Site icon Vistara News

Met Gala Fashion: ಮೆಟ್‌ ಗಾಲಾದಲ್ಲಿ ಹೈಲೈಟಾದ ಭಾರತೀಯ ಫ್ಯಾಷೆನಬಲ್‌ ತಾರೆಯರಿವರು!

Met Gala Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಫ್ಯಾಷನ್‌ ಇವೆಂಟ್‌ ಮೆಟ್‌ ಗಾಲದಲ್ಲಿ (Met Gala Fashion) ಎಲ್ಲಿ ನೋಡಿದರೂ ಇಂಟರ್‌ನ್ಯಾಷನಲ್‌ ತಾರೆಯರ, ಸೆಲೆಬ್ರೆಟಿಗಳ, ಫ್ಯಾಷನಿಸ್ಟಾಗಳ, ಡಿಸೈನರ್‌ಗಳ ಕಲರವ. ಒಬ್ಬೊಬ್ಬರದು ಒಂದೊಂದು ಬಗೆಯ ಫ್ಯಾಷನ್‌ ಥೀಮ್‌ ಒಳಗೊಂಡ ಡಿಸೈನರ್‌ವೇರ್‌ಗಳು. ಊಹೆಗೂ ಮೀರಿದ ಔಟ್‌ಫಿಟ್‌ಗಳು, ಅವರವರ ರಾಷ್ಟ್ರದ ಪ್ರಾದೇಶಿಕ ಜೀವನಶೈಲಿಗೆ ಹೊಂದುವಂತಹ ಕಾನ್ಸೆಪ್ಟ್‌ ಅನ್ನು ಮೆಟ್‌ ಗಾಲ ಥೀಮ್‌ ಜೊತೆಗೆ ಮಿಕ್ಸ್‌ ಮ್ಯಾಚ್‌ ಮಾಡಿ ಕಂಟೆಂಪರರಿ ಉಡುಗೆ-ತೊಡುಗೆಗಳಲ್ಲಿ ಕಾಣಿಸಿಕೊಳ್ಳುವುದು ಇಲ್ಲಿ ಸಾಮಾನ್ಯ. ಅಷ್ಟೇಕೆ! ಫ್ಯಾಷನ್‌ ಪ್ರಿಯರ ಹುಬ್ಬೇರುವಂತಹ ಚಿತ್ರ-ವಿಚಿತ್ರ ವಿನ್ಯಾಸಗಳು ಇಲ್ಲಿ ಕಂಡು ಬರುತ್ತವೆ. ಇದು ಮೆಟ್‌ ಗಾಲಾದ ಚಿತ್ರಣ. ಹೌದು. ಇನ್ನು, ಜಾಗತೀಕ ಮಟ್ಟದಲ್ಲಿ ನಡೆಯುವ ಪ್ರತಿಷ್ಠಿತ ಫ್ಯಾಷನ್‌ ಇವೆಂಟ್‌ ಮೆಟ್‌ ಗಾಲಾ ಗ್ರೀನ್‌ ಕಾರ್ಪೆಟ್‌ ಮೇಲೆ ವಾಕ್‌ ಮಾಡುವುದೇ ಹೆಗ್ಗಳಿಕೆ. ಅಂತಹದ್ದರಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌ ತಮ್ಮ ಗಾರ್ಡನ್‌ ಥೀಮ್‌ ಹೊಂದಿರುವ ಸೀರೆಯಲ್ಲಿ ಕಾಣಿಸಿಕೊಂಡರೇ. ಇಶಾ ಅಂಬಾನಿ ಕೂಡ ಫ್ಲೋರಲ್‌ ಡಿಸೈನರ್‌ ಸೀರೆ ಗೌನ್‌ನಲ್ಲಿ ಕಾಣಿಸಿಕೊಂಡು ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್‌ ಪ್ರಿಯರ ಗಮನ ಸೆಳೆದರು. ಇನ್ನು ಫ್ಯಾಷನ್‌ ದಿವಾ ನತಾಶಾ ಪೂನಾವಾಲಾ ಎಂದಿನಂತೆ ವಿಭಿನ್ನ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡರು. ಯಾರ್ಯಾರ ಡಿಸೈನರ್‌ವೇರ್‌ಗಳು ಹೇಗೆಲ್ಲಾ ಇದ್ದವು? ಅವುಗಳ ವಿಶೇಷತೆಯೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷೀಪ್ತ ಡಿಟೇಲ್ಸ್‌ .
ರಿಯಲ್‌ ಹರಳುಗಳಿಂದ ವಿನ್ಯಾಸ ಮಾಡಿದ

ಆಲಿಯಾ ಭಟ್‌ ಸೀರೆ

ಸೆಲೆಬ್ರೆಟಿ ಡಿಸೈನರ್‌ ಸಭ್ಯಸಾಚಿಯವರ ಡಿಸೈನರ್‌ ಫ್ಲೋರಲ್‌ ಅತ್ಯಾಕರ್ಷಕ ಸೀರೆಯಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌, ಗ್ರೀನ್‌ಕಾರ್ಪೆಟ್‌ ಮೇಲೆ ಸೀರೆಯ ಉದ್ದುದ್ದ ಸೆರಗನ್ನು ಹಾಸಿ ವಾಕ್‌ ಮಾಡಿದ್ದು, ವಿದೇಶಿ ಫ್ಯಾಷನ್‌ ಪ್ರಿಯರನ್ನು ಸೆಳೆಯಿತು. ಸ್ಟೈಲಿಸ್ಟ್‌ ಅನೈತಾ ಶ್ರಾಫ್‌ ಸ್ಟೈಲಿಂಗ್‌ ಮಾಡಿದ್ದರು. ತಿಳಿ ಮಿಂಟ್‌ ಗ್ರೀನ್‌ ಶೇಡ್‌ನ ಈ ಕಸ್ಟಮೈಸ್ಡ್‌ ಸೀರೆ, ರಿಯಲ್‌ ಹರಳುಗಳನ್ನು ಹೊಂದಿವೆ. ಅಲ್ಲಲ್ಲಿ ಚಿಕ್ಕ ಚಿಕ್ಕ ಗೋಲ್ಡನ್‌ ಬೀಡ್ಸ್‌ ಹಾಗೂ ಶೀರ್‌ ಫ್ಯಾಬ್ರಿಕ್‌ನ ಸೂಕ್ಷ್ಮ ಕುಸುರಿ ಹ್ಯಾಂಡ್‌ ವರ್ಕ್‌ ಹಾಗೂ ಬಾರ್ಡರ್‌ ಫ್ರಿಂಝ್‌ ವಿನ್ಯಾಸ ಸೀರೆಯನ್ನು ಅತ್ಯಾಕರ್ಷಕವಾಗಿಸಿದೆ. ಇನ್ನು, ಇದರ ಬ್ಲೌಸ್‌ ಯಾವ ಮಟ್ಟಿಗೆ ಆಕರ್ಷಕವಾಗಿದೆಯೆಂದರೇ, ರಾಣಿ-ಮಹಾರಾಣಿಯರು ಧರಿಸುತ್ತಿದ್ದ, ಕ್ರಾಪ್‌ ಬ್ಲೌಸ್‌ ಶೈಲಿಯನ್ನು ಹೊಂದುವಂತಿದೆ. ಇದರ ಡಬ್ಬಲ್‌ ಮೆಗಾ ಸ್ಲೀವ್‌ ಹಾಗೂ ಹಿಂಬದಿಯಲ್ಲಿರುವ ದೊಡ್ಡ ಬೋ ಡಿಸೈನ್‌ ರಾಜಕುಮಾರಿಯ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಅಂದಹಾಗೆ, ಇದು ಆಲಿಯಾ ಎರಡನೇ ವಾಕ್‌.

ಇಶಾ ಅಂಬಾನಿಯ ದುಬಾರಿ ಬೆಲೆಯ ಸ್ಯಾರಿ ಗೌನ್‌

ಡಿಸೈನರ್‌ ರಾಹುಲ್‌ ಮಿಶ್ರಾ ಅವರ ಕಾಚರ್‌ ಸ್ಯಾರಿ ಗೌನ್‌ ಲಾಂಗ್‌ ಸೆರಗನ್ನು ಹೊಂದಿದ್ದು, ಈ ಅತ್ಯಾಕರ್ಷಕ ವಿನ್ಯಾಸ ಒಳಗೊಂಡಿದೆ. ದಿ ಗಾರ್ಡನ್‌ ಆಪ್‌ ಟೈಮ್‌ ಹೆಸರಿನ ಈ ಥೀಮ್‌ ಸ್ಯಾರಿ ಗೌನ್‌ನ ಹ್ಯಾಂಡ್‌ ಎಂಬ್ರಾಯ್ಡರಿ ನಕಾಶಿ ವರ್ಕ್‌ ಒಳಗೊಂಡಿದೆ. ಮಿನಿಯೇಚರ್‌ ಪೇಟಿಂಗ್‌ ಕೂಡ ಹೊಂದಿದ್ದು, ಸ್ಯಾರಿ ಗೌನ್‌ಗೆ ಹೊಸ ಭಾಷ್ಯಾ ಬರೆದಿದೆ. ದೇಸಿ ವಿನ್ಯಾಸಗಳನ್ನು ಹೊಂದಿದೆ ಎನ್ನಲಾಗಿದೆ. ಇಶಾ ಅಂಬಾನಿಯ ಈ ಡಿಸೈನರ್‌ವೇರ್‌ ಕಂಪ್ಲೀಟ್‌ ಮಾಡಲು ಕಾರ್ಯಗಾರರಿಗೆ ಸರಿ ಸುಮಾರು 10 ಸಾವಿರ ಗಂಟೆ ಬೇಕಾಯಿತಂತೆ.

ನತಾಶಾ ಪೂನಾವಾಲಾ ವಿಭಿನ್ನ ಡಿಸೈನರ್‌ವೇರ್‌

ಸ್ಲೀಪಿಂಗ್‌ ಬ್ಯೂಟೀಸ್‌ – ರೀ ಬರ್ತ್-‌ ರೀನಿವಲ್‌ ಹೆಸರನ್ನು ತಮ್ಮ ಫ್ಯಾಷನ್‌ ಟ್ಯಾಗ್‌ಲೈನ್‌ನಲ್ಲಿ ಕೊಟ್ಟುಕೊಂಡಿರುವ ನತಾಶಾ ಪೂನಾವಾಲಾ ಅವರ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌ ಎಲ್ಲರಿಗಿಂತ ಭಿನ್ನವಾಗಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಡಿಸೈನರ್‌ ಜಾನ್‌ ಗಾಲ್ಲಿಯಾನೊ ವಿನ್ಯಾಸದ ಮಾರ್ಗೆಲಾದಲ್ಲಿ ಇಲ್ಯೂಷನ್‌ ಕ್ರಿಯೇಟ್‌ ಮಾಡುವಂತಹ ಕಾರ್ಸೆಟ್‌ ಡಿಸೈನ್‌ನ ಪೆಪ್ಲಮ್‌ ಕೋಟ್‌, ಸ್ಕರ್ಟ್‌, ವಿಕ್ಟೋರಿಯನ್‌ ಹ್ಯಾಟ್‌, ಹ್ಯಾಂಡ್‌ ಬಾಗ್‌ ನತಾಶಾ ಪೂನಾವಾಲಾರಿಗೆ ಕಂಪ್ಲೀಟ್‌ ವಿಭಿನ್ನ ಲುಕ್‌ ನೀಡಿತ್ತು. ಇದರೊಂದಿಗೆ ಕ್ರಿಸ್ಟಿಯನ್‌ ಲೌಬಾಟಿನ್‌ ಕೊಲಾಬಾರೇಷನ್‌ನಲ್ಲಿ ಧರಿಸಿದ ಸ್ಕೈ ಹೀಲ್ಸ್‌ ಫುಟ್‌ವೇರ್‌ ಇಡೀ ಲುಕ್‌ಗೆ ಡಿಫರೆಂಟ್‌ ಇಮೇಜ್‌ ನೀಡಿತ್ತು.

ಇದನ್ನೂ ಓದಿ: Summer Holiday Fashion: ಸೀಸನ್‌ ಟ್ರೆಂಡ್‌ನ ಟಾಪ್‌ ಲಿಸ್ಟ್‌ನಲ್ಲಿ ಸಮ್ಮರ್‌ ಹಾಲಿಡೇ ಫ್ಯಾಷನ್‌

ಮೆಟಾ ಗಾಲದಲ್ಲಿ ಪಾಲ್ಗೊಂಡ ಇತರೇ ಭಾರತೀಯರು

ಮಾಡೆಲ್‌ ಅಂಬಿಕಾ ಮೊದ ಮೊದಲ ಬಾರಿ ಮೆಟ್‌ಗಾಲಾದಲ್ಲಿ ಮಾನೋಕ್ರೋಮ್‌ ಬ್ಲ್ಯಾಕ್‌ ವೈಟ್‌ ಗೌನ್‌ನಲ್ಲಿ ಕಾಣಿಸಿಕೊಂಡರು. ಡಿಸೈನರ್‌ ಗೌರವ್‌ ಗುಪ್ತಾರ ಸುತ್ತುವರಿದ ಕಾಚರ್‌ ಡಿಸೈನರ್‌ ನ್ಯೂಡ್‌ ಗೌನ್‌ನಲ್ಲಿ ಮಾಡೆಲ್‌ ಮೈಂಡಿ ಕೈಲಾಂಗ್‌ ವಾಕ್‌ ಮಾಡಿದರು. ಇನ್ನು ಬ್ರಿಡ್ಜರ್‌ಟನ್‌ ಸಿನಿಮಾದ ನಟಿ ಸಿಮೊನ್‌ ಆಶ್ಲೆ, ಪ್ರಬಾಲ್‌ ಗುರುಂಗ್‌ ವಿನ್ಯಾಸದ ಕಟೌಟ್‌ ನೆವ್ವಿ ಬ್ಲ್ಯೂ ಶಿಮ್ಮರ್‌ ಡಿಸೈನರ್‌ವೇರ್‌ನಲ್ಲಿ ಪೋಸ್‌ ನೀಡಿದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version