ರೆಂಡಿಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು, ಥೀಮ್ ಎಂದಾಕ್ಷಣಾ ಗುಂಪಿನ ಎಲ್ಲರ ಔಟ್‌ಫಿಟ್‌ಗಳು ಒಂದೇ ಆಗಿರಬೇಕೆಂದಿಲ್ಲ! ಒಟ್ಟಿನಲ್ಲಿ ಅವರೆಲ್ಲರೂ ಧರಿಸುವ ಯಾವುದೇ ಉಡುಪು ಅಥವಾ ಆಕ್ಸೆಸರೀಸ್ ಇಲ್ಲವೇ ಸ್ಟೈಲಿಂಗ್ ಒಂದೇ ಬಗೆಯದ್ದಾಗಿರಬಹುದು. ಅದು ಔಟಿಂಗ್‌ನದ್ದಾಗಿರಬಹುದು, ಪಾರ್ಟಿವೇರ್‌ನದ್ದಾಗಿರಬಹುದು ಅಥವಾ ಕೆಫೆ ಅಥವಾ ರೆಸ್ಟೋರೆಂಟ್‌ನಲ್ಲಿ ಕಾಲ ಕಳೆಯುವಂತದ್ದಾಗಿರಬಹುದು. ಆಯಾ ಗ್ರೂಪ್‌ನ ಐಡೆಂಟಿಟಿಗೆ ತಕ್ಕಂತೆ ಥೀಮ್ ಫ್ಯಾಷನ್ ಬದಲಿಸಿಕೊಳ್ಳಬಹುದು ಎನ್ನುತ್ತಾರೆ ಡಿಸೈನರ್ ರಿಯಾಜ್ ಹಾಗೂ ರಕ್ಷ್.
ಗ್ರೂಪ್‌ನ ಚಟುವಟಿಕೆಗಳಿಗೆ ತಕ್ಕಂತೆ ಸ್ಟೈಲಿಂಗ್
ಸ್ನೇಹಿತರ ಗ್ರೂಪ್‌ಗಳು ಕೇವಲ ಜೆನ್ ಜಿ, ಮಿಲೆನಿಯಲ್ ಜನರಿಂದ ಕೂಡಿರಬೇಕೆಂದಿಲ್ಲ, ಗ್ರೂಪ್‌ಗಳು ವಯಸ್ಸಾಗಿರುವ ಹಿರಿಯರದ್ದು ಆಗಿರಬಹುದು ಅಥವಾ ಸಮಾನ ಮನಸ್ಕರ ವಿಭಿನ್ನ ಗ್ರೂಪ್‌ಗಳಾಗಬಹುದು. ಆಯಾ ಗ್ರೂಪ್‌ನ ಚಟುವಟಿಕೆಗಳಿಗೆ ತಕ್ಕಂತೆ ಡ್ರೆಸ್ಸಿಂಗ್ ಹಾಗೂ ಸ್ಟೈಲಿಂಗ್ ಬದಲಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಇದನ್ನೂ ಓದಿ: Friendship Band Trend: ಹೊಸ ಜನರೇಷನ್‌ಗೆ ಪ್ರಿಯವಾದ 4 ವಿನ್ಯಾಸದ ಫ್ರೆಂಡ್ ಶಿಪ್ ಬ್ಯಾಂಡ್‌ಗಳಿವು
ಫ್ರೆಂಡ್‌ಶಿಪ್ ಡೇ ಸ್ಟೈಲಿಂಗ್‌ಗೆ ಸಿಂಪಲ್ ಟಿಪ್ಸ್
- ಫ್ರೆಂಡ್ಸ್ ಗ್ರೂಪ್ಗೆ ತಕ್ಕಂತೆ ಸ್ಟೈಲಿಂಗ್ ಮಾಡಿ.
- ಎಥ್ನಿಕ್, ವೆಸ್ಟರ್ನ್, ಸೆಮಿ ಎಥ್ನಿಕ್, ಬಿಂದಾಸ್ ಯಾವುದಾದರೂ ಸರಿಯೇ ಕಂಫರ್ಟಬಲ್ ಸ್ಟೈಲಿಂಗ್ ಚೂಸ್ ಮಾಡಿ.
- ಔಟಿಂಗ್ ಆದಲ್ಲಿ ಮಾನ್ಸೂನ್ ಸೀಸನ್ಗೆ ತಕ್ಕಂತೆ ಸ್ಟೈಲಿಂಗ್ ಮಾಡಿ.
- ಆದಷ್ಟೂ ಯಂಗ್ ಲುಕ್ ನೀಡುವ ಸ್ಟೈಲಿಂಗ್ ಅಳವಡಿಸಿಕೊಳ್ಳಿ
( ಲೇಖಕಿ ಫ್ಯಾಷನ್ ಪತ್ರಕರ್ತೆ )