Site icon Vistara News

Metal belt Fashion: ಎಥ್ನಿಕ್‌ ಡಿಸೈನರ್‌ವೇರ್ಸ್‌ಗೆ ಮೆಟಲ್‌ ಬೆಲ್ಟ್ ಸಾಥ್ !

Metal belt Fashion wearing

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮೆಟಲ್‌ ವೇಸ್ಟ್‌ ಬೆಲ್ಟ್‌ಗಳು ಇದೀಗ ಎಥ್ನಿಕ್‌ವೇರ್ಸ್‌ ಗೆ ಸಾಥ್‌ ನೀಡುತ್ತಿವೆ. ಅಂದಹಾಗೆ, ಇವು ಟ್ರೆಡಿಷನಲ್‌ ಲುಕ್‌ ನೀಡುವ ಕಮರ್‌ಬಾಂದ್‌ ಹಾಗೂ ಸೊಂಟದ ಪಟ್ಟಿಯಲ್ಲ! ಲೆದರ್‌ ಬೆಲ್ಟ್‌ನ ಪ್ರತಿರೂಪ. ನೋಡಲು ಥೇಟ್‌ ಲೆದರ್‌ ಪ್ಯಾಂಟ್‌ ಬೆಲ್ಟ್‌ಗಳಂತೆ ಕಾಣುವ ಇವು ಟ್ರೆಂಡ್‌ಗೆ ತಕ್ಕಂತೆ ತಮ್ಮ ರೂಪ ಬದಲಿಸಿಕೊಂಡಿವೆ. ಲೆದರ್‌ ಬದಲು ಮೆಟಲ್‌ನಲ್ಲಿ ಅದರಲ್ಲೂ ಫ್ಲೆಕ್ಸಿಬಲ್‌ ಮಟೆಲ್‌ ಮೆಟಿರಿಯಲ್‌ನಲ್ಲಿ ವಿನ್ಯಾಸಗೊಂಡು ಬಿಡುಗಡೆಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ರ‍್ಯಾಂಪ್‌ನಲ್ಲಿ ಮೊದಲು ಬಳಕೆ

ಮೊದಲೆಲ್ಲಾ ಕ್ಯಾಶುವಲ್‌ ಲುಕ್‌ನ ಸ್ಕರ್ಟ್ , ಗೌನ್‌, ಫ್ರಾಕ್‌ಗಳೊಂದಿಗೆ ಮಿಕ್ಸ್‌ ಮ್ಯಾಚ್‌ ಆಪ್ಷನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಮೆಟಲ್‌ ಬೆಲ್ಟ್‌ಗಳು ಇದೀಗ ತಮ್ಮ ದಿಕ್ಕನ್ನು ಬದಲಿಸಿವೆ. ಡಿಸೈನರ್‌ಗಳು ಈ ಮೆಟಲ್‌ ಬೆಲ್ಟ್‌ಗಳ ಡಿಸೈನ್‌ಗೆ ತಕ್ಕಂತೆ ಎಥ್ನಿಕ್‌ವೇರ್‌ಗಳೊಂದಿಗೆ ಮ್ಯಾಚ್‌ ಮಾಡುತ್ತಿರುವುದು ಹಾಗೂ ರ್ಯಾಂಪ್‌ಗಳಲ್ಲಿ ಎಥ್ನಿಕ್‌ವೇರ್‌ಗಳೊಂದಿಗೆ ಇವುಗಳನ್ನು ಅಲಂಕಾರಿಕವಾಗಿ ಧರಿಸುತ್ತಿರುವುದು ಟ್ರೆಂಡಿಯಾಗಲು ಕಾರಣವಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಟ್ರೆಂಡ್‌ ಲಿಸ್ಟ್‌ನಲ್ಲಿರುವ ನಾನಾ ವಿನ್ಯಾಸದ ಮೆಟಲ್‌ ಬೆಲ್ಟ್‌ಗಳು

ಗೋಲ್ಡ್‌ ಶೇಡ್‌, ಪ್ಲಾಟಿನಂ ಶೇಡ್‌, ಸಿಲ್ವರ್‌ ಹಾಗೂ ವೈಟ್‌ ಮೆಟಲ್‌. ಅಷ್ಟ್ಯಾಕೆ ! ಕೆಲವು ಬ್ಲಾಕ್‌ ಮತ್ತು ವೈಟ್‌ ಮೆಟಲ್‌ ಮಿಕ್ಸ್‌ ಮ್ಯಾಚ್‌ ಡಿಸೈನ್‌ನಲ್ಲೂ ಬಿಡುಗಡೆಗೊಂಡಿವೆ. ಕೆಲವು ಹಾಫ್‌ ಹಾಗೂ ಹಾಫ್‌ ಲೆದರ್‌ ಮತ್ತು ಮೆಟಲ್‌ ಬಕಲ್‌ ಡಿಸೈನ್‌ನಲ್ಲೂ ಬಿಡುಗಡೆಗೊಂಡಿವೆ. ಬಕಲ್‌ನವು ಕಾಲೇಜು ಹುಡುಗಿಯರಿಗೆ ಪ್ರಿಯವಾಗಿವೆ. ಇವನ್ನು ಇಂಡೋ-ವೆಸ್ಟರ್ನ್ ಔಟ್‌ಫಿಟ್‌ಗಳೊಂದಿಗೂ ಧರಿಸಬಹುದು. ಅಡ್ಜಸ್ಟಿಂಗ್‌ ಸ್ಪ್ರಿಂಗ್‌ ಶೈಲಿಯ ಮೆಟಲ್‌ ಬೆಲ್ಟ್‌ಗಳನ್ನು ಪಾರ್ಟಿ ಸೀರೆಗಳ ಜೊತೆಯೂ ವಿವಾಹಿತರು ಬಳಸುತ್ತಿದ್ದಾರೆ. ಇನ್ನು ಲೆಹೆಂಗಾ, ಲಾಂಗ್‌ ಸ್ಕರ್ಟ್ಸ್‌, ಅನಾರ್ಕಲಿ ಗೌನ್‌ ಹೀಗೆ ನಾನಾ ಎಥ್ನಿಕ್‌ವೆರ್‌ಗಳೊಂದಿಗೂ ಇವು ಬಳಕೆಯಾಗುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್‌.

ಮೆಟಲ್‌ ಬೆಲ್ಟ್ಸ್ ಮಿಕ್ಸ್‌ ಮ್ಯಾಚ್‌ ಹೀಗೆ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version