Site icon Vistara News

Compact Eyeshadow Palette: ಮಿನಿ ಐ ಶ್ಯಾಡೋ ಪ್ಯಾಲೆಟ್‌ ಆಯ್ಕೆ ಮಾಡೋದು ಹೇಗೆ?

Compact Eyeshadow Palette

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿನಿ ಸೈಝಿನ ಕಾಂಪ್ಯಾಕ್ಟ್ ಐ ಶ್ಯಾಡೋಗಳು (Compact Eyeshadow Palette) ಇದೀಗ ಸಾಕಷ್ಟು ಕಲರ್‌ ಶೇಡ್‌ಗಳಲ್ಲಿ ಬಿಡುಗಡೆಯಾಗಿವೆ. ನಾನಾ ಬ್ರಾಂಡ್‌ಗಳಲ್ಲಿ ಲಭ್ಯವಿರುವ ಈ ಮಿನಿ ಐ ಶ್ಯಾಡೋ ಪ್ಯಾಲೆಟ್‌ಗಳನ್ನು ಹುಡುಗಿಯರು, ತಮ್ಮ ಪರ್ಸ್‌ನಲ್ಲಿ ಹಾಗೂ ವ್ಯಾನಿಟಿ ಬ್ಯಾಗ್‌ನಲ್ಲಿ ಹೊರಗಡೆ ಹೋಗುವಾಗ ಸುಲಭವಾಗಿ ಕ್ಯಾರಿ ಮಾಡಬಹುದು. ಕೇವಲ ನಾಲ್ಕೈದು ಕಲರ್‌ಗಳಲ್ಲಿ ಲಭ್ಯವಿರುವ ಇವುಗಳನ್ನು ಉಡುಪಿನ ಮ್ಯಾಚಿಂಗ್‌ ಹಾಗೂ ಮೇಕಪ್‌ನ ಥೀಮ್‌ಗೆ ತಕ್ಕಂತೆ ಬಳಸಬಹುದು. ಸೋ, ಹಾಗಾದಲ್ಲಿ, ಇವುಗಳ ಆಯ್ಕೆ ಮಾಡುವುದಾದರೂ ಹೇಗೆ? ಮೇಕಪ್‌ ಎಕ್ಸ್‌ಫರ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

ಮ್ಯಾಚಿಂಗ್‌ ಕಲರ್ಸ್ ಪ್ಯಾಲೆಟ್‌ ಆಯ್ಕೆ

ನಿಮ್ಮ ಬಳಿ ಅತಿ ಹೆಚ್ಚು ಶೇಡ್‌ಗಳಿರುವ ಔಟ್‌ಫಿಟ್‌ಗೆ ತಕ್ಕಂತೆ ಮ್ಯಾಚ್‌ ಆಗುವಂತಹ ಪ್ಯಾಲೆಟ್‌ ಆಯ್ಕೆ ಮಾಡಿ. ಇಲ್ಲವಾದಲ್ಲಿ ನೀವು ಖರೀದಿಸಿದರೂ ಪ್ರಯೋಜನವಾಗುವುದಿಲ್ಲ ಎಂಬುದು ನೆನಪಿರಲಿ. ಆದಷ್ಟೂ ಕಾಮನ್‌ ಶೇಡ್ಸ್ ಆಯ್ಕೆ ಮಾಡುವುದು ಉತ್ತಮ.

ಮಿನಿ ಕಾಂಪಾಕ್ಟ್ ಸಾಲಿಡ್‌ ಐ ಶ್ಯಾಡೋ

ನೀವು ಐ ಶ್ಯಾಡೋಗಳನ್ನು ಆಯ್ಕೆ ಮಾಡುವಾಗ ಆದಷ್ಟೂ ಸಾಲಿಡ್‌ ಅಥವಾ ಮಿನಿ ಕೇಕ್‌ ಶೈಲಿಯಲ್ಲಿರುವಂತಹ ಪ್ಯಾಲೆಟ್‌ ಚೂಸ್‌ ಮಾಡಿ. ಯಾಕೆಂದರೇ ಇವನ್ನು ಕ್ಯಾರಿ ಮಾಡುವಾಗ ಸೋರುವ ಜಂಜಾಟವಿರುವುದಿಲ್ಲ!

ಶಿಮ್ಮರ್‌ ಐ ಶ್ಯಾಡೋ ಪ್ಯಾಲೆಟ್‌

ಶಿಮ್ಮರ್‌ ಐ ಶ್ಯಾಡೋ ಪ್ಯಾಲೆಟ್‌ಗಳು, ಕೇವಲ ಪಾರ್ಟಿ ಹಾಗೂ ಸಮಾರಂಭಗಳಿಗೆ ಮಾತ್ರ ಬಳಕೆಯಾಗುತ್ತವೆ. ಪ್ರತಿದಿನದ ಕಚೇರಿ ಹಾಗೂ ಇತರೇ ಸಮಯಗಳಿಲ್ಲಿ ಹಚ್ಚಲಾಗುವುದಿಲ್ಲ! ಸೋ, ಪ್ರತ್ಯೇಕವಾಗಿ ಸಾದಾ ಹಾಗೂ ಶಿಮ್ಮರ್‌ ಶೇಡ್‌ಗಳಿರುವ ಪ್ಯಾಲೆಟ್‌ ಖರೀದಿಸಿ. ಅಗತ್ಯವಿದ್ದಾಗ ಯಾವುದು ಅಗತ್ಯವೋ ಅದನ್ನು ಬಳಸಬಹುದು.

ಮಿನಿ ಬ್ರಶ್‌ ಇರುವಂತದ್ದನ್ನೇ ಆಯ್ಕೆ ಮಾಡಿ

ಪ್ಯಾಲೆಟ್‌ನಲ್ಲಿ ಮಿನಿ ಬ್ರಶ್‌ ಇರುವಂತದ್ದನ್ನೇ ಆಯ್ಕೆ ಮಾಡಿ. ಇಲ್ಲವಾದಲ್ಲಿ ಅದಕ್ಕಾಗಿ ನೀವು ಪ್ರತ್ಯೇಕವಾಗಿ ಬ್ರಶ್‌ ಇರಿಸಿಕೊಳ್ಳುವ ಉಸಾಬರಿ ಇರದು.

ಟ್ರಯಲ್‌ ಅವಕಾಶ ಬಳಸಿಕೊಳ್ಳಿ

ಮಾಲ್‌ಗಳಲ್ಲಾದಲ್ಲಿ ಟೆಸ್ಟರ್‌ ಐ ಶ್ಯಾಡೋ ಪ್ಯಾಲೆಟ್‌ನಿಂದ ಟ್ರಯಲ್‌ ಮಾಡುವ ಅವಕಾಶವಿರುತ್ತದೆ. ನಿಮಗೆ ಮ್ಯಾಚ್‌ ಆಗುವ ಬಣ್ಣದ ಕಾಂಬಿನೇಷನ್‌ ಇರುವಂತಹದ್ದನ್ನು ಖರೀದಿಸಬಹುದು. ಆನ್‌ಲೈನ್‌ನಲ್ಲಿ ಈ ಅವಕಾಶವಿರುವುದಿಲ್ಲ.

ಗುಣಮಟ್ಟದ್ದನ್ನು ಆಯ್ಕೆ ಮಾಡಿ

ಆದಷ್ಟೂ ಗುಣಮಟ್ಟದ ಐ ಶ್ಯಾಡೋ ಪ್ಯಾಲೆಟ್‌ ಆಯ್ಕೆ ಮಾಡಿ. ಇದು ಕಣ್ಣಿನ ವಿಷಯ. ಹಾಗಾಗಿ ಕಳಪೆ ಹಾಗೂ ರಸ್ತೆಯಲ್ಲಿ ಮಾರುವಂತಹ ಪ್ಯಾಲೆಟ್‌ ಖರೀದಿ ಬೇಡ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್‌.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Saree Blouse Design: ಗ್ರ್ಯಾಂಡ್‌ ಸೀರೆ ಬ್ಲೌಸ್‌ಗೆ ಅತ್ಯಾಕರ್ಷಕ ಬಾಜುಬಂದ್‌ ಎಂಬ್ರಾಯ್ಡರಿ ಡಿಸೈನ್‌ ಹೇಗಿದೆ ನೋಡಿ!

Exit mobile version