-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೆಂಗಳೂರು: ಟ್ರೆಡಿಷನಲ್ ಬಾರ್ಡರ್ ಸೀರೆಯನ್ನು ಹಾಲ್ಟರ್ ಬ್ಲೌಸ್‌ನೊಂದಿಗೆ ಧರಿಸಿ ಆಕರ್ಷಕವಾಗಿ ಕಾಣಿಸಬಹುದು ಎಂಬುದನ್ನು ಪ್ರೂವ್ ಮಾಡಿದ್ದಾರೆ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆ ನಟಿ ಮಲೈಕಾ ಟಿ. ವಸುಪಾಲ್. ಹೌದು, ಟ್ರೆಡಿಷನಲ್ ಬಾರ್ಡರ್ ಸಿಲ್ಕ್ ಸೀರೆಗೆ ವೆಸ್ಟರ್ನ್ ಲುಕ್ ನೀಡುವ ಹಾಲ್ಟರ್ ನೆಕ್ ಲೈನ್ ಡಿಸೈನ್ ಇರುವಂತಹ ಗೋಲ್ಡನ್ ಶೇಡ್‌ನ ಬ್ಲೌಸ್ ಪ್ರಯೋಗಿಸಿರುವ ನಟಿ ಮಲೈಕಾ ವಸುಪಾಲ್, ಇಂಡೋ-ವೆಸ್ಟರ್ನ್ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ಲಿವ್‌ಲೆಸ್ ಬ್ಲೌಸ್ ಬದಲು ಹಾಲ್ಟರ್ ಬ್ಲೌಸ್
ಈ ಮೊದಲು ಸ್ಲಿವ್‌ಲೆಸ್ ಸೀರೆ ಬ್ಲೌಸ್‌ಗಳು, ಬ್ಯಾಕ್‌ಲೆಸ್ ಬ್ಲೌಸ್‌ಗಳು ಮಾತ್ರ ಸೀರೆಗೆ ಗ್ಲಾಮರಸ್ ಲುಕ್ ನೀಡುತ್ತಿದ್ದವು. ಇದೀಗ, ಇವುಗಳ ಜಾಗಕ್ಕೆ ವೆಸ್ಟರ್ನ್ ಕ್ರಾಪ್ ಟಾಪ್‌ಗಳು ಬಂದಿವೆ. ಅವುಗಳ ಡಿಸೈನನ್ನು ಕಾಪಿ ಮಾಡಿದಂತಹ ಹಾಲ್ಟರ್ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ಭುಜವನ್ನುಆಕರ್ಷಕವಾಗಿ ಬಿಂಬಿಸುವ ಈ ಬ್ಲೌಸ್‌ಗಳು ಇಂಡೋ-ವೆಸ್ಟರ್ನ್ ಸ್ಟೈಲ್‌ಗೆ ಸಾಥ್ ನೀಡುತ್ತಿವೆ. ಇದೀಗ ಇವುಗಳೊಂದಿಗೆ ರೇಷ್ಮೆ ಸೀರೆ, ಕಾಟನ್ ಸೀರೆ, ಹ್ಯಾಂಡ್‌ಲೂಮ್ ಸೀರೆಗಳನ್ನು ಉಟ್ಟು ಪ್ರಯೋಗಿಸುವುದರ ಮೂಲಕ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರು ಇದನ್ನು ಮತ್ತಷ್ಟು ಟ್ರೆಂಡಿಯಾಗಿಸಿದ್ದಾರೆ ಎಂದಿದ್ದಾರೆ ಡಿಸೈನರ್ ದಿವಾ ರಾಮನ್.
ಇದನ್ನೂ ಓದಿ: Rakshit Shetty: ʻಏಕಂʼ ವೆಬ್ ಸಿರೀಸ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ!
ಮಲೈಕಾ ವಸುಪಾಲ್ ಹಾಲ್ಟರ್ ಸೀರೆ ಲವ್
ಕನ್ನಡದ ಹಿಟ್ಲರ್ ಕಲ್ಯಾಣ ಸೀರಿಯಲ್‌ನಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿ, ಜನಪ್ರಿಯರಾದ ಮಲೈಕಾ, ಇತ್ತಿಚೆಗೆ ಸಿನಿಮಾವೊಂದರಲ್ಲೂ ನಾಯಕಿಯಾಗಿಯೂ ಕಾಣಿಸಿಕೊಂಡರು. ಫ್ಯಾಷೆನಬಲ್ ನಟಿ ಎಂದರೂ ತಪ್ಪಿಲ್ಲ! ಎಥ್ನಿಕ್ ಉಡುಗೆಗಳ ನಡುವೆ ಆಗಾಗ್ಗೆ ವೆಸ್ಟರ್ನ್ ಔಟ್‌ಫಿಟ್‌ಗಳಲ್ಲೂ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.
ಗ್ಲಾಮರಸ್ ಲುಕ್‌ಗಾಗಿ ಹಾಲ್ಟರ್ ನೆಕ್‌ಲೈನ್ ಬ್ಲೌಸ್
- ಗ್ಲಾಮರಸ್ ಲುಕ್ ಬಯಸುವವರು, ಸ್ಲಿವ್‌ಲೆಸ್ –ಬ್ಯಾಕ್‌ಲೆಸ್ ಬ್ಲೌಸ್ ಬದಲು ಈ ಹಾಲ್ಟರ್ನೆಕ್ಲೈನ್ ಬ್ಲೌಸ್ ಮಿಕ್ಸ್ ಮ್ಯಾಚ್ ಮಾಡಬಹುದು.
- ಕಾಟನ್ ಸೀರೆಗಾದಲ್ಲಿ ವೆಸ್ಟರ್ನ್ ಲುಕ್ ನೀಡುವಂತಹ ಸ್ಟ್ರೆಚಬಲ್ ಹಾಲ್ಟರ್ ನೆಕ್ ಬ್ಲೌಸ್ಗಳನ್ನು ಧರಿಸಬಹುದು.
- ಈ ಬ್ಲೌಸ್‌ನೊಂದಿಗೆ ಸೀರೆಯನ್ನು ಡಿಫರೆಂಟಾಗಿ ಡ್ರೇಪ್ ಮಾಡಬಹುದು.
- ಭುಜಗಳು ಅಗಲವಾಗಿದ್ದಲ್ಲಿ, ಆದಷ್ಟೂ ಅಗಲವಾಗಿರುವ ನೆಕ್‌ಲೈನ್ ಇರುವಂತವನ್ನು ಚೂಸ್ ಮಾಡಿಕೊಳ್ಳಬೇಕು.
- ಈ ನೆಕ್ಲೈನ್ನ ಬ್ಲೌಸ್ಗಳಿಗೆ ಆಕ್ಸೆಸರೀಸ್ ಧರಿಸುವ ಅಗತ್ಯವಿರುವುದಿಲ್ಲ.
- ಕುತ್ತಿಗೆಯ ಭಾಗದಲ್ಲಿ ರಿಂಕಲ್ಸ್ ಇರುವವರು ಇದನ್ನು ಧರಿಸಬಹುದು.
- ಹಾಲ್ಟರ್ ನೆಕ್‌ಲೈನ್ ಬ್ಯಾಕ್‌ಲೆಸ್ ಬ್ಲೌಸ್ ಆಗಿರುವುದರಿಂದ ಹೆಚ್ಚು ಎಕ್ಸ್ಪೋಸ್ ಆಗುವ ಸಾಧ್ಯತೆಗಳಿರುತ್ತವೆ. ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.
( ಲೇಖಕಿ ಫ್ಯಾಷನ್ ಪತ್ರಕರ್ತೆ )