Malaika Vasupal: ಟ್ರೆಡಿಷನಲ್‌ ಸೀರೆಗೆ ಹಾಲ್ಟರ್‌ ನೆಕ್‌ ಬ್ಲೌಸ್‌ ಪ್ರಯೋಗಿಸಿದ ನಟಿ ಮಲೈಕಾ ವಸುಪಾಲ್‌ - Vistara News

ಫ್ಯಾಷನ್

Malaika Vasupal: ಟ್ರೆಡಿಷನಲ್‌ ಸೀರೆಗೆ ಹಾಲ್ಟರ್‌ ನೆಕ್‌ ಬ್ಲೌಸ್‌ ಪ್ರಯೋಗಿಸಿದ ನಟಿ ಮಲೈಕಾ ವಸುಪಾಲ್‌

Malaika Vasupal: ಟ್ರೆಡಿಷನಲ್‌ ಬಾರ್ಡರ್‌ ಸೀರೆಗೆ ವೆಸ್ಟರ್ನ್ ಲುಕ್‌ ನೀಡುವ ಹಾಲ್ಟರ್‌ ನೆಕ್‌ ಲೈನ್‌ ಡಿಸೈನ್‌ ಇರುವಂತಹ ಬ್ಲೌಸ್‌ ಪ್ರಯೋಗಿಸಿದ ನಟಿ ಮಲೈಕಾ ಟಿ. ವಸುಪಾಲ್‌, ಇಂಡೋ-ವೆಸ್ಟರ್ನ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಇವರಂತೆ ಇತರೇ ಮಾನಿನಿಯರು ಕೂಡ ಹೇಗೆಲ್ಲಾ ಹಾಲ್ಟರ್‌ ಬ್ಲೌಸ್‌ಗಳನ್ನು ಮಿಕ್ಸ್ ಮ್ಯಾಚ್ ಮಾಡಬಹುದು ಎಂಬುದರ ಬಗ್ಗೆ ಸೀರೆ ಸ್ಟೈಲಿಸ್ಟ್ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Malaika Vasupal experimented with a halter neck blouse for a traditional saree
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೆಂಗಳೂರು: ಟ್ರೆಡಿಷನಲ್‌ ಬಾರ್ಡರ್‌ ಸೀರೆಯನ್ನು ಹಾಲ್ಟರ್ ಬ್ಲೌಸ್‌ನೊಂದಿಗೆ ಧರಿಸಿ ಆಕರ್ಷಕವಾಗಿ ಕಾಣಿಸಬಹುದು ಎಂಬುದನ್ನು ಪ್ರೂವ್‌ ಮಾಡಿದ್ದಾರೆ ಸ್ಯಾಂಡಲ್‌ವುಡ್‌ ಹಾಗೂ ಕಿರುತೆರೆ ನಟಿ ಮಲೈಕಾ ಟಿ. ವಸುಪಾಲ್‌. ಹೌದು, ಟ್ರೆಡಿಷನಲ್‌ ಬಾರ್ಡರ್‌ ಸಿಲ್ಕ್‌ ಸೀರೆಗೆ ವೆಸ್ಟರ್ನ್ ಲುಕ್‌ ನೀಡುವ ಹಾಲ್ಟರ್‌ ನೆಕ್‌ ಲೈನ್‌ ಡಿಸೈನ್‌ ಇರುವಂತಹ ಗೋಲ್ಡನ್‌ ಶೇಡ್‌ನ ಬ್ಲೌಸ್‌ ಪ್ರಯೋಗಿಸಿರುವ ನಟಿ ಮಲೈಕಾ ವಸುಪಾಲ್‌, ಇಂಡೋ-ವೆಸ್ಟರ್ನ್ ಗ್ಲಾಮರಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಲಿವ್‌ಲೆಸ್‌ ಬ್ಲೌಸ್‌ ಬದಲು ಹಾಲ್ಟರ್ ಬ್ಲೌಸ್

ಈ ಮೊದಲು ಸ್ಲಿವ್‌ಲೆಸ್‌ ಸೀರೆ ಬ್ಲೌಸ್‌ಗಳು, ಬ್ಯಾಕ್‌ಲೆಸ್‌ ಬ್ಲೌಸ್‌ಗಳು ಮಾತ್ರ ಸೀರೆಗೆ ಗ್ಲಾಮರಸ್‌ ಲುಕ್‌ ನೀಡುತ್ತಿದ್ದವು. ಇದೀಗ, ಇವುಗಳ ಜಾಗಕ್ಕೆ ವೆಸ್ಟರ್ನ್‌ ಕ್ರಾಪ್‌ ಟಾಪ್‌ಗಳು ಬಂದಿವೆ. ಅವುಗಳ ಡಿಸೈನನ್ನು ಕಾಪಿ ಮಾಡಿದಂತಹ ಹಾಲ್ಟರ್‌ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ಭುಜವನ್ನುಆಕರ್ಷಕವಾಗಿ ಬಿಂಬಿಸುವ ಈ ಬ್ಲೌಸ್‌ಗಳು ಇಂಡೋ-ವೆಸ್ಟರ್ನ್‌ ಸ್ಟೈಲ್‌ಗೆ ಸಾಥ್‌ ನೀಡುತ್ತಿವೆ. ಇದೀಗ ಇವುಗಳೊಂದಿಗೆ ರೇಷ್ಮೆ ಸೀರೆ, ಕಾಟನ್‌ ಸೀರೆ, ಹ್ಯಾಂಡ್‌ಲೂಮ್‌ ಸೀರೆಗಳನ್ನು ಉಟ್ಟು ಪ್ರಯೋಗಿಸುವುದರ ಮೂಲಕ ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು ಇದನ್ನು ಮತ್ತಷ್ಟು ಟ್ರೆಂಡಿಯಾಗಿಸಿದ್ದಾರೆ ಎಂದಿದ್ದಾರೆ ಡಿಸೈನರ್‌ ದಿವಾ ರಾಮನ್‌.

ಇದನ್ನೂ ಓದಿ: Rakshit Shetty: ʻಏಕಂʼ ವೆಬ್ ಸಿರೀಸ್​ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ!

ಮಲೈಕಾ ವಸುಪಾಲ್‌ ಹಾಲ್ಟರ್‌ ಸೀರೆ ಲವ್‌

ಕನ್ನಡದ ಹಿಟ್ಲರ್‌ ಕಲ್ಯಾಣ ಸೀರಿಯಲ್‌ನಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸಿ, ಜನಪ್ರಿಯರಾದ ಮಲೈಕಾ, ಇತ್ತಿಚೆಗೆ ಸಿನಿಮಾವೊಂದರಲ್ಲೂ ನಾಯಕಿಯಾಗಿಯೂ ಕಾಣಿಸಿಕೊಂಡರು. ಫ್ಯಾಷೆನಬಲ್‌ ನಟಿ ಎಂದರೂ ತಪ್ಪಿಲ್ಲ! ಎಥ್ನಿಕ್‌ ಉಡುಗೆಗಳ ನಡುವೆ ಆಗಾಗ್ಗೆ ವೆಸ್ಟರ್ನ್‌ ಔಟ್‌ಫಿಟ್‌ಗಳಲ್ಲೂ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.

ಗ್ಲಾಮರಸ್‌ ಲುಕ್‌ಗಾಗಿ ಹಾಲ್ಟರ್‌ ನೆಕ್‌ಲೈನ್‌ ಬ್ಲೌಸ್‌

 • ಗ್ಲಾಮರಸ್‌ ಲುಕ್‌ ಬಯಸುವವರು, ಸ್ಲಿವ್‌ಲೆಸ್‌ –ಬ್ಯಾಕ್‌ಲೆಸ್‌ ಬ್ಲೌಸ್‌ ಬದಲು ಈ ಹಾಲ್ಟರ್‌ನೆಕ್‌ಲೈನ್‌ ಬ್ಲೌಸ್‌ ಮಿಕ್ಸ್ ಮ್ಯಾಚ್ ಮಾಡಬಹುದು.
 • ಕಾಟನ್‌ ಸೀರೆಗಾದಲ್ಲಿ ವೆಸ್ಟರ್ನ್‌ ಲುಕ್‌ ನೀಡುವಂತಹ ಸ್ಟ್ರೆಚಬಲ್‌ ಹಾಲ್ಟರ್‌ ನೆಕ್‌ ಬ್ಲೌಸ್‌ಗಳನ್ನು ಧರಿಸಬಹುದು.
 • ಈ ಬ್ಲೌಸ್‌ನೊಂದಿಗೆ ಸೀರೆಯನ್ನು ಡಿಫರೆಂಟಾಗಿ ಡ್ರೇಪ್‌ ಮಾಡಬಹುದು.
 • ಭುಜಗಳು ಅಗಲವಾಗಿದ್ದಲ್ಲಿ, ಆದಷ್ಟೂ ಅಗಲವಾಗಿರುವ ನೆಕ್‌ಲೈನ್‌ ಇರುವಂತವನ್ನು ಚೂಸ್‌ ಮಾಡಿಕೊಳ್ಳಬೇಕು.
 • ಈ ನೆಕ್‌ಲೈನ್‌ನ ಬ್ಲೌಸ್‌ಗಳಿಗೆ ಆಕ್ಸೆಸರೀಸ್‌ ಧರಿಸುವ ಅಗತ್ಯವಿರುವುದಿಲ್ಲ.
 • ಕುತ್ತಿಗೆಯ ಭಾಗದಲ್ಲಿ ರಿಂಕಲ್ಸ್ ಇರುವವರು ಇದನ್ನು ಧರಿಸಬಹುದು.
 • ಹಾಲ್ಟರ್‌ ನೆಕ್‌ಲೈನ್‌ ಬ್ಯಾಕ್ಲೆಸ್‌ ಬ್ಲೌಸ್‌ ಆಗಿರುವುದರಿಂದ ಹೆಚ್ಚು ಎಕ್ಸ್ಪೋಸ್‌ ಆಗುವ ಸಾಧ್ಯತೆಗಳಿರುತ್ತವೆ. ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Floral Dupatta Recreation: ಅಂಬಾನಿ ಸೊಸೆಯ ದುಂಡು ಮಲ್ಲಿಗೆ ದುಪಟ್ಟಾ ಕೇವಲ 2 ಸಾವಿರ ರೂ.ಯಲ್ಲಿ ಮರು ಸೃಷ್ಟಿ!

Floral Dupatta Recreation: ಲಕ್ಷಗಟ್ಟಲೇ ಹಣ ಸುರಿದು ತಮ್ಮ ಅರಿಷಿಶಿನ ಶಾಸ್ತ್ರದಲ್ಲಿ ರಾಧಿಕಾ ಮರ್ಚೆಂಟ್‌ ಹೊದ್ದುಕೊಂಡಿದ್ದ ಡಿಸೈನರ್‌ ಪೂಲೋಂಕಾ ಚಾದರವನ್ನು ಕೇವಲ 2 ಸಾವಿರ ರೂ.ಗಳಿಗೂ ಕಡಿಮೆ ವೆಚ್ಚದಲ್ಲಿ ರೀ ಕ್ರಿಯೇಟ್‌ ಮಾಡಿರುವ ಫ್ಯಾಷನ್‌ ಇನ್‌ಫ್ಲೂಯೆನ್ಸರ್ ಅರುಶಿ ಬಗ್ಗೆ ಎಲ್ಲೆಡೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಈ ಕುರಿತಂತೆ ಫ್ಯಾಷನ್‌ ವಿಶ್ಲೇಷಕರು ಹೇಳಿರುವುದೇನು? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Floral Dupatta Recreation
ಚಿತ್ರಗಳು: ಅರುಶಿ ಪಾಹ್ವಾ, ಇನ್ಸ್‌ಟಾಗ್ರಾಮ್‌ ಖಾತೆ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಧಿಕಾ ಮರ್ಚೆಂಟ್‌ ತಮ್ಮ ಪ್ರಿ –ವೆಡ್ಡಿಂಗ್‌ನ ಅರಿಷಿಣ ಶಾಸ್ತ್ರದಲ್ಲಿ ಧರಿಸಿದ್ದ ದುಬಾರಿ ಫ್ಲೋರಲ್ ದುಪಟ್ಟಾ, ಇದೀಗ ಕೇವಲ 2 ಸಾವಿರ ರೂ.ಗಳಿಗೆ ಮರು ಸೃಷ್ಟಿಯಾಗಿದೆ. ಹೌದು. ದಿಲ್ಲಿ ಮೂಲದ ಫ್ಯಾಷನ್‌ ಇನ್‌ಫ್ಲೂಯೆನ್ಸರ್ ಅರುಶಿ ಪಾಹ್ವಾ ಎಂಬುವರು ಈ ಫ್ಲೋರಲ್‌ ದುಪಟ್ಟಾವನ್ನು ಮರು ಸೃಷ್ಟಿಸಿದ್ದು, ಫ್ಯಾಷನ್‌ ಲೋಕದಲ್ಲಿ ಇವರ ಈ ಕ್ರಿಯೇಟಿವಿಟಿಗೆ ಪ್ರಶಂಶೆಯ ಸುರಿಮಳೆಯಾಗಿದೆ.

Floral Dupatta Recreation

ಕೈಗೆಟಕುವ ಬೆಲೆಯಲ್ಲಿ ಫ್ಲೋರಲ್‌ ದುಪಟ್ಟಾ ರೀ ಕ್ರಿಯೇಷನ್‌

ಅಬ್ಬಬ್ಬಾ… ಕೆಲವು ಸೆಲೆಬ್ರೆಟಿಗಳ ಡಿಸೈನರ್‌ವೇರ್‌ಗಳನ್ನು ನೋಡಿದಾಗ, ದುಬಾರಿಯಾಗಿರುವ ಇಂಥವನ್ನು ಸಾಮಾನ್ಯ ಹೆಣ್ಣು ಮಕ್ಕಳು ಕೊಳ್ಳಲು ಅಥವಾ ಧರಿಸಲು ಸಾಧ್ಯವೇ ಇಲ್ಲ ಎಂಬುದನ್ನು ಸುಳ್ಳಾಗಿಸಿದ್ದಾರೆ ಫ್ಯಾಷನ್‌ ಇನ್‌ಫ್ಲೂಯೆನ್ಸರ್ ಅರುಶಿ. ಇದು ಸಾಕಷ್ಟು ಸ್ಥಳೀಯ ಹಾಗೂ ಭಾವಿ ಡಿಸೈನರ್‌ಗಳಿಗೆ ಮಾದರಿಯಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಿಯಾ.

Floral Dupatta Recreation

ದುಂಡು ಮಲ್ಲಿಗೆ ದುಪಟ್ಟಾ ರೀ ಕ್ರಿಯೇಟ್‌ ಮಾಡಿದ ಕಥೆ

ಅಂದಹಾಗೆ, ಅರುಶಿಯವರು, ರೀ ಕ್ರಿಯೇಟ್‌ ಮಾಡುವ ಮೊದಲು ಎಲ್ಲಾ ಹೂ ಮಾರಾಟಗಾರರು ಹಾಗೂ ಡಿಸೈನರ್‌ಗಳ ಬಳಿ ಹೋಗಿ ವಿಚಾರಿಸಿ ಕೇಳಿದರಂತೆ. ಕೆಲವರು ಕನಿಷ್ಟವೆಂದರೂ ಹದಿನೈದು ಸಾವಿರ ರೂ.ಗಳಾಗಬಹುದು ಎಂದರಂತೆ. ಇನ್ನು, ಕೆಲವರು ಅತಿ ಬೇಗ ಮುದುಡುವ ಹೂವಾದ್ದರಿಂದ ರೆಡಿ ಮಾಡಿಕೊಡಲು ಒಲ್ಲೆ ಎಂದರಂತೆ. ಆಗ ಅರುಶಿ, ತಾವೇ ಖುದ್ದು ರೀ ಕ್ರಿಯೇಟ್‌ ಮಾಡುವ ಕೆಲಸಕ್ಕೆ ಕೈ ಹಾಕಿದರಂತೆ. ಇದನ್ನು ಅವರು ತಮ್ಮ ಯೂ ಟ್ಯೂಬ್‌ನಲ್ಲಿನ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ, ತಾವು ಇದಕ್ಕಾಗಿ ಚಾಂದನಿ ಚೌಕ್‌ನಿಂದ ಮೋತಿ ನಗರ್‌ವರೆಗೂ ಹೂವಿನ ಮಾರ್ಕೆಟ್‌ನಲ್ಲಿ ಅಲೆದಲೆದು, ಕೊಂಡು ಮನೆಗೆ ತಂದು, ಅವುಗಳನ್ನು ತಾಳ್ಮೆಯಿಂದ ಹೆಣೆದು, ಪೊಣಿಸಿ, ಕೊನೆಗೂ ರಾಧಿಕಾ ಫ್ಲೋರಲ್‌ ದುಪಟ್ಟಾದಂತೆಯೇ ಕಾಣುವ ದುಪಟ್ಟಾ ಮರು ಸೃಷ್ಠಿಸಿದರಂತೆ. ಆಗಾಗ್ಗೆ ಹೂಗಳು ಬಾಡದಂತೆ ನೀರನ್ನು ಸಿಂಪಡಿಸಿ, ಕಾಪಾಡಿದರಂತೆ. ನಂತರ ಥೇಟ್‌ ರಾಧಿಕಾಳಂತೆ ಸಿಂಗರಿಸಿಕೊಂಡು ದುಪಟ್ಟಾ ಧರಿಸಿ ಸಂತಸ ಪಟ್ಟಿದ್ದನ್ನು ಅವರು ಮರೆಯಲಾಗುವುದಿಲ್ಲವಂತೆ.

ಅರುಶಿಯನ್ನು ಹಾಡಿ ಹೊಗಳಿದ ಫ್ಯಾಷನ್‌ ವಿಶ್ಲೇಷಕರು

ಸೆಲೆಬ್ರೆಟಿ ಡಿಸೈನರ್‌ ಅನಾಮಿಕಾ ಖನ್ನಾ ಅವರ ಡಿಸೈನ್‌ನಲ್ಲಿ ತಯಾರಾದ ರಾಧಿಕಾ ಫ್ಲೋರಲ್‌ ದುಪಟ್ಟಾದಂತೆಯೇ, ಅರುಶಿ ಅವರು ಸಿದ್ಧಪಡಿಸಿದ ಹೂವುಗಳ ದುಪಟ್ಟಾ ಫ್ಯಾಷನ್‌ ವಿನ್ಯಾಸಕರ ಮನಗೆದ್ದಿದೆ. ಅಲ್ಲದೇ, ಅತಿ ಕಡಿಮೆ ಬೆಲೆಯಲ್ಲಿ, ಸುಮಾರು 12 ಗಂಟೆಗಳ ಕಾಲ ಕಷ್ಟಪಟ್ಟು, ರೀ ಕ್ರೀಯೇಟ್‌ ಮಾಡಿರುವುದು ಫ್ಯಾಷನ್‌ ವಿಶ್ಲೇಷಕರ ಮನ ಗೆದ್ದಿದೆ. ಸಾಮಾನ್ಯ ಮಹಿಳೆಯು ಕೂಡ ಕಡಿಮೆ ಖರ್ಚಿನಲ್ಲಿ ಸೆಲೆಬ್ರೆಟಿ ಲುಕ್‌ ನೀಡುವ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸಬಹುದಕ್ಕೆ ಮಾದರಿಯಾಗಿದೆ. ಇಂತಹವರನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ ಫ್ಯಾಷನಿಸ್ಟಾಗಳಾದ ವಿದ್ಯಾ ಹಾಗೂ ರಾಕಿ.

ಇದನ್ನೂ ಓದಿ: Monsoon Fashion: ಮಾನ್ಸೂನ್‌ಗೆ ಮರಳಿದೆ ಕಾರ್ಪೋರೇಟ್‌ ಯುವತಿಯರ ಬ್ಲೇಜರ್‌ ಜಾಕೆಟ್‌ ಫ್ಯಾಷನ್‌

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Monsoon Fashion: ಮಾನ್ಸೂನ್‌ಗೆ ಮರಳಿದೆ ಕಾರ್ಪೋರೇಟ್‌ ಯುವತಿಯರ ಬ್ಲೇಜರ್‌ ಜಾಕೆಟ್‌ ಫ್ಯಾಷನ್‌

Monsoon Fashion: ಕಾರ್ಪೋರೇಟ್‌ ಕ್ಷೇತ್ರದ ಯುವತಿಯರ ಬ್ಲೇಜರ್‌ ಜಾಕೆಟ್‌ ಫ್ಯಾಷನ್‌ ಈ ಮಾನ್ಸೂನ್‌ನಲ್ಲಿ ಮತ್ತೆ ಮರಳಿದೆ. ಇವುಗಳ ಡಿಫರೆಂಟ್‌ ಸ್ಟೈಲಿಂಗ್‌ನಿಂದ ಎಲ್ಲರನ್ನು ಸೆಳೆದಿದೆ. ಹಾಗಾದಲ್ಲಿ, ಸ್ಟೈಲಿಂಗ್‌ ಹೇಗೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

VISTARANEWS.COM


on

Monsoon Fashion
ಚಿತ್ರಗಳು: ನಮಿತಾ ಪ್ರಮೋದ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾರ್ಪೋರೇಟ್‌ ಕ್ಷೇತ್ರದ ಯುವತಿಯರ ಬ್ಲೇಜರ್‌ ಜಾಕೆಟ್‌ ಫ್ಯಾಷನ್‌ ಮಾನ್ಸೂನ್‌ ಸೀಸನ್‌ನಲ್ಲಿ (Monsoon Fashion) ಮತ್ತೆ ಮರಳಿದೆ. ಹೌದು, ಈ ಬಾರಿಯ ಮಾನ್ಸೂನ್‌ನಲ್ಲಿ ಕಾರ್ಪೋರೇಟ್‌ ಕ್ಷೇತ್ರದ ಯುವತಿಯರ ಫ್ಯಾಷನ್‌ನಲ್ಲಿ ನಾನಾ ಬಗೆಯ ಬ್ಲೇಝರ್‌ ಜಾಕೆಟ್‌ಗಳು, ನಯಾ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡಿವೆ.

Monsoon Fashion

ಬ್ಲೇಜರ್‌ ಜಾಕೆಟ್‌ನ ಕ್ಲಾಸಿ ಲುಕ್‌

“ಅಂದಹಾಗೆ ಬ್ಲೇಜರ್‌ ಜಾಕೆಟ್‌ ಫ್ಯಾಷನ್‌ ಹೊಸತೇನಲ್ಲ! ಆದರೆ, ಇದು ಇದುವರೆಗೂ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಇದೀಗ ಕಾರ್ಪೋರೇಟ್‌ ಕ್ಷೇತ್ರದ ಯುವತಿಯರನ್ನು ಮಾತ್ರವಲ್ಲ, ಇನ್ನಿತರೇ ಹುಡುಗಿಯರನ್ನು ಸೆಳೆದಿವೆ. ಇದಕ್ಕೆ ಕಾರಣ ಇವನ್ನು ಹೊಸ ಸ್ಟೈಲಿಂಗ್‌ ಮೂಲಕ ಧರಿಸಲಾರಂಭಿಸಿರುವುದು” ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಅವರ ಪ್ರಕಾರ, ಬ್ಲೇಜರ್‌ ಜಾಕೆಟ್‌ಗಳು, ಹೈ ಫ್ಯಾಷನ್‌ನಲ್ಲಿರುವಂತಹ ಕ್ಲಾಸಿ ಲುಕ್‌ ನೀಡುವ ಡ್ರೆಸ್‌ಕೋಡ್‌ ಎನ್ನುತ್ತಾರೆ.

Monsoon Fashion

ಮಳೆಗಾಲದಲ್ಲಿ ಬ್ಲೇಜರ್‌ ಜಾಕೆಟ್‌ ಪ್ರಭಾವ

ಮಳೆಗಾಲದಲ್ಲಿ ಬ್ಲೇಜರ್‌ ಜಾಕೆಟ್‌ಗಳು ಲೇಯರ್‌ ಲುಕ್‌ ನೀಡುತ್ತವೆ ಅಲ್ಲದೇ, ಕಾರ್ಪೋರೇಟ್‌ ಕ್ಷೇತ್ರದ ಯುವತಿಯರಿಗೆ ದಿನನಿತ್ಯದ ಮೀಟಿಂಗ್‌ ಹಾಗೂ ವರ್ಕ್‌ಶಾಪ್‌ಗಳಿಗೆ ಮ್ಯಾಚ್‌ ಆಗುತ್ತವೆ. ಅಲ್ಲದೇ, ಸದಾ ಎಸಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಇವು ಬೆಚ್ಚಗಿಡುತ್ತವೆ ಕೂಡ. ಇನ್ನು, ಹೈ ಫ್ಯಾಷನ್‌ ಲಿಸ್ಟ್ನಲ್ಲಿರುವ, ಇವು ಹೈ ಕ್ಲಾಸ್‌ ಲುಕ್‌ ನೀಡುವುದರೊಂದಿಗೆ ಧರಿಸುವ ಯುವತಿಯರ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.

Monsoon Fashion

ಟ್ರೆಂಡಿಯಾಗಿರುವ ಬ್ಲೇಜರ್‌ ಜಾಕೆಟ್ಸ್

ವೂಲ್‌, ಚೆಕ್ಡ್, ಗಿಂಗ್ನಂ ಶೈಲಿಯ ಬ್ಲೇಜರ್‌ ಜಾಕೆಟ್‌ಗಳು ಈ ಜನರೇಷನ್‌ ಹುಡುಗಿಯರನ್ನು ಸೆಳೆದಿವೆ. ಅದರಲ್ಲೂ ಲೈಟ್‌ವೈಟ್‌ ಬ್ಲೇಜರ್‌ ಜಾಕೆಟ್‌ಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ. ನೋಡಲು ವೆಸ್ಟರ್ನ್‌ ಲುಕ್‌ ನೀಡಿದರೂ ಆಕರ್ಷಕವಾಗಿ ಕಾಣಿಸುವ ಈ ಜಾಕೆಟ್‌ ಲುಕ್‌ನ ಬ್ಲೇಜರ್‌ಗಳು ಸದ್ಯ ಕಾರ್ಪೋರೇಟ್‌ ಕ್ಷೇತ್ರದ ಯುವತಿಯರ ಫ್ಯಾಷನ್‌ನ ಟಾಪ್‌ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Monsoon Fashion

ಯುವತಿಯರ ಬ್ಲೇಜರ್‌ ಜಾಕೆಟ್ ಸ್ಟೈಲಿಂಗ್‌ಗೆ 5 ಟಿಪ್ಸ್

 • ಜೀನ್ಸ್ ಪ್ಯಾಂಟ್‌ ಮೇಲೆ ಕ್ಯಾಶುವಲ್‌ ಲುಕ್‌ಗಾಗಿ ಧರಿಸಬಹುದು.
 • ಕೊಂಚ ಮಾಡರ್ನ್‌ ಲುಕ್‌ ಬೇಕಿದ್ದಲ್ಲಿ, ಕ್ರಾಪ್‌ ಟಾಪ್‌ ಅಥವಾ ಕ್ರಾಪ್‌ ಬ್ಲೌಸ್‌ಗೂ ಧರಿಸಬಹುದು.
 • ಸ್ಕರ್ಟ್ ಜೊತೆಗೂ ಮ್ಯಾಚ್‌ ಮಾಡಬಹುದು.
 • ಬ್ಲೇಜರ್‌ ಜಾಕೆಟ್‌ ಧರಿಸಿದಾಗ ಆದಷ್ಟೂ ಶೂಗಳನ್ನು ಧರಿಸಲೇಬೇಕು.
 • ಆಕ್ಸೆಸರೀಸ್‌ ಮಿನಿಮಲ್‌ ಆಗಿರಬೇಕು.

ಇದನ್ನೂ ಓದಿ: Monsoon fashion: ಶರ್ಟ್ ಸ್ಟೈಲ್‌ ಜಾಕೆಟ್ಸ್; ಇವು ಯುವಕರ ಮಳೆಗಾಲದ ಫ್ಯಾಷನ್‌ ಟ್ರೆಂಡ್‌

( ಲೇಖಕಿ : ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Union Budget 2024: ಏಳನೇ ಸಲ ಬಜೆಟ್ ಮಂಡನೆ; ನಿರ್ಮಲಾ ಸೀತಾರಾಮನ್‌ ಸೀರೆಯ ವಿಶಿಷ್ಟತೆ ಏನು?

Union Budget : ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಸಾಂಪ್ರದಾಯದಂತೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮೊಸರು ಮತ್ತು ಸಕ್ಕರೆ ತಿನ್ನಿಸಿ ಶುಭ ಹಾರೈಸಿದರು. ಪ್ರತೀ ಬಾರಿಯೂ ಬಜೆಟ್ ಮಂಡನೆ ದಿನ ವಿಶೇಷ ಸೀರೆಯಲ್ಲಿ ಕಾಣಿಸಿಕೊಳ್ಳುವ ನಿರ್ಮಲಾ ಅವರು ಈ ಬಾರಿಯೂ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

Nirmala Sitharaman’s Budget 2024 look White and Pink saree this time
Koo

ಬೆಂಗಳೂರು: ದೇಶವೇ ಕುತೂಹಲದಿಂದ ಕಾಯುತ್ತಿರುವ ಬಜೆಟ್‌ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುತ್ತಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದ ನಂತರ ಮೊದಲ ಕೇಂದ್ರ ಬಜೆಟ್‌ ಮಂಡನೆ(Union Budget 2024) ಆಗುತ್ತಿದೆ. ಏಳನೇ ಬಾರಿ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಸಂಸತ್‌ ಪ್ರವೇಶಕ್ಕೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ಕೊಟ್ಟರು. ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಸಾಂಪ್ರದಾಯದಂತೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮೊಸರು ಮತ್ತು ಸಕ್ಕರೆ ತಿನ್ನಿಸಿ ಶುಭ ಹಾರೈಸಿದರು. ಪ್ರತೀ ಬಾರಿಯೂ ಬಜೆಟ್ ಮಂಡನೆ ದಿನ ವಿಶೇಷ ಸೀರೆಯಲ್ಲಿ ಕಾಣಿಸಿಕೊಳ್ಳುವ ನಿರ್ಮಲಾ ಅವರು ಈ ಬಾರಿಯೂ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ.

ತಮ್ಮ ಏಳನೇ ಬಜೆಟ್‌ಗಾಗಿ, ಹಣಕಾಸು ಸಚಿವರು ಬಿಳಿ ಮತ್ತು ಗುಲಾಬಿ ಬಣ್ಣದ ಸೀರೆಯನ್ನು ಉಟ್ಟಿದ್ದಾರೆ. ಈ ಪ್ರಮುಖ ಸಂದರ್ಭಕ್ಕಾಗಿ ಆರು ಗಜಗಳ ಸೀರೆಯಲ್ಲಿ ಕಂಡರು. ವಿಶಿಷ್ಟವಾದ ರೇಷ್ಮೆ ಸೀರೆಯನ್ನು ಆರಿಸಿಕೊಂಡಿದ್ದಾರೆ. ಅವರ ಸೀರೆಯ ಬಣ್ಣ ಬಿಳಿ ಮತ್ತು ಗಾಢ ಗುಲಾಬಿಯಿಂದ ಕೂಡಿದೆ. ಗುಲಾಬಿ ಮತ್ತು ಬಿಳಿ ಬಣ್ಣದ ಸೀರೆಯು ಆಕರ್ಷಣೀಯವಾಗಿದೆ. ಇದು ಭಾರತೀಯ ಕರಕುಶಲತೆಯ ಶ್ರೀಮಂತ ಕಲಾತ್ಮಕತೆಯನ್ನು ಎತ್ತಿ ತೋರಿಸುತ್ತದೆ. ಗುಲಾಬಿ ಬ್ಲೌಸ್‌ ಕೂಡ ಚೆಂದವಾಗಿ ಕಂಡಿತ್ತು.

ಚಿನ್ನದ ಬಳೆಗಳೊಂದಿಗೆ ಚೈನ್ ಪೆಂಡೆಂಟ್ ಮತ್ತು ಸ್ಟಡ್ ಕಿವಿಯೋಲೆಗಳೊಂದಿಗೆ ಚೆಂದವಾಗಿ ಕಂಡಿದ್ದಾರೆ. ಅವರು 2024ರ ಮಧ್ಯಂತರ ಬಜೆಟ್‌ ದಿನ ನೀಲಿ ಕೈಮಗ್ಗದ ಸೀರೆಯನ್ನು ಧರಿಸಿದ್ದರು. ನೀಲಿ ಬಣ್ಣವು ಶಾಂತಿ ಮತ್ತು ಶಕ್ತಿಯ ಸಂಕೇತವಾಗಿದೆ.

ಇದನ್ನೂ ಓದಿ: Union Budget 2024: ಬಂಪರ್‌ ಘೋಷಣೆ; 5 ವರ್ಷದಲ್ಲಿ 4.1 ಕೋಟಿ ಉದ್ಯೋಗ, ಹೊಸ ನೌಕರರಿಗೆ ತಿಂಗಳ ಸಂಬಳ ಕೊಡುಗೆ

ನಿರ್ಮಲಾ ಸೀತಾರಾಮನ್ ಅವರು 2023ರ ಬಜೆಟ್‌ ಮಂಡನೆ ದಿನ ಕೆಂಪು ಬಣ್ಣದ ಸೀರೆಯನ್ನು ಆಯ್ಕೆ ಮಾಡಿದ್ದರು. ಸಾಂಪ್ರದಾಯಿಕ ಕೆಂಪು ಬಣ್ಣವನ್ನು ಪ್ರೀತಿ, ಶಕ್ತಿ, ಶೌರ್ಯ ಮತ್ತು ಬದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಜೆಟ್ ಮಂಡನೆಗೂ ಕರ್ನಾಟಕಕ್ಕೂ ವಿಶೇಷವಾದ ನಂಟಿತ್ತು. ಏನೆಂದರೆ, ನಿರ್ಮಾಲಾ ಅವರು ಧರಿಸಿದ್ದ, ಕೈಯಿಂದ ನೇಯ್ದ ಇಳಕಲ್ ಸೀರೆ ಕರ್ನಾಟಕದ್ದು. ಇಷ್ಟೇ ಆಗಿದ್ದರೆ ಅದರಲ್ಲೇನೂ ವಿಶೇಷ ಇರಲಿಲ್ಲ. ಈ ಸೀರೆ ಮೇಲೆ ಚಿತ್ತಾರಗೊಂಡಿದ್ದ ಕಸೂತಿಯನ್ನು ಧಾರವಾಡದಲ್ಲಿ ಮಾಡಲಾಗಿತ್ತು.

ನಿರ್ಮಲಾ ಅವರು ಧರಿಸಿದ್ದ ಸೀರೆಯ ಮೇಲೆ ರಥ, ನವಿಲು ಮತ್ತು ಕಮಲಗಳು ಸಾಂಪ್ರದಾಯಿಕ ಕಸೂತಿಯ ಮೂಲಕ ಚಿತ್ತಾರ ಬಿಡಿಸಲಾಗಿತ್ತು. ಧಾರವಾಡದ ಆರತಿ ಕ್ರಾಫ್ಟ್‌ನ ಆರತಿ ಹಿರೇಮಠ್ ಅವರು ಈ ಕಸೂತಿಯ ಹಿಂದಿನ ಕಲಾವಿದೆ. ಈ ಸೀರೆಯನ್ನು ಧಾರವಾಡ ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ಅವರು ನಿರ್ಮಲಾ ಸೀತಾರಾಮನ್ ಅವರಿಗೆ ಗಿಫ್ಟ್ ನೀಡಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

Continue Reading

ಫ್ಯಾಷನ್

Monsoon fashion: ಶರ್ಟ್ ಸ್ಟೈಲ್‌ ಜಾಕೆಟ್ಸ್; ಇವು ಯುವಕರ ಮಳೆಗಾಲದ ಫ್ಯಾಷನ್‌ ಟ್ರೆಂಡ್‌

Monsoon fashion: ಮಳೆಗಾಲವೆಂದಾಕ್ಷಣ ನಾನಾ ಬಗೆಯ ಜಾಕೆಟ್‌ಗಳು ಮಾರುಕಟ್ಟೆಗೆ ಕಾಲಿಡುತ್ತವೆ. ಅವುಗಳಲ್ಲಿ, ಇದೀಗ ಮೆನ್ಸ್ ಲೇಯರ್‌ ಸ್ಟೈಲಿಂಗ್‌ನಲ್ಲಿ ಶರ್ಟ್ ಸ್ಟೈಲ್‌ ಜಾಕೆಟ್‌ಗಳು ಟ್ರೆಂಡಿಯಾಗಿವೆ. ಅವು ಯಾವುವು? ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದನ್ನು ಮೆನ್ಸ್ ಸ್ಟೈಲಿಸ್ಟ್ ಜಿಶಾನ್‌ ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Monsoon fashion
ಚಿತ್ರಗಳು: ರೋಹಿತ್‌ ಸರಾಫ್‌, ನಟ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಶರ್ಟ್ (Monsoon fashion) ಧರಿಸಿರುವಂತೆ ಕಾಣುವ ನಾನಾ ಬಗೆಯ ಬೆಚ್ಚಗಿಡುವ ಶರ್ಟ್ ಸ್ಟೈಲ್‌ ಜಾಕೆಟ್‌ಗಳು ಮೆನ್ಸ್ ಮಾನ್ಸೂನ್‌ ಫ್ಯಾಷನ್‌ಗೆ ಕಾಲಿಟ್ಟಿವೆ. ಹೌದು. ಮಳೆಗಾಲವೆಂದಾಕ್ಷಣ ನಾನಾ ಬಗೆಯ ಜಾಕೆಟ್‌ಗಳು ವಾರ್ಡ್ರೋಬ್‌ನಿಂದ ಹೊರಬರುವುದು ಮಾತ್ರವಲ್ಲ, ಮಾರುಕಟ್ಟೆಯಲ್ಲೂ ಬಿಡುಗಡೆಗೊಳ್ಳುತ್ತವೆ. ಅವುಗಳಲ್ಲಿ, ಇದೀಗ ಮೆನ್ಸ್ ಲೇಯರ್‌ ಸ್ಟೈಲಿಂಗ್‌ನಲ್ಲಿ ಶರ್ಟ್ ಸ್ಟೈಲ್‌ ಜಾಕೆಟ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಕೆಲವಂತೂ ಟೂ ಇನ್‌ ವನ್‌ ಸ್ಟೈಲಿಂಗ್‌ನಲ್ಲಿ ಧರಿಸುವಂತಹ ರಿವರ್ಸಿಬಲ್‌ ಡಿಸೈನ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಕುರಿತಂತೆ ಮೆನ್ಸ್ ಸ್ಟೈಲಿಸ್ಟ್ ಜಿಶಾನ್‌ ಇಲ್ಲಿ ವಿವರಿಸಿದ್ದಾರೆ.

Monsoon fashion

ಟ್ರೆಂಡ್‌ನಲ್ಲಿರುವ ಶರ್ಟ್ ಸ್ಟೈಲ್‌ ಜಾಕೆಟ್ಸ್

ಈ ಮೊದಲು ಚಳಿಗಾಲದಲ್ಲಿ ಬಿಡುಗಡೆಯಾಗುತ್ತಿದ್ದ ಟ್ವೀಡ್‌ ಜಾಕೆಟ್ಸ್, ವೂಲ್‌ ಜಾಕೆಟ್ಸ್, ಚೆಕ್ರ್ಡ್ ಜಾಕೆಟ್‌, ನಿಟ್‌ ಜಾಕೆಟ್‌ಗಳು ಇದೀಗ ಹೊಸ ರೂಪದೊಂದಿಗೆ ಮಳೆಗಾಲದಲ್ಲೂ ಎಂಟ್ರಿ ನೀಡಿವೆ. ತಕ್ಷಣಕ್ಕೆ ನೋಡಲು ಇವು ಶರ್ಟ್ ಡಿಸೈನ್‌ನಂತೆ ಕಾಣಿಸುತ್ತವೆ ನಿಜ, ಆದರೆ ಇವು ಜಾಕೆಟ್‌ಗಳು. ಧರಿಸಿದಾಗ ಶರ್ಟ್‌ನಂತೆ ಧರಿಸಬಹುದು. ಬೇಡವಾದಲ್ಲಿ ಬಟನ್‌ ಬಿಚ್ಚಿ ಜಾಕೆಟ್‌ನಂತೆ ಹಾಕಿಕೊಳ್ಳಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಮಳೆಗಾಲದಲ್ಲಿ ಇವು ಮಳೆಯಿಂದ ರಕ್ಷಣೆ ನೀಡದಿದ್ದರೂ, ಚಳಿ-ಗಾಳಿಯಿಂದ ಕಾಪಾಡುತ್ತವೆ. ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಆದರೆ, ಇವುಗಳ ಫ್ಯಾಬ್ರಿಕ್‌ ಕೊಂಚ ಭಾರವಾಗಿರುವುದರಿಂದ ಮಳೆಗೆ ಧರಿಸುವುದು ಸೂಕ್ತವಲ್ಲ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಅವರ ಪ್ರಕಾರ, ಶರ್ಟ್ ಸ್ಟೈಲ್‌ ಜಾಕೆಟ್‌ಗಳು ಕೇವಲ ಔಟ್‌ಲುಕ್‌ಗೆ ಮಾತ್ರ ಸಾಥ್‌ ನೀಡುತ್ತವೆ ಹೊರತು, ಮಳೆಗಲ್ಲ! ಎನ್ನುತ್ತಾರೆ.

ಯುವಕರ ಸ್ಟೈಲಿಂಗ್‌ನಲ್ಲಿ ಶರ್ಟ್ ಸ್ಟೈಲ್‌ ಜಾಕೆಟ್ಸ್

ಕಾಲೇಜು ಯುವಕರ ಸ್ಟೈಲಿಂಗ್‌ನಲ್ಲಿ ಇವು ಸೇರಿಕೊಂಡಿವೆ. ಒಂದು ಜಾಕೆಟ್‌ ಮೂರ್ನಾಲ್ಕು ವಿಧದಲ್ಲಿ ಧರಿಸಬಹುದು. ಇದನ್ನು ಈ ಜನರೇಷನ್‌ನ ಹುಡುಗರು ಪಾಲಿಸುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಶಾನ್‌.

ಇದನ್ನೂ ಓದಿ: Contact Lens Awareness: ಶೋಕಿಗಾಗಿ ಕಾಂಟ್ಯಾಕ್ಟ್‌ ಲೆನ್ಸ್ ಧರಿಸುವವರೇ ಎಚ್ಚರ! ಈ 5 ಸಂಗತಿ ಗಮನದಲ್ಲಿರಲಿ

ಶರ್ಟ್ ಶೈಲಿಯ ಜಾಕೆಟ್‌ ಸ್ಟೈಲಿಂಗ್‌ ಟಿಪ್ಸ್

 • ಜೀನ್ಸ್ ಪ್ಯಾಂಟ್‌ ಮೇಲೆ ಜಾಕೆಟ್‌ನಂತೆ ಧರಿಸಬಹುದು.
 • ಫಾರ್ಮಲ್‌ ಪ್ಯಾಂಟ್‌ ಮೇಲೆ ಶರ್ಟ್ ನಂತೆ ಧರಿಸಬಹುದು. ಆದರೆ ಫಿಟ್ಟಿಂಗ್‌ ಇರಬೇಕು.
 • ಓವರ್‌ಸೈಝ್‌ ಜಾಕೆಟ್‌ಗಳು ಟ್ರೆಂಡಿಯಾಗಿರುವುದರಿಂದ ಟೀನೇಜ್‌ ಹುಡುಗರು ಮಿಕ್ಸ್ ಮ್ಯಾಚ್‌ ಸ್ಟೈಲಿಂಗ್‌ ಮಾಡುತ್ತಿದ್ದಾರೆ.
 • ಆಕ್ಸೆಸರೀಸ್‌ ಧರಿಸುವುದು ಬೇಕಾಗಿಲ್ಲ!
 • ಜಾಕೆಟ್‌ಗೆ ಸಿಂಪಲ್‌ ಸ್ಣಿಕರ್‌ ಮ್ಯಾಚ್‌ ಮಾಡಿದರೇ ಸಾಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Dina Bhavishya
ಭವಿಷ್ಯ44 mins ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ಮಧುರ ಪ್ರೀತಿ ಸಿಗಲಿದೆ

INDIA Bloc To Protest
ದೇಶ6 hours ago

INDIA Bloc To Protest: ಬಜೆಟ್‌ ತಾರತಮ್ಯ ಖಂಡಿಸಿ ನಾಳೆ ಸಂಸತ್ತಿನಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ

Paris Olympics
ಕ್ರೀಡೆ7 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೂ ವಕ್ಕರಿಸಿದ ಕೊರೊನಾ ಸೋಂಕು; ಮೊದಲ ಪ್ರಕರಣ ಪತ್ತೆ

Union Minister Pralhad Joshi statement about Union Budget
ಕರ್ನಾಟಕ7 hours ago

Pralhad Joshi: ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್: ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ

The Kaftan kannada Album Song Release
ಕರ್ನಾಟಕ7 hours ago

The Kaptan Song: ‘ದ ಕಪ್ತಾನ್’ ಆಲ್ಬಂ ಸಾಂಗ್ ಬಿಡುಗಡೆ

kimberly cheatle
ವಿದೇಶ7 hours ago

Kimberly Cheatle: ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್ ಹುದ್ದೆಗೆ ಕಿಂಬರ್ಲಿ ಚೀಟಲ್ ದಿಢೀರ್​ ರಾಜೀನಾಮೆ

Womens Asia Cup
ಕ್ರೀಡೆ8 hours ago

Womens Asia Cup: ಶಫಾಲಿ ಬ್ಯಾಟಿಂಗ್​ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್​ ಜಯ

Farmer commits suicide in Kenchanala village
ಕರ್ನಾಟಕ8 hours ago

Farmer Self Harming: ಕೆಂಚನಾಲ ಗ್ರಾಮದಲ್ಲಿ ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಕರ್ನಾಟಕ8 hours ago

Assembly Session: ಕೆಳಮನೆಯಲ್ಲಿ ವಿಧಾನ ಮಂಡಲ ಅನರ್ಹತಾ‌ ನಿವಾರಣಾ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರ

Viral Video
Latest9 hours ago

Viral Video: 13ನೇ ಮಹಡಿಯಿಂದ ಬಿದ್ದರೂ ಈಕೆಯ ಒಂದೇ ಒಂದು ಮೂಳೆ ಮುರಿದಿಲ್ಲ! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ11 hours ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ12 hours ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ16 hours ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ1 week ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

ಟ್ರೆಂಡಿಂಗ್‌