ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹ್ಯಾಲೋವೀನ್ ಸೀಸನ್‌ನಲ್ಲಿ ಭಯ ಮೂಡಿಸುವ ಸ್ಪೂಕಿ ನೇಲ್ ಆರ್ಟ್ (Halloween Nailart ) ಡಿಸೈನ್‌ಗಳು ಹುಡುಗಿಯರ ಉಗುರುಗಳನ್ನು ಅಲಂಕರಿಸಿವೆ. ಮಾತ್ರವಲ್ಲ, ಸೋಷಿಯಲ್ ಮೀಡಿಯಾ ಹಾಗೂ ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾಗಿವೆ.
ಏನಿದು ಸ್ಪೂಕಿ ನೇಲ್ ಆರ್ಟ್
ಹ್ಯಾಲೋವೀನ್ ಥೀಮ್‌ಗೆ ಮ್ಯಾಚ್ ಆಗುವಂತಹ ಭಯಾನಕ ಚಿತ್ರಣಗಳು, ಉದಾಹರಣೆಗೆ., ಮರಿ ದೆವ್ವಗಳು, ಸ್ಕೆಲಿಟನ್, ಜೇಡರಬಲೆ, ದೆವ್ವದ ಮನೆಯ ವಾತಾವರಣ, ಕತ್ತಲೆ, ಬ್ಲಾಕ್ ಮ್ಯಾಜಿಕ್ ದೃಶ್ಯ, ಬೆಗಬಗೆಯ ಗೋಸ್ಟ್ ರೂಪಗಳು, ಹೆದರಿಕೆ ಹುಟ್ಟಿಸುವಂತಹ ಚಿತ್ರ ಸೇರಿದಂತೆ ಊಹೆಗೂ ಮೀರಿದ ಉಗುರಿನ ಚಿತ್ತಾರಗಳೇ ಈ ಸ್ಪೂಕಿ ನೇಲ್ ಆರ್ಟ್. ಇವು ಇತರೇ ಸೀಸನ್‌ನಲ್ಲಿ ಕಾಣ ಸಿಗುವುದಿಲ್ಲ. ಕೇವಲ ಹ್ಯಾಲೋವೀನ್ ಸೀಸನ್‌ನಲ್ಲಿ ಅನಾವರಣಗೊಳ್ಳುತ್ತವೆ. ಮೇಕಪ್‌ನ ಭಾಗವಾಗುತ್ತವೆ. ಕ್ಯೂಟ್ ಎಂದೆನಿಸುವುದಕ್ಕಿಂತ ಹೆಚ್ಚಾಗಿ ಸ್ಕೇರಿ ಡಿಸೈನ್ಸ್ ಒಳಗೊಂಡಿರುತ್ತವೆ. ಅದರಲ್ಲೂ ಹುಡುಗಿಯರ ಉಗುರುಗಳನ್ನು ಮಾಟಗಾತಿಯಂತೆ ಬಿಂಬಿಸುತ್ತವೆ. ಇದು ಹ್ಯಾಲೋವೀನ್ ಸೀಸನ್‌ನ ಒಂದು ಭಾಗವಾಗಿ ಹೋಗಿವೆ ಎನ್ನುತ್ತಾರೆ ನೇಲ್ ಡಿಸೈನರ್ ರಾಶಿ. ಅವರ ಪ್ರಕಾರ, ಇದೇನಿದ್ದರೂ ವರ್ಷಕ್ಕೊಮ್ಮೆ ಎಂಟ್ರಿ ನೀಡುವ ನೇಲ್ ಆರ್ಟ್. ವಿದೇಶದಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ ಇವು ಇದೀಗ ನಮ್ಮ ದೇಶಕ್ಕೂ ಕಾಲಿಟ್ಟಿದ್ದು, ಜೆನ್ ಜಿ ಹುಡುಗಿಯರನ್ನು ಸೆಳೆದಿವೆ ಎನ್ನುತ್ತಾರೆ.
ಪ್ರೆಸ್ ಆನ್ ನೇಲ್ ಪ್ಯಾಕ್‌ನಲ್ಲೂ ಲಭ್ಯ
ನೇಲ್ ಡಿಸೈನರ್ ಬಳಿ ಹೋಗಲಾಗದಿದ್ದಲ್ಲಿ, ಫ್ಯಾನ್ಸಿ ಶಾಪ್‌ಗಳಲ್ಲಿ ಹಾಗೂ ಆನ್‌ಲೈನ್‌ನಲ್ಲಿ ದೊರೆಯುವ ಪ್ರೆಸ್ ಆನ್ ನೇಲ್ ಪ್ಯಾಕ್ ಖರೀದಿಸಬಹುದು. ಆ ಪ್ಯಾಕ್‌ನಲ್ಲಿ ಉಗುರಿನ ಮೇಲೆ ಅಂಟಿಸುವ ಎಲ್ಲಾ ಗೈಡ್‌ಲೈನ್ಸ್ ನೀಡಲಾಗಿರುತ್ತದೆ. ಬಳಕೆ ಕೂಡ ತೀರ ಸುಲಭ ಎನ್ನುತ್ತಾರೆ ಮಾರಾಟಗಾರರು.
- ತಾತ್ಕಾಲಿಕ ಬ್ಯೂಟಿ ಟ್ರೆಂಡ್ನಲ್ಲಿದೆ ಎಂಬುದನ್ನು ನೆನಪಿನಲ್ಲಿಡಿ.
- ಇತರೆ ಸಮಯಕ್ಕೆ ಇವು ಹೊಂದುವುದಿಲ್ಲ.
- ಪ್ರೆಸ್ ಆನ್ ನೇಲ್ ಬಳಕೆ ಮಾಡುವುದು ಉತ್ತಮ.
- ಪ್ರಯೋಗಾತ್ಮಕ ನೇಲ್ ಆರ್ಟ್ನಲ್ಲಿ ಇವು ಸೇರುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Halloween Party Dressing Tips: ಹ್ಯಾಲೋವೀನ್ ಪಾರ್ಟಿಗೆ ರೆಡಿಯಾಗಲು ಹೀಗೆ ಮಾಡಿ!