-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿಷ್ಠಿತ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ (Lakme Fashion Week Celebrities) ಮಲೈಕಾ ಅರೋರಾ, ಚತ್ರಾಂಗದಾ ಸಿಂಗ್, ಕಲ್ಕಿ, ರಿಯಾ ಚಕ್ರವರ್ತಿ ಸೇರಿದಂತೆ ನಾನಾ ಸೆಲೆಬ್ರಿಟಿಗಳು ಭಿನ್ನ-ವಿಭಿನ್ನ ಡಿಸೈನರ್ ವೇರ್‌ಗಳಲ್ಲಿ ಕಾಣಿಸಿಕೊಂಡು ಕ್ಯಾಟ್‌ವಾಕ್ ಮಾಡಿದರು. ಮೊದಲ ದಿನದಿಂದಲೂ ಭಿನ್ನ ವಿಭಿನ್ನವಾಗಿ ನಡೆಯುತ್ತಿರುವ ಈ ಫ್ಯಾಷನ್ ವೀಕ್‌ನಲ್ಲಿ ಈ ಬಾರಿ ಸೆಲೆಬ್ರಿಟಿ ಡಿಸೈನರ್‌ವೇರ್‌ಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿತ್ತು.
ಸಿಲ್ಲೋಟ್ಸ್‌ನಲ್ಲಿ ಮಲೈಕಾ ಅರೋರಾ ವಾಕ್
ಲಿಮೆರಿಕ್ ಲೆಬೆಲ್‌ನ ಬ್ಲ್ಯೂ ತ್ರೀ ಪೀಸ್‌ನ ಕೇಪ್‌ನಂತೆ ಕಾಣುವ ಡಿಸೈನರ್‌ವೇರ್ ಧರಿಸಿದ್ದ ಮಲೈಕಾ ಅರೋರಾ ರ್‍ಯಾಂಪ್ ಮೇಲೆ ವಾಕ್ ಮಾಡಿ, ಪ್ರೇಕ್ಷಕರ ಮನ ಸೆಳೆದರು. ತಮ್ಮ ಮನೋಭಿಲಾಷೆಗೆ ತಕ್ಕಂತಿರುವ ಈ ಉಡುಪು ತಮ್ಮ ಐಡೆಂಟಿಟಿಯ ಪ್ರತೀಕ ಎಂದು ಹೇಳಿಕೊಂಡರು.
ಅಫ್ರಿಕನ್ ರ್‍ಯಾಂಪ್ ಸಿಟಿ ಕಲೆಕ್ಷನ್‌ನಲ್ಲಿ ಚಿತ್ರಂಗದಾ ಸಿಂಗ್
ಇಶಾಮಿನ್ ಲೆಬೆಲ್‌ನ ವಿಭಿನ್ನ ಡಿಸೈನರ್‌ವೇರ್ ಆಫ್ರಿಕನ್ ರ್‍ಯಾಂಪ್ ಸಿಟಿ ಕಲೆಕ್ಷನ್ ಎಂದೇ ಕರೆಯಲಾಗುವ ಡಿಸೈನರ್‌ವೇರ್‌ನಲ್ಲಿ ನಟಿ ಚಿತ್ರಂಗದಾ ಸಿಂಗ್ ವಾಕ್ ಮಾಡಿದರು. ಅವರ ವಿಭಿನ್ನ ಹೇರ್‌ಸ್ಟೈಲ್ ಲುಕ್‌ಗೆ ಹೊಸತನ ನೀಡಿತ್ತು.
ಇದನ್ನೂ ಓದಿ | Navaratri Fashion | ನವರಾತ್ರಿ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ದುರ್ಗಾ ದೇವಿ ವಿನ್ಯಾಸ
ರೆಸಾರ್ಟ್‌ವೇರ್‌ನಲ್ಲಿ ರಿಯಾ ಚರ್ಕವರ್ತಿ
ಕ್ವಾಪಾ ರೆಸಾರ್ಟ್‌ವೇರ್ ಡಿಸೈನರ್‌ವೇರ್‌ನಲ್ಲಿ ಫಂಕಿ ಲುಕ್‌ನಲ್ಲಿ ಕಾಣಿಸಿಕೊಂಡ ರಿಯಾ ಚರ್ಕವರ್ತಿಯ ಮೇಕಪ್ ರೆಸಾರ್ಟ್ವೇರ್‌ಗೆ ಡಿಫರೆಂಟ್ ಲುಕ್ ನೀಡಿತ್ತು.
ಕಲ್ಕಿಯ ವಿಭಿನ್ನ ಅವತಾರ
ಡಿಸೈನರ್ ಅಭಿಷೇಕ್ ಶರ್ಮಾ ಅವರ ಚಿತ್ರ-ವಿಚಿತ್ರ ಟ್ರಾಪಿಕಲ್ ಪ್ಯಾಚ್ ವರ್ಕ್‌ನಂತೆ ಕಾಣುತ್ತಿದ್ದ ಪ್ರಿಂಝ್ ಸ್ಲಿಟ್ ಗೌನ್‌ನಂತೆ ಕಾಣುತ್ತಿದ್ದ ಉಡುಪು ಧರಿಸಿ ಕಲ್ಕಿಕೊಹ್ಲೀನ್ ವಾಕ್ ಮಾಡಿದರು.
ಇನ್ನು ಡಿಸೈನರ್ ಅಂಜು ಮೋದಿಯವರ ಟೆನ್ಸಿಲ್ ಕಲೆಕ್ಷನ್‌ನಲ್ಲಿ ನಟಿ ಸಂಜನಾ ಸಾಂಘ್ವಿ ಎಥ್ನಿಕ್ ಲುಕ್‌ನಲ್ಲಿ ಕಾಣಿಸಿಕೊಂಡರು. ಡಿಸೈನರ್ ಶಂತನು ನಿಖಿಲ್ ಅವರ ಲೆಬೆಲ್‌ಗಾಗಿ ನಟಿ ಕೃತಿ ಸನೂನ್ ಮೊದಲ ದಿನವೇ ವಾಕ್ ಮಾಡಿದ್ದರು. ನಟಿ ಮೃಣಾಲ್ ಠಾಕೂರ್ ಕೂಡ ಡಿಸೈನರ್ ಮಿಶ್ರು ಅವರ ರಾಣಿ ಪಿಂಕ್ ತ್ರೀ ಪೀಸ್ ಫ್ಲೋರಲ್ ಎಂಬೋಸಿಂಗ್ ಲೆಹೆಂಗಾದಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆ ಗಳಿಸಿದರು. ನಟಿ ಗೌಹರ್ ಖಾನ್ ಹಾಗೂ ವಿಜಯ್ ವರ್ಮಾ ಕೂಡ ಶೋ ಸ್ಟಾಪರ್‌ಗಳಾಗಿ ಎಲ್ಲರ ಮನ ಸೆಳೆದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Weekend style | ಆತ್ಮವಿಶ್ವಾಸವೇ ನನ್ನ ಫ್ಯಾಷನ್ ಎನ್ನುವ ಸುಮನಾ ಗೌಡ