– ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇನ್ವೆಸ್ಟ್ ಕರ್ನಾಟಕದ (Invest Karnataka Saree Exhibition) ಭಾಗವಾಗಿ ನಡೆಯುತ್ತಿರುವ ಟ್ರೆಡಿಷನಲ್ ಟೆಕ್ಸ್‌ಟೈಲ್ಸ್ ಹಾಗೂ ಸೀರೆಗಳ ಪ್ರದರ್ಶನ ಚಿತ್ರಕಲಾ ಪರಿಷತ್‌ನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ನವೆಂಬರ್ ೬ರವರೆಗೂ ಮುಂದುವರಿಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಸ್ಥಳೀಯ ಬ್ರಾಂಡ್‌ನ ಟೆಕ್ಸ್‌ಟೈಲ್ ಹಾಗೂ ಸೀರೆಗಳು ಪ್ರದರ್ಶನಗೊಳ್ಳುತ್ತಿವೆ. ಸೀರೆಗಳ ಮೂಲ ಹಾಗೂ ಕಥಾನಕವನ್ನೊಳಗೊಂಡ ಈ ಪ್ರದರ್ಶನ ನೋಡುಗರನ್ನು ಸೆಳೆಯುತ್ತಿದೆ. ಇಳಕಲ್ ಸೀರೆಗಳಿಂದ ಹಿಡಿದು ಮೈಸೂರ್ ಸಿಲ್ಕ್‌ವರೆಗಿನ ನಾನಾ ಬಗೆಯ ಸೀರೆಗಳನ್ನು ಇಲ್ಲಿ ಕಾಣಬಹುದು. ನಾನಾ ಕಡೆಯಿಂದ ಉತ್ಪನ್ನಗಳ ರೂವಾರಿಗಳು ಆಗಮಿಸಿದ್ದು, ಅವರಿಂದ ಸೀರೆಗಳ ಇತಿಹಾಸವನ್ನು ತಿಳಿದುಕೊಳ್ಳಬಹುದು.
ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಪ್ರೋತ್ಸಾಹ
“ಇನ್ವೆಸ್ಟ್ ಕರ್ನಾಟಕದ ಭಾಗವಾಗಿರುವ ಈ ಪ್ರದರ್ಶನಕ್ಕೆ ಕೇವಲ ಫ್ಯಾಷನ್ ಪ್ರೇಮಿಗಳಲ್ಲ, ಎಲ್ಲರ ಪ್ರೋತ್ಸಾಹದ ಅಗತ್ಯವಿದೆ. ಇಂತಹ ಕಲಾವಿದರಿಗೆ ಹಾಗೂ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ನಾವು ಸ್ಥಳೀಯ ಕಲಾವಿದರನ್ನು ಮುಂದೆ ತರಲು ಸಾಧ್ಯ. ನಮ್ಮ ಕರ್ನಾಟಕದ ಸೀರೆಗಳನ್ನು ಬೆಳೆಸುವುದರೊಂದಿಗೆ ಅವುಗಳನ್ನು ಜಾಗತೀಕ ಮಟ್ಟದಲ್ಲಿ ಚಾಲ್ತಿಗೆ ತರಲು ಸಾಧ್ಯವಾಗುತ್ತದೆ” ಎಂದು ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಹೇಳುತ್ತಾರೆ.
ಇದನ್ನೂ ಓದಿ | Shah Rukh Khan Fashion | ಬಾಲಿವುಡ್ ಕಿಂಗ್ ಖಾನ್ ಶಾರುಖ್ ರೀಲ್ ಫ್ಯಾಷನ್ Vs ರಿಯಲ್ ಫ್ಯಾಷನ್!
ಇದಕ್ಕೆ ಪೂರಕ ಎಂಬಂತೆ, ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದ ಸ್ಥಳೀಯ ಉತ್ಪನ್ನಗಳನ್ನು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಫೋಸ್ಟ್‌ಗಳನ್ನು ಕೂಡ ಅವರು ಹಾಕುತ್ತಿರುತ್ತಾರೆ.
ಅಪ್‌ಸೈಕಲ್ಡ್ ಸೀರೆಯೂ ಉಂಟು
ಪ್ರದರ್ಶನದಲ್ಲಿ ಪಾಲ್ಗೊಂಡ ಸೀರೆ ಪ್ರೇಮಿ ಪದ್ಮಾ ಪ್ರಿಯಾ ಅವರು ಹೇಳುವಂತೆ, ನಮ್ಮ ಟ್ರೆಡಿಷನಲ್ ಸಂಸ್ಕೃತಿಗೆ ಸಾಕ್ಷಿಯಾಗಿರುವ ನಾನಾ ಬಗೆಯ ಸೀರೆಗಳಾದ ಮೊಳಕಾಲ್ಮೂರು, ಇಳಕಲ್, ಮೈಸೂರ್ ಸಿಲ್ಕ್ ಸೀರೆಗಳ ಮೂಲ ಮಾತ್ರವಲ್ಲ, ಹೊರಗಡೆಯಿಂದ ಬಂದಿರುವ ನಾನಾ ಫ್ಯಾಬ್ರಿಕ್‌ನ ಸೀರೆಗಳ ಪ್ರದರ್ಶನವನ್ನು ಇಲ್ಲಿ ನೋಡಬಹುದು. ಅಲ್ಲದೇ, ಅಪ್‌ಸೈಕಲ್ಡ್ ಸೀರೆಗಳು ಇಲ್ಲಿವೆ. ಸೀರೆ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಪ್ರದರ್ಶನ. ಇಷ್ಟವಾದಲ್ಲಿ ಖರೀದಿಸಲೂ ಬಹುದು. ಅಷ್ಟೊಂದು ವೆರೈಟಿ ಸೀರೆಗಳಿವೆ ಎನ್ನುತ್ತಾರವರು.
ಪುರುಷರಿಗೆ ಖಾದಿ ಕಾಟನ್‌ನಲ್ಲೂ ವೆರೈಟಿ ವಿನ್ಯಾಸ
“ಇನ್ನು ಇಲ್ಲಿ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರು ಧರಿಸಬಹುದಾದ ಖಾದಿ ಹಾಗೂ ಕಾಟನ್‌ನ ಕುರ್ತಾ, ಪೈಜಾಮ, ಜುಬ್ಬಾ, ಶ್ರಗ್, ವೇಸ್‌ಕೋಟ್ ಹಾಗೂ ಶಾಲುಗಳು ಇವೆ. ಈ ವಿಂಟರ್ ಸೀಸನ್‌ಗೆ ಹೊಂದುವಂತಹ ಲೇಯರ್ ಲುಕ್ ನೀಡುವಂತಹ ನಾನಾ ಬಗೆಯ ಸ್ಥಳೀಯ ಫ್ಯಾಬ್ರಿಕ್‌ನಲ್ಲಿ ಸಿದ್ಧಪಡಿಸಿದ ಡಿಸೈನರ್‌ವೇರ್‌ಗಳಿವೆ” ಎನ್ನುತ್ತಾರೆ ಡಿಸೈನಿಂಗ್ ಕಾಲೇಜಿನ ಇಂಟರ್ನಿ ರಂಜಿತಾ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Stars Winter Fashion | ಲಂಡನ್‌ನಲ್ಲಿ ಕರೀನಾ-ಕರೀಷ್ಮಾ ಕಪೂರ್ ವಿಂಟರ್ ಫ್ಯಾಷನ್ ಮಂತ್ರ