-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿತ್ರ-ವಿಚಿತ್ರ ವಿನ್ಯಾಸದಲ್ಲಿ ಕಲಾತ್ಮಕವಾಗಿ ಮಾಡಿದ ಹೇರ್‌ಸ್ಟೈಲ್ (Hairstyle Craze) ಫೋಟೋಗಳು ಸೋಷಿಯಲ್ ಮೀಡಿಯಾದ ಬ್ಯೂಟಿ ಬ್ಲಾಗ್-ವ್ಲಾಗ್‌ಗಳಲ್ಲಿ ಆನ್‌ಲೈನ್ ಪ್ರೇಮಿಗಳನ್ನು ಆಕರ್ಷಿಸಿವೆ. ಪ್ರಯೋಗಾತ್ಮಕವಾಗಿ ಮಾಡಿದ ನಾನಾ ಶೈಲಿಯ ಈ ಕೂದಲಿನ ವಿನ್ಯಾಸಗಳಿಗೆ ಸೋಷಿಯಲ್ ಮೀಡಿಯಾ ವೇದಿಕೆ ಕಲ್ಪಿಸಿದ್ದು, ಹೇರ್ ಸ್ಟೈಲಿಂಗ್ ಪ್ರಿಯರಲ್ಲಿ ಈ ಕ್ರೇಜ್ ಹುಟ್ಟು ಹಾಕಿದೆ.
ಚಿತ್ರ-ವಿಚಿತ್ರ ಹೇರ್ ಸ್ಟೈಲಿಂಗ್
ಹೇರ್ ಸ್ಟೈಲಿಸ್ಟ್ ರಿಚರ್ಡ್ ಹೇಳುವಂತೆ, ತಲೆಗೂದಲನ್ನು ವಿಭಿನ್ನ ಕಾನ್ಸೆಪ್ಟ್‌ಗಳಲ್ಲಿ ಬಾಚುವುದು, ಕೂದಲನ್ನು ಪ್ರಯೋಗಾತ್ಮಕವಾಗಿ ಸಿಂಗರಿಸಿ ಇಲ್ಲವೇ ಅಲಂಕರಿಸುವುದು. ಅವರವರ ಆಯ್ಕೆಗೆ ತಕ್ಕಂತೆ ಥೀಮ್‌ಗೆ ತಕ್ಕಂತೆ ಕೂದಲನ್ನು ಆರ್ಟ್‌ನ ಒಂದು ಭಾಗವಾಗಿಸುವುದು. ಇವೆಲ್ಲಾ ಇಂದು ಸೋಷಿಯಲ್ ಮೀಡಿಯಾದ ಬ್ಯೂಟಿ ಪ್ರಿಯರ ಬ್ಲಾಗ್ ಹಾಗೂ ವ್ಲಾಗ್‌ಗಲ್ಲಿ ಕಂಡು ಬರುತ್ತಿವೆ. ಇನ್ನು ಬ್ಯೂಟಿ ಎಕ್ಸ್‌ಪರ್ಟ್ ತನ್ಯಾ ಪ್ರಕಾರ, ವಿಭಿನ್ನ, ವೈವಿದ್ಯಮಯ ಊಹೆಗೂ ಮೀರಿದ ಕೂದಲಿನ ವಿನ್ಯಾಸದಲ್ಲಿ ಕೆಲವು ಆಕರ್ಷಕ ಹೇರ್ ಸ್ಟೈಲಿಂಗ್ ಲಿಸ್ಟ್‌ಗೆ ಸೇರಿದರೇ ಇನ್ನು ಕೆಲವು ವಿಯರ್ಡ್ ಬ್ಯೂಟಿ ಹೇರ್ ಸ್ಟೈಲಿಂಗ್ ವಿಭಾಗಕ್ಕೆ ಸೇರುತ್ತವಂತೆ.
ಇನ್ನು ಹೇರ್ ಡಿಸೈನಿಂಗ್ ಅಥವಾ ಆರ್ಟಿಸ್ಟಿಕ್ ಹೇರ್‌ಸ್ಟೈಲ್ ಮಾಡಲು ಬಯಸುವವರು ಮೊದಲು ಒಂದಿಷ್ಟು ಬ್ಯೂಟಿ ಬ್ಲಾಗ್‌ಗಳಲ್ಲಿ ಈ ಕುರಿತಂತೆ ಸಮೀಕ್ಷೆ ಮಾಡಿ ನಂತರ ತಮ್ಮ ಕೂದಲಿನ ಟೆಕ್ಷ್ಚರ್‌ಗೆ ಹೊಂದುವಂತೆ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲದಕ್ಕಿಂತ ಮೊದಲು ಕೂದಲು ಆರೋಗ್ಯವಾಗಿರಬೇಕು. ವಾಲ್ಯೂಮ್ ಹೊಂದಿರಬೇಕು ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್ ಸ್ವಪ್ನಾ ಭವ್ನಾನಿ.
ಹೇರ್ ಸ್ಟೈಲಿಂಗ್ ಮಾಡುವ ಮುನ್ನ
ಸೋಷಿಯಲ್ ಮೀಡಿಯಾದಲ್ಲಿನ ಹೇರ್ ಸ್ಟೈಲಿಂಗ್ ಕ್ರೇಜ್‌ಗೆ ನೀವು ಸಾಥ್ ನೀಡುವುದಾದಲ್ಲಿ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
- ಹೇರ್ ಎಕ್ಸ್‌ಪರ್ಟ್ ಬಳಿ ನಿಮ್ಮ ಥೀಮ್ ಬಗ್ಗೆ ಮೊದಲು ಚರ್ಚಿಸಿ.
- ಹೇರ್ ಡಿಸೈನಿಂಗ್ಗೆ ಬೇಕಾಗುವ ಪರಿಕರ ಹಾಗೂ ವಸ್ತುಗಳನ್ನು ತೆಗೆದಿರಿಸಿ.
- ಮೇಕಪ್ ಮುಗಿದ ನಂತರ ಹೇರ್ ಡಿಸೈನಿಂಗ್ ಮಾಡುವುದು/ಮಾಡಿಸುವುದು ಒಳಿತು.
- ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವಾಗ ಹ್ಯಾಶ್ಟ್ಯಾಗ್ ಬಳಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Mango Nail Art: ಸಮ್ಮರ್ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್ ಆರ್ಟ್!