ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವರ್ಷದ ಫೆಸ್ಟೀವ್ ಸೀಸನ್ ಸೀರೆ ಶಾಪಿಂಗ್ (Ugadi Saree Shopping) ಎಲ್ಲೆಡೆ ಆರಂಭವಾಗಿದೆ. ಮುಂಬರುವ ಯುಗಾದಿ ಹಬ್ಬಕ್ಕೆ ಈಗಾಗಲೇ ಭರ್ಜರಿ ಸೀರೆ ಶಾಪಿಂಗ್ ರಾಜ್ಯದೆಲ್ಲೆಡೆ ಶುರುವಾಗಿದ್ದು, ಚಿಕ್ಕ ಸೀರೆ ಅಂಗಡಿಯಿಂದ ಹಿಡಿದು ದೊಡ್ಡ ಸೀರೆ ಶಾಪಿಂಗ್ ಸೆಂಟರ್‌ಗಳಲ್ಲಿ, ಮಾಲ್‌ಗಳ ಬ್ರಾಂಡೆಡ್ ಸೀರೆ ಶಾಪ್‌ಗಳಲ್ಲೂ ಶಾಪಿಂಗ್ ಮಾಡುವ ಮಹಿಳೆಯರ ಜಾತ್ರೆಯೇ ನೆರೆಯಲಾರಂಭಿಸಿದೆ.
ಸೀರೆಗಳ ಶಾಪಿಂಗ್‌ಗೆ ಸಕಾಲ
“ಯುಗಾದಿ ಹಬ್ಬ ಹಿಂದೂಗಳ ಹೊಸ ವರ್ಷದ ದೊಡ್ಡ ಹಬ್ಬ. ಮನೆಯವರೆಲ್ಲಾ ಹೊಸ ಉಡುಗೆತೊಡುಗೆ ಧರಿಸಿ ಹಬ್ಬ ಆಚರಿಸುವುದು ಮೊದಲಿನಿಂದಲೂ ನಡೆದು ಬಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಹಿಳೆಯರು ಈ ಹಬ್ಬಕ್ಕೆ ಸೀರೆ ಕೊಳ್ಳುವುದು ಮೊದಲಿಗಿಂತ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ಸೀರೆ ಅಂಗಡಿಗಳು ಕೂಡ ಲೆಕ್ಕವಿಲ್ಲದಷ್ಟು ಬಗೆಯ ಸೀರೆಗಳನ್ನು ಅನಾವರಣಗೊಳಿಸಿವೆ. ಲಕ್ಷಗಟ್ಟಲೇ ರೇಷ್ಮೆ ಸೀರೆಗಳಿಂದಿಡಿದು, ನೂರಾರು ರೂ.ಗಳಿಗೆ ಕಡಿಮೆ ಬೆಲೆಯಲ್ಲಿ ದೊರೆಯುವ ಬಗೆಬಗೆಯ ಕಾಟನ್ ಸೀರೆಗಳು ಕೂಡ ಬಂದಿವೆ. ಶ್ರೀಮಂತ ಮಹಿಳೆಯರು ಮಾತ್ರವಲ್ಲ, ಮಧ್ಯಮ ಹಾಗೂ ಸಾಮಾನ್ಯ ಮಹಿಳೆಯರು ಹಾಗೂ ಯುವತಿಯರು ಕೂಡ ಸೀರೆ ಶಾಪಿಂಗ್‌ನಲ್ಲಿ ಈಗಾಗಲೇ ನಿರತರಾಗಿದ್ದಾರೆ” ಎನ್ನುತ್ತಾರೆ ಸೀರೆ ಶಾಪ್‌ನ ಮಾರಾಟಗಾರರು. ಅವರ ಪ್ರಕಾರ, ಹಬ್ಬದ ಸೀಸನ್‌ನಲ್ಲಿ ಸಾಕಷ್ಟು ಬಗೆಯ ಡಿಸೈನ್‌ನ ಸೀರೆಗಳು ದೊರೆಯುತ್ತವೆ. ಹಾಗಾಗಿ ಈ ಸೀಸನ್ ಸೀರೆ ಶಾಪಿಂಗ್‌ಗೆ ಸಕಾಲ ಎನ್ನುತ್ತಾರೆ.
ಬೇಡಿಕೆ ಸೃಷ್ಟಿಸಿಕೊಂಡಿರುವ ಸೀರೆಗಳಿವು
ಬಾರ್ಡರ್ ಇರುವಂತಹ ರೇಷಿಮೆ ಸೀರೆಗಳು, ಸೆಮಿ ಸಿಲ್ಸ್ಕ್, ಜಾರ್ಜೆಟ್, ಬನಾರಸ್ ಪ್ರಿಂಟೆಡ್, ಪ್ರಿಂಟೆಡ್ ಅರ್ಗಾನ್ಜಾ, ಮಾನೋಕ್ರೋಮ್ ಅರ್ಗಾನ್ಜಾ ಸೀರೆ, ಕಾಟನ್ ಸಿಲ್ಕ್ಸ್, ಕ್ರೇಪ್ ಸಿಲ್ಕ್ಸ್, ಮೈಸೂರು 3 ಡಿ ಪ್ಯೂರ್ ಸಿಲ್ಕ್ಸ್, ಪ್ರಿಂಟೆಡ್ ಡೋಲಾ ಸಿಲ್ಕ್ಸ್, ಎಂಬ್ರಾಯ್ಡರಿ ಡಿಸೈನರ್ ಸೀರೆಗಳು ಸೇರಿದಂತೆ ನಾನಾ ಬಗೆಯವು ಹೊಸ ಹೊಸ ವಿನ್ಯಾಸದಲ್ಲಿ ಬಂದಿವೆ.
ರಿಪ್ಲಿಕಾ ಸೀರೆಗಳಿಗೆ ಭಾರಿ ಡಿಮ್ಯಾಂಡ್
ಲಕ್ಷಾಂತರ ರೂ. ಬೆಲೆ ಬಾಳುವ ಗ್ರ್ಯಾಂಡ್ ದುಬಾರಿ ಸೀರೆಗಳನ್ನೇ ಹೋಲುವ ಕಡಿಮೆ ಬೆಲೆಯ ರಿಪ್ಲೀಕಾ ಸೀರೆಗಳು ಇದೀಗ ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ. ನೋಡಲು ಆಕರ್ಷಕವಾಗಿ ಕಾಣುವ ಈ ಸೀರೆಗಳು ನೋಡಲು ಥೇಟ್ ಓರಿಜಿನಲ್‌ನಂತೆ ಕಂಡರೂ ಇವು ಅವಲ್ಲ! ಆದರೆ, ಫೋಟೋಶೂಟ್ ಹಾಗೂ ಸೆಲೆಬ್ರೆಟಿ ಫೀಲ್‌ಗಾಗಿ ಇವನ್ನು ಖರೀದಿಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಫರ್ಟ್ಸ್.
ಯುಗಾದಿ ಸೀರೆ ಖರೀದಿಸುವವರ ಗಮನಕ್ಕೆ
- ಟ್ರೆಂಡಿ ಫೆಸ್ಟೀವ್ ಸೀಸನ್ಗೆ ಹೊಂದುವಂತಹ ಸೀರೆಗಳನ್ನು ಖರೀದಿಸಿ.
- ಗ್ರ್ಯಾಂಡ್ ಲುಕ್ ಸೀರೆಗಳನ್ನು ಆಯ್ಕೆ ಮಾಡಿ.
- ಅತ್ಯುತ್ತಮ ಡಿಸೈನ್ನವು ಈ ಸೀಸನ್‌ನಲ್ಲಿ ಲಭ್ಯ. ಚೂಸ್ ಮಾಡಿಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ramzan Fashion: ಇಫ್ತಾರ್ ಪಾರ್ಟಿ ಫ್ಯಾಷನ್‌ನಲ್ಲಿ 3 ಶೈಲಿಯ ಗ್ರ್ಯಾಂಡ್ ಸಲ್ವಾರ್ ಸೂಟ್ಸ್ ಹಂಗಾಮ!