Site icon Vistara News

Larissa Borges: ಫ್ಯಾಷನ್ ಲೋಕದ ತಾರೆ, ಖ್ಯಾತ ಮಾಡೆಲ್ ಹೃದಯಾಘಾತದಿಂದ ನಿಧನ

Larissa Borges

ಬೆಂಗಳೂರು: ಬ್ರೆಜಿಲ್‍ (Model)ನ ಖ್ಯಾತ ಮಾಡೆಲ್, ಫ್ಯಾಷನ್ ಲೋಕದ ತಾರೆ 33 ವರ್ಷದ ಹರೆಯದ ಲಾರಿಸ್ಸಾ ಬೋರ್ಗೆಸ್ (Larissa Borges) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈಗಾಗಲೇ ಎರಡು ಬಾರಿ ಅವರಿಗೆ ಹೃದಯಾಘಾತ ಸಂಭವಿಸಿತ್ತು ಎಂದು ಹೇಳಲಾಗುತ್ತಿದೆ. ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಲಾರಿಸ್ಸಾ ಬೋರ್ಗೆಸ್ ಕುಟುಂಬಸ್ಥರೊಬ್ಬರು ಮಾಡೆಲ್‌ ನಿಧನದ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

ಲಾರಿಸ್ಸಾ ಭಾನುವಾರ, 20ರಂದು ಗ್ರಾಮಡೋ-ಆರ್‌ಎಸ್‌ನಲ್ಲಿ (Gramado-RS) ಹೃದಯ ಸ್ತಂಭನಕ್ಕೆ ಒಳಗಾದರು. ಒಂದು ವಾರದವರೆಗೆ ಕೋಮಾದಲ್ಲಿದ್ದರು ಎಂದು ಕುಂಟುಂಬ ಮೂಲಗಳು ತಿಳಿಸಿವೆ. ಎರಡು ಬಾರಿ ಲಾರಿಸ್ಸಾ ಹೃದಯಾಘಾತಕ್ಕೆ ಒಳಗಾಗಿದ್ದರು.

ಆಗಸ್ಟ್ 20ರಂದು ರಿಸ್ಸಾ ಬೋರ್ಗೆಸ್ ಅವರು ಹೃದಯದ ತೊಂದರೆಗಳನ್ನು ಅನುಭವಿಸಿದಾಗ ಅವರು ಮದ್ಯಪಾನ ಮಾಡಿರಬಹುದು ಎಂದು ಪ್ರಾಥಮಿಕ ತನಿಖೆಯು ಬಹಿರಂಗಪಡಿಸಿದೆ. ಫಿಟ್ನೆಸ್ ಮತ್ತು ಫ್ಯಾಷನ್ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದರು ಲಾರಿಸ್ಸಾ. ಸಾಕಷ್ಟು ಉತ್ಪನ್ನಗಳಿಗೆ ಅವರು ರೂಪದರ್ಶಿಯಾಗಿದ್ದರು.

ಇದನ್ನೂ ಓದಿ: Adhvithi Shetty: ಮಿಸ್ಟರ್‌ & ಮಿಸೆಸ್‌ ರಾಮಾಚಾರಿ ಖ್ಯಾತಿಯ ಅವಳಿ ನಟಿಯರಾದ ಅದ್ವಿತಿ-ಅಶ್ವಿತಿ ತಂದೆ ನಿಧನ!

ಕಾರ್ಯಕ್ರಮಕ್ಕೆಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಕೂಡಲೇ ಕೋಮಾಗೆ ಜಾರಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಈಗಾಗಲೇ ಮರಣೋತ್ತರ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ.

Exit mobile version