ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹನ್ ಕೇಶವಿನ್ಯಾಸ ಇಂದು ತಾರೆಯರ ಫಂಕಿ ಹೇರ್‌ಸ್ಟೈಲ್ (Hairstyle Trend) ಸ್ಟೇಟ್‌ಮೆಂಟ್‌ನಲ್ಲಿ ಟ್ರೆಂಡಿಯಾಗಿದೆ. ಸದ್ಯ ಬಿಂದಾಸ್ ಫಂಕಿ ಹೇರ್‌ಡೂ ಕೆಟಗರಿಯಲ್ಲಿ ಟಾಪ್ ಸ್ಥಾನದಲ್ಲಿದೆ. ಹಾಲಿವುಡ್ ತಾರೆಯರಿಂದ ಪ್ರೇರೇಪಿತಗೊಂಡು ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದೆ.
ಏನಿದು ಹನ್ ಹೇರ್‌ಸ್ಟೈಲ್?
ಇತ್ತ ಕಂಪ್ಲೀಟ್ ಬನ್ ಹೇರ್‌ಸ್ಟೈಲೂ ಅಲ್ಲ, ಅತ್ತ ಕಂಪ್ಲೀಟ್ ಪೋನಿಟೇಲೂ ಅಲ್ಲ. ಅರ್ಧಂಬರ್ಧ ಮಿಕ್ಸ್ ಕಾಂಬಿನೇಷನ್‌ನ ಹೇರ್‌ಸ್ಟೈಲೇ ಈ ಹನ್ ಹೇರ್‌ಸ್ಟೈಲ್.
ತಲೆಯ ಮುಂಭಾಗದ ಕೂದಲು ನೀಟಾಗಿ ಕಂಡರೆ ಇನ್ನರ್ಧ ಫ್ರೀ ಹೇರ್‌ಸ್ಟೈಲ್‌ನಿಂದ ಕೂಡಿರುತ್ತದೆ. ಕೆಲವರಿಗೆ ಫಂಕಿಯಾಗಿ ಕಂಡರೆ, ಇನ್ನು ಕೆಲವರಿಗೆ ಇದು ಬಿಂದಾಸ್ ಆಗಿ ಕಾಣುತ್ತದೆ. ಅರ್ಧದಷ್ಟು ಕೂದಲನ್ನು ಕಟ್ಟಿ ತುರುಬು ಹಾಕಿದಂತೆ ಕಾಣುವ ಬನ್ ಪ್ಲಸ್ ಫ್ರೀ ಹೇರ್‌ಸ್ಟೈಲ್‌ನ ಮತ್ತೊಂದು ಮಾದರಿಯೇ ಇದು. ಅಂದರೆ ಅರ್ಧ ಬನ್ ಸ್ಟೈಲ್. ಇನ್ನರ್ಧ ಹಾರಾಡುತ್ತಿರುವ ಕೂದಲು ಎಂದರೂ ತಪ್ಪಿಲ್ಲ ಎನ್ನುತ್ತಾರೆ ಹೇರ್ ಗ್ರೂಮಿಂಗ್ ಸ್ಪೆಷಲಿಸ್ಟ್ ಮೀರಜ್.
ಸಿನಿಮಾ ತಾರೆಯರ ಹೇರ್ಸ್ಟೈಲ್
ಇನ್ನು ಸಿನಿಮಾ ಹೇರ್‌ಸ್ಟೈಲಿಸ್ಟ್ ಜಾನ್ ಪ್ರಕಾರ, ಸಿನಿಮಾ ತಾರೆಯರ ಔಟಿಂಗ್ ಇಲ್ಲವೇ ಹಾಲಿಡೇ ಅಥವಾ ಬಿಂದಾಸ್ ಹೇರ್‌ಸ್ಟೈಲ್ ಲಿಸ್ಟ್‌ಗೆ ಇದು ಸೇರಿದೆ.
ಇದನ್ನೂ ಓದಿ | Online Beauty Trend: ವೈರಲ್ ಆದ ಹೇರ್ ಕಲರ್ ಸ್ಟೈಲ್
ಹಾಲಿವುಡ್ ಹಾಗೂ ಬಾಲಿವುಡ್ ತಾರೆಯರ ಫೇವರಿಟ್ ಹೇರ್‌ಸ್ಟೈಲ್ ಲಿಸ್ಟ್‌ನಲ್ಲಿರುವ ಹನ್ ಹೇರ್‌ಸ್ಟೈಲ್ ಇದೀಗ ಸಿನಿಮಾಗಳಲ್ಲೂ ಸ್ಥಾನ ಗಿಟ್ಟಿಸಿಕೊಂಡಿದೆ. ಏಂಜಲೀನಾ ಜೋಲಿಯಿಂದ ಹಿಡಿದು ಪಾಪ್ ಸ್ಟಾರ್ ಬ್ರಿಟ್ನಿ, ಬಾಲಿವುಡ್ ತಾರೆಯರಾದ ಪ್ರಾಚಿ ದೇಸಾಯಿ, ರಶ್ಮಿ ದೇಸಾಯಿ, ರಕುಲ್ ಪ್ರೀತ್, ಊರ್ವಶಿ, ಸಮಂತಾ, ಅನನ್ಯಾ, ತಾರಾ ಸುತಾರಿಯಾವರೆಗೂ ಎಲ್ಲರಿಗೂ ಪ್ರಿಯವಾಗಿದೆ.
ರ್‍ಯಾಂಪ್‌ನಲ್ಲೂ ಜಾದೂ
ನ್ಯೂಯಾರ್ಕ್ ಫ್ಯಾಷನ್, ಮಿಲಾನ್, ಪ್ಯಾರೀಸ್ ಮಾಡೆಲ್‌ಗಳ ರ್‍ಯಾಂಪ್ ಹೇರ್‌ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲೂ ಕಾಣಿಸಿಕೊಂಡಿದೆ. ಇದರೊಂದಿಗೆ ಹನ್ ಸ್ಟೈಲ್ ಹಾಫ್ ಕಲರ್ಡ್‌ನಲ್ಲೂ ಫ್ಯಾಷನ್‌ಪ್ರಿಯರ ಪ್ರೀತಿಗೆ ಪಾತ್ರವಾಗಿದೆ. ಸದ್ಯಕ್ಕೆ ನಿಧಾನಗತಿಯಲ್ಲಿ ಹಾಫ್ ರೈನ್‌ಬೋ ಹೇರ್ ಕಲರ್ ಕಾನ್ಸೆಪ್ಟ್‌ನಲ್ಲೂ ಕಾಲಿಟ್ಟಿದೆ. ಬಾಲಿವುಡ್ ಸಿನಿಮಾಗಳಲ್ಲೂ ಇದರ ಛಾಯೆ ಕಾಣಿಸತೊಡಗಿದೆ.
“ಫ್ಯಾಷನ್‌ಲೋಕದ ಹನ್ ಹೇರ್‌ಸ್ಟೈಲ್ ಪ್ರಯೋಗಾತ್ಮಕ ಕೇಶವಿನ್ಯಾಸವಾಗಿದ್ದು, ಹಾಲಿವುಡ್ ಹಾಗೂ ಬಾಲಿವುಡ್ ಏಕೆ? ನಮ್ಮಲ್ಲೂ ಎಂಟ್ರಿ ನೀಡಿದೆ. ಇದು ನೋಡಲು ಯಂಗ್ ಲುಕ್ ನೀಡುತ್ತದೆ. ಅಲ್ಲದೇ ಬಿಂದಾಸ್ ಸ್ಟೇಟ್‌ಮೆಂಟ್ ಕಲ್ಪಿಸುತ್ತದೆ” ಎಂದಿದ್ದಾರೆ ನಟಿ ಶುಭಾ. ಅವರ ಪ್ರಕಾರ, ಸಿನಿಮಾ ಜರ್ನಿಯ ಆರಂಭದಲ್ಲಿ ಅವರು ಈ ಸ್ಟೈಲನ್ನು ಅತಿ ಹೆಚ್ಚು ಪಾಲಿಸುತ್ತಿದ್ದರಂತೆ.
ಹನ್ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಸಿಂಪಲ್ ಟಿಪ್ಸ್
- ವಿಭಿನ್ನ ಲುಕ್ ಬೇಕೆಂದಲ್ಲಿ ಈ ಹೇರ್ಸ್ಟೈಲ್ ಪ್ರಯೋಗಿಸಬಹುದು.
- ಹನ್ ಹೇರ್ಸ್ಟೈಲ್ಗೆ ತಕ್ಕಂತೆ ಡ್ರೆಸ್ ಹೊಂದಬೇಕು.
- ಫಂಕಿ ಲುಕ್ ಆದಲ್ಲಿ ವೆಸ್ಟರ್ನ್ ವೇರ್ ಧರಿಸುವುದು ಅವಶ್ಯ.
- ಹೇರ್ ಕಲರಿಂಗ್ ಹಾಗೂ ಸ್ಟ್ರೀಕ್ಸ್ ಮಾಡಿಸಿದಲ್ಲಿ ಡಿಫರೆಂಟ್ ಲುಕ್ ನಿಮ್ಮದಾಗುವುದು.
ಇದನ್ನೂ ಓದಿ | Mens Haircare: ಯುವಕರ ಹೇರ್‌ಸ್ಟೈಲ್ ಸಂರಕ್ಷಣೆಗೆ 5 ಸುಲಭೋಪಾಯ