-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ರೆಡಿಷನಲ್ ಜ್ಯುವೆಲ್ ಫ್ಯಾಷನ್‌ನಲ್ಲಿದ್ದ, ಸೆಪ್ಟಮ್ ರಿಂಗ್ ಇದೀಗ ವೆಸ್ಟರ್ನ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಜಿಗಿದಿದೆ. ಇಂಡೋ-ವೆಸ್ಟರ್ನ್ ಫ್ಯಾಷನ್ ಜ್ಯುವೆಲರಿ ಟ್ರೆಂಡ್‌ಗೆ ನಾಂದಿ ಹಾಡಿದೆ. ತೀರಾ ಸಂಪ್ರಾದಾಯಸ್ಥ ಕುಟುಂಬದವರು ಅಥವಾ ರಾಯಲ್ ಫ್ಯಾಮಿಲಿಯವರು ಮಾತ್ರ ಧರಿಸುತ್ತಿದ್ದ ಬಂಗಾರದ ಸೆಪ್ಟಮ್ ರಿಂಗ್‌ಗಳು. ಈ ಜನರೇಷನ್‌ನ ಜ್ಯುವೆಲ್ ಡಿಸೈನರ್‌ಗಳ ಐಡಿಯಾ jತೆ ಸೇರಿ ಹೊಸ ರೂಪ ಪಡೆದಿದೆ. ಬಿಂದಾಸ್ ಲುಕ್ ನೀಡುವ ವೆಸ್ಟರ್ನ್ ಸ್ಟೈಲ್ ಸ್ಟೇಟ್‌ಮೆಂಟ್ jತೆಗೆ ಸೇರಿ, ಇಂಡೋ-ವೆಸ್ಟರ್ನ್ ಜ್ಯುವೆಲರಿ ಫ್ಯಾಷನ್‌ಗೆ ನಾಂದಿಯಾಡಿದೆ.
ಸೆಪ್ಟಮ್ ರಿಂಗ್ ಪ್ರಭಾವ
ಮೂಗುತಿ ಜಾಗವನ್ನು ಹೊರತು ಪಡಿಸಿ, ಮೂಗಿನ ಹೊಳ್ಳೆಯ ಮಧ್ಯಭಾಗದಲ್ಲಿ ಪಿಯರ್ಸಿಂಗ್ ಮಾಡಿ ಧರಿಸುವ ಸೆಪ್ಟಮ್ ರಿಂಗ್ ಜ್ಯುವೆಲರಿ ಫ್ಯಾಷನ್ ನಿನ್ನೆ ಮೊನ್ನೆಯ ಫ್ಯಾಷನ್ ಅಲ್ಲ, ಪುರಾತನ ಕಥೆಗಳಲ್ಲಿ ದೇವಾನು ದೇವತೆಗಳು ಧರಿಸುತ್ತಿದ್ದರೆಂಬ ಉಲ್ಲೇಖವಿದೆ. ಅಷ್ಟು ಮಾತ್ರವಲ್ಲ, ರಾಣಿ-ಮಹಾರಾಣಿಯರು, ಧರಿಸುತ್ತಿದ್ದ ಜ್ಯುವೆಲರಿಯಾಗಿತ್ತು ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ದೀಕ್ಷಿತ್ ಆಚಾರ್ಯ. ಅವರ ಪ್ರಕಾರ, ಕಾಲ ಕಳೆದಂತೆ ಸೆಪ್ಟಮ್ ರಿಂಗ್ ಧರಿಸುವ ರಿವಾಜು ಕಡಿಮೆಯಾಯಿತು. ಹೆಚ್ಚೆಂದೆರೇ, ತೀರಾ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಕ್ಕಳು ಮಾತ್ರ ಧರಿಸುವುದು ಕಂಡು ಬರುತ್ತಿತ್ತು. ದಶಕಗಳಿಂದಿಚೇಗೆ ಪಾಶ್ವಿಮಾತ್ಯ ರಾಷ್ಟ್ರದ ಯುವತಿಯರು ಈ ಫ್ಯಾಷನ್ ಅನ್ನುತಮ್ಮ ಲಿಸ್ಟ್‌ಗೆ ಸೇರಿಸಿಕೊಂಡರು. ಬರಬರುತ್ತಾ ಫ್ಯಾಷನ್ ಜ್ಯುವೆಲರಿಗಳಾದ ವೈಟ್ ಮೆಟಲ್, ಬ್ಲಾಕ್ ಮೆಟಲ್, ಸಿಲ್ವರ್‌ನಿಂದ ತಯಾರಿಸಿದ ಸೆಪ್ಟಮ್ ರಿಂಗ್‌ಗಳನ್ನು ಧರಿಸತೊಡಗಿದರು. ಅದರಲ್ಲೂ ಪಾಪ್ ಕಲ್ಚರ್ ಪ್ರೇಮಿಗಳು ಡಿಫರೆಂಟ್ ಲುಕ್‌ಗಾಗಿ ಇವನ್ನು ಪ್ರಯೋಗಿಸತೊಡಗಿದರು. ನಂತರ ಬರಬರುತ್ತ ಇದೀಗ ಅಲ್ಟ್ರಾ ಮಾಡರ್ನ್ ಲುಕ್‌ಗಾಗಿ ಧರಿಸುವುದು ಕಾಮನ್ ಆಗುತ್ತಿದೆ ಎನ್ನುತ್ತಾರೆ.
ಇದನ್ನೂ ಓದಿ: Thalapathy Vijay: ದಳಪತಿ ವಿಜಯ್ ಜನುಮದಿನಕ್ಕೆ ಸಿಗಲಿದೆ ಗಿಫ್ಟ್; ಫ್ಯಾನ್ಸ್ ಫುಲ್ ಖುಷ್!
ಫಂಕಿ ಲುಕ್‌ಗೆ ಸೆಪ್ಟಮ್ ರಿಂಗ್
ಬ್ಲಾಕ್, ವೈಟ್ ಮೆಟಲ್ ಹೊರತುಪಡಿಸಿದರೇ, ಸಿಲ್ವರ್‌ನ ಸೆಪ್ಟಮ್ ರಿಂಗ್‌ಗಳು ಅತಿ ಹೆಚ್ಚು ಟ್ರೆಂಡ್‌ನಲ್ಲಿವೆ. ಇವು ಪಂಕಿ ಲುಕ್‌ಗೆ ಸಾಥ್ ನೀಡುತ್ತವೆ ಎಂಬ ಕಾರಣದಿಂದ ಹೆಚ್ಚಾಗಿ ಧರಿಸುವುದು ಕಂಡು ಬರುತ್ತಿದೆ. ಇನ್ನು ಮೂಗು ಚುಚ್ಚಿಸದೆಯೂ ಇವನ್ನು ಧರಿಸುವ ಪ್ರೆಸ್ ಅನ್ ಸೆಪ್ಟಮ್ ರಿಂಗ್‌ಗಳು ಕೂಡ ಮಾರುಕಟ್ಟೆಯಲ್ಲಿ ದೊರಕತೊಡಗಿದ್ದು, ಧರಿಸುವವರು ಹೆಚ್ಚಾಗಲು ಕಾರಣ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸೆಪ್ಟಮ್ ರಿಂಗ್ ಪ್ರಿಯರು ಗಮನಿಸಬೇಕಾದ್ದು…
- ಗುಣಮಟ್ಟದ ಸೆಪ್ಟಮ್ ರಿಂಗ್ ಧರಿಸಿ.
- ಸ್ಕಿನ್ ಅಲರ್ಜಿಯಾಗುವ ಮೆಟಲ್ನದ್ದನ್ನು ಆವಾಯ್ಡ್ ಮಾಡಿ.
- ಪದೇ ಪದೇ ಶೀತ-ನೆಗಡಿಗೊಳಗಾಗುವವರು ಧರಿಸುವುದನ್ನು ತೊರೆಯಿರಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)