Site icon Vistara News

Summer Fashion: ಕಾಲೇಜು-ಟಿನೇಜ್‌ ಹುಡುಗಿಯರ ಸಮ್ಮರ್‌ ಫಂಕಿ ಫ್ಯಾಷನ್‌ಗೆ ಮ್ಯಾಂಗೋ ಇಯರಿಂಗ್ಸ್ ಸಾಥ್!

Mango EarringsFunky Summer Fashion For College-Teenage Girls!

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೇಸಿಗೆ ಫಂಕಿ ಫ್ಯಾಷನ್‌ನಲ್ಲಿ (Summer Fashion) ಇದೀಗ ನಾನಾ ಬಗೆಯ ರಸಭರಿತ ಮಾವಿನ ಹಣ್ಣಿನ ಇಯರಿಂಗ್‌ಗಳ ಕಾರುಬಾರು! ನೋಡಲು ಖುಷಿಯೆನಿಸುವ ಕ್ಯೂಟ್‌ ಮ್ಯಾಂಗೋ ಇಯರಿಂಗ್‌ಗಳು ಇದೀಗ ಕಾಲೇಜು-ಟಿನೇಜು ಹುಡುಗಿಯರ ಫಂಕಿ ಲುಕ್‌ಗೆ ಎಂಟ್ರಿ ನೀಡಿವೆ. ಸಮ್ಮರ್‌ ಸ್ಟೈಲ್‌ಸ್ಟೇಟ್‌ಮೆಂಟ್‌ ಜತೆ ಸೇರಿವೆ.

ಬೇಸಿಗೆ ಎಂದರೇ ಹಾಗೆ, ಫಂಕಿ ಫ್ಯಾಷನ್‌ಗೆ ಸಕಾಲ. ಒಂದರ ಹಿಂದೊಂದರಂತೆ ಲೆಕ್ಕವಿಲ್ಲದಷ್ಟು ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌ ಕಾಲಿಡುತ್ತವೆ. ಆಕ್ಸೆಸರೀಸ್‌ ವಿಷಯದಲ್ಲೂ ಹಾಗೆಯೇ ಊಹೆಗೂ ನಿಲುಕದ ಡಿಸೈನ್‌ಗಳು ಕಾಲಿಡುತ್ತವೆ. ಇನ್ನು ಫಂಕಿ ಫ್ಯಾಷನ್‌ನ ವಿಷಯದಲ್ಲಿ ಕೇಳಬೇಕೇ! ಇಮ್ಯಾಜಿನೇಷನ್‌ಗೂ ಸಿಗುವುದಿಲ್ಲ! ಆ ಮಟ್ಟಿಗೆ ಜ್ಯುವೆಲ್‌ ವಿನ್ಯಾಸಗಳು ಎಂಟ್ರಿ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ ಜಿನತ್‌. ಅವರ ಪ್ರಕಾರ, ಸದ್ಯಕ್ಕೆ ಮ್ಯಾಂಗೋ ಇಯರಿಂಗ್ಸ್‌ ಲಗ್ಗೆ ಇಟ್ಟು ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇನ್ನೆಷ್ಟು ದಿನ ಈ ಟ್ರೆಂಡ್‌ ಇರುತ್ತೋ ಗೊತ್ತಿಲ್ಲ! ಸದ್ಯಕ್ಕೆ ಫಂಕಿ ಫ್ಯಾಷನ್‌ನ ಭಾಗವಾಗಿದೆ ಎನ್ನುತ್ತಾರೆ.

ಫಂಕಿ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿರುವ ಮ್ಯಾಂಗೋ ಇಯರಿಂಗ್ಸ್‌

ಮಾವಿನ ಹಣ್ಣು, ಮಾವಿನ ಕಾಯಿ. ಕತ್ತರಿಸಿರುವ ಮಾವಿನ ಕಾಯಿಯ ಚೂರುಗಳು, ಎಲೆ ಸಮೇತ ಇರುವಂತಹ ಮಾವಿನ ಕಾಯಿಗಳು, ಮಾವಿನ ಅರ್ಧ ಆಕಾರದ ಸ್ಟಡ್ಸ್, ಡಬ್ಬಲ್‌ ಮ್ಯಾಂಗೋ ಸ್ಟಡ್ಸ್ ಹೀಗೆ ನಾನಾ ವಿನ್ಯಾಸದ ಮಾವಿನ ಹಣ್ಣಿನ ಇಯರಿಂಗ್ಸ್‌ ಆಕ್ಸೆಸರೀಸ್‌ ಲೋಕಕ್ಕೆ ಕಾಲಿಟ್ಟಿವೆ. ಅಷ್ಟು ಮಾತ್ರವಲ್ಲ, ಇವುಗಳಲ್ಲಿ ಫಿಂಗರ್‌ ರಿಂಗ್‌ಗಳು ಕೂಡ ಲಭ್ಯ. ಇನ್ನು ಕೆಲವೆಡೆ ಚೈನಿಗೆ ಹೊಂದಿದಂತಹ ಮ್ಯಾಂಗೋ ಫ್ರೂಟ್‌ ಬ್ರೇಸ್‌ಲೇಟ್‌ಗಳು ದೊರಕುತ್ತಿವೆ. ಇವು ನೋಡಲು ಫಂಕಿ ಲುಕ್‌ ನೀಡುತ್ತವೆ.

ಇದನ್ನೂ ಓದಿ: Celebrity Fashion corner: ಮಿಸೆಸ್‌ ಇಂಟರ್‌ನ್ಯಾಷನಲ್‌ ಸೂಪರ್‌ ಕ್ವೀನ್‌ ಸಂಧ್ಯಾ ಜೈನ್‌ ಫ್ಯಾಷನ್‌ ಮಂತ್ರ

Summer Fashion

ಫಂಕಿ ಲುಕ್‌ಗೆ ಸಾಥ್‌ ನೀಡುವ ಮ್ಯಾಂಗೋ ಆಕ್ಸೆಸರೀಸ್‌

ಸ್ಟೈಲಿಸ್ಟ್‌ ಸ್ಯಾಮ್‌ ಪ್ರಕಾರ, ಮ್ಯಾಂಗೋ ಇಯರಿಂಗ್‌ಗಳು ಈ ಸೀಸನ್‌ನಲ್ಲಿ ಮಾತ್ರ ಟ್ರೆಂಡಿಯಾಗಿರುತ್ತವೆ. ಇವು ಪಕ್ಕಾ ಕಾಲೇಜು ಹುಡುಗಿಯರ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಹೇಳಿಮಾಡಿಸಿದಂತಿವೆ. ಟ್ರೆಡಿಷನಲ್‌ ಉಡುಪಿಗೆ ಮ್ಯಾಚ್‌ ಆಗದು ಎನ್ನುತ್ತಾರೆ.

ಮ್ಯಾಂಗೋ ಅಕ್ಸೇಸರೀಸ್‌ ಪ್ರೇಮಿಗಳಿಗೆ 3 ಟಿಪ್ಸ್‌

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version