Site icon Vistara News

Holi Fashion 2024: ಹೋಳಿ ಸಂಭ್ರಮಕ್ಕೆ ಜೊತೆಯಾದ ರಂಗುರಂಗಿನ ದುಪಟ್ಟಾ & ಸ್ಟೋಲ್ಸ್

Holi Fashion 2024

ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಂಗು ರಂಗಿನ ಕಲರ್‌ಫುಲ್‌ ದುಪಟ್ಟಾಗಳು ಹೋಳಿ ಸೆಲೆಬ್ರೇಷನ್‌ಗೆ (Holi fashion 2024) ಜೊತೆಯಾಗಲು ಮಾರುಕಟ್ಟೆಗೆ ಕಾಲಿಟ್ಟಿವೆ. ಮಲ್ಟಿ ಕಲರ್‌ನ ಈ ದುಪಟ್ಟಾಗಳು ಫೆಸ್ಟೀವ್‌ ಸೀಸನ್‌ನಲ್ಲಿ ಎಥ್ನಿಕ್‌ ಲುಕ್‌ ನೀಡಲು ಸಜ್ಜಾಗಿದ್ದು, ಯುವಕ-ಯುವತಿಯರಿಬ್ಬರಿಗೂ ಮ್ಯಾಚ್‌ ಆಗುವಂತಹ ಯೂನಿಸೆಕ್ಸ್ ಡಿಸೈನ್‌ನಲ್ಲಿ ಆಗಮಿಸಿವೆ.

“ಹೋಳಿ ಎಂದಾಕ್ಷಣಾ ಶ್ವೇತ ವರ್ಣದ ಕುರ್ತಾ ಅಥವಾ ಔಟ್‌ಫಿಟ್ಸ್ ಧರಿಸುವುದು ಕಾಮನ್‌! ಹೋಳಿ ಆಡಿದ ನಂತರ ಈ ಉಡುಪುಗಳು ಕಲರ್‌ಫುಲ್‌ ಆಗುತ್ತವೆ. ನೋಡಲು ರಂಗು ರಂಗಾಗಿ ಕಾಣುತ್ತವೆ. ಇದು ಹೋಳಿಯಾಡಿದಕ್ಕೆ ಸಾಕ್ಷಿ ಎಂಬಂತಿರುತ್ತವೆ. ಇನ್ನು, ಈ ಸಂದರ್ಭದಲ್ಲಿ, ಡ್ರೆಸ್‌ಗಳಿಗೆ ಎಥ್ನಿಕ್‌ ಲುಕ್‌ ನೀಡಲು ಬಯಸುವವರು ಈ ಉಡುಪಿನೊಂದಿಗೆ ರೈನ್ಬೋ ಶೇಡ್‌ ಅಥವಾ ಮಲ್ಟಿ ಕಲರ್‌ನ ದುಪಟ್ಟಾ ಅಥವಾ ಸ್ಟೋಲ್‌ ಧರಿಸುತ್ತಾರೆ. ಇದು ಔಟ್‌ಫಿಟ್‌ನೊಂದಿಗೆ ಧರಿಸಿದಾಗ ಕಲರ್‌ಫುಲ್‌ ಆಗಿ ಕಾಣಿಸಲು ಸಹಾಯ ಮಾಡುತ್ತವೆ. ರಂಗು ರಂಗಾದ ದುಪಟ್ಟಾ ಹಾಗೂ ಸ್ಟೋಲ್‌ಗಳು ಫೋಟೋಗಳಲ್ಲಿಯೂ ಎದ್ದು ಕಾಣಿಸುತ್ತವೆ. ಹಾಗಾಗಿ ಯುವಕ-ಯುವತಿಯರು ಹೋಳಿಯಾಡುವಾಗ ಧರಿಸುವ ಔಟ್‌ಫಿಟ್‌ನೊಂದಿಗೆ ಇವನ್ನು ಧರಿಸಲು ಆಯ್ಕೆ ಮಾಡತೊಡಗಿದ್ದಾರೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳಾದ ರಾಕೇಶ್‌ ಹಾಗೂ ವಿನೀತ್‌.

ಯೂನಿಸೆಕ್ಸ್ ದುಪಟ್ಟಾ ಹಾಗೂ ಸ್ಟೋಲ್

ಅಂದಹಾಗೆ, ಈ ಹೋಳಿ ಹಬ್ಬದಲ್ಲಿ ಕಾಲಿಟ್ಟಿರುವ ಮಲ್ಟಿ ಕಲರ್‌ನ ದುಪಟ್ಟಾ ಹಾಗೂ ಸ್ಟೋಲ್‌ನಲ್ಲಿ ನಾಲ್ಕೈದು ಬಣ್ಣಗಳು ಮೆಳೈಸಿರುತ್ತವೆ. ಹಳದಿ, ಕೆಂಪು, ಹಸಿರು, ನೀಲಿ ಹೀಗೆ ನಾನಾ ವರ್ಣಗಳು ಮಿಕ್ಸ್ ಮ್ಯಾಚ್‌ ಆದ ಪ್ರಿಂಟ್‌ನಲ್ಲಿರುತ್ತವೆ. ಬಾಂದನಿ, ಕ್ರಶ್‌ ಹಾಗೂ ಅರ್ಗಾನ್ಜಾ ಫ್ಯಾಬ್ರಿಕ್‌ನವು ಟ್ರೆಂಡ್‌ನಲ್ಲಿವೆ. ಪ್ರಿಂಟೆಡ್‌ ವಿನ್ಯಾಸ ಮಾತ್ರ ಬೇರೆ ಬೇರೆಯಾಗಿರುತ್ತವೆ ಎನ್ನುತ್ತಾರೆ ಡಿಸೈನರ್ಸ್.

ಶ್ವೇತ ವರ್ಣದ ಕುರ್ತಾಗೆ ಬೆಸ್ಟ್ ಮ್ಯಾಚಿಂಗ್‌

ಬಿಳಿ ಶೇಡ್‌ನ ಯಾವುದೇ ಎಥ್ನಿಕ್‌ ಔಟ್‌ಫಿಟ್‌ ಜೊತೆಗೆ ಈ ರಂಗಿಲಾ ದುಪಟ್ಟಾ ಅಥವಾ ಸ್ಟೋಲ್ಸ್ ಮ್ಯಾಚ್‌ ಮಾಡಬಹುದು. ಯಾಕೆಂದರೇ, ಇವನ್ನು ಧರಿಸಿದಾಗ ಹೈ ಲೈಟಾಗುತ್ತವೆ.

ರಂಗು ರಂಗಿನ ದುಪಟ್ಟಾ & ಸ್ಟೋಲ್‌ ಸ್ಪೆಷಾಲಿಟಿ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version