-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾಲೇಜ್ ಕ್ಯಾಂಪಸ್‌ಗಳಲ್ಲಿ ಇದೀಗ ಕೆ ಪಾಪ್ ಸ್ಟಾರ್ಸ್ ಹೇರ್‌ಸ್ಟೈಲ್ ಹವಾ! ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಕಾಣುವಂತಹ ಈ ಹೇರ್‌ಸ್ಟೈಲ್‌ಗಳಿಗಾಗಿ ಈಗಾಗಲೇ ಯುವಕರನ್ನು ಹುಚ್ಚೆಬ್ಬಿಸಿರುವ ಕೊರಿಯನ್ ಕೆ ಪಾಪ್ ಸ್ಟಾರ್ಸ್‌ಗಳಿದ್ದಾರೆ ಎಂದರೇ ನಂಬುತ್ತೀರಾ! ಆದರೆ. ಇದು ಸತ್ಯ. ಹಾಲಿವುಡ್, ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಸ್ಟಾರ್‌ಗಳನ್ನು ಸ್ಪೂರ್ತಿಯಾಗಿರಿಸಿಕೊಂಡು ಹೇರ್‌ಸ್ಟೈಲ್ ಮಾಡುವ ಯಂಗ್ ಜಮಾನಾ ಈಗಿಲ್ಲ! ಈಗೇನಿದ್ದರೂ ಕೆ ಪಾಪ್ ಸ್ಟಾರ್ಸ್‌ಗಳ ಹೇರ್‌ಸ್ಟೈಲ್ ರಿಪ್ಲಿಕಾ ಮಾಡುವಂತಹ ಸ್ಟೈಲಿಂಗ್ ಕಾನ್ಸೆಪ್ಟ್ ಟ್ರೆಂಡಿಯಾಗಿದೆ.
ಈ ಸ್ಟೈಲಿಂಗ್ ಮಾಡುವವರು ಹುಡುಗಿಯಾಗಿರಬಹುದು ಅಥವಾ ಹುಡುಗರಾಗಬಹುದು. ಕಂಪ್ಲೀಟ್ ಕೆ ಪಾಪ್ ಸ್ಟಾರ್ಸ್‌ಗಳಂತೆ ಕಾಣಲು ಸಾಧ್ಯವಾಗದಿದ್ದರೂ, ಸ್ಥಳೀಯ ಹೇರ್ ಟೆಕ್ಚರ್ ಹಾಗೂ ಕಲರ್‌ಗೆ ಮ್ಯಾಚ್ ಆಗುವಂತೆಯೇ ತಮ್ಮದೇ ಆದ ಕಸ್ಟಮೈಸ್ಡ್ ಹೇರ್ ಸ್ಟೈಲಿಂಗ್ ಮಾಡಿಸಿಕೊಂಡು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಹೇರ್ ಸ್ಪೆಷಲಿಸ್ಟ್ ಜಾನ್.
ಕೆ ಪಾಪ್ ಸ್ಟಾರ್ಸ್ ಹೇರ್‌ಸ್ಟೈಲ್ಸ್
ಬಿಟಿಎಸ್ ಬಾಯ್ಸ್ ಹಾಗೂ ಗಲ್ರ್ಸ್ ಹೇರ್‌ಸ್ಟೈಲ್ಸ್, ಬ್ಲಾಕ್ ಪಿಂಕ್‌ನ ಲಿಸಾಳದ್ದು, ಮಾಮಾಮೂ ಬ್ಯಾಂಡ್‌ನ ವೀನ್‌ರದ್ದು, ಟ್ವೈಸ್‌ನ ಜಿಹ್ಯೋ, ರೆಡ್ ವೆಲ್ವೆಟ್‌ನ ಜಾಯ್‌ರದ್ದು, ಮೊಮೊಲ್ಯಾಂಡ್‌ನ ಹೈಬಿನ್‌ರ ಹೇರ್‌ಸ್ಟೈಲ್‌ಗಳು ಜಾಗತೀಕ ಮಟ್ಟದಲ್ಲಿ ಈಗಾಗಲೇ ಸಖತ್ ಪಾಪ್ಯುಲರ್ ಆಗಿವೆ. ಹೀಗೆ ನಾನಾ ಬ್ಯಾಂಡ್ ಸ್ಟಾರ್‌ಗಳ ಹೇರ್ ಸ್ಟೈಲಿಂಗ್ ಇಲ್ಲಿನ ಲೋಕಲ್ ಯೌತ್‌ಗೂ ಸ್ಪೂರ್ತಿಯಾಗಿದೆ. ಅವರಂತೆ ಕಾಣಿಸಿಕೊಳ್ಳಲಾಗದಿದ್ದರೂ ಕೂಡ ಆದಷ್ಟು ಸ್ಟೈಲಿಶ್ ಹೇರ್‌ಕಟ್‌ನ ರಿಪ್ಲಿಕಾದಲ್ಲೆ ಸಂತಸಪಡುತ್ತಿದ್ದಾರೆ ಎನ್ನುತ್ತಾರೆ ಹೇರ್ ಸ್ಟೈಲಿಶ್ ರಾಕೇಶ್.
ಇದನ್ನೂ ಓದಿ: Jewel Trend: ಮರಳಿದ ವೈವಿಧ್ಯಮಯ ಫ್ರಿಂಜ್ ನೆಕ್ಲೇಸ್ ಫ್ಯಾಷನ್
ಹುಡುಗ –ಹುಡುಗಿಯರು ಮೆಚ್ಚಿದ ಪಾಪ್ಯುಲರ್ ಹೇರ್‌ಸ್ಟೈಲ್ಸ್ :
ಬೇಬಿ ಬ್ರೈಡ್ಸ್, ವಿಸ್ಪಿ ಬ್ಯಾಂಗ್ಸ್, ಲೇಯರ್ಡ್ ಕಟ್‌ನಂತೆ ಕಾಣುವ ವೊಲ್ಫ್ ಕಟ್, ವೈಟುಕೆ ಅಪ್‌ಡೂಸ್, ಮೆಸ್ಸಿ ಸ್ಪೇಸ್ ಬನ್ಸ್, ಟೆಕ್ಷರ್ಡ್ ಬಾಬ್, ಶೇವ್ಡ್ ಸೈಡ್, ದಿ ಬೋಲ್ಡ್ ಬ್ರೈಡೆಡ್ ಅಪ್‌ಡೂ, ಸ್ಲೀಕ್ ಸೆಂಟರ್, ಶ್ಯಾಗಿ ಚಾಪ್ಸ್, ಟೂ ಬ್ಲಾಕ್, ಸೈಡ್ ಪಾರ್ಟಿಂಗ್, ಮೆಸ್ಸಿ ಬನ್ಸ್, ಸೆವಂಟೀಸ್ ಬ್ಯಾಂಗ್ಸ್ ಹುಡುಗಿಯರನ್ನು ಆಕರ್ಷಿಸಿದ್ದರೇ, ಹುಡುಗರನ್ನು ಬ್ರೊಕ್ಲಿ ಅಥವಾ ವೆಟ್ ಮಾಪ್ ಹೇರ್ ಕಟ್, ಮಿಡಲ್ ಪಾರ್ಟ್ ಕ್ರಾಪ್, ಅಂಡರ್ ಕಟ್, ಕ್ವಿಫ್, ಸ್ಕ್ವೇರ್ ಕಟ್, ಫ್ರೆಂಚ್ ಕ್ರಾಪ್, ಬಾಕ್ಸ್ ಸ್ಟೈಲ್, ಹಾಕಿ ಕಟ್, ಬಝ್ ಕಟ್ ಆವರಿಸಿಕೊಂಡಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)