ಶೀಲಾ ಸಿ. ಶೆಟ್ಟಿ , ಬೆಂಗಳೂರು
ತಾರೆಯರು ಲೆಕ್ಕವಿಲ್ಲದಷ್ಟು ಬಗೆಯ ಮೇಕಪ್ (Makeup Tips ) ಮಾಡುತ್ತಾರೆ ಹಾಗೂ ಆಕರ್ಷಕವಾಗಿ ಕಾಣುತ್ತಾರೆ. ಅವರಂತೆ ಕಾಣಲು ಒಂದಿಷ್ಟು ಮೇಕಪ್ ಟಿಪ್ಸ್ ಪಾಲಿಸಬೇಕಾಗುತ್ತದೆ. ಸೆಲೆಬ್ರಿಟಿ ಲುಕ್ ಪಡೆಯಲು ಈ ಕೆಳಗಿನ ೫ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಮೇಕಪ್ ತಜ್ಞರಾದ ಉಮಾ ಜಯಕುಮಾರ್.
ಮೇಕಪ್‌ನಲ್ಲಿ ಈ ಕೆಳಗಿನವನ್ನು ಬಳಸಿ
ಮೊದಲಿಗೆ ಎಲ್ಲರೂ ತ್ವಚೆಯ ಸ್ಕಿನ್ ಬಗ್ಗೆ ಕಾಳಜಿವಹಿಸಬೇಕು. ಹಾಗಾಗಿ ಮಾಡಿರುವ ಮೇಕಪ್ ಹೆಚ್ಚು ಹೊತ್ತು ಕಾಪಾಡಿಕೊಳ್ಳಲು ಪ್ರೈಮರ್ ಬಳಸಬಹುದು. ಲಿಕ್ವಿಡ್ ಹೈಲೈಟರ್ ಕೂಡ ಬಳಸುವುದು ಉತ್ತಮ. ಶೀರ್ ಕವರೇಜ್ ನೀಡುವ ಹೈಡ್ರೆಟಿಂಗ್ ಫೌಂಡೇಷನ್ ಹಚ್ಚಿ. ಇನ್ನು ಪ್ಲಂಪ್ ತುಟಿಯ ಲುಕ್‌ಗಾಗಿ ಆದಷ್ಟೂ ಪಿಂಕ್ ಬಾಮ್ ಲೇಪಿಸುವುದನ್ನು ರೂಢಿಸಿಕೊಳ್ಳಿ.
ಮಾನೋಕ್ರೋಮಾಟಿಕ್ ಲುಕ್
ಈ ಲುಕ್‌ಗಾಗಿ ಪಿಂಕ್, ಪೀಚ್ ಶೇಡ್‌ನ ಐ ಶೇಡ್‌ಗಳನ್ನು ಬಳಸಿ. ಮೊದಲು ಐ ಶ್ಯಾಡೋ ಪ್ರೈಮರ್ ಹಚ್ಚಿ ಬೆರಳಿನಿಂದಲೇ ಬ್ಲೆಂಡ್ ಮಾಡಿ. ನಂತರ ಪಿಂಕ್ ಶೇಡ್ ಹಚ್ಚಿ. ಸ್ಮೋಕ್ ಬ್ರೌನ್ ಕಾಜಲ್ ಕಣ್ಣಿನ ಕೆಳಗೆ ಹಚ್ಚಿ. ಮಸ್ಕರಾ ಲೇಪಿಸಿ. ತುಟಿಗೂ ಪಿಂಕ್ ಶೇಡ್ ಬಳಸಿ.
ಶಿಮ್ಮರ್ ಮೇಕಪ್
ಮೇಕಪ್‌ನಲ್ಲಿ ಕಣ್ಣಿಗೆ ಗೋಲ್ಡನ್ ಶಿಮ್ಮರ್ ಶೇಡ್ ಬಳಸುವುದರಿಂದ ಗ್ರ್ಯಾಂಡ್ ಲುಕ್ ನಿಮ್ಮದಾಗುತ್ತದೆ. ಡಾರ್ಕ್ ಸ್ಕಿನ್ ಟೋನ್‌ನವರು ಮಾತ್ರ ಅತಿ ಹೆಚ್ಚು ಬಳಸುವುದು ಬೇಡ. ಶಿಮ್ಮರ್ ಹೈಲೈಟರ್ ಮೇಕಪ್‌ನ ಕೊನೆಯಲ್ಲಿ ಬಳಸಿ. ಇದನ್ನು ಬಳಸಿದಾಗ ಮೇಕಪ್ ಸೆಟ್ಟಿಂಗ್ ಸ್ಪ್ರೇ ಬಳಸಿ. ಶಿಮ್ಮರ್ ಲಿಪ್ ಸ್ಟಿಕ್ ಕೂಡ ಹಚ್ಚಬಹುದು.
ರೆಡ್ ಲಿಪ್ ಶೇಡ್ ಹಚ್ಚಿ ನೋಡಿ
ಫೆಸ್ಟೀವ್ ಸೀಸನ್‌ನಲ್ಲಿ ಬಹುತೇಕರು ಸೀರೆ ಹಾಗೂ ಲೆಹೆಂಗಾದಂತಹ ಗ್ರ್ಯಾಂಡ್ ಉಡುಪು ಧರಿಸುವುದರಿಂದ ರೆಡ್ ಮ್ಯಾಟ್ ಲಿಪ್‌ಸ್ಟಿಕ್ ಬಳಸಬಹುದು. ಇದು ಯಾವುದೇ ವರ್ಣಕ್ಕಾದರೂ ಸೂಟ್ ಆಗುತ್ತದೆ. ಇದನ್ನು ಬಳಸಿದಾಗ ಕಂಗಳ ಮೇಕಪ್ ಲೈಟಾಗಿರಲಿ. ಇಲ್ಲವಾದಲ್ಲಿ ನೋಡುಗರಿಗೆ ಮುಜುಗರವಾಗಬಹುದು.
ನ್ಯಾಚುರಲ್ ಆಗಿಯೂ ಗ್ರ್ಯಾಂಡ್‌ಲುಕ್ ಪಡೆಯಿರಿ
ಫೌಂಡೇಷನ್ ಬದಲು ಬಿಬಿ ಕ್ರೀಮ್ ಬಳಸಿದಲ್ಲಿ ನ್ಯಾಚುರಲ್ ಆಗಿ ಕಾಣಿಸುವುದರೊಂದಿಗೆ ತ್ವಚೆಗೆ ಕಲರ್ ಕೂಡ ಪಡೆಯಬಹುದು. ಡಸ್ಟ್ ಲೂಸ್ ಪೌಡರ್ ಹಚ್ಚಿ. ಪಿಂಕ್ ಬ್ಲಷ್ ಮಾಡಿ. ಐ ಮೇಕಪ್ ಹೆಚ್ಚು ಬೇಡ. ನ್ಯೂಡ್ ಕಾಜಲ್ ಹಚ್ಚಿ. ಗ್ಲೋಸಿ ಲಿಪ್‌ಸ್ಟಿಕ್ ಲೇಪಿಸಿ. ನ್ಯಾಚುರಲ್ ಆಗಿ ಕಾಣಿಸುವಿರಿ.
( ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Weekend style | ಆತ್ಮವಿಶ್ವಾಸವೇ ನನ್ನ ಫ್ಯಾಷನ್ ಎನ್ನುವ ಸುಮನಾ ಗೌಡ