-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಬ್ಬದ ಸೀಸನ್‌ನಲ್ಲಿ ಗ್ರ್ಯಾಂಡ್ ಲುಕ್ (Handwork saree blouse) ನೀಡುವ ಹ್ಯಾಂಡ್ ವರ್ಕ್ ಡಿಸೈನರ್ ಸೀರೆ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ಈ ಶ್ರಾವಣ ಮಾಸದಲ್ಲಿನ ಫೆಸ್ಟಿವ್ ಸೀಸನ್‌ನಲ್ಲಿ, ಮಾನಿನಿಯರಿಗೆ ಟ್ರೆಡಿಷನಲ್ ಲುಕ್ ನೀಡುವ ಗ್ರ್ಯಾಂಡ್ ಡಿಸೈನರ್ ಹ್ಯಾಂಡ್‌ವರ್ಕ್ ಸೀರೆ ಬ್ಲೌಸ್‌ಗಳು ಸಖತ್ ಪ್ರಚಲಿತದಲ್ಲಿವೆ. ವಿಶೇಷವೆಂದರೇ, ವೈವಿಧ್ಯಮಯ ವಿನ್ಯಾಸವನ್ನೊಳಗೊಂಡ ಈ ಹ್ಯಾಂಡ್ ವರ್ಕ್ ಇರುವಂತಹ ಬ್ಲೌಸ್‌ಗಳು ಇದೀಗ ಕಡಿಮೆ ಸಮಯದಲ್ಲಿ ಹೊಲೆಸಲಾಗದಿದ್ದವರಿಗೆ, ರೆಡಿಮೆಡ್‌ನಲ್ಲೂ ದೊರೆಯುತ್ತಿವೆ. ಹಬ್ಬದ ಸೀಸನ್‌ನಲ್ಲಿ ಮೊದಲೇ ಡಿಸೈನ್ ಮಾಡಿಟ್ಟ ಈ ಬ್ಲೌಸ್‌ಗಳು ಇನ್‌ಸ್ಟಂಟ್ ಆಗಿ ದೊರಕುತ್ತಿರುವುದು ಮಾನಿನಿಯರಿಗೆ ಖುಷಿ ತಂದಿದೆ.
ಬೋಟಿಕ್‌ಗಳಲ್ಲಿ ಹ್ಯಾಂಡ್ ವರ್ಕ್ ಬ್ಲೌಸ್‌ಗಳ ಅಬ್ಬರ
ಹಬ್ಬದ ಸೀಸನ್‌ನಲ್ಲಿ ಬೋಟಿಕ್‌ಗಳು ಅತಿ ಹೆಚ್ಚು ಬ್ಯುಸಿಯಾಗಿರುತ್ತವೆ. ಕೆಲವು ಬೋಟಿಕ್‌ಗಳು, ಆರ್ಡರ್‌ಗಳನ್ನು ತೆಗೆದುಕೊಂಡು, ಮಾಸ್ಟರ್‌ಗಳ ಕೈಗಳಲ್ಲಿ ಸಬ್ ಆರ್ಡರ್ ನೀಡಿ ಬ್ಲೌಸ್‌ಗಳನ್ನು ಡಿಸೈನ್ ಮಾಡಿಸುತ್ತವೆ. ಇನ್ನು ಕೆಲವು ಬೋಟಿಕ್‌ಗಳು ತಮ್ಮಲ್ಲೇ ಇರುವಂತಹ ರೆಡಿಮೆಡ್ ಹ್ಯಾಂಡ್ ವರ್ಕ್ ಬ್ಲೌಸ್‌ಗಳನ್ನು ಟ್ರೆಂಡಿ ರೇಷ್ಮೆ ಸೀರೆಗಳಿಗೆ ಹೊಂದುವಂತೆ ಮಾರಾಟ ಮಾಡುತ್ತವೆ ಎನ್ನುತ್ತಾರೆ ಡಿಸೈನರ್ ವರ್ಷಾ.
ಕಾಂಟ್ರಾಸ್ಟ್ ಹ್ಯಾಂಡ್ ವರ್ಕ್ ಸೀರೆ ಬ್ಲೌಸ್
ಇತ್ತೀಚೆಗೆ ಕಾಂಟ್ರಾಸ್ಟ್ ಡಿಸೈನರ್ ಹ್ಯಾಂಡ್‌ವರ್ಕ್ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ಹಾಗಾಗಿ ಕೆಲವೊಮ್ಮೆ ಒಂದು ಬ್ಲೌಸನ್ನು ನಾನಾ ಸೀರೆಗಳಿಗೆ ಉಡಬಹುದು. ಈ ಕಾನ್ಸೆಪ್ಟ್‌ನಲ್ಲಿ ರೆಡಿಮೇಡ್ ಹ್ಯಾಂಡ್‌ವರ್ಕ್ ಬ್ಲೌಸ್‌ಗಳು ಕೂಡ ದೊರೆಯುತ್ತಿವೆ. ಇದು ಈಗ ಟ್ರೆಂಡ್ ಕೂಡ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ರೆಡಿಮೇಡ್ ಹ್ಯಾಂಡ್‌ವರ್ಕ್ ಬ್ಲೌಸ್ ಎಲ್ಲೆಲ್ಲಿ ಲಭ್ಯ
ಸೀರೆಗೆ ತಕ್ಷಣಕ್ಕೆ ಹ್ಯಾಂಡ್‌ವರ್ಕ್ ಬ್ಲೌಸ್ ಡಿಸೈನ್ ಮಾಡಿಸಲಾಗಲಿಲ್ಲವಲ್ಲ! ಎಂದು ಬೇಸರ ಪಟ್ಟುಕೊಳ್ಳಬೇಕಾಗಿಲ್ಲ! ಯಾಕೆಂದರೇ, ಇದೀಗ ರೆಡಿಮೇಡ್ ಡಿಸೈನರ್ ಬ್ಲೌಸ್‌ಗಳನ್ನು ಮಾರಾಟ ಮಾಡುವ ಸಾಕಷ್ಟು ಶಾಪ್‌ಗಳಿವೆ. ನಿಮಗೆ ಬೇಕಾದ ಹ್ಯಾಂಡ್‌ವರ್ಕ್ ಬ್ಲೌಸ್ ಡಿಸೈನ್ ಸೆಲೆಕ್ಟ್ ಮಾಡಿಕೊಂಡರಾಯಿತಷ್ಟೇ! ಆದರೆ, ಇವು ಕೊಂಚ ದುಬಾರಿ ಬೆಲೆ ಹೊಂದಿರುತ್ತವೆ ಎನ್ನುತ್ತಾರೆ ಡಿಸೈನರ್ಸ್.
ಇದನ್ನೂ ಓದಿ: National Handloom Day: ಮಾಡರ್ನ್ ಯುವತಿಯರ ಮನವನ್ನೂ ಗೆಲ್ಲುತ್ತಿರುವ ಹ್ಯಾಂಡ್ ಲೂಮ್ ಸೀರೆ
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಲಭ್ಯ?
- ಚಿಕ್ಕಪೇಟೆಯ ಸೀರೆ ಶಾಪಿಂಗ್ ಸೆಂಟರ್ಗಳ ಸುತ್ತಮುತ್ತಾ ರೆಡಿಮೇಡ್ ಹ್ಯಾಂಡ್‌ವರ್ಕ್ ಬ್ಲೌಸ್‌ಗಳನ್ನು ಮಾರಾಟ ಮಾಡುವ ಶಾಪ್‌ಗಳಿವೆ.
- ಕಮರ್ಷಿಯಲ್ ಸ್ಟ್ರೀಟ್ನ ಅಕ್ಕ-ಪಕ್ಕದಲ್ಲೂ ದೊರೆಯುತ್ತವೆ.
- ಆನ್ಲೈನ್ ಡಿಸೈನರ್ ಬ್ಲೌಸ್ ಶಾಪ್ಗಳಲ್ಲೂ ಇವು ಲಭ್ಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)