Site icon Vistara News

Funky Jewel Fashion | ಫ್ಯಾಷನ್ ಪ್ರೇಮಿಗಳ ಕೈ ಬೆರಳನ್ನು ಸುತ್ತುವರಿದ ಹಾವಿನ ಉಂಗುರಗಳು

Funky Jewel Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫಂಕಿ ಲುಕ್ ನೀಡುವ ಹಾವಿನ ವಿನ್ಯಾಸದ ಬೆರಳಿನ ಉಂಗುರಗಳು ಫ್ಯಾಷನ್ (Funky Jewel Fashion) ಪ್ರಿಯ ಮಾಡರ್ನ್ ಹುಡುಗಿಯರ ಕೈಗಳ ಅಂದವನ್ನು ಹೆಚ್ಚಿಸುತ್ತಿವೆ. ನೋಡಲು ತಕ್ಷಣಕ್ಕೆ ಭಯ ಎಂದೆನಿಸಿದರೂ, ಯುವತಿಯರ ಬೆರಳುಗಳನ್ನು ಮನಮೋಹಕವಾಗಿ ಸುತ್ತುವರಿದಿವೆ.

ಮೊದಲೆಲ್ಲಾ ಹಾವಿನ ಚಿತ್ತಾರ ಅಥವಾ ಹಾವಿನ ಪ್ರತಿಕೃತಿ ಇರುವಂತಹ ಆಕ್ಸೆಸರೀಸ್‌ಗಳನ್ನು ಧರಿಸಲು ಮಹಿಳೆಯರು ಹಿಂಜರಿಯುತ್ತಿದ್ದರು. ಮಡಿ ಹೆಸರಲ್ಲಿ ಆದಷ್ಟೂ ದೂರವೇ ಉಳಿದಿರುತ್ತಿದ್ದರು. ಆದರೆ, ಇದೀಗ ಫ್ಯಾಷನ್ ಎಂಬುದು ಎಲ್ಲವನ್ನು ಮರೆಸಿದೆ. ರೆಪ್ಟೈಲ್ಸ್ ಕೆಟಗರಿಯಲ್ಲಿ ಬಿಡುಗಡೆಯಾಗುವ ಜ್ಯುವೆಲರಿಗಳಲ್ಲಿ ಇದೀಗ ಸ್ನೇಕ್ ಆಕ್ಸೆಸರೀಸ್‌ಗಳು ಆಗಮಿಸಿವೆ. ಚೈನಿಗೆ ನೇತಾಡುವ ಹಾವಿನ ಪೆಂಡೆಂಟ್, ಕಿವಿಯೊಲೆಗಳು, ಬ್ಯಾಂಗಲ್‌ಗಳು ಹಾಗೂ ಕೈಬೆರಳಿನ ಉಂಗುರಗಳು ಎಂಟ್ರಿ ನೀಡಿವೆ. ಸದ್ಯಕ್ಕೆ ಕೈ ಬೆರಳಿಗೆ ಧರಿಸುವ ವೆರೈಟಿ ಸ್ನೇಕ್ ಫಿಂಗರ್ ರಿಂಗ್ ಟ್ರೆಂಡಿಯಾಗಿದೆ.

ಇದನ್ನೂ ಓದಿ | k–pop Stars Fashion | ಕೆ-ಪಾಪ್‌ ಸ್ಟಾರ್ಸ್ ಕ್ರೇಝಿ ಫ್ಯಾಷನ್‌ಗೆ ಯಂಗ್‌ಸ್ಟರ್ಸ್ ಫಿದಾ

ಸ್ನೇಕ್ ಆಕ್ಸೆಸರೀಸ್‌
ಈ ಹಿಂದೆ ಸ್ನೇಕ್ ಆಕ್ಸೆಸರೀಸ್ ಎಂದಾಕ್ಷಣ, ಕೇವಲ ನೃತ್ಯ, ನಾಟಕ ಇಲ್ಲವೇ ಥೀಮ್ ಶೋಗಳಲ್ಲಿ ಮಾತ್ರ ಕಾಣಬಹುದಾಗಿತ್ತು. ಇದೀಗ ಇವಕ್ಕೂ ಫ್ಯಾಷನ್ ಟಚ್ ದೊರಕಿದೆ. ಬ್ಲಾಕ್ ಹಾಗೂ ವೈಟ್ ಮೆಟಲ್ ಸೇರಿದಂತೆ ನಾನಾ ಮೆಟಲ್‌ನಲ್ಲಿ ಡಿಸೈನ್ ಮಾಡಿದ ಮಿನಿ ಹಾಗೂ ಮೆಗಾ ಉಂಗುರಗಳು, ಪೆಂಡೆಂಟ್‌ಗಳು ಹಾಗೂ ಬ್ಯಾಂಗಲ್‌ಗಳು ದೊರಕಲಾರಂಭಿಸಿವೆ. ಇವೆಲ್ಲದಕ್ಕಿಂತ ಹೆಚ್ಚಾಗಿ ಸದ್ಯಕ್ಕೆ ಮರಿ ಹಾವಿನ ಉಂಗುರಗಳು ಹೆಚ್ಚು ಟ್ರೆಂಡಿಯಾಗಿವೆ. ಸಿಲ್ವರ್ ಜುವೆಲರಿಗಳಲ್ಲೂ ಇವು ದೊರೆಯಲಾರಂಭಿಸಿವೆ. ಇವುಗಳಲ್ಲೆ ಸಾಕಷ್ಟು ಬಗೆಯ ವಿನ್ಯಾಸದವು ಲಭ್ಯ ಎನ್ನುತ್ತಾರೆ ಜ್ಯುವೆಲರಿ ಸ್ಟೈಲಿಸ್ಟ್ ರಜತ್.

ಇನ್ನು, ಟ್ರೆಡಿಷನಲ್ ರೂಲ್ಸ್ ಹಾಗೂ ಮೂಡನಂಬಿಕೆಗಳನ್ನು ನಂಬದ ಫ್ಯಾಷನ್ ಪ್ರಿಯ ಹುಡುಗಿಯರಲ್ಲಿ ಇವುಗಳ ಬಳಕೆ ಹೆಚ್ಚಾಗಿರುವುದನ್ನು ಕಾಣಬಹುದು. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಸುತ್ತಮುತ್ತ ಈ ಡಿಸೈನ ಆಕ್ಸೆಸರೀಸ್ ಲಭ್ಯ. ಆನ್ಲೈನ್ನಲ್ಲೂ ಇವು ದೊರೆಯುತ್ತಿವೆ ಎನ್ನುತ್ತಾರೆ ಮಾಡೆಲ್ ದೀಪ್ತಿ.

ಫ್ಯಾಷನ್ ವಿದ್ಯಾರ್ಥಿ ದೀಕ್ಷಾ ಹೇಳುವಂತೆ, ʻʻರೆಪ್ಟೈಲ್ಸ್ ಆಕ್ಸೆಸರೀಸ್ ಕೆಟಗರಿಯಲ್ಲಿ ದೊರೆಯುತ್ತಿದ್ದ ನಾನಾ ವಿನ್ಯಾಸಗಳಲ್ಲಿ ಅಲ್ಲೊಂದು ಇಲ್ಲೊಂದು ಸ್ನೇಕ್ ನೆಕ್ಪೀಸ್ ಅಥವಾ, ಪೆಂಡೆಂಟ್, ಉಂಗುರಗಳು ಲಭ್ಯವಿದ್ದವು. ನಾನು ಒಮ್ಮೆ ಇದನ್ನು ಕೊಂಡು ಧರಿಸಿದೆ. ಆದರೆ, ಧರಿಸಿದಾಗ ಏನೋ ಒಂಥರ ಭಯ ಆರಂಭವಾಯಿತು. ಹೆಚ್ಚು ದಿನ ಧರಿಸಲಿಲ್ಲ! ನದಿಯೊಂದರಲ್ಲಿ ತೇಲಿ ಬಿಟ್ಟೆ. ಆದರೆ, ಇದೀಗ ಈ ಸ್ನೇಕ್ ಆಕ್ಸೆಸರೀಸ್‌ಗಳು ಫಂಕಿ ಜ್ಯುವೆಲರಿ ಲೋಕದಲ್ಲಿ ಟ್ರೆಂಡಿಯಾಗಿರುವುದನ್ನು ಕೇಳಿ ವಿಸ್ಮಿತಳಾಗಿದ್ದೇನೆ” ಎನ್ನುತ್ತಾರೆ.

ಸ್ಪ್ರಿಂಗ್ ಡಿಸೈನ್‌ನಲ್ಲಿ ಸ್ನೇಕ್ ಉಂಗುರಗಳು
ಬಹುತೇಕ ಸ್ನೇಕ್ ಡಿಸೈನ್‌ನ ಉಂಗುರಗಳು ಸ್ಪ್ರಿಂಗ್‌ನಂತೆ ವಿನ್ಯಾಸ ಹೊಂದಿರುತ್ತವೆ. ಹಾಗಾಗಿ ಇವು ಧರಿಸಲು ಫ್ಲೆಕ್ಸಿಬಲ್ ಆಗಿರುತ್ತವೆ.


(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ | Jewel Fashion| ಸೆಲೆಬ್ರಿಟಿ ಲುಕ್‌ಗಾಗಿ ಆಕರ್ಷಕ ಶಾಂಡೆಲಿಯರ್‌ ಇಯರಿಂಗ್ಸ್‌

Exit mobile version