Site icon Vistara News

Stars Winter Fashion | ಲಂಡನ್‌ನಲ್ಲಿ ಕರೀನಾ-ಕರೀಷ್ಮಾ ಕಪೂರ್‌ ವಿಂಟರ್‌ ಫ್ಯಾಷನ್‌ ಮಂತ್ರ

Stars Winter Fashion

– ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ ಟಾಪ್‌ ಸ್ಟಾರ್‌ ಸಹೋದರಿ ನಟಿಯರೆಂದೇ ಗುರುತಿಸಿಕೊಂಡಿರುವ ನಟಿಯರಾದ ಕರೀನಾ ಹಾಗೂ ಕರೀಷ್ಮಾ ಕಪೂರ್‌ ಲಂಡನ್‌ನಲ್ಲಿ ವಿಂಟರ್‌ ಫ್ಯಾಷನ್‌ ಮಂತ್ರಕ್ಕೆ ಸೈ ಎಂದಿದ್ದಾರೆ. ತಮ್ಮ ಸ್ಟೈಲ್‌ (Stars Winter Fashion) ಸ್ಟೇಟ್‌ಮೆಂಟ್‌, ಮೇಕಪ್‌ ಲವ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಟಾರ್‌ ಸಹೋದರಿಯರ ಬಿಂದಾಸ್‌ ಲುಕ್ಸ್‌
ಕರೀನಾ ಹಾಗೂ ಕರೀಷ್ಮಾ ಕಪೂರ್‌ ಸಹೋದರಿಯರು ಮೊದಲಿನಿಂದಲೂ ಫ್ಯಾಷನಬಲ್‌ ನಟಿಯರು. ಅದರಲ್ಲೂ ಟ್ರಾವೆಲ್‌ ಮಾಡುವ ಸಮಯದಲ್ಲಂತೂ ಬಿಂದಾಸ್‌ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ, ಇದೀಗ ವಿಂಟರ್‌ ಸೀಸನ್‌ ಆಗಿರುವ ಕಾರಣ, ಇಬ್ಬರೂ ಲೇಯರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಲಂಡನ್‌ನಲ್ಲಿ ೨ ತಿಂಗಳು ಮೊದಲೇ ಕ್ರಿಸ್‌ಮಸ್‌ ಸೆಲೆಬ್ರೇಷನ್‌ ಎಲ್ಲೆಡೆ ಆರಂಭವಾಗುತ್ತದೆ. ಬೀದಿ ಬೀದಿಗಳು ಲೈಟಿಂಗ್ಸ್‌ನಿಂದ ಕಂಗೊಳಿಸುತ್ತವೆ. ಈ ಸಮಯದಲ್ಲಿ ಲಂಡನ್‌ಗೆ ಫ್ಯಾಮಿಲಿ ಸಮೇತ ತೆರಳಿರುವ ಕರೀನಾ ಜೊತೆ ಕರೀಷ್ಮಾ ಕಪೂರ್‌ ಕೂಡ ಹೋಗಿದ್ದಾರೆ. ಸೀಸನ್‌ಗೆ ತಕ್ಕಂತೆ ಫ್ಯಾಷನಬಲ್‌ ಆಗಿ ಕಾಣಿಸಿಕೊಂಡಿದ್ದಾರೆ.

ಟ್ವಿನ್ನಿಂಗ್‌ ವಿಂಟರ್‌ ಜಾಕೆಟ್‌ ಫ್ಯಾಷನ್‌
ಲಂಡನ್‌ನಲ್ಲಿ ಜೊತೆಯಲ್ಲಿಯೇ ಉಳಿದುಕೊಂಡಿರುವ ಕರೀನಾ ಹಾಗೂ ಕರೀಷ್ಮಾ ಕಪೂರ್‌ ಸಹೋದರಿಯರು ಮಕ್ಕಳನ್ನು ಹೋಟೆಲ್‌ನಲ್ಲೆ ಬಿಟ್ಟು, ಟ್ವಿನ್ನಿಂಗ್‌ ವಿಂಟರ್‌ ಲುಕ್‌ನಲ್ಲಿ ಹೊರ ತೆರಳಿದ್ದಾರೆ. ಒಟ್ಟೊಟ್ಟಿಗೆ ಶಾಪಿಂಗ್‌ ಮಾಡಿದ್ದಾರೆ. ಈ ಸಮಯದಲ್ಲಿ ಕಂಪ್ಲೀಟ್‌ ಮಾನೋಕ್ರೋಮ್‌ ಲುಕ್‌ ನೀಡುವ ಬ್ಲ್ಯಾಕ್‌ ಶೇಡ್‌ನ ಬ್ಲ್ಯಾಕ್‌ ಬೂಟ್ಸ್‌ ಹಾಗೂ ಪಫರ್‌ ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮತ್ತೊಂದು ದಿನ ಡೆನೀಮ್‌ ಜೀನ್ಸ್‌ನಲ್ಲಿ ಕರಿಷ್ಮಾ ಕಾಣಿಸಿಕೊಂಡರೆ, ಕರೀನಾ ಮಾತ್ರ ಎರಡೂ ದಿನವೂ ಕಂಪ್ಲೀಟ್‌ ಬ್ಲ್ಯಾಕ್‌ ಶೇಡ್‌ಗೆ ಮೊರೆ ಹೋಗಿದ್ದಾರೆ. ಅನಿಮಲ್‌ ಪ್ರಿಂಟ್ಸ್‌ನ ಶ್ರಗ್‌ ಶೈಲಿಯ ಜಾಕೆಟ್‌ ಇಬ್ಬರೂ ಧರಿಸಿದ್ದಾರೆ.

ಸ್ಟಾರ್‌ ಸಹೋದರಿಯರ ಮೇಕಪ್‌ ಲವ್‌
ಸಹೋದರಿಯರು ಒಟ್ಟಿಗೆ ಸಿಕ್ಕಲ್ಲಿ ಏನು ಮಾಡುತ್ತಾರೆ! ಹಾಗೆಯೇ ನಾವು ಕೂಡ, ಸ್ಟೈಲಿಂಗ್‌, ಶಾಪಿಂಗ್‌ ಹಾಗೂ ಮೇಕಪ್‌ ಹೀಗೆ ಇದರಲ್ಲೇ ಕಾಲ ಕಳೆಯುತ್ತೇವೆ ಎಂದು ಕರೀನಾ ಹೇಳಿಕೊಂಡಿದ್ದಾರೆ. ತಮ್ಮಿಬ್ಬರ ಮೇಕಪ್‌ ಲವ್‌ ಎಂದಿಗೂ ಮುಗಿಯುವುದಿಲ್ಲ ಎಂದಿದ್ದಾರೆ.

ಕರೀನಾ-ಕರೀಷ್ಮಾ ಕಪೂರ್‌ ಸ್ಟೈಲಿಂಗ್‌
ಅಂದಹಾಗೆ, ಇವರಿಬ್ಬರು ಒಟ್ಟೊಟ್ಟಿಗೆ ಶಾಪಿಂಗ್‌ ಮಾಡುವುದು, ಟ್ವಿನ್ನಿಂಗ್‌ ಫ್ಯಾಷನ್‌ ಮಾಡುವುದು ಹೊಸತೇನಲ್ಲ! ಆಗಾಗ ಇದು ರಿಪೀಟ್‌ ಆಗುತ್ತಲೇ ಇರುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಒಟ್ಟಿನಲ್ಲಿ, ಸಿಸ್ಟರ್ಸ್‌ ಫ್ಯಾಷನ್‌ ಹಾಗೂ ಲೈಫ್ಸ್ಟೈಲ್‌ ಸಾಮಾನ್ಯರಿಗೂ ಸ್ಪೂರ್ತಿಯಾಗುವಂತಿದೆ ಎನ್ನುತ್ತಾರವರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Stars Fashion | ಎಥ್ನಿಕ್ ಉಡುಪಿಗೆ ಸೈ ಎಂದ ಸಿನಿಮಾ ತಾರೆಯರು; ಸೀರೆ, ಕುರ್ತಾದಲ್ಲಿ ಮಿಂಚು

Exit mobile version