-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ರಿಂಝ್ ಹೇರ್‌ಸ್ಟೈಲ್ ಮರಳಿದೆ. ನೋಡಲು ಯಂಗ್ ಲುಕ್ ನೀಡುವ ಈ ಹೇರ್‌ಸ್ಟೈಲ್ (Fringe Hairstyle) ಇದೀಗ ಕಾಲೇಜು ಯುವತಿಯರು ಮಾತ್ರವಲ್ಲ, ಎಲ್ಲ ವಯಸ್ಸಿನ ಮಹಿಳೆಯರು ಪಾಲಿಸತೊಡಗಿದ್ದಾರೆ. ಸುಲಭವಾಗಿ ಮಾಡಬಹುದಾದ ಈ ಹೇರ್‌ಸ್ಟೈಲ್ ಹೊಸ ರೂಪದಲ್ಲಿ ಮರಳಿರುವುದು ಹೇರ್‌ಸ್ಟೈಲ್ ಪ್ರಿಯರಿಗೆ ಸಂತಸ ತಂದಿದೆ. ಫ್ರಿಂಝ್ ಹೇರ್‌ಸ್ಟೈಲ್ ಆಕರ್ಷಕವಾಗಿ ಕಾಣಲು ಈ ಕೆಳಗಿನ ೫ ಅಂಶಗಳನ್ನು ಪಾಲಿಸಿ ನೋಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಮೊದಲು ಆಯ್ಕೆ ಮಾಡಿ
ಇದೀಗ ಫ್ರಿಂಝ್ ಹೇರ್‌ಸ್ಟೈಲ್‌ನಲ್ಲಿನಾನಾ ಬಗೆಯ ವಿನ್ಯಾಸಗಳು ಎಂಟ್ರಿ ನೀಡಿವೆ. ಶಾರ್ಟ್ ಫ್ರಿಂಝ್ ಹೇರ್, ಲಾಂಗ್ ಫ್ರಿಂಝ್, ಸೈಡ್ ಫ್ರಿಂಝ್, ಬ್ಯಾಕ್ ಫ್ರಿಂಝ್ ಹೀಗೆ ಫಂಕಿ ಲುಕ್ ನೀಡುವಂತವು ಲಗ್ಗೆ ಇಟ್ಟಿವೆ. ಯಾವ ಬಗೆಯದ್ದು ನಿಮಗೆ ಹೊಂದುತ್ತದೆ ಎಂಬುದನ್ನು ಮನಗಂಡು ವಿನ್ಯಾಸಕ್ಕೆ ಮೊರೆ ಹೋಗಿ.
ಪೋನಿಟೈಲ್ ಹೇರ್‌ಸ್ಟೈಲ್‌ಗಾದಲ್ಲಿ ಹೀಗೆ ಮಾಡಿ
ಫ್ರಂಟ್ ಫ್ರಿಂಝ್ ಹೇರ್‌ಸ್ಟೈಲ್ ಕೇವಲ ಫ್ರೀ ಹೇರ್‌ಸ್ಟೈಲ್‌ಗೆ ಮಾತ್ರವಲ್ಲ, ಪೋನಿಟೈಲ್‌ಗೂ ಸೂಟ್ ಆಗುತ್ತದೆ. ಆದರೆ, ನಿಮ್ಮ ಮುಖ ಯಾವ ಆಕಾರದಲ್ಲಿದೆ, ಆ ಹೇರ್‌ಸ್ಟೈಲ್ ಸೂಟ್ ಆಗುತ್ತದೆಯೇ ಎಂಬುದನ್ನು ಮನಗಾಣುವುದು ಮುಖ್ಯ. ಇಲ್ಲವಾದಲ್ಲಿ ನೋಡಲು ಕೆಟ್ಟದಾಗಿಯೂ ಕಾಣಬಹುದು.
ಇದನ್ನೂ ಓದಿ | Winter Fashion | ಚುಮು ಚುಮು ಚಳಿಗೆ ಲಗ್ಗೆ ಇಟ್ಟ ಮಫ್ಲರ್ ಫ್ಯಾಷನ್
ದೇಸಿ ಲುಕ್ ನೀಡುವುದಾದಲ್ಲಿ ಗಮನಿಸಿ
ಕೆಲವರು ದೇಸಿ ಲುಕ್ ಬೇಕೆಂದಲ್ಲಿ ಜಡೆಗೂ ಫ್ರಂಟ್ ಫ್ರಿಂಝ್ ಹೇರ್‌ಸ್ಟೈಲ್ ಮಾಡಬಹುದು. ಮುಂಭಾಗದ ಫ್ರಿಂಝ್ ಹೇರ್‌ಸ್ಟೈಲ್ ಹಿಂದೆ ಸೆಂಟರ್ ಪಫ್ ಮಾಡಿ ಜಡೆ ಹೆಣೆಯಬಹುದು. ಇದು ಕೊಂಚ ಕಷ್ಟ. ದೇಸಿ ಹೇರ್‌ಸ್ಟೈಲ್‌ಗೆ ಹೀಗೆ ಮಾಡಿದಲ್ಲಿ ಮಾತ್ರ ನೋಡಲು ಚೆನ್ನಾಗಿ ಕಾಣುತ್ತದೆ ಎಂಬುದು ನೆನಪಿರಲಿ ಎನ್ನುತ್ತಾರೆ ಗ್ರೂಮಿಂಗ್ ಎಕ್ಸ್‌ಪರ್ಟ್‌ಗಳು.
ಫ್ರಿಂಝ್ ಕಲರಿಂಗ್
ಇದೀಗ ಫ್ರಿಂಝ್ ಹೇರ್‌ಸ್ಟೈಲ್‌ಗೂ ಸ್ಟ್ರೀಕ್ಸ್ ಹಾಗೂ ಗ್ಲೋಬಲ್ ಕಲರಿಂಗ್ ಮಾಡುವುದು ಸಾಮಾನ್ಯವಾಗಿದೆ. ಫಂಕಿ ಲುಕ್ ಬೇಕಿದ್ದಲ್ಲಿ ಇದನ್ನು ಪಾಲಿಸಬಹುದು. ಇಲ್ಲವಾದಲ್ಲಿ ನ್ಯಾಚುರಲ್ ಆಗಿ ಕಾಣಿಸಲು ಬಿಟ್ಟುಬಿಡಿ.
ಫ್ರಿಂಝ್ ಕ್ರಾಪ್ ಮಾಡುವುದಾದಲ್ಲಿ
ಫ್ರಿಂಝ್ ಹೇರ್‌ಸ್ಟೈಲ್‌ನಲ್ಲೂ ಕ್ರಾಪ್ ತೆಗೆಯಬಹುದು ಆದರೆ, ಇದು ಬೇರೇ ರೀತಿಯದ್ದಾಗಿ ಕಾಣುತ್ತದೆ. ಸೆಂಟರ್ ತೆಗೆದಲ್ಲಿ ದೇಸಿ ಲುಕ್ ಕಾಣುತ್ತದೆ. ಇನ್ನು ಸೈಡ್ ಬಾಚುವುದು ಎಲ್ಲರಿಗೂ ಸೂಟ್ ಆಗುವುದಿಲ್ಲ. ಸದಾ ವೆಸ್ಟರ್ನ್ ಔಟ್‌ಫಿಟ್ ಧರಿಸುವವರಿಗೆ ಈ ಹೇರ್‌ಸ್ಟೈಲ್ ಚೆನ್ನಾಗಿ ಕಾಣಿಸುತ್ತದೆ.
ಫ್ರಿಂಝ್ ಹೇರ್‌ಸ್ಟೈಲ್ ಟಿಪ್ಸ್
- ಉದ್ದ ಮುಖದವರಿಗೆ ಈ ಹೇರ್‌ಸ್ಟೈಲ್ ಹೊಂದುತ್ತದೆ.
- ದುಂಡಗಿನ ಮುಖದವರಿಗೆ ಶಾರ್ಟ್ ಫ್ರಿಂಝ್ ಓಕೆ.
- ಚಿಕ್ಕ ಮುಖದವರಿಗೆ ಈ ಹೇರ್‌ಸ್ಟೈಲ್ ಮತ್ತಷ್ಟು ಚಿಕ್ಕ ಮುಖದಂತೆ ಬಿಂಬಿಸುತ್ತದೆ.
- ಅಗಲ ಹಣೆಯವರಿಗೆ ಇದು ಹೇಳಿ ಮಾಡಿಸಿದ ಹೇರ್‌ಸ್ಟೈಲ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Fashion News | ಬೆರಗು ಮೂಡಿಸಿದ ಮಿಲಾನ್ ಫ್ಯಾಷನ್ ವೀಕ್‌ನ ಡಿಸೈನರ್‌ವೇರ್ಸ್