ಶೀಲಾ ಸಿ. ಶೆಟ್ಟಿ, ಬೆಂಗಳೂರು
ನ್ಯೂ ಇಯರ್ ಸೆಲೆಬ್ರೇಷನ್‌ಗೆ ಮೆನ್ಸ್ ಫ್ಯಾಷನ್ ಲುಕ್ ಆಕರ್ಷಕವಾಗಿರಲಿ ಎನ್ನುತ್ತಿದ್ದಾರೆ ಮೆನ್ಸ್ ಸ್ಟೈಲಿಸ್ಟ್‌ಗಳು. ಪ್ರತಿದಿನ ಒಂದೇ ರೀತಿಯಲ್ಲಿ ಕಾಣಿಸುವ ಬದಲು, ಹೊಸ ವರ್ಷದ ಸೆಲೆಬ್ರೇಷನ್‌ನಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಅಥವಾ ನಿಮ್ಮ ಕ್ಷೇತ್ರಕ್ಕೆ ಮ್ಯಾಚ್ ಆಗುವಂತಹ ಸ್ಟೈಲಿಂಗ್ ಮಾಡಿ ಎನ್ನುತ್ತಾರೆ. ಇದಕ್ಕಾಗಿ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಉಲ್ಲಾಸ ತುಂಬುವ ಔಟ್‌ಫಿಟ್ಸ್
“ಸಮಿಕ್ಷೆಯೊಂದರ ಪ್ರಕಾರ, ಹೊಸ ವರ್ಷದ ಆಚರಣೆಯಂದು ಕೇವಲ ಯುವತಿಯರು ಮಾತ್ರವಲ್ಲ, ಯುವಕರು ಹಾಗೂ ಎಲ್ಲಾ ವಯಸ್ಸಿನ ಪುರುಷರೂ ಕೂಡ ಸ್ಟೈಲಿಶ್ ಆಗಿ ಕಾಣಲು ಪ್ರಯತ್ನಿಸುತ್ತಾರಂತೆ. ಆದರೆ ಕೆಲವರು ಅದೇ ಹಳೆಯ ಸ್ಟೈಲ್ ಬದಲಿಸಲಾಗದೇ ಪ್ರತಿ ವರ್ಷವೂ ಒಂದೇ ತರಹದ ಔಟ್‌ಫಿಟ್ ಕೊಂಡು ಸ್ಟೈಲ್ ಬದಲಿಸಲಾಗದೇ ಹಣ ವ್ಯಯಿಸುತ್ತಾರಂತೆ. ಪರಿಣಾಮ, ಈ ಔಟ್‌ಫಿಟ್‌ಗಳು ಹೊಸ ಹುರುಪು ತುಂಬುವುದಿಲ್ಲ!” ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಅವರ ಪ್ರಕಾರ, ನಾವು ಧರಿಸುವ ಪ್ರತಿಯೊಂದು ಔಟ್‌ಫಿಟ್ಸ್ ಕೂಡ ನಮ್ಮ ಆ ದಿನದ ಉಲ್ಲಾಸಕ್ಕೆ ಕಾರಣವಾಗುತ್ತವೆ. ಅದರಲ್ಲೂ ಸೆಲೆಬ್ರೇಷನ್‌ನ ಭಾಗವಾಗುತ್ತವೆ. ಸಂಭ್ರಮಾಚರಣೆಗೆ ಕಾರಣವಾಗುತ್ತವೆ. ಹಾಗಾಗಿ ಇವುಗಳ ಆಯ್ಕೆಯಲ್ಲಿ ಜಾಣತನ ಮುಖ್ಯ “ ಎನ್ನುತ್ತಾರೆ ಮೆನ್ಸ್ ಸ್ಪೆಷಲ್ ಸ್ಟೈಲಿಸ್ಟ್ ಧವನ್. ಅವರ ಪ್ರಕಾರ, ಇದಕ್ಕಾಗಿ ಒಂದಿಷ್ಟು ಸ್ಟೈಲಿಂಗ್ ಟ್ರಿಕ್ಸ್ ಮಾಡಬಹುದು ಎನ್ನುತ್ತಾರೆ.
ಕಾರ್ಪೋರೇಟ್ ಕ್ಷೇತ್ರದ ಪುರುಷರ ಸ್ಟೈಲಿಂಗ್
ಕಾರ್ಪೋರೇಟ್ ಕ್ಷೇತ್ರದವರಾದಲ್ಲಿ ಫಾರ್ಮಲ್ಸ್ ಡ್ರೆಸ್‌ಕೋಡ್‌ನಲ್ಲೆ ಒಂದಿಷ್ಟು ಫ್ರೆಶ್ ಶೇಡ್‌ನ ಔಟ್‌ಫಿಟ್ ಚೂಸ್ ಮಾಡಿ ಧರಿಸಬಹುದು. ಕಚೇರಿಯಲ್ಲಾದಲ್ಲಿ ಡ್ರೆಸ್‌ಕೋಡ್ ಫಾಲೋ ಮಾಡಬೇಕಾಗುತ್ತದೆ. ಸ್ನೇಹಿತರ ಜೊತೆಯಾದಲ್ಲಿ ಯಾವುದಾದರೂ ಔಟ್‌ಫಿಟ್‌ಗೆ ಮೊರೆ ಹೋಗಬಹುದು.
ಕಾಲೇಜು ಹುಡುಗರ ಬಿಂದಾಸ್ ಔಟ್‌ಫಿಟ್ಸ್
ಅತಿ ಹೆಚ್ಚು ಸ್ಟೈಲಿಶ್ ಲುಕ್ ಹೊಂದುವ ಪುರುಷರಲ್ಲಿ ಕಾಲೇಜು ಹುಡುಗರು ಮೊದಲ ಸ್ಥಾನ ಗಳಿಸುತ್ತಾರೆ. ಮಿಕ್ಸ್ ಮ್ಯಾಚ್‌ನಿಂದಿಡಿದು ಮಿಸ್ ಮ್ಯಾಚ್ ಫ್ಯಾಷನ್ ಔಟ್‌ಫಿಟ್ಸ್, ಈ ನ್ಯೂ ಇಯರ್ ಟ್ರೆಂಡ್‌ನಲ್ಲಿದೆ. ಫಂಕಿ ಲುಕ್ ಟ್ರೈ ಮಾಡುವ ಹುಡುಗರು ಲೇಯರ್ ಲುಕ್ ಪ್ರಯೋಗ ಕೂಡ ಮಾಡಬಹುದು.
ಮಧ್ಯವಯಸ್ಕ ಪುರುಷರ ಡೀಸೆಂಟ್ ಲುಕ್
ತಮಗೆ ವಯಸ್ಸಾಗಿದೆ ಸ್ಟೈಲ್ ಎಲ್ಲಾ ಯಾಕೆ ಎನ್ನುವ ಮಧ್ಯ ವಯಸ್ಕರು ಪ್ರತಿ ಬಾರಿ ಡೀಸೆಂಟ್ ಲುಕ್‌ಗೆ ಮೊರೆ ಹೋಗುವ ಬದಲು ಫಾರ್ಮಲ್ಸ್‌ನಲ್ಲಾದಲ್ಲಿ ಅಥವಾ ಡೆನೀಮ್ ಮಿಕ್ಸ್ ಮ್ಯಾಚ್ ಮಾಡಿ ಯಂಗ್ ಲುಕ್ ಪಡೆಯಬಹುದು. ಲುಕ್ ಬದಲಾವಣೆ ಸಾಧ್ಯವಿಲ್ಲ ಎನ್ನುವವರು ಬ್ಲೇಝರ್ ಧರಿಸಬಹುದು.
ಸಾಮಾನ್ಯ ಪುರುಷರ ಪ್ರಯೋಗಾತ್ಮಕ ಸ್ಟೈಲ್
ಅಂದಹಾಗೆ, ಸಾಮಾನ್ಯ ಪುರುಷರೇ ಅತಿ ಹೆಚ್ಚು ಸ್ಟೈಲ್‌ಗಳನ್ನು ಪ್ರಯೋಗ ಮಾಡುತ್ತಾರಂತೆ. ಇದಕ್ಕೆಪೂರಕ ಎಂಬಂತೆ, ಫ್ಲೋರಲ್ ಶಟ್ರ್ಸ್, ಜಗಮಗಿಸುವ ಜಾಕೆಟ್ಸ್ ರ‍್ಯಾಪರ್ಸ್ ಲುಕ್ ನೀಡುವ ಔಟ್‌ಫಿಟ್‌ಗಳನ್ನು ಪಾರ್ಟಿಗೆ ಧರಿಸುತ್ತಾರೆ. ಇದೀಗ ಟ್ರೆಂಡಿಯಾಗಿದೆ ಕೂಡ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: New Year Party Gowns Fashion: ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬಂತು 3 ಶೈಲಿಯ ಪಾರ್ಟಿ ಗೌನ್ಸ್