Site icon Vistara News

Milan Fashion week: ಪ್ರತಿಷ್ಠಿತ ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ

Milan Fashion week

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸೂಪರ್‌ ಮಾಡೆಲ್‌ ಲುಕ್‌ನಲ್ಲಿ ರಶ್ಮಿಕಾ

ಶ್ವೇತ ವರ್ಣದ ಪ್ಯಾಂಟ್‌ ಡ್ರೆಸ್‌, ಬ್ಲಾಕ್‌ ಕ್ರಾಪ್‌ ಟಾಪ್‌, ಸ್ನೀಕರ್‌ನಲ್ಲಿ, ಹೈ ಬ್ರೈಡ್‌ ಹಾಫ್‌ ಬ್ಲ್ಯೂ ಪೋನಿಟೇಲ್‌ , ವಿಂಗ್ಡ್‌ ಐ ಲೈನರ್‌ನಲ್ಲಿ ರಶ್ಮಿಕಾ ಮಂದಣ್ಣ ಸೂಪರ್‌ ಮಾಡೆಲ್‌ ಲುಕ್‌ನಲ್ಲಿ (Milan Fashion week) ಕಾಣಿಸಿಕೊಂಡಿದ್ದಾರೆ. ತಮ್ಮ ಎಂದಿನ ಸಿಗ್ನೇಚರ್‌ ಸ್ಟೈಲ್‌ನ ಫಿಂಗರ್‌ ಹಾರ್ಟ್ ಸ್ಟೈಲ್‌ನಲ್ಲಿ ಪೋಸ್‌ ನೀಡಿದ್ದಾರೆ. ಅಂದಹಾಗೆ, ಇದುವರೆಗೂ ಸಿನಿಮಾ, ಜಾಹೀರಾತು ಹಾಗೂ ದೇಸಿ ಫ್ಯಾಷನ್‌ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು.

ಕೊರಿಯನ್‌ ಥಾಯ್‌ ನಟರ ಜತೆ ಫ್ಯಾಷನ್‌ ಪೋಸ್‌

ಒನ್ಸುಕಾ ಟೈಗರ್‌ ಅಟಮನ್‌ ವಿಂಟರ್‌ ೨೦೨೩ ಆಕರ್ಷಕ ಕಲೆಕ್ಷನ್‌ನಲ್ಲಿ ಮಿಲಾನ್‌ ಫ್ಯಾಷನ್‌ ವೀಕ್‌ ೨೦೨೩ರಲ್ಲಿ ಕಾಣಿಸಿಕೊಂಡ ರಶ್ಮಿಕಾ ಸೂಪರ್‌ ಮಾಡೆಲ್‌ ಲುಕ್‌ನಲ್ಲಿ ಫ್ಯಾಷನ್‌ ಪ್ರಿಯ ಪ್ರೇಕ್ಷಕರನ್ನು ಸೆಳೆದದ್ದು ಮಾತ್ರವಲ್ಲ, ಪಾಪ್ಯುಲರ್‌ ಕೊರಿಯನ್‌ ನಟ ಜುಂಗ್‌ ಇಲೋ ವೂ ಹಾಗೂ ಥಾಯ್‌ ನಟ ಗಲ್ಫ್‌ ಕನಾವತ್‌ ಜೊತೆಯೂ ಫ್ಯಾಷನ್‌ ಫೋಟೋಗ್ರಾಫರ್‌ಗಳಿಗೆ ಫೋಟೋ ಫೋಸ್‌ ನೀಡಿ, ಸಂಭ್ರಮಿಸಿದರು. ನಂತರ, ಫ್ಯಾಷನ್‌ ಶೋ ಕೂಡ ನೋಡಿದ್ದಾರೆ. ಬಹುಶಃ ನಾಳೆ ಅವರು ರ್ಯಾಂಪ್‌ ವಾಕ್‌ ಮಾಡುವ ನೀರಿಕ್ಷೆ ಇದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

ಇದನ್ನೂ ಓದಿ: Rashmika Mandanna: ಅಭಿಮಾನಿಗೇ ಪ್ರಪೋಸ್‌ ಮಾಡಿದ ರಶ್ಮಿಕಾ ಮಂದಣ್ಣ! ವೈರಲ್‌ ಆಯ್ತು ವಿಡಿಯೊ

#image_title

ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ಪಾಲ್ಗೊಂಡ ಮೊದಲ ಸ್ಯಾಂಡಲ್‌ವುಡ್‌ ತಾರೆ

ಕೇವಲ ಬಾಲಿವುಡ್‌ ತಾರೆಯರಿಗೆ ಸೀಮಿತವಾಗಿದ್ದ ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್‌ ವೀಕ್‌ನಲ್ಲಿ ಇದೀಗ ಸ್ಯಾಂಡಲ್‌ವುಡ್‌ ತಾರೆ ರಶ್ಮಿಕಾ ಮಂದಣ್ಣ ಭಾಗವಹಿಸುವುದರ ಮೂಲಕ ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ಪಾಲ್ಗೊಂಡ ಮೊತ್ತ ಮೊದಲ ಕನ್ನಡ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ಪ್ರಾದೇಶಿಕ ಮಟ್ಟದ ತಾರೆಯರು ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ಕಾಣಿಸಿಕೊಳ್ಳುವ ಟ್ರೆಂಡ್‌ ಹುಟ್ಟು ಹಾಕಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು ಅಂದಹಾಗೆ, ಮಿಲಾನ್‌ ಫ್ಯಾಷನ್‌ ವೀಕ್‌ ಈಗಾಗಲೇ ಆರಂಭವಾಗಿದ್ದು ಫೆಬ್ರವರಿ ೨೭ ರವರೆಗೆ ಮುಂದುವರಿಯಲಿದೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version